ಹುಡುಗಿಯರು ಕಲಿಯುತ್ತಿರುವ ಪ್ರೌಢಶಾಲೆಯ ಅಧ್ಯಾಪಿಕೆಯಾಗಿದ್ದಳು ಆಕೆ…

ಪಾಠ ಹೇಳಿ ಕೊಡಲು ಸಮರ್ಥರಾದ ಅಧ್ಯಾಪಿಕೆಯರಲ್ಲಿ ಒಬ್ಬಳಾಗಿದ್ದಳು ಮತ್ತು ಚೆಲುವೆಯಾಗಿದ್ದಳು ಆಕೆ… ಆಕೆಯ ಮದುವೆ ಆಗಿರಲಿಲ್ಲ….

ಒಂದು ದಿನ ತರಗತಿಯ ಹೆಣ್ಣು ಮಕ್ಕಳು ಆ ಟೀಚರ್ ಹತ್ತಿರ ಕೇಳಿದರು –

“ ಮಿಸ್.. ನೀವು ಮದುವೆಯಾಗದೇ ಇರೋದು ಯಾಕೆ…?”

ಟೀಚರ್ ಹೇಳಿದರು – ” ನಾನೊಂದು ಕಥೆ ಹೇಳುತ್ತೇನೆ. ಎಲ್ಲರೂ ಶ್ರಧ್ಧೆಯಿಂದ ಕೇಳಬೇಕು…”

ಟೀಚರ್ ಕಥೆ ಶುರು ಮಾಡಿದರು – ಒಂದು ಮನೆಯಲ್ಲಿ ನಾಲ್ಕು ಹೆಣ್ಣು ಮಕ್ಕಳಿದ್ದರು… ಐದನೆಯ ಬಾರಿಯೂ ಆ ತಾಯಿ ಗರ್ಭಿಣಿಯಾದಳು… ಪ್ರಸವದ ದಿನ ಹತ್ತಿರವಾಗುತ್ತಿದ್ದಂತೆ ಆಕೆಯ ಪತಿಯು

ಈ ಮಗು ಕೂಡಾ ಹೆಣ್ಣುಮಗುವಾದರೆ ಅದನ್ನು ಎಲ್ಲಾದರು ತಗೊಂಡುಹೋಗಿ ಬಿಸಾಕುತ್ತೇನೆ ಅಂತ ಎಚ್ಚರಿಸುತ್ತಲೇ ಇದ್ದರು….

ಆದರೆ , ವಿಧಿಯನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ ಅಲ್ಲವೇ…. ಈ ಬಾರಿಯೂ ಹೆಣ್ಣುಮಗುವಿಗೇ ಜನ್ಮವಿತ್ತಳು ಆ ತಾಯಿ….

ಅಂದು ರಾತ್ರಿ ಆ ತಂದೆಯು ಆ ನವಜಾತ ಶಿಶುವನ್ನು ತಗೊಂಡು ಹೋಗಿ ದೂರ ಬೀದಿದೀಪದ ಹತ್ತಿರ ಮಲಗಿಸಿ ವಾಪಾಸಾದರು…

ಪಾಪ ಆ ತಾಯಿಯು ಆ ಮಗುವಿಗಾಗಿ ಪ್ರಾರ್ಥಿಸುತ್ತಿದ್ದಳು… ಮರುದಿನ ಬೆಳ್ಳಂಬೆಳಿಗ್ಗೆ ಆ ತಂದೆಯು ಆ ಬೀದಿ ದೀಪದ ಹತ್ತಿರ ಹೋಗಿ ನೋಡಿದಾಗ ಆ ಮಗುವು ಅಲ್ಲೇ ಇತ್ತು…. ಮಗುವನ್ನು ಯಾರೂ ಕೊಂಡೊಯ್ದಿರಲಿಲ್ಲ….

ಆ ತಂದೆಯು ಮಗುವನ್ನು ಎತ್ತಿಕೊಂಡು ಮನೆಗೆ ಮರಳಿದರು.

ಮರುದಿನವು ರಾತ್ರಿ ಆ ತಂದೆಯು ಆ ಮಗುವನ್ನು ಎತ್ತಿಕೊಂಡು ಹೋಗಿ ದೂರದ ಬೀದಿ ದೀಪದ ಹತ್ತಿರ ಇಟ್ಟು ಬಂದರು..

