ಚಿತ್ರಶೋಭಾ

ಸೋನಂಳ ಮನೆಯಲ್ಲಿ ಕಳುವು

`3D’ ಚಿತ್ರದಲ್ಲಿ ನೀಲ್ ‌ನಿತಿನ್‌ ಮುಕೇಶ್‌ನೊಂದಿಗೆ ಲಿಪ್‌ ಲಾಕ್‌ ಮಾಡಿಕೊಂಡ ನಟಿ ಸೋನಂ ಚೌಹಾನ್‌ಳ ಮನೆಯಲ್ಲಿ ಕಳ್ಳತನ ನಡೆದಿದೆಯಂತೆ! ಆ ಹಾಳಾದ ಕಳ್ಳ ಇವಳ ಮನೆ ಕೊಳ್ಳೆ ಹೊಡೆಯುವಾಗ ಇತ್ತೀಚೆಗೆ ಇವಳಿಗೆ ದೊರಕಿದ್ದ ಮಿಸ್‌ ವರ್ಲ್ಡ್ ಟೂರಿಸಂನ 3.5 ಲಕ್ಷ ರೂ. ಬೆಲೆ ಬಾಳುವ ಕಿರೀಟವನ್ನೂ ಹೊಡೆದುಬಿಟ್ಟಿದ್ದಾನೆ. ದೆಹಲಿಯ ಗ್ರೇಟರ್‌ ನೊಯ್ಡಾದಲ್ಲಿ ವಾಸಿಸುವ ಇವಳ ಮನೆಗೆ ರಾತ್ರಿ ನುಗ್ಗಿದ ಕಳ್ಳ ಬಾಗಿಲು ಮುರಿದುಹಾಕಿ ಇಂಥ ಆಘಾತ ಮಾಡಿದ್ದಾನೆ. ಕಿರೀಟ ಬಿಟ್ಟು ಉಳಿದ ವಸ್ತುಗಳ ಬೆಲೆ ಸುಮಾರು 40 ಲಕ್ಷಕ್ಕೂ ಮೀರಿದ್ದಂತೆ. ಅವಳ ಮನೆಯವರೆಲ್ಲ ಹೊರಗೆ ಪ್ರವಾಸಕ್ಕೆ ಹೋಗಿದ್ದರು ಹಾಗೂ ಈಕೆ ವಿದೇಶದಲ್ಲಿ ಚಿತ್ರೀಕರಣದಲ್ಲಿದ್ದಳು. ಮುಂದಿನ ಐಟಂ ನಂಬರ್‌ಗಳಲ್ಲಿ ತನ್ನ ಸಂಭಾವನೆ ಹೆಚ್ಚಿಸಿಕೊಂಡು ಇವಳು ನಷ್ಟ ಸರಿಪಡಿಸಿಕೊಳ್ಳಬೇಕಷ್ಟೆ.

967961-01-02-actress-Anushka-Sharma

ನನ್ನದೇ ನಿಬಂಧನೆ ಒಡ್ಡಿ ಕೆಲಸ ಮಾಡ್ತೀನಿ

ತನ್ನ ಮೊದಲ ಚಿತ್ರದಿಂದಲೂ ಅನುಷ್ಕಾ ಶರ್ಮ ಹಿಂದಿರುಗಿ ನೋಡಬೇಕಾದ ಪ್ರಮೇಯ ತಂದುಕೊಂಡಿಲ್ಲ. `ಬ್ಯಾಂಡ್‌ ಬಾಜಾ ಬಾರಾತ್‌’ ನಿಂದ ಅವಳು ಎಲ್ಲದರಲ್ಲೂ ಯಶಸ್ವಿ ಎನಿಸಿದ್ದಾಳೆ. ತನ್ನ ಯಶಸ್ಸಿಗೆ ಮನೆಯವರೆಲ್ಲರೂ ಕಾರಣ ಎನ್ನುತ್ತಾಳೆ ಅನುಷ್ಕಾ. ತಾಯಿ ತಂದೆಯರ ಮಾರ್ಗದರ್ಶನದೊಂದಿಗೆ, ತಾನು ಉತ್ತಮ ಅಬ್ಸರ್ವರ್ ಆಗಿರುವುದರಿಂದ ಪ್ರತಿ ಚಿತ್ರದಿಂದಲೂ ಏನಾದರೂ ಕಲಿಯುತ್ತಿರುತ್ತೇನೆ ಎನ್ನುತ್ತಾಳೆ. ಕಳೆದ ವರ್ಷ ಈಕೆ ಅದ್ಧೂರಿಯಾದ `ಬಾಂಬೆ ವೆಲ್ವೆಟ್‌,’ `ದಿಲ್‌ ಧಡ್ಕನೆ ದೋ’ ಚಿತ್ರಗಳನ್ನು ಮುಗಿಸಿದ್ದಲ್ಲದೆ ತನ್ನದೇ ನಿರ್ಮಾಣದ ಚಿತ್ರ ಶುರು ಮಾಡಿದ್ದಳು. ತನ್ನ ಸೌಂದರ್ಯದ ಗುಟ್ಟಿನ ಬಗ್ಗೆ ಈಕೆ, ತಾನು ಎಂದೂ ಫೇಶಿಯಲ್ ಮಾಡಿಸಿಕೊಳ್ಳುವುದಿಲ್ಲ, ಬ್ಯೂಟಿ ಟ್ರೀಟ್‌ಮೆಂಟ್‌ ಇಷ್ಟವಿಲ್ಲ ಎನ್ನುತ್ತಾಳೆ. ಡೇಲಿ ವ್ಯಾಯಾಮ ಮಾಡ್ತೀನಿ, ಜೊತೆಗೆ ನಾನೂ ಖುಷಿಯಾಗಿದ್ದು ಬೇರೆಯರನ್ನೂ ಖುಷಿಯಾಗಿಡ್ತೀನಿ. ಹೀಗೆ ಯೋವಚಿಸುವವರ ಸೌಂದರ್ಯ ಸದಾ ಹೆಚ್ಚುತ್ತಿರುತ್ತದೆ ಎನ್ನತ್ತಾಳೆ. ವಿರಾಟ್‌ ಕೊಹ್ಲಿ ತನ್ನ ಬಾಯ್‌ಫ್ರೆಂಡ್‌ ನಿಜ, ಆ ಕುರಿತಾಗಿ ತಾನು ಸೀರಿಯಸ್‌ ಆಗಿದ್ದೇನೆ ಎನ್ನುತ್ತಾಳೆ. ಈಕೆ ಇದೀಗ `M..S ಧೋನಿ : ದಿ ಅನ್‌ ಟೋಲ್ಡ್ ಸ್ಟೋರಿ’ ಚಿತ್ರದಲ್ಲಿ ಧೋನಿ ಪತ್ನಿ ಸಾಕ್ಷಿಯಾಗಿ ಫುಲ್ ಬಿಝಿ, ಧೋನಿ ಪಾತ್ರವನ್ನು ಸುಶಾಂತ್‌ ಸಿಂಗ್‌ ನಿರ್ವಹಿಸುತ್ತಿದ್ದಾನೆ.

