ಗೆಲುವಿನ ಮಂದಹಾಸ : ನಮ್ಮ ದೇಶದಲ್ಲಿ ಮಾತ್ರ ಕೌಟುಂಬಿಕ ಶೋಷಣೆ ಎಂದುಕೊಳ್ಳದಿರಿ, ಅಮೆರಿಕಾದಲ್ಲೂ ಅದು ಢಾಳಾಗಿದೆ! ಹೀಗಾಗಿ `ಸೇಫ್‌ ಪ್ಯಾಕೇಜ್‌ ಹೀಲ್ಸ್' ಎಂಬ ಸಂಸ್ಥೆ, ಇದರ ವಿರುದ್ಧ ಹೋರಾಡಿ ಜಯ ಸಾಧಿಸಿದ ಯುವತಿಯರಿಗೆಂದೇ, ಪ್ರತಿ ವರ್ಷ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಎಂಥ ಗ್ಲಾಮರಸ್‌ ಬೆಡಗಿಯರು ಈ ಪ್ರಶಸ್ತಿ ಪಡೆದುಕೊಳ್ಳುತ್ತಾರೆ ಎಂಬುದನ್ನು ಈ ಚಿತ್ರವೇ ವಿವರಿಸುತ್ತದೆ. ವಿಶ್ವಾದ್ಯಂತ ಕೌಟುಂಬಿಕ ಶೋಷಣೆಗೆ ಒಳಗಾಗದ ಹೆಣ್ಣುಮಕ್ಕಳೇ ಇಲ್ಲ. ಇದರ ವಿರುದ್ಧ ಏನೇ ಕಾನೂನು ಕಟ್ಟಳೆಗಳಿದ್ದರೂ, ಮಾನವೀಯತೆ ಮರೆಯುವ ಗಂಡು, ಹೆಣ್ಣಿನ ಮೇಲೆ ಘನಘೋರ ಹಿಂಸೆ ಮಾಡದೆ ಇರಲಾರ!

maoqiang-opera

ಬ್ಯೂಟಿ ಜೊತೆ ಆರ್ಟ್ಸಹ : ಚೀನಾದ ಡ್ರಾಮಾ ಥಿಯೇಟರ್‌ ಒಂದು ಒಪೇರಾ ಪರ್ಫಾರ್ಮೆನ್ಸ್ ಕಲೆಯನ್ನು ಒಂದು ಸೆರೆಮನೆಯಲ್ಲಿ ಪ್ರದರ್ಶಿಸಿತು, ಇದರಿಂದ ಅಲ್ಲಿನ ಕೈದಿಗಳಿಗೆ ಒಂದಿಷ್ಟು ಮನಶ್ಶಾಂತಿ ಸಿಗಲಿ ಎಂಬುದು ಅವರ ಉದ್ದೇಶ. ಚೀನಾದ ಸೆರೆಮನೆಗಳು ಇತರ ದೇಶಗಳಿಗಿಂತ ಎಷ್ಟೋ ವಾಸಿ ಎಂದೇನಲ್ಲ. ಆದರೆ ಅಲ್ಲಿನ ಕೈದಿಗಳನ್ನು ಹೊಡೆದುಬಡಿದು ಮಾಡುವುದು ಎಷ್ಟೋ ತಗ್ಗಿದೆ. ಅವರಿಗೆ ವಿಧಿಸಲಾದ ಶಿಕ್ಷೆಯನ್ನಷ್ಟೇ ಅವರು ಅನುಭವಿಸಬೇಕಿದೆ.

lea-turner-1

ಬಿಸ್ನೆಸ್ಅಂದ್ರೆ ಈಝಿ ಅಲ್ಲ! : ಲೀ ಟರ್ನರ್‌ ಎಂಬ ಈಕೆ ತನ್ನದೇ ಆದ ಬಿಸ್‌ ನೆಸ್‌ ನಡೆಸುತ್ತಾ ಬಲು ಖುಷಿಯಾಗಿದ್ದಾಳೆ! ತನ್ನ ಧಂಧೆಯಲ್ಲಿ ಬರುವಂಥ ಸಮಸ್ಯೆಗಳು, ದಿನವಿಡೀ ರಾತ್ರಿಯವರೆಗೂ ಎದುರಿಸಬೇಕಾದ ಟೆನ್ಶನ್ಸ್..... ಒಂದೆರಡಲ್ಲ ಎನ್ನುತ್ತಾಳೆ. ಒಂದಿಷ್ಟು ಹಣ ಗಳಿಸಿ ಲಾಭ ಸಿಕ್ಕಿತು ಎನ್ನುವಷ್ಟರಲ್ಲಿ ಮೈಯೆಲ್ಲ ಹಣ್ಣುಗಾಯಿ ನೀರುಗಾಯಿ ಆಗಿರುತ್ತದೆ. ತನ್ನ ಪ್ರಾಡ್‌ ಕಾಸ್ಟ್ ನಿಂದ ಈಕೆ ತನ್ನೆಲ್ಲ ಕಷ್ಟಗಳನ್ನೂ ಸ್ಪಷ್ಟವಾಗಿ ಹಂಚಿಕೊಂಡಿದ್ದಾಳೆ, ಸಾಮಾನ್ಯವಾಗಿ ಮಹಿಳಾ ಉದ್ಯಮಿಗಳು ಇದನ್ನು ಮರೆಮಾಚುತ್ತಾರೆ.

