- ರಾಘವೇಂದ್ರ ಅಡಿಗ ಎಚ್ಚೆನ್.

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ‌ 7ನೇ ವರ್ಷದ ಪ್ರಶಸ್ತಿ ಸಮಾರಂಭಕ್ಕೂ ಮುನ್ನ ಟ್ರೋಫಿ ಅನಾವರಣ ಮತ್ತು ನಾಮ ನಿರ್ದೇಶಿತರ ಹೆಸರುಗಳ ಘೋಷಣೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿದೆ. ಟ್ರೋಫಿ ಅನಾವರಣ ಕಾರ್ಯಕ್ರಮಕ್ಕೆ ಖ್ಯಾತ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಕೆ.ಎಂ ಚೈತನ್ಯ, ಖ್ಯಾತ ನಟಿ ಪೂಜಾ ಗಾಂಧಿ ಹಾಗೂ ನಟ ಶ್ರೀನಗರ ಕಿಟ್ಟಿ, ಅಂಬರ್ಸ್ಟೋನ್ ಪ್ರಾಪರ್ಟೀಸ್ ಸೇಲ್ಸ್ ಹೆಡ್ ಸುನೀಲ್, ಮಾರ್ಕೆಟಿಂಗ್ ಹೆಡ್‌ ಅನೂಪ್, ಮಾರ್ಕೆಟಿಂಗ್ ಜನರಲ್ ಮ್ಯಾನೇಜರ್ ಶ್ವೇತಾ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಚಲನಚಿತ್ರರಂಗದ ಹಿರಿಯ ಪಿಆರ್‌ಒ ವಿಜಯ್ ಕುಮಾರ್ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಸಿನಿಮಾ ವಿಮರ್ಶಕರು ಕೊಡುವ ಪ್ರಶಸ್ತಿಗಳಿಗೆ ತೂಕ ಇರಲಿದೆ. ಹಾಗಾಗಿ, ಅದೊಂದು ದೊಡ್ಡ ಗೌರವ ಎಂದು ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದರು. ಜೊತೆಗೆ ಏಳು ವರ್ಷಗಳಿಂದ ಪ್ರಶಸ್ತಿ ನೀಡುತ್ತಾ ಬಂದಿದ್ದರೂ ನನಗಿನ್ನೂ ಏಕೆ ಪ್ರಶಸ್ತಿ ಕೊಟ್ಟಿಲ್ಲ ಎಂದು ಕೇಳುವ ಮೂಲಕ ಹಾಸ್ಯ ಚಟಾಕಿ ಸಿಡಿಸಿದರು.

chandana

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ ಪ್ರಶಸ್ತಿ ಕುರಿತಂತೆ ಮೆಚ್ಚುಗೆಯ ಮಾತುಗಳನ್ನು ಆಡಿದರು ನಟ ಶ್ರೀನಗರ ಕಿಟ್ಟಿ. ಏಳು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿರುವ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯು ಮಾದರಿ ಕೆಲಸ ಮಾಡುತ್ತಿದೆ. ಪ್ರಶಸ್ತಿಗಳ ಆಯ್ಕೆಯೇ ತಿಳಿಸುತ್ತದೆ ಅಂದರು ಪೂಜಾ ಗಾಂಧಿ.
ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ‌ 7ನೇ ವರ್ಷದ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂದ ಚಿತ್ರಗಳ ಪೈಕಿ :ಕಾಂತಾರ ಚಾಪ್ಟರ್ ೧" ಅತಿ ಹೆಚ್ಚೆನ ವಿಭಾಗಗಳಲ್ಲಿ ನಾಮನಿರ್ದೇಶಗೊಂಡಿದೆ. ಅತ್ಯುತ್ತಮ ವಿಎಫ್ ಎಕ್ಸ್, ಅತ್ಯುತ್ತಮ ಕಲಾ ನಿರ್ದೇಶನ, ಅತ್ಯುತ್ತಮ ಸಾಹಸ ನಿರ್ದೇಶನ, ಅತ್ಯುತ್ತಮ ಸಂಕಲನ, ಅತ್ಯುತ್ತಮ ಸಂಭಾಷಣೆ, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಗಾಯಕ, ಅತ್ಯುತ್ತಮ ಸಾಹಿತ್ಯ, ಅತ್ಯುತ್ತಮ ಹಿನ್ನೆಲೆ ಸಂಗೀತ, ಅತ್ಯುತ್ತಮ ಸಂಗೀತ, ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಟ, ಅತ್ಯುತ್ತಮ ನಿರ್ದೇಶನ ಹಾಗೂ ಅತ್ಯುತ್ತಮ ಚಿತ್ರ ಈ ಇಷ್ಟೂ ವಿಭಾಗಗಳಲ್ಲಿ ರಿಷಬ್ ಶೆಟ್ತಿಯವರ "ಕಾಂತಾರ" ನಾಮನಿರ್ದೇಶನ ಆಗಿದೆ. ಇನ್ನು ಈ ಸಾಲಿನ ವಿವಿಧ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡ

chandana 2

ಚಿತ್ರಗಳ ಸಂಪೂರ್ಣ ವಿವರ ಹೀಗಿದೆ -
ಅತ್ಯುತ್ತಮ ಚಲನಚಿತ್ರ
1. ಏಳುಮಲೆ
2. ಮಿಥ್ಯ
3. ಕಾಂತಾರ: ಚಾಪ್ಟರ್ 1
4. ಹೆಬ್ಬುಲಿ ಕಟ್
5. ಮಾದೇವ

ಅತ್ಯುತ್ತಮ ನಿರ್ದೇಶನ
1. ರಿಷಬ್ ಶೆಟ್ಟಿ (ಕಾಂತಾರ: ಚಾಪ್ಟರ್ 1)
2. ಪುನೀತ್ ರಂಗಸ್ವಾಮಿ ( ಏಳುಮಲೆ)
3. ಜೆಪಿ ತುಮಿನಾಡ್ ( ಸು ಫ್ರಮ್ ಸೋ)
4. ಭೀಮರಾವ್ (ಹೆಬ್ಬುಲಿ ಕಟ್)
5. ಸುಮಂತ್ ಭಟ್ (ಮಿಥ್ಯ)

ಅತ್ಯುತ್ತಮ ನಟ
1. ವಿನೋದ್ ಪ್ರಭಾಕರ್ (ಮಾದೇವ)
2. ಡಾರ್ಲಿಂಗ್ ಕೃಷ್ಣ (ಬ್ರಾಟ್)
3. ರಿಷಬ್ ಶೆಟ್ಟಿ (ಕಾಂತಾರ: ಚಾಪ್ಟರ್ 1)
4. ದರ್ಶನ್ (ದ ಡೆವಿಲ್)
5. ಸುದೀಪ್ (ಮಾರ್ಕ್)

ಅತ್ಯುತ್ತಮ ನಟಿ
1. ರುಕ್ಮಿಣಿ ವಸಂತ್ (ಕಾಂತಾರ: ಚಾಪ್ಟರ್ 1)
2. ಅಂಜಲಿ ಅನೀಶ್ (ಮನದ ಕಡಲು)
3. ಸೋನಲ್ ಮೊಂತೆರೋ (ಮಾದೇವ)
4. ರೇಷ್ಮಾ ಎಲ್ (ಲವ್ ಯು ಮುದ್ದು)
5. ಆಶಿಕಾ ರಂಗನಾಥ್ (ಗತ ವೈಭವ)

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