kriti-sanon

ಅಕ್ಷಯ್ ಚಿತ್ರ ಕೈಬಿಟ್ಟ ಕೃತಿ

`ಹೀರೋಪಂಕ್ತಿ’ ಚಿತ್ರದಿಂದ ತನ್ನ ಕೆರಿಯರ್‌ ಆರಂಭಿಸಿದ ದೆಹಲಿಯ ಹುಡುಗಿ ಕೃತಿ ಸೇನ್‌, ಪ್ರಭುದೇವ್ ನಿರ್ದೇಶನದ  `ಸಿಂಗ್ ಈಸ್‌ ಬ್ಲಿಂಗ್‌’ ಚಿತ್ರಕ್ಕೆ ಬೈ ಬೈ ಹೇಳಿದ್ದಾಳೆ. ಈ ಚಿತ್ರದಲ್ಲಿ ಆಕೆ ಅಕ್ಷಯ್‌ನ ನಾಯಕಿ ಆಗಿದ್ದಳು. ಆ ಚಿತ್ರ ಬಲು ನಿಧಾನವಾಗಿ ತಯಾರಾಗುತ್ತಿರುವುದೇ ಅದಕ್ಕೆ ಕಾರಣ ಎನ್ನುತ್ತಾಳೆ.  ಇಷ್ಟು ತಡವಾಗುತ್ತಿರುವುದರಿಂದ, ನನ್ನ ಇತರ ಚಿತ್ರಗಳಿಗೆ ಕ್ಲ್ಯಾಷ್‌ಆಗುತ್ತಿದೆ ಎಂದು ದೂರುತ್ತಿದ್ದಾಳೆ. ಇವಳ ಜಾಗಕ್ಕೆ ಈಗ `ಐ’ ಖ್ಯಾತಿಯ ಆ್ಯಮಿ ಜ್ಯಾಕ್ಸನ್‌ ಬಂದಿದ್ದಾಳೆ.

Hot-Actress-Aditi-Rao-HD-Images

ಕ್ಯಾಮೆರಾ ಎದುರು ಸಂಕೋಚವೇಕೆ?

ಇಂದಿನ ನಟಿಯರು ತುಂಬಾ ಬೋಲ್ಡ್ ಎಂಬುದೇನೋ ನಿಜವೇ ಆದರೂ, ಬಿಕಿನಿ ಧರಿಸಲು ಮುಜುಗರ ತಪ್ಪಿಲ್ಲ. ಕ್ಯಾಮೆರಾ ಎದುರು ದೇಹ ಪ್ರದರ್ಶಿಸಲು ಏಕೆ ನಾಚಿಕೊಳ್ಳಬೇಕು? ಎನ್ನುವವರಿಗೇನೂ ಕೊರತೆ ಇಲ್ಲ. ಅಂಥವರಲ್ಲಿ ಅದಿತಿ ರಾವ್ ಸಹ ಒಬ್ಬಳು. ಬಾಲಿವುಡ್‌ನಲ್ಲಿ ಎಂಥದೇ ಪಾತ್ರ ಸಿಕ್ಕರೂ ಸರಿ, ತಾನು ನಿಭಾಯಿಸಬಲ್ಲೇ ಎನ್ನುತ್ತಾಳೆ. `ಮರ್ಡರ್‌,’ `ಖೂಬ್‌ಸೂರತ್‌,’ `ಬಾಸ್‌’ ಚಿತ್ರಗಳಲ್ಲಿ ಮಿಂಚಿದ ಅದಿತಿ, `ಗುಡ್ಡು ರಂಗೀಲಾ, ಔರ್‌ ದೇವದಾಸ್‌, ಜೀರ್‌’ ಚಿತ್ರಗಳಲ್ಲಿ ಯಾರೂ ವಹಿಸದಷ್ಟು ಎದೆಗಾರಿಕೆ ತೋರಿಸಿ ಬೋಲ್ಡ್ ಸೀನ್ಸ್ ಗಳಲ್ಲಿ ನಟಿಸುತ್ತಿದ್ದಾಳಂತೆ.

amir-khan

ದಂಗಲ್ ಪೈಲ್ವಾನ್ಅಮೀರ್ಖಾನ್

ತಾನು ಯಾವುದೇ ಪಾತ್ರ ವಹಿಸಲಿ, ಅದರಲ್ಲಿ ಸಂಪೂರ್ಣ ಮುಳುಗಿಹೋಗುತ್ತಾನೆ. ಹೀಗಾಗಿಯೇ ಆತ ಪರ್ಫೆಕ್ಶನಿಸ್ಟ್ ಎನಿಸಿದ್ದಾನೆ. `ಪಿ.ಕೆ.’ ಚಿತ್ರದ ನಂತರ `ದಂಗಲ್’ ಆರಂಭಿಸಿರುವ ಅಮೀರ್‌, ಅದರಲ್ಲಿ ತಲ್ಲೀನ. ಹರಿಯಾಣಾದ ಪೈಲ್ವಾನ್

