ಸೋನಂಳ ಮನೆಯಲ್ಲಿ ಕಳುವು

`3D' ಚಿತ್ರದಲ್ಲಿ ನೀಲ್ ‌ನಿತಿನ್‌ ಮುಕೇಶ್‌ನೊಂದಿಗೆ ಲಿಪ್‌ ಲಾಕ್‌ ಮಾಡಿಕೊಂಡ ನಟಿ ಸೋನಂ ಚೌಹಾನ್‌ಳ ಮನೆಯಲ್ಲಿ ಕಳ್ಳತನ ನಡೆದಿದೆಯಂತೆ! ಆ ಹಾಳಾದ ಕಳ್ಳ ಇವಳ ಮನೆ ಕೊಳ್ಳೆ ಹೊಡೆಯುವಾಗ ಇತ್ತೀಚೆಗೆ ಇವಳಿಗೆ ದೊರಕಿದ್ದ ಮಿಸ್‌ ವರ್ಲ್ಡ್ ಟೂರಿಸಂನ 3.5 ಲಕ್ಷ ರೂ. ಬೆಲೆ ಬಾಳುವ ಕಿರೀಟವನ್ನೂ ಹೊಡೆದುಬಿಟ್ಟಿದ್ದಾನೆ. ದೆಹಲಿಯ ಗ್ರೇಟರ್‌ ನೊಯ್ಡಾದಲ್ಲಿ ವಾಸಿಸುವ ಇವಳ ಮನೆಗೆ ರಾತ್ರಿ ನುಗ್ಗಿದ ಕಳ್ಳ ಬಾಗಿಲು ಮುರಿದುಹಾಕಿ ಇಂಥ ಆಘಾತ ಮಾಡಿದ್ದಾನೆ. ಕಿರೀಟ ಬಿಟ್ಟು ಉಳಿದ ವಸ್ತುಗಳ ಬೆಲೆ ಸುಮಾರು 40 ಲಕ್ಷಕ್ಕೂ ಮೀರಿದ್ದಂತೆ. ಅವಳ ಮನೆಯವರೆಲ್ಲ ಹೊರಗೆ ಪ್ರವಾಸಕ್ಕೆ ಹೋಗಿದ್ದರು ಹಾಗೂ ಈಕೆ ವಿದೇಶದಲ್ಲಿ ಚಿತ್ರೀಕರಣದಲ್ಲಿದ್ದಳು. ಮುಂದಿನ ಐಟಂ ನಂಬರ್‌ಗಳಲ್ಲಿ ತನ್ನ ಸಂಭಾವನೆ ಹೆಚ್ಚಿಸಿಕೊಂಡು ಇವಳು ನಷ್ಟ ಸರಿಪಡಿಸಿಕೊಳ್ಳಬೇಕಷ್ಟೆ.

967961-01-02-actress-Anushka-Sharma

ನನ್ನದೇ ನಿಬಂಧನೆ ಒಡ್ಡಿ ಕೆಲಸ ಮಾಡ್ತೀನಿ

ತನ್ನ ಮೊದಲ ಚಿತ್ರದಿಂದಲೂ ಅನುಷ್ಕಾ ಶರ್ಮ ಹಿಂದಿರುಗಿ ನೋಡಬೇಕಾದ ಪ್ರಮೇಯ ತಂದುಕೊಂಡಿಲ್ಲ. `ಬ್ಯಾಂಡ್‌ ಬಾಜಾ ಬಾರಾತ್‌' ನಿಂದ ಅವಳು ಎಲ್ಲದರಲ್ಲೂ ಯಶಸ್ವಿ ಎನಿಸಿದ್ದಾಳೆ. ತನ್ನ ಯಶಸ್ಸಿಗೆ ಮನೆಯವರೆಲ್ಲರೂ ಕಾರಣ ಎನ್ನುತ್ತಾಳೆ ಅನುಷ್ಕಾ. ತಾಯಿ ತಂದೆಯರ ಮಾರ್ಗದರ್ಶನದೊಂದಿಗೆ, ತಾನು ಉತ್ತಮ ಅಬ್ಸರ್ವರ್ ಆಗಿರುವುದರಿಂದ ಪ್ರತಿ ಚಿತ್ರದಿಂದಲೂ ಏನಾದರೂ ಕಲಿಯುತ್ತಿರುತ್ತೇನೆ ಎನ್ನುತ್ತಾಳೆ. ಕಳೆದ ವರ್ಷ ಈಕೆ ಅದ್ಧೂರಿಯಾದ `ಬಾಂಬೆ ವೆಲ್ವೆಟ್‌,' `ದಿಲ್‌ ಧಡ್ಕನೆ ದೋ' ಚಿತ್ರಗಳನ್ನು ಮುಗಿಸಿದ್ದಲ್ಲದೆ ತನ್ನದೇ ನಿರ್ಮಾಣದ ಚಿತ್ರ ಶುರು ಮಾಡಿದ್ದಳು. ತನ್ನ ಸೌಂದರ್ಯದ ಗುಟ್ಟಿನ ಬಗ್ಗೆ ಈಕೆ, ತಾನು ಎಂದೂ ಫೇಶಿಯಲ್ ಮಾಡಿಸಿಕೊಳ್ಳುವುದಿಲ್ಲ, ಬ್ಯೂಟಿ ಟ್ರೀಟ್‌ಮೆಂಟ್‌ ಇಷ್ಟವಿಲ್ಲ ಎನ್ನುತ್ತಾಳೆ. ಡೇಲಿ ವ್ಯಾಯಾಮ ಮಾಡ್ತೀನಿ, ಜೊತೆಗೆ ನಾನೂ ಖುಷಿಯಾಗಿದ್ದು ಬೇರೆಯರನ್ನೂ ಖುಷಿಯಾಗಿಡ್ತೀನಿ. ಹೀಗೆ ಯೋವಚಿಸುವವರ ಸೌಂದರ್ಯ ಸದಾ ಹೆಚ್ಚುತ್ತಿರುತ್ತದೆ ಎನ್ನತ್ತಾಳೆ. ವಿರಾಟ್‌ ಕೊಹ್ಲಿ ತನ್ನ ಬಾಯ್‌ಫ್ರೆಂಡ್‌ ನಿಜ, ಆ ಕುರಿತಾಗಿ ತಾನು ಸೀರಿಯಸ್‌ ಆಗಿದ್ದೇನೆ ಎನ್ನುತ್ತಾಳೆ. ಈಕೆ ಇದೀಗ `M..S ಧೋನಿ : ದಿ ಅನ್‌ ಟೋಲ್ಡ್ ಸ್ಟೋರಿ' ಚಿತ್ರದಲ್ಲಿ ಧೋನಿ ಪತ್ನಿ ಸಾಕ್ಷಿಯಾಗಿ ಫುಲ್ ಬಿಝಿ, ಧೋನಿ ಪಾತ್ರವನ್ನು ಸುಶಾಂತ್‌ ಸಿಂಗ್‌ ನಿರ್ವಹಿಸುತ್ತಿದ್ದಾನೆ.

