ನಮ್ಮ ಹೃದಯದಲ್ಲೂ ಒಮ್ಮೊಮ್ಮೆ ಶಾರ್ಟ್ಸರ್ಕ್ಯೂಟ್ಆಗಬಹುದೆಂದು ನಿಮಗೆ ಗೊತ್ತೇ? ಇದು ಏಕೆ ಆಗುತ್ತದೆ? ಇದರ ಲಕ್ಷಣಗಳೇನು? ಚಿಕಿತ್ಸೆ ಎಂಥದ್ದು.....?

ನಿಮ್ಮ ಹೃದಯ ಎಂದಿನಂತೆ ಶಾಂತವಾಗಿರದೆ, ಜೋರು ಜೋರಾಗಿ ಹೊಡೆದುಕೊಳ್ಳುತ್ತಾ, ಮುಖಮೈಯೆಲ್ಲ ಬೆವರ ತೊಡಗಿದರೆ, ನಿಮ್ಮ ಹೃದಯದಲ್ಲಿ ಇದ್ದಕ್ಕಿದ್ದಂತೆ ಕರೆಂಟ್‌ ಓವರ್‌ ಫ್ಲೋ ಆಗಿ ಹರಿಯತೊಡಗಿದೆ ಎಂದೇ ಅರ್ಥ, ಅಂದ್ರೆ ಶಾರ್ಟ್‌ ಸರ್ಕ್ಯೂಟ್‌. ಹೌದು, ಒಮ್ಮೊಮ್ಮೆ ನಮ್ಮ ಹೃದಯದಲ್ಲೂ ಹೀಗೆ ಶಾರ್ಟ್‌ ಸರ್ಕ್ಯೂಟ್‌ ಆಗುತ್ತದೆ. ಇದನ್ನೇ ವೈದ್ಯಕೀಯ ಭಾಷೆಯಲ್ಲಿ PSVTC ಅಂತಾರೆ, ಅಂದ್ರೆ ಪೈರೋಸೈಮ್‌ ಸೂಪರ್‌ ವೆಂಟ್ರಿಕ್ಯುಲರ್‌ ಟ್ಯಾಕಿ ಕಾರ್ಡಿಯೋ! ನಾರ್ಮಲ್ ವ್ಯಯಕ್ತಿಗೆ ಹೃದಯದ ಬಡಿತ ಪ್ರತಿ ನಿಮಿಷಕ್ಕೆ 72100 ಇರುತ್ತದೆ. ಆದರೆ ಹೃದಯದಲ್ಲಿ ಇಂಥ ಶಾರ್ಟ್‌ ಸರ್ಕ್ಯೂಟ್‌ ಆದಾಗ, ಆ ರೋಗಿಗೆ ಅದು 180-250 ರವರೆಗೂ ಹೊಡೆದುಕೊಳ್ಳಬಹುದು. ಹೃದಯದಲ್ಲಿ ಕರೆಂಟ್‌ ಓವರ್‌ ಫ್ಲೋ ಆದಾಗ, ಹೃದಯದ ಬಡಿತ 34 ಪಟ್ಟು ಹೆಚ್ಚುತ್ತದೆ. ಹೀಗೆಲ್ಲ ಆಗಲು ಹೃದಯದ ಏರುಪೇರು ಕಾರಣ. ನಮ್ಮ ಹೃದಯದಲ್ಲಿ 4 ಕಾಟಗಳಿದ್ದು, ಅದರಿಂದ ಹಲವು ನರಗಳು ಹೊರಗಿನ ಅಂಗಗಳ ಸಂಪರ್ಕ ಪಡೆದಿರುತ್ತವೆ. ಇದರಲ್ಲಿ ಕೆಲವು ನರಗಳ ಮೇಲೆ ಕವರಿಂಗ್‌ ಇರುವುದಿಲ್ಲ. ಇಂಥ 2 ನರಗಳು ಪರಸ್ಪರ ತಿಕ್ಕಾಡಲು ಶುರುವಾದಾಗ, ಶಾರ್ಟ್‌ ಸರ್ಕ್ಯೂಟ್‌ ಆಗುತ್ತದೆ.

ಲಕ್ಷಣಗಳು

ಇದ್ದಕ್ಕಿದ್ದಂತೆ ಹೃದಯದ ಬಡಿತದಲ್ಲಿ ಏರುಪೇರು.

ದೇಹ ಲೈಟ್‌ ಹಳದಿ ಬಣ್ಣಕ್ಕೆ ತಿರುಗುತ್ತಾ, ತಣ್ಣಗೆ ಆಗಲಾರಂಭಿಸುತ್ತದೆ.

ಉಸಿರಾಟ ತೀವ್ರವಾಗಿ ಹೆಚ್ಚುತ್ತದೆ.

ರಕ್ತದ ಒತ್ತಡ (ಬಿ‌ಪಿ) ಅಸಾಮಾನ್ಯ ಆಗುತ್ತದೆ.