ಮಹಾವೀರ್‌ ಪೋಗಾಟ್‌ ಹಾಗೂ ಆತನ ಮಕ್ಕಳಾದ ಗೀತಾ, ಬಬಿತಾ ಹಾಗೂ ವಿನೇಶ್‌ರ ಸಂಘರ್ಷದ ಕಥೆಯಾಧಾರಿತ ಈ ಚಿತ್ರದಲ್ಲಿ ಅಮೀರ್‌ ಪೈಲ್ವಾನ್‌ ಮಹಾವೀರ್‌ನ ಪಾತ್ರ ನಿರ್ವಹಿಸುತ್ತಿದ್ದಾನೆ. ಈತನ ಮಕ್ಕಳಾಗಿ ಅಕ್ಷರಾ ಹಾಸನ್‌, ದೀಕ್ಷಾ ಸೇಠ್‌, ತಾಪಸಿ ಪನ್ನೂ ನಟಿಸುತ್ತಿದ್ದಾರೆ. ಈ ಚಿತ್ರದ ನಿರ್ದೇಶಕರು ನಿತೇಶ್‌ ತಿವಾರಿ. ಪರ್ಫೆಕ್ಟ್ ಪೈಲ್ವಾನ್‌ ಲುಕ್‌ಗಾಗಿ ಅಮೀರ್‌ ಚೆನ್ನಾಗಿ ದಪ್ಪ ಆಗಿದ್ದಾನೆ, ಹರಿಯಾಣ್ವಿ ಭಾಷೆ ಕಲಿಯುತ್ತಿದ್ದಾನೆ. ಮೂವರು ಯಸ್ಕ ಹೆಣ್ಣುಮಕ್ಕಳ ತಂದೆಯಾಗಿ ಅಮೀರ್‌ ಯಾವ ಮೋಡಿ ಮಾಡಲಿದ್ದಾನೋ ಕಾದು ನೋಡಬೇಕು.

deepika-padukon

ಭಾರಿ ಲಹಂಗಾ

ಕಾನೂನಿನ ಪೇಚಿಗೆ ಸಿಲುಕಿರುವ ದೀಪಿಕಾ ಪಡುಕೋಣೆ, ಈಗ ತನ್ನ ಬಾಯ್‌ಫ್ರೆಂಡ್‌ ರಣವೀರ್‌ ಸಿಂಗ್‌ ಜೊತೆ ಸಂಜಯ್‌ ಲೀಲಾ ಬನ್ಸಾಲಿಯವರ `ಬಾಜೀರಾವ್ ‌ಮಸ್ತಾನಿ’ ಚಿತ್ರದಲ್ಲಿ ಪೂರಾ ಮಸ್ತ್ ಆಗಿದ್ದಾಳೆ. ಈ ಚಿತ್ರದ ಹಾಡೊಂದಕ್ಕಾಗಿ ಒಮ್ಮೆಲೇ 20

ಕಿಲೋಗಿಂತ ಅಧಿಕ ತೂಕದ ಬಟ್ಟೆ ಧರಿಸಬೇಕಾದ ಈಕೆ, ಎಲ್ಲಕ್ಕೂ ಹೆಚ್ಚಿನ ಭಾರವೆಂದರೆ ಲಹಂಗಾದ್ದು ಎನ್ನುತ್ತಾಳೆ. ಇಂಥ ತೂಕದ ವಸ್ತ್ರ ಧರಿಸಿ ಈಕೆ ಈ ಚಿತ್ರಕ್ಕಾಗಿ ಕತ್ತಿ ವರಸೆಯ ಶೂಟಿಂಗ್‌ ಮಾಡ್ತಿದ್ದಾಳೆ. ಈಕೆ ಚಿತ್ರದ ಅಧಿಕ ಸಾಹಸದ ದೃಶ್ಯಗಳಲ್ಲಿದ್ದಾಳೆ, ಅದಕ್ಕಾಗಿ ಪೂರ್ತಿ ತಯಾರಿ ನಡೆಸಿದ್ದಾಳೆ. ಮರಾಠರ ಐತಿಹಾಸಿಕ ಚಿತ್ರವಾದ ಇದು, ಪೇಶ್ವೆ ಬಾಜಿರಾಯನ ಕುರಿತಾದುದು. ಪ್ರಮುಖ ಪಾತ್ರದಲ್ಲಿ ರಣವೀರ್‌ ಸಿಂಗ್‌ ಇದ್ದಾನೆ, ಇದರಲ್ಲಿ ಈಕೆ ಅವನ ಉಪಪತ್ನಿ. ಅವನ ಪಟ್ಟದರಸಿಯಾಗಿ ಮಿಂಚಲಿದ್ದಾಳೆ ಪ್ರಿಯಾಂಕಾ ಚೋಪ್ರಾ.