ಆದರೆ , ಆ ತಂದೆ ಮರುದಿನ ಬೆಳಿಗ್ಗೆ ಹೋಗಿ ನೋಡಿದಾಗಲೂ ಆ ಮಗು ಅಲ್ಲೇ ಇತ್ತು. ಹೀಗೇ ಮೂರನೇ ದಿನವು ಆ ತಂದೆಯು ಮಗುವನ್ನು ಬಿಟ್ಟು ಬಂದಿದ್ದರು. ಆದರೆ ಮಗುವನ್ನು ಯಾರೂ ಕೊಂಡೊಯ್ದಿರಲಿಲ್ಲ.

ಕೊನೆಗೆ ಆ ತಂದೆಯು ಸೃಷ್ಟಿಕರ್ತನ ವಿಧಿಯನ್ನು ಸ್ವೀಕರಿಸುತ್ತಾ ಆ ಮಗುವನ್ನು ಬಿಸಾಕುವ ಪ್ರಯತ್ನವನ್ನು ಕೈಬಿಟ್ಟರು

ಒಂದೂವರೆ ವರ್ಷದ ನಂತರ ಆ ತಾಯಿ ಪುನಃ ಒಂದು ಮಗುವಿಗೆ ಜನ್ಮವಿತ್ತಳು…. ಅದು ಗಂಡು ಮಗುವಾಗಿತ್ತು….

ಆದರೆ ಕೆಲವೇ ತಿಂಗಳೊಳಗೆ ಐದು ಹೆಣ್ಣು ಮಕ್ಕಳಲ್ಲಿ ಒಬ್ಬಳು ಹೆಣ್ಣು ಮಗಳು ರೋಗಪೀಡಿತಳಾಗಿ ಸಾವನ್ನಪ್ಪಿದಳು….

ಪುನಃ ಆ ತಾಯಿ ಗಂಡು ಮಗುವೊಂದಕ್ಕೆ ಜನ್ಮಕೊಟ್ಟಳು… ಆದರೆ ವಿಧಿ ಆ ತಾಯಿಯನ್ನು ಪರೀಕ್ಷಿಸುತ್ತಲೇ ಇತ್ತು…

ಒಂದೊಂದು ಗಂಡು ಮಗು ಹುಟ್ಟುವಾಗಲೂ, ತಿಂಗಳುಗಳೊಳಗೆ ಒಂದೊಂದು ಹೆಣ್ಣುಮಗು ರೋಗಪೀಡಿತಳಾಗಿ ಅಥವಾ ಅಪಘಾತದಲ್ಲಿ ಸತ್ತು ಹೋಗುತ್ತಲೇ ಇತ್ತು….

ಕೊನೆಗೆ ಆ ಮನೆಯಲ್ಲಿ ಹೆಣ್ಣು ಮಗಳಾಗಿ ಒಬ್ಬಳು ಮಾತ್ರ ಉಳಿದಳು. ಆ ಹೆಣ್ಣು ಮಗಳು ಆ ತಂದೆಯು ಬಿಸಾಕಲು ಕೊಂಡು ಹೋಗಿದ್ದ ಹೆಣ್ಣು ಮಗಳೇ ಆಗಿದ್ದಳು..

ಒಂದು ದಿನ ಆ ತಾಯಿಯೂ ಸಾವನ್ನಪ್ಪಿದಳು….

ನಾಲ್ಕು ಗಂಡುಮಕ್ಕಳು, ಒಬ್ಬಳು ಹೆಣ್ಣು ಮಗಳು ಮತ್ತು ಆ ತಂದೆ ಆ ಮನೆಯಲ್ಲಿ ವಾಸವಾಗಿದ್ದರು…

ಕಾಲಚಕ್ರ ಉರುಳುತ್ತಿದ್ದಂತೆ ಮಕ್ಕಳೆಲ್ಲರೂ ಬೆಳೆದು ದೊಡ್ಡವರಾದರು…

ಆ ಟೀಚರ್ ನಿಟ್ಟುಸಿರು ಬಿಡುತ್ತಾ ಮುಂದುವರಿಸಿದರು…

ಆ ಮನೆಯ ತಂದೆಯು ಬಿಸಾಕಲು ಪ್ರಯತ್ನಿಸಿದ್ದ ಆ ಹೆಣ್ಣುಮಗಳೇ ನಾನು…..

sthree2

ಮಕ್ಕಳೆಲ್ಲರೂ ಮೂಖವಿಸ್ಮಿತರಾಗಿ ತದೇಕಚಿತ್ತದಿಂದ ಟೀಚರ್ ನ ಮಾತುಗಳನ್ನೇ ಆಲಿಸುತ್ತಿದ್ದರು…

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