kriti-sanon

ಅಕ್ಷಯ್ ಚಿತ್ರ ಕೈಬಿಟ್ಟ ಕೃತಿ

`ಹೀರೋಪಂಕ್ತಿ' ಚಿತ್ರದಿಂದ ತನ್ನ ಕೆರಿಯರ್‌ ಆರಂಭಿಸಿದ ದೆಹಲಿಯ ಹುಡುಗಿ ಕೃತಿ ಸೇನ್‌, ಪ್ರಭುದೇವ್ ನಿರ್ದೇಶನದ  `ಸಿಂಗ್ ಈಸ್‌ ಬ್ಲಿಂಗ್‌' ಚಿತ್ರಕ್ಕೆ ಬೈ ಬೈ ಹೇಳಿದ್ದಾಳೆ. ಈ ಚಿತ್ರದಲ್ಲಿ ಆಕೆ ಅಕ್ಷಯ್‌ನ ನಾಯಕಿ ಆಗಿದ್ದಳು. ಆ ಚಿತ್ರ ಬಲು ನಿಧಾನವಾಗಿ ತಯಾರಾಗುತ್ತಿರುವುದೇ ಅದಕ್ಕೆ ಕಾರಣ ಎನ್ನುತ್ತಾಳೆ.  ಇಷ್ಟು ತಡವಾಗುತ್ತಿರುವುದರಿಂದ, ನನ್ನ ಇತರ ಚಿತ್ರಗಳಿಗೆ ಕ್ಲ್ಯಾಷ್‌ಆಗುತ್ತಿದೆ ಎಂದು ದೂರುತ್ತಿದ್ದಾಳೆ. ಇವಳ ಜಾಗಕ್ಕೆ ಈಗ `ಐ' ಖ್ಯಾತಿಯ ಆ್ಯಮಿ ಜ್ಯಾಕ್ಸನ್‌ ಬಂದಿದ್ದಾಳೆ.

Hot-Actress-Aditi-Rao-HD-Images

ಕ್ಯಾಮೆರಾ ಎದುರು ಸಂಕೋಚವೇಕೆ?

ಇಂದಿನ ನಟಿಯರು ತುಂಬಾ ಬೋಲ್ಡ್ ಎಂಬುದೇನೋ ನಿಜವೇ ಆದರೂ, ಬಿಕಿನಿ ಧರಿಸಲು ಮುಜುಗರ ತಪ್ಪಿಲ್ಲ. ಕ್ಯಾಮೆರಾ ಎದುರು ದೇಹ ಪ್ರದರ್ಶಿಸಲು ಏಕೆ ನಾಚಿಕೊಳ್ಳಬೇಕು? ಎನ್ನುವವರಿಗೇನೂ ಕೊರತೆ ಇಲ್ಲ. ಅಂಥವರಲ್ಲಿ ಅದಿತಿ ರಾವ್ ಸಹ ಒಬ್ಬಳು. ಬಾಲಿವುಡ್‌ನಲ್ಲಿ ಎಂಥದೇ ಪಾತ್ರ ಸಿಕ್ಕರೂ ಸರಿ, ತಾನು ನಿಭಾಯಿಸಬಲ್ಲೇ ಎನ್ನುತ್ತಾಳೆ. `ಮರ್ಡರ್‌,' `ಖೂಬ್‌ಸೂರತ್‌,' `ಬಾಸ್‌' ಚಿತ್ರಗಳಲ್ಲಿ ಮಿಂಚಿದ ಅದಿತಿ, `ಗುಡ್ಡು ರಂಗೀಲಾ, ಔರ್‌ ದೇವದಾಸ್‌, ಜೀರ್‌' ಚಿತ್ರಗಳಲ್ಲಿ ಯಾರೂ ವಹಿಸದಷ್ಟು ಎದೆಗಾರಿಕೆ ತೋರಿಸಿ ಬೋಲ್ಡ್ ಸೀನ್ಸ್ ಗಳಲ್ಲಿ ನಟಿಸುತ್ತಿದ್ದಾಳಂತೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