devdas

ಮತ್ತೆ ಮರಳಲಿರುವ ದೇವದಾಸ್

ಬಾಲಿವುಡ್‌ನಲ್ಲಿ ಮತ್ತೆ ಮತ್ತೆ ಒಂದೇ ಕಾದಂಬರಿ ಚಿತ್ರವಾಗುತ್ತಿದೆ ಎಂದರೆ ಅದು 1917ರಲ್ಲಿ ಪ್ರಕಟಗೊಂಡ ಶರಚ್ಚಂದ್ರರ ಬಂಗಾಳಿ ಕೃತಿ ದೇವದಾಸ್‌. 1927ರಲ್ಲಿ ಈ ಕುರಿತಾದ ಮೂಕಿ ಚಿತ್ರ ಬಂದಿತ್ತು. 1936ರಲ್ಲಿ  ಸೆಹಗಲ್ ಜಮುನಾ ಬರುವಾ ಜೋಡಿಯ `ದೇವದಾಸ್‌’ ಬಂದಿತು. ನಿರ್ದೇಶಕ ವಿಮಲ್ ರಾಯ್‌ರಲ್ಲಿ ಮತ್ತೆ ದಿಲೀಪ್‌ ಕುಮಾರ್‌ ವೈಜಯಂತಿ ಮಾಲಾರ `ದೇವದಾಸ್‌’ ಮಾಡಿದ್ದರು. ಆ ಕಾಲಕ್ಕೆ ಅತ್ಯಂತ ಯಶಸ್ವಿ ಎನಿಸಿದ್ದ ಈ ಚಿತ್ರ ಮೊದಲ ಬಾರಿಗೆ ಬಣ್ಣದಲ್ಲಿ ಮತ್ತೆ 2002ರಲ್ಲಿ ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಶಾರೂಖ್‌ ಐಶ್ವರ್ಯಾರನ್ನು ಪ್ರಧಾನ ಪಾತ್ರದಲ್ಲಿ, ಮಾಧುರಿಯನ್ನು ಚಂದ್ರಮುಖಿಯಾಗಿ ತೋರಿಸಲಾಯಿತು. ಅತ್ಯಂತ ದುಬಾರಿ ವೆಚ್ಚದ ಕಾರಣ ಈ ಚಿತ್ರ ಓಹೋ ಎಂದು ಹೆಸರು ಗಳಿಸಿತು. 2011ರಲ್ಲಿ ಮತ್ತೆ ಇದೇ ಕಥೆಯನ್ನು ಅನುರಾಗ್‌ ಕಶ್ಯಪ್‌ ಆಧುನಿಕವಾಗಿ `ದೇವ್ ಡೀ’ ಎಂದು ತೋರಿಸಿದರು.  ಅಭಯ್‌ ಡಿಯೋಲ್ ‌ಜೊತೆ ಕಲ್ಕಿ ಮತ್ತು ಮಾಹಿಗಿಲ್ ಇದ್ದರು. ಇದೀಗ 2015ರಲ್ಲಿ ಮತ್ತೆ ನಿರ್ದೇಶಕ ಸುಧೀರ್‌ ಮಿಶ್ರಾ `ಔರ್‌ ದೇವದಾಸ್‌’ನನ್ನು ತೆರೆಗೆ ತರುತ್ತಿದ್ದಾರೆ. `ಅಗ್ಲಿ’ ಖ್ಯಾತಿಯ ರಾಹುಲ್ ಭಟ್‌ ಜೊತೆ ರಿಚಾ ಚಡ್ಡ (ಪಾರೋ) ಮತ್ತು ಅದಿತಿ ರಾವ್ (ಚಂದ್ರಮುಖಿ) ಅತ್ಯಂತ ಮಾಡರ್ನ್‌ ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

548f5b7962ce2.image

ಹಳೆಯ ಜೋಡಿ ಮತ್ತೆ ತೆರೆಗೆ

ಶಾರೂಖ್‌ ಮತ್ತು ಕಾಜೋಲ್ ದೇವಗನ್‌ರ ಹಿಟ್‌ ಜೋಡಿ ಮತ್ತೆ ಬೆಳ್ಳಿ ತೆರೆ ಮೇಲೆ ರಾರಾಜಿಸಲಿದೆ. ರೋಹಿತ್‌ ಶೆಟ್ಟಿಯ ಮುಂದಿನ `ದಿಲ್ ವಾಲೆ’ ಚಿತ್ರದಲ್ಲಿ ರೊಮ್ಯಾಂಟಿಕ್‌ ಆಗಿ ಕಾಣಿಸಲಿದೆ. ಈ ಚಿತ್ರ ಯಾವುದರ ರೀಮೇಕೂ ಅಲ್ಲ ಎಂದರು ಶೆಟ್ಟಿ. ಹಿಂದೆ ಅಜಯ್‌ ದೇವಗನ್‌ ರವೀನಾ ಟಂಡನ್‌ರ `ದಿಲ್ ವಾಲೆ’ ಬಂದು ಹೋಗಿತ್ತು. ಈ ಚಿತ್ರದಲ್ಲಿ ಶಾರೂಖ್‌ ತಮ್ಮನಾಗಿ ವರುಣ್‌ ಧವನ್‌ ಇರುತ್ತಾನೆ. ಕೃತಿ ಸೇನ್‌, ಕಬೀರ್‌ ಬೇಡಿ , ಜಾನಿ ಲಿವರ್‌, ವರುಣ್‌ ಶರ್ಮ ಮುಂತಾದವರ ದಂಡೇ ಇದೆ.

941861-01-02

ಮನದಾಳದಿಂದ ಮಹಿಳೆಯರನ್ನು ಗೌರವಿಸಿ

ನಿರ್ಭಯಾ ಹತ್ಯಾಕಾಂಡದ ಕುರಿತಾದ `ಇಂಡಿಯಾಸ್‌ ಡಾಟರ್‌’ ಡಾಕ್ಯುಮೆಂಟರಿಯನ್ನು ಭಾರತದಲ್ಲಿ ಬ್ಯಾನ್‌ ಮಾಡಿದ ನಂತರ, ಫರ್ಹಾನ್‌ ಅಖ್ತರ್‌ ಅದನ್ನು ಖಂಡಿಸುತ್ತಾ, ಅದರಲ್ಲಿ ಭಾರತದ ಆತ್ಮಾಭಿಮಾನ ಕುಂದುವಂಥ, ಆಕ್ಷೇಪಿಸುವಂಥದ್ದೇನಿಲ್ಲ ಎಂದರು. ಕಳೆದ ಮಹಿಳಾ ದಿನಾಚರಣೆಯಂದು ಮಾತನಾಡುತ್ತಾ ಅವರು, ನಾನು ಭಾರತ ಸರ್ಕಾರವನ್ನು ಇದರ ಪ್ರದರ್ಶನ ರದ್ದು ಮಾಡಬೇಡಿ ಎಂದು ವಿನಂತಿಸುತ್ತೇನೆ. ಇದರಲ್ಲಿ ನಿರ್ಭಯಾ ಗ್ಯಾಂಗ್‌ ರೇಪ್‌ ಆರೋಪಿಗಳ ಸಂದರ್ಶನದ ಕುರಿತು ದೊಡ್ಡ ರಾಜಕೀಯ ಗಲಭೆ ಎದ್ದಿದೆ. ಇಡೀ ಸಂಸತ್ತು ಇದನ್ನು ರದ್ದುಗೊಳಿಸಲು ಒಂದಾಗಿದೆ. ಎಲ್ಲರೂ ಇದನ್ನು ತಂತಮ್ಮ ರಾಜಕೀಯ ಕನ್ನಡಕಗಳಿಂದ ವೀಕ್ಷಿಸುತ್ತಿದ್ದಾರೆ. ಯಾರೋ ಇದನ್ನು ಭಾರತೀಯ ಸಂಸ್ಕೃತಿಗೆ ಆಪತ್ತು ತರಲಿದೆ ಎಂದರೆ, ಇನ್ಯಾರೋ ಇಡೀ ರಾಷ್ಟ್ರೀಯ ಗೌರವವೇ ಹಾಳಾಗುತ್ತದೆ ಎನ್ನುತ್ತಿದ್ದಾರೆ. ಇದಕ್ಕೆ ವಿರುದ್ಧವಾಗಿ ಸಾಹಿತಿಗಳು, ಬಾಲಿವುಡ್‌ ತಾರೆಯರು ಇದರ ಪರವಾಗಿ ನಿಂತು ನಿಷೇಧ ಬೇಡ ಎನ್ನುತ್ತಿದ್ದಾರೆ. ಫರ್ಹಾನ್‌ಅಖ್ತರ್‌ ಇತ್ತೀಚೆಗೆ ಬೀಜಿಂಗ್‌ನಲ್ಲಿ ಮಹಿಳಾ ಸಶಕ್ತೀಕರಣದ ಕುರಿತು ಮಹಿಳಾ ದಿನಾಚರಣೆಯಂದು ಮಾತನಾಡುತ್ತಾ, ಲೈಂಗಿಕ ಹಿಂಸೆ ಅಥವಾ ದೌರ್ಜನ್ಯ ಕೇವಲ ಮಹಿಳೆಯರ ಮೇಲೆ ಮಾತ್ರ ಆಗುತ್ತಿಲ್ಲ. ಇದು ನಮ್ಮ ಪತ್ನಿ, ತಂಗಿ, ತಾಯಿಯರ ಕುರಿತಾಗಿ ಮಾತ್ರವಲ್ಲದೆ, ಇಡೀ ಮಾನವತೆಯ ಕುರಿತಾದುದಾಗಿದೆ. ಇಡೀ ಮಾನವ ಜನಾಂಗ ತಲೆ ತಗ್ಗಿಸುವಂಥ ಇಂಥ ಹೇಯಕೃತ್ಯ ನಿಲ್ಲಬೇಕು, ಬಹುಶಃ ಮುಂದಿನ 2030ರ ಹೊತ್ತಿಗೆ ಅದಾಗಬಹುದೇನೋ ಎಂದರು. ಅಮಿತಾಭಾ ‌ಜೊತೆ ತಮ್ಮ ನಿರ್ದೇಶನದ `ಜೀರ್‌’ ಚಿತ್ರದಲ್ಲಿ ಬಿಝಿ ಆಗಿರುವ ಫರ್ಹಾನ್‌, ಮುಂದಿನ ಸ್ವಾತಂತ್ರ್ಯ ದಿನಾಚರಣೆ ಹೊತ್ತಿಗೆ ಚಿತ್ರವನ್ನು ಬಿಡುಗಡೆ ಮಾಡಲಿದ್ದಾರೆ.

Priyanka-Chopra

ಛೇ….ಛೇ ಹೀಗೇಕಾಯ್ತು?

ಪೂನಂ ಪಾಂಡೆ ಹಾಗೂ ಇನ್ನಿತರ ಅನೇಕ ನಟಿಯರು ಹಲವಾರು ಸಲ ಪಬ್ಲಿಕ್‌ನಿಂದ ಎಂಬರಾಝಿಂಗ್‌ ಮೂವ್‌ಮೆಂಟ್ಸ್ ಗೆ ಗುರಿಯಾಗಿದ್ದಾರೆ. ಇದು ಆಕಸ್ಮಿಕವೋ ಅಥವಾ ಪೂರ್ವ ತಯಾರಿಯೋ ಹೇಳಲಾಗದು. ಒಮ್ಮೆ ಇವರುಗಳ ಡೀಪ್‌ ನೆಕ್‌ನಿಂದ ಬ್ರಾ ಹೊರಗಿಣುಕುತ್ತಿದ್ದರೆ, ಮತ್ತೊಮ್ಮೆ ಅಂಡರ್‌ ಗಾರ್ಮೆಂಟ್ಸ್ ಧರಿಸುವುದನ್ನೇ ಮರೆತಿರುತ್ತಾರೆ. ಇತ್ತೀಚೆಗೆ ಮೋಸ್ಟ್ ಗ್ಲಾಮರಸ್ ಎನಿಸಿದ ಪ್ರಿಯಾಂಕಾ ಚೋಪ್ರಾಳಿಗೂ ಹೀಗೆ ಆಯಿತು. ಒಂದು ಇವೆಂಟ್‌ನಲ್ಲಿ ಪ್ರಿಯಾಂಕಾ ತನ್ನ ಉಡುಪು ಸರಿಪಡಿಸಿಕೊಳ್ಳುತ್ತಿದ್ದಾಗ, ಪ್ರೆಸ್‌ ಮಂದಿ ತಕ್ಷಣ ಫೋಟೋ ಕ್ಲಿಕ್ಕಿಸಿದ್ದರು. ಇತ್ತೀಚೆಗೆ ಪ್ರಿಯಾಂಕಾ ಅಮೆರಿಕನ್‌ ಟಿವಿ ಚ್ಯಾನೆಲ್ ‌ಧಾರಾವಾಹಿ `ಕ್ವಾಂಟಿಕೋ’ದ ಶೂಟಿಂಗ್‌ನಲ್ಲಿ ಬಿಝಿ. ಆಕೆ ಈ ಕುರಿತಾಗಿ, ನಾನು ಶೂಟಿಂಗ್‌ನ ಹಿಂದಿನ ದಿನವೇ ಸತತ 16 ಗಂಟೆಗಳ ಕೆಲಸ ಮಾಡಿದ್ದೆ ಎಂದು ಟ್ವೀಟ್‌ ಮಾಡಿದ್ದಳು. ಈ ಶೋಗಾಗಿ ಈಕೆ‌ ಏಜೆಂಟ್‌ ಆಗಿ ಕಂಡುಬರಲಿದ್ದಾಳೆ.

811547-01-02

ತಂದೆ ಮಗಳು ಒಟ್ಟೊಟ್ಟಿಗೆ

ಶತ್ರುಘ್ನ ಸಿನ್ಹಾ ಹಾಗೂ ಅವರ ಮುದ್ದಿನ ಮಗಳು ಸೋನಾಕ್ಷಿ ಇಬ್ಬರೂ ಮೊದಲ ಬಾರಿಗೆ ಬೆಳ್ಳಿತೆರೆಯ ಮೇಲೆ ಒಟ್ಟೊಟ್ಟಿಗೆ ಕಾಣಿಸಲಿದ್ದಾರೆ. ನಿರ್ದೇಶಕ ಎ.ಆರ್‌. ಮುರುಗದಾಸ್‌ರ ಇನ್ನೂ ಹೆಸರಿಡದ ಹೊಸ ಚಿತ್ರದಲ್ಲಿ ತಂದೆ ಮಗಳು ಇರುತ್ತಾರೆ. ಮುರುಗದಾಸ್‌ ಜೊತೆ ಸೋನಾಕ್ಷಿಗಿದು 2ನೇ ಚಿತ್ರ. ಈ ಚಿತ್ರದ ಶೂಟಿಂಗ್‌ ಬೇಗ ಶುರುವಾಗಲಿದೆ. ಇದು ತಮಿಳಿನ ಸೂಪರ್‌ ಹಿಟ್‌ `ಮಹಾನ್‌ ಗುರು’ ಚಿತ್ರದ ರೀಮೇಕ್‌. ಇದರಲ್ಲಿ ಖಳನಾಯಕನಾಗಿ ನಿರ್ದೇಶಕ ಅನುರಾಗ್‌ ಕಶ್ಯಪ್‌ ಕಾಣಿಸಿದ್ದರೆ, ಬಹು ದಿನಗಳ ರಾಜಕೀಯದ ಬಿಡುವಿನ ನಂತರ ಶತ್ರುಘ್ನ ಸಿನ್ಹಾ ಬಣ್ಣ ಹಚ್ಚಿದ್ದಾರೆ. 2010ರ `ರಕ್ತ ಚರಿತ್ರಾ’ ನಂತರ ಇವರು ಮತ್ತೆ ನಟಿಸಿರಲಿಲ್ಲ. ಮುಂದೆ ಈ ಜೋಡಿ ಇನ್ನಷ್ಟು ಚಿತ್ರಗಳಲ್ಲಿ ಕಾಣಿಸುವುದೇ ಎಂಬುದನ್ನು ಈ ಚಿತ್ರದ ಯಶಸ್ಸು ಹೇಳಬೇಕಷ್ಟೆ.

John-Abraham-Tattoo-2014

ಬದಲಾದ ಮಾಚೋಮ್ಯಾನ್

ಹಿಂದೆಲ್ಲ ಬಾಲಿವುಡ್‌ನಲ್ಲಿ ಮಾಚೋಮ್ಯಾನ್‌ ಜಾನ್‌ ಅಬ್ರಹಾಂ, ಅತ್ಯಂತ ಸೆಕ್ಸೀ ಸೀನ್‌ನಲ್ಲಿ ನಟಿಸುವ ಬೋಲ್ಡ್ ಹೀರೋ ಎಂದೇ ಗುರುತಿಸಲ್ಪಟ್ಟಿದ್ದ. `ಪಾಪ್‌, ಜಿಸ್ಮ್’ ಮುಂತಾದ ಚಿತ್ರಗಳಲ್ಲಿನ ತನ್ನ ಬೋಲ್ಡ್ ನೆಸ್‌ನಿಂದಾಗಿ ಹಾಟ್‌ ಹೀರೋ ಎನಿಸಿದ್ದ. ಆದರೆ `ಮದ್ರಾಸ್‌ ಕೆಫೆ’ ಚಿತ್ರದ ನಂತರ ಆತ ತನ್ನ ಬೋಲ್ಡ್ ನೆಸ್‌ ತೊರೆದು, ಗಂಭೀರ ಪಾತ್ರಗಳತ್ತ ಮಾತ್ರ ಗಮನಹರಿಸುತ್ತಿದ್ದಾನೆ. ಇನ್ನು ಮುಂದೆ ತಾನು ಯಾವುದೇ ಚಿತ್ರದಲ್ಲೂ ಇಂಟಿಮೇಟ್‌ ಸೀನ್ಸ್ ನಲ್ಲಿ ನಟಿಸುವುದಿಲ್ಲವೆಂದು ಹೇಳಿದ್ದಾನೆ. ಇತ್ತೀಚಿನ `ವೆಲ್ ಕಂ ಬ್ಯಾಕ್‌’ ಚಿತ್ರದಲ್ಲಿ ಶೃತಿ ಹಾಸನ್‌ ಜೊತೆ ಕಿಸ್ಸಿಂಗ್‌ ಸೀನ್‌ ಮಾಡುವುದಿಲ್ಲ ಎಂದುಬಿಟ್ಟ. ರಿಯಾಳ ಜೊತೆ ಈತನ ಮದುವೆ ಆದ ನಂತರ, ಇಂಥ ಪ್ರಣಯ ಪ್ರಧಾನ ದೃಶ್ಯಗಳೇ ತನಗೆ ಬೇಡವೆಂದು ಪಟ್ಟುಹಿಡಿದಿದ್ದಾನೆ. ಇಷ್ಟರಲ್ಲೇ ಈತನ ಡಬಲ್ ರೋಲ್ ‌ಇರುವ `ಹೌಸ್‌ ಫುಲ್-3′ ತೆರೆಕಾಣಲಿದೆ.

evlyn-sharma

ನಾನು ಬಿಚ್ಚಮ್ಮನಾಗಲಾರೆ!

ಎವ್ಲೀನ್‌ಳ ಈ ಲುಕ್ಸ್ ನೋಡಿ ಶಾಕ್‌ ಆಗಬೇಡಿ. ಈ ಮೇಡಂ ಮೈತುಂಬಾ ಸಲ್ವಾರ್‌ ಕಮೀಜ್‌ ಧರಿಸಿ ಬಲು ಸೀದಾಸಾದಾ  ಹಿಮಾಚಲ್ ಗರ್ಲ್ ಆಗಿ ತನ್ನ ಮುಂದಿನ `ಇಶ್ಕ್ ದಾರಿಯಾ’ ಚಿತ್ರದಲ್ಲಿ ಕಾಣಿಸಲಿದ್ದಾಳೆ. ಇದಕ್ಕೆ ಮೊದಲು ಈಕೆ `ಯಾರಿಯಾ, ಮೈ ತೇರಾ ಹಿರೋ’ ಚಿತ್ರಗಳಲ್ಲಿ  ಬೊಂಬಾಟ್‌ ಗ್ಲಾಮರಸ್‌ ಪಾತ್ರಗಳಲ್ಲಿ ಬಿಕಿನಿಯಲ್ಲಿ ಮಿಂಚಿದ್ದಳು. ಈಗ ಮೊದಲ ಬಾರಿಗೆ ಈಕೆ ಪೂರ್ಣ ಪ್ರಮಾಣದ ನಾಯಕಿಯಾಗಿರುವ `ಇಶ್ಕ್ ದಾರಿಯಾ’ ರಿಲೀಸ್‌ ಆಗಲಿದೆ. ನಾನು  ಈ ಚಿತ್ರದ ನಾಯಕಿಯಂತೆಯೇ ಸಣ್ಣ ಊರಿನಿಂದ ಬಂದಳು. ಬಿಕಿನಿ ಧರಿಸಲು ನನ್ನಿಂದಾಗದು ಎನ್ನುತ್ತಾಳೆ. ಹಾಗಿದ್ದರೆ `ಯಾರಿಯಾ’ ಚಿತ್ರದಲ್ಲಿ ತುಂಡುಡುಗೆ ಧರಿಸಿ ದೇಹಸಿರಿ ಪ್ರದರ್ಶಿಸಿದವರಾರು? `ಮಾಡುವುದೆಲ್ಲ ಅನಾಚಾರ, ಮನೆ ಮುಂದೆ……’ ಎಂದು ಸುಮ್ಮನೇ ಹೇಳಿದ್ದಾರೆಯೇ?

ಶತಮಾನದ ಮಾದರಿ ಹೆಣ್ಣು……

ಕೆಲವು ವಾರಗಳ ಹಿಂದಷ್ಟೇ ಅಮಿತಾಭ್ ‌ಜೊತೆ ಟಿ.ವಿ. ಧಾರಾವಾಹಿಯಲ್ಲಿ ಮಿಂಚಿದ ಮೋನಾ ಬಸು, ಇತ್ತೀಚೆಗೆ ಒಂದು ದೂರು ಸಲ್ಲಿಸಿದ್ದಾಳೆ. ಮೋನಾಳನ್ನು ಒಬ್ಬ ಯುವಕ ಚುಡಾಯಿಸಿದ ಅಂತ ದೂರು. ಅವನನ್ನು ಹಿಡಿದು ರಪರಪ ಬಾರಿಸಿದ ಈಕೆ, ತಕ್ಷಣ ಪೊಲೀಸರಿಗೆ ದೂರು ಕೊಟ್ಟಿದ್ದಾಳೆ. ಮೋನಾ ಮುಂಬೈನ ಅಂಧೇರಿಯಿಂದ ಮಡ್‌ ಐಲೆಂಡ್‌ಗೆ ಬೋಟ್‌ನಲ್ಲಿ ಪ್ರಯಾಣಿಸುತ್ತಿದ್ದಳು. ಅಲ್ಲೇ ಆಕೆಯನ್ನು ಈವ್ ಟೀಸ್‌ ಮಾಡಿದ ಒಬ್ಬ ಅಪರಿಚಿತ ತರುಣ, ಕೈ ಬಿಡಿಸತ್ನಿಸಿದಾಗ ಮೋನಾ ಅವನಿಗೆ ಪಾಠ ಕಲಿಸಿದ್ದಾಳೆ. ಇಂದಿನ ಹೆಣ್ಣುಮಕ್ಕಳು ಸದಾ ಹೀಗೆ ಸನ್ನದ್ಧರಾಗಿರಬೇಕು!

divyanka-and-sharad-1

ಮುರಿದು ಬಿದ್ದ ಸಂಬಂಧ

2006ರ ಜನಪ್ರಿಯ ಟಿ.ವಿ. ಶೋ `ಬನೂ ಮೈ ತೇರಿ ದುಲ್ಹನ್‌’ನ ರೊಮ್ಯಾಂಟಿಕ್‌ ಕಪಲ್ಸ್ ದಿವ್ಯಾಂಕಾ ತ್ರಿಪಾಠಿ ಮತ್ತು ಶರದ್ ಮಲ್ಹೋತ್ರಾರ ನೈಜ ಸಂಬಂಧ ಮುರಿದುಬಿದ್ದಿದೆ. 7 ವರ್ಷಗಳಿಂದ ಲಿವ್ ‌ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಇವರು, ಕಳೆದ ವರ್ಷವಷ್ಟೇ ಸಾರ್ವಜನಿಕವಾಗಿ ಅದನ್ನು ಸ್ವೀಕರಿಸಿದ್ದರು. ದಿವ್ಯಾಂಕಾ ಈ ವರ್ಷ ಮದುವೆ ಆಗಲಿದ್ದೇವೆ ಎನ್ನುತ್ತಿದ್ದಳು. ಆದರೆ ಅಷ್ಟರಲ್ಲಿ ಶಾಶ್ವತವಾಗಿ ಆ ಸಂಬಂಧ ಮುರಿದುಬಿತ್ತು.

shilpa-shetty

ಶಿಲ್ಪಾಶೆಟ್ಟಿಗೆ ಬಂಪರ್ಆಫರ್‌!