ಚಿಕಿತ್ಸೆ

ಎಲೆಕ್ಟ್ರೋ ಫಿಝಿಯಾ ಲಾಜಿಕ್‌ ಸ್ಟಡಿ ಮೂಲಕ, ಶಾರ್ಟ್‌ ಸರ್ಕ್ಯೂಟ್‌ ನ ಪಾಯಿಂಟ್‌ ನ್ನು ಹೇಗೆ ಹಿಡಿಯುವುದೆಂದರೆ. ಕಾಲಿನ ಬದಿಯಿಂದ 3 ತಂತಿಗಳನ್ನು ಹೃದಯಕ್ಕೆ ಜೋಡಿಸಲಾಗುತ್ತದೆ. ಇದರ ನೆರವಿನಿಂದ ಹೃದಯದ ಒಳಗೆ ಆಗಿರುವ ಶಾರ್ಟ್‌ ಸರ್ಕ್ಯೂಟ್‌ ಕುರಿತು ಪತ್ತೆ ಹಚ್ಚುತ್ತಾರೆ. ಅದು ತಿಳಿದ ನಂತರ ಮತ್ತೆ 4ನೇ ತಂತಿಯನ್ನು ಹೃದಯಕ್ಕೆ ಹಾಯಿಸಲಾಗುತ್ತದೆ. ನಂತರ ಈ ತಂತಿಗಳ ಮೂಲಕ ಸುಮಾರು 350 ತಂತುಗಳ ತರಂಗಾಂತರ ಹಾಯಿಸಿ, ಆ ಸರ್ಕ್ಯೂಟ್‌ ನ್ನು ಫ್ಯೂಸ್ ಮಾಡಲಾಗುತ್ತದೆ.

ಆದರೆ ಎಷ್ಟೋ ಸಲ, ಹೃದಯದಲ್ಲಿ ಪರಸ್ಪರ ಘರ್ಷಿಸಿ ಕರೆಂಟ್‌ ಓವರ್‌ ಫ್ಲೋ ಮಾಡುವಂಥ ನಗರಗಳು, ಹೃದಯದ ಗೋಡೆಗಳನ್ನು ಮತ್ತೆ ಮತ್ತೆ ಘರ್ಷಿಸಿದರೆ, ಅವನ್ನು ತಕ್ಷಣ ಫ್ಯೂಸ್‌ ಮಾಡಲೇಬೇಕಾದ ರಿಸ್ಕ್ ತೆಗೆದುಕೊಳ್ಳಬೇಕು. ಹೀಗಾದಾಗ ಹೃದ್ರೋಗ ತಜ್ಞರು ರೋಗಿಗೆ ಲಕ್ಷಾಂತರ ರೂ.ಗಳ ದುಬಾರಿ ಪೇಸ್‌ ಮೇಕರ್‌ ನ್ನು ಅಳವಡಿಸುವ ಸಲಹೆ ನೀಡುತ್ತಾರೆ. ಇಂಥ ಸ್ಥಿತಿ ಒದಗಿದೆ ಎಂಬುದನ್ನು ಎಲೆಕ್ಟ್ರೋ ಫಿಝಿಯಾಲಜಿ ಸ್ಟಡಿಯಿಂದ ತಿಳಿಯಬಹುದಾಗಿದೆ.

ಹೃದಯದಲ್ಲಿ ರಂಧ್ರ, ತೀವ್ರ ಮಾನಸಿಕ ಒತ್ತಡ, ಅತಿ ಕಾಫಿ/ಟೀ/ಆಲ್ಕೋಹಾಲ್ ‌ಸೇವನೆ, ಅತಿ ಜಂಕ್‌ ಫುಡ್‌ ಬಳಕೆ, ಕೆಮ್ಮು ಜ್ವರದಿಂದ ಹಿಡಿದು ಅನೇಕ ರೋಗಗಳ ಔಷಧಿಗಳು ಹೃದಯದ ಬಡಿತದ ಹಾದಿ ತಪ್ಪಿಸುತ್ತವೆ.

ನಿರ್ಲಕ್ಷ್ಯ ಬೇಡ

ಈ ಸಮಸ್ಯೆ ಮತ್ತೆ ಮತ್ತೆ ರಿಪೀಟ್‌ ಆದರೆ ಇದರಿಂದ ಹೃದಯದ ಮಾಂಸಖಂಡಗಳು ಬಲು ದುರ್ಬಲಗೊಳ್ಳುತ್ತವೆ, ಆಗ ಹೃದಯ ಹಿಗ್ಗಲು ಆರಂಭಿಸುತ್ತದೆ. ಇದರಿಂದ ಕರೆಂಟ್‌ ಬೇರೆ ಕಡೆಯೂ ಹರಿದು, ಹೃದಯದ ಬಡಿತವನ್ನು ಮತ್ತಷ್ಟು ಮಗದಷ್ಟು ಹೆಚ್ಚಿಸುತ್ತದೆ. ಅದನ್ನೂ ನಿರ್ಲಕ್ಷಿಸದ್ದೇ ಆದಲ್ಲಿ, ಹಾರ್ಟ್‌ ಅಟ್ಯಾಕ್‌ ಗೆ ತಿರುಗಿ ಜೀವ ಹೋಗುತ್ತದೆ. ಹೃದಯದ ಈ ಸಮಸ್ಯೆ ಹೆಂಗಸರನ್ನು ಹೆಚ್ಚು ಕಾಡಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