car-damage

ಯಾರು ಜವಾಬ್ದಾರರು? : ಸಾಮಾನ್ಯವಾಗಿ ಜನ ತಿಳಿಯುವುದೆಂದರೆ, ರಸ್ತೆ ಮೇಲೆ ಕಾರಿನ ಅಪಘಾತ ಬೇರೆ ವಾಹನಗಳ ಕಾರಣದಿಂದಲೇ ಆಗೋದು ಅಂತ. ಈಗ ಕಟ್ಟಡಗಳ ಕಾರಣದಿಂದಲೂ ಬಹಳಷ್ಟು ಅಪಘಾತ ಆಗುತ್ತಿರುತ್ತದೆ, ಹೀಗಾಗಿ ಇನ್ಶುರೆನ್ಸ್ ಕಂಪನಿಗಳು ಹೊಸ ಹೊಸ ಸಂಕಷ್ಟ ಎದುರಿಸಬೇಕಿದೆ. ಚಲಿಸುತ್ತಿದ್ದ ಕಾರಿನ ಮೇಲೆ ಪಕ್ಕದ ಕಟ್ಟಡದ ಒಂದು ತುಣುಕು ಧಿಡೀರ್‌ ಎಂದು ಬಂದುಬಿದ್ದರೆ ಏನು ಮಾಡುವುದು? ಈ ಅಪಘಾತಕ್ಕೆ ಯಾರು ಹೊಣೆ? ಇದನ್ನು ತೀರ್ಮಾನಿಸೋದು ಕಷ್ಟ. ಯಾವ ಹೆಂಗಸರು ತಾವೇ ಕಾರು ಓಡಿಸುತ್ತಾರೋ, ಇಂಥ ಅಪಘಾತ ನಡೆದಾಗ ಫ್ರೆಂಡ್ಸ್ ನೆರವು ಪಡೆಯಲೇ ಬೇಕಾಗುತ್ತದೆ.

wedding-cake-vendor

ಐಡಿಯಾ ಈಸ್ಗುಡ್‌! : ಎಷ್ಟೋ ಇಡೆಂಟ್‌ ಗಳಲ್ಲಿ ಹಾಕಿರಬಹುದಾದ ಸಣ್ಣಪುಟ್ಟ ಸ್ಟಾಲ್ ಗಳನ್ನು ನೀವು ಗಮನಿಸಿಯೇ ಇರುತ್ತೀರಿ, ಇವು ಹೆಂಗಸರಿಂದಲೇ ನಿರ್ವಹಿಸಲ್ಪಡುತ್ತವೆ. ಟೈಂಪಾಸ್‌ ಹಾಗೂ ಸಂಪಾದನೆಗೆ ಇದು ಉತ್ತಮ ದಾರಿ. ಈ ಸ್ಟಾಲ್ ಗಳಲ್ಲಿ ಮನೆಯಲ್ಲೇ ತಯಾರಿಸಿದ ವ್ಯಂಜನ ಅಥವಾ ಹೋಲ್ ಸೇಲ್ ‌ನಿಂದ ಕೊಂಡು ತಂದು, ದರ ಹೆಚ್ಚಿಸಿ ಮಾರಾಟ ಮಾಡಬಹುದು. ಇತ್ತೀಚೆಗೆ ನ್ಯೂಜೆರ್ಸಿಯಲ್ಲಿ ಇಂಥದ್ದೇ ಸ್ಟಾಲ್ ಹೂಡಿದ್ದ ಒಬ್ಬ ವಯೋವೃದ್ಧ ಮಹಿಳೆ ಬೊಂಬಾಟ್‌  ಕೇಕ್ಸ್ ಮಾರಿ ದಾಖಲೆ ಸ್ಥಾಪಿಸಿದ್ದಾಳೆ. ಅವಕಾಶ ಸಿಕ್ಕಾಗ ನೀವು ಹೀಗೆ ಮಾಡಿ ನೋಡಿ. ಒಂದಿಷ್ಟು ಪ್ಲಾನಿಂಗ್‌ ಸಾಮಗ್ರಿ, ತಯಾರಿ ಹಾಗೂ ಶಾಪಿಂಗ್ ನಡೆಸಿದರೆ ಆಯ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