ಬಾಲಿವುಡ್‌ ಮಾತ್ರವಲ್ಲದೆ, ದಕ್ಷಿಣದ ಚಿತ್ರಗಳಲ್ಲೂ ಸೈ ಎನಿಸಿಕೊಂಡ ಶಿಲ್ಪಾಶೆಟ್ಟಿ, ಕ್ರಿಕೆಟ್‌ನಲ್ಲಿ ಇನ್ ವಾಲ್ವ್ ಆದ ನಂತರ ಸಿನಿಮಾಗಳತ್ತ ಹೆಚ್ಚು ಗಮನಹರಿಸಲಿಲ್ಲ. ಮದುವೆ, ಮಗು ಸಹ ಇದಕ್ಕೆ ಮತ್ತೊಂದು ಕಾರಣ. ನಂತರ ಟಿ.ವಿ.ಯ `ಝಲಕ್‌ ದಿಖ್ ಲಾಜಾ’ ಡ್ಯಾನ್ಸ್ ಶೋಗೆ ಜಡ್ಜ್ ಆಗಿ ಶಿಲ್ಪಾಳಿಗೆ 5 ಕೋಟಿಗಳ ಆಫರ್‌ ಬಂತು. ಇದೇ ಕೆಲಸಕ್ಕೆ ಮಾಧುರಿಯ ಸಂಭಾವನೆ ಇನ್ನೂ ಹೆಚ್ಚಾದಾಗ, ನಿರ್ಮಾಪಕರು ಆ ಅವಕಾಶವನ್ನು ಈಕೆಗೆ ನೀಡಿದರು. ಶಿಲ್ಪಾ ಖುಷಿಯಾಗಿ ಹೂಂ ಅಂದಳಂತೆ, ಆಲ್ ದಿ ಬೆಸ್ಟ್!

anurag-basu__599951

ನಚ್ಬಲಿಯೇ ಹೊಸ ಸೀರೀಸ್

ಕಿರುತೆರೆಯಲ್ಲಿ ಜನಪ್ರಿಯ ಡ್ಯಾನ್ಸ್ ಶೋ `ನಚ್‌ ಬಲಿಯೇ’ ದ ಮತ್ತೊಂದು ಸೀಸನ್‌ ಶುರುವಾಗಿದೆ. ಅನುರಾಗ್‌ ಬಸು ಈ ಹೊಸ ಸೀರೀಸ್‌ನ ಜಡ್ಜ್ ಆಗಿದ್ದಾರೆ. ಹೀಗಾಗಿ ಅವರು ಸಾಜಿದ್‌ ಖಾನ್‌ರ ಜಾಗ ರೀಪ್ಲೇಸ್‌ ಮಾಡಿದ್ದಾರೆ. ಜಡ್ಜ್ ಪ್ಯಾನೆಲ್‌ನಲ್ಲಿ ಈಶಾ ಕೊಪ್ಪೀಕರ್‌ ಸಹ ಇರ್ತಾಳೆ. ಸ್ಪರ್ಧಿಗಳಲ್ಲಿ ಮೇರಿ ಕೋಮ್ ತನ್ನ ಗಂಡ ಓಲರ್‌ ಜೊತೆ, `ಬಿಗ್‌ ಬಾಸ್‌’ ಖ್ಯಾತಿಯ ಉಪೇನ್‌ ಪಟೇಲ್‌ ಕರಿಶ್ಮಾ ಖನ್ನಾ, ಸಲ್ಮಾನ್‌ ಯೂಸುಫ್‌ ರಶ್ಮಿ ದೇಸಾಯಿ, ವರುಣ್‌ ಸೋಬ್ತಿ ಸಾನ್ಯಾ ಇರಾನಿ, ಮೋಹಿತ್‌ ಸೆಹೆಗಲ್ ಮುಂತಾದವರಿದ್ದಾರೆ.

merry-kom

ನಾನಿನ್ನೂ ಮಿಸ್ಸೇ!

`ಕಹಾನಿ ಘರ್‌ ಘರ್‌ ಕೀ,’ `ಬಡೇ ಅಚೆ ಲಗ್ತೆ ಹೈ’ ಧಾರಾವಾಹಿಗಳ ನಾಯಕಿಯಾಗಿ ಕ್ರೈಂ ಪೆಟ್ರೋಲ್‌, ಕೋಡ್‌ ರೆಡ್‌ ಶೋಗಳ ಆ್ಯಂಕರ್‌ ಆಗಿ ಕಿರುತೆರೆಯ ಅತ್ಯಂತ ಜನಪ್ರಿಯ ನಟಿಯಾಗಿ ಎಲ್ಲರ ಮನೆಗಳಿಗೆ ಲಗ್ಗೆ ಇಟ್ಟಿರುವ 42 ವರ್ಷಗಳ ಸಾಕ್ಷಿ ತನ್ವರ್ ಇದೀಗ `ಇತ್ನಾ ಕರೋನಾ ಮುಝೆ ಪ್ಯಾರ್‌’ ಮೂಲಕ ಮತ್ತೊಮ್ಮೆ ಸೋನಿ ಟಿ.ವಿ.ಯಲ್ಲಿ ಮಿಂಚಲಿದ್ದಾಳೆ. ನಾನು ನನ್ನ ಸಂಗಾತಿಯನ್ನು ಹುಡುಕಲಾರೆ, ನನ್ನ ರೈಟ್‌ ಪರ್ಸನ್‌ ತಾವಾಗಿಯೇ ಹುಡುಕಿಕೊಂಡು ಬರುತ್ತಾರೆ ಎನ್ನುತ್ತಿದ್ದ ಸಾಕ್ಷಿ, ನಂಬಲರ್ಹ ಮೂಲಗಳ ಪ್ರಕಾರ ಕಳೆದ ತಿಂಗಳು ಗುಟ್ಟು ಗುಟ್ಟಾಗಿ ಯಾರನ್ನೋ ಮದುವೆ

sakshi-tanwar-2

ಆಗಿದ್ದಾಳಂತೆ! ಹೌದಾ ಅಂತ ಕೇಳಿದ್ರೆ ಸಾಕ್ಷಿ ತಕ್ಷಣ, ಇಲ್ಲಪ್ಪ…. ಯಾರೋ ಬೇಕೂಂತ್ಲೇ ಗಾಳಿಸುದ್ದಿ ಹಬ್ಬಿಸಿದ್ದಾರೆ ಅಂತಾಳೆ. ಕಳೆದ ವರ್ಷ ಇದೇ ತರಹ ಒಂದು ಸುದ್ದಿ ಹರಡಿತ್ತು. ಇರಲಿ, ಕಾಲವೇ ನಿರ್ಧರಿಸಿ ಈಕೆ ಮಿಸ್ಸೋ ಮಿಸ್ಸೆಸ್ಸೋ ತಿಳಿಸಲಿದೆ.

ಅನ್ ಲಿಮಿಟೆಡ್ ಕಥೆ, ಲೇಖನ ಓದಲುಸಬ್ ಸ್ಕ್ರೈಬ್ ಮಾಡಿ