ಬಾಲಿವುಡ್‌ನಲ್ಲಿ ಇತ್ತೀಚೆಗೆ ಯಾರದಾದರೂ ಅಭಿನಯದಲ್ಲಿ ಪರಿಪಕ್ವತೆ ಬಂದಿದೆ ಎಂದರೆ, ಅದು ಕಂಗನಾ ರಾಣಾವತ್‌ಳಲ್ಲಿ ಮಾತ್ರ. ಆಕೆ ತನ್ನ ಭಾವಪೂರ್ಣ ನಟನೆಯಿಂದ ಒಂದು ಪ್ರತ್ಯೇಕ ಐಡೆಂಟಿಟಿ ಸ್ಥಾಪಿಸಿದ್ದಾಳೆ. ನಟನೆ  ಮಾತ್ರವಲ್ಲದೆ ಈಗ ಕಂಗನಾ ಸಂಕಲನ ಮತ್ತು ಸ್ಕ್ರಿಪ್ಟ್ ರೈಟಿಂಗ್‌ನಲ್ಲೂ ಸಕ್ರಿಯಳಾಗಿದ್ದಾಳೆ. ನ್ಯೂಯಾರ್ಕ್‌ನಲ್ಲಿ ಎಡಿಟಿಂಗ್‌ ಕೋರ್ಸ್‌ ಕಲಿತಳಂತೆ! ಯಾವುದೇ ಚಿತ್ರವಿರಲಿ, ತನ್ನ ಪಾತ್ರದ ಕುರಿತಾಗಿ ಈಕೆ ಸಂಪೂರ್ಣ ತಯಾರಿ ನಡೆಸುತ್ತಾಳೆ. ಹೀಗಾಗಿಯೇ ಸ್ಕ್ಪಿಪ್ಟ್ ರೈಟಿಂಗ್‌ನಲ್ಲೂ ತರಬೇತಿ ಪಡೆದಿದ್ದಾಳೆ. ಕಂಗನಾ ಹೇಳುವುದೆಂದರೆ, ಕಲಾವಿದರಿಗೆ ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲಾ ವಿಭಾಗಗಳ ಪರಿಚಯ ಇರಬೇಕಾದುದು ಅನಿವಾರ್ಯ.

ಬರಲಿದೆ ಹೌಸ್‌ಫುಲ್!

ಜ್ಯಾಕ್ಲಿನ್‌ಳ `ರಾಯಲ್' ಚಿತ್ರ ಹೇಳಿಕೊಳ್ಳುವಂಥ  ಯಶಸನ್ನೇನೂ ಕಾಣಲಿಲ್ಲವಾದರೂ, ಅವಳ ಲುಕ್ಸ್ ಕುರಿತಾಗಿ ಎಲ್ಲರೂ ಹೊಗಳಿದರು. ಹೀಗಾಗಿಯೇ ಸಾಜಿದ್‌ ಈಕೆಯನ್ನು ನಾಯಕಿಯಾಗಿಸಿ `ಹೌಸ್‌ಫುಲ್' ತಯಾರಿಗೆ ತೊಡಗಿದ್ದಾರೆ. ಈ ಚಿತ್ರದಲ್ಲಿ ಇವಳೊಂದಿಗೆ ಆ್ಯಮಿ ಜ್ಯಾಕ್ಸನ್‌, ಆ್ಯಲಿ ಅರಾಮ್ ಸಹ ಇರ್ತಾರೆ. ಜ್ಯಾಕ್ಲಿಗೆ ಅಕ್ಷಯ್‌, ಆ್ಯಮಿಗೆ ಅಭಿಷೇಕ್‌ ಹಾಗೂ ಆ್ಯಲಿಗೆ ರಿತೇಶ್ ನಾಯಕರಾಗಿರುತ್ತಾರೆ. ಹಿಂದಿನ 1, 2 ತರಹ ಇದೂ ಹೌಸ್‌ಫುಲ್ ಆಗುತ್ತದೋ ಇಲ್ಲವೋ ಭವಿಷ್ಯವೇ ನಿರ್ಧರಿಸಬೇಕು.

ಹೊಸ ಆ್ಯಕ್ಷನ್‌ ಚಿತ್ರದಲ್ಲಿ ನಾನಾ

ತಮ್ಮ ಡೈಲಾಗ್‌ ಡೆಲಿವರಿ ಹಾಗೂ ಮ್ಯಾನರಿಸಂನಿಂದ ಪ್ರತ್ಯೇಕ ಐಡೆಂಟಿಟಿ ಗಳಿಸಿರುವ ನಾನಾ ಪಾಟೇಕರ್‌ ಇದೀಗ ಹೊಸ ಆ್ಯಕ್ಷನ್‌ ಚಿತ್ರಕ್ಕೆ ಸಜ್ಜಾಗಿದ್ದಾರೆ. ಇವರ `ಅಬ್‌ ತಕ್‌ ಛಪ್ಪನ್‌' ಚಿತ್ರದ ಸೀಕ್ವೆಲ್ ‌ಆಗಿ ಬರಲಿದೆ `ಅಬ್‌ ತಕ್‌ ಛಪ್ಪನ್‌'. ಈ ಚಿತ್ರದಲ್ಲಿ ನಾನಾ ನಾನಾ ಆ್ಯಕ್ಷನ್‌ಗಳಲ್ಲಿ ಮಿಂಚಲಿದ್ದಾರೆ. ಇದಕ್ಕಾಗಿ ಈತ ರೆಗ್ಯುಲರ್‌ ಆಗಿ ಜಿಮ್ ಗೆ ಹೋಗಿ ಕಸರತ್ತು ನಡೆಸುತ್ತಿದ್ದಾರೆ. ಯಾವುದೇ ಡೂಪ್‌ಗಳಿಲ್ಲದೆ ಎಲ್ಲಾ ಸಾಹಸಗಳನ್ನೂ ಇವರೇ ಮಾಡಿದ್ದಾರೆ. 65ರ ಹರೆಯದ ನಾನಾ ಈ ಚಿತ್ರದಲ್ಲಿ 50ರ ವಯಸ್ಸಿನವರಂತೆ ಕಾಣುತ್ತಿದ್ದಾರೆ. ಅಂಡರ್‌ ವರ್ಲ್ಡ್ ಸ್ಟೋರಿಯ ಈ ಚಿತ್ರದಲ್ಲಿ ನಾನಾ ಭೀ ಮಿಂಚಿದ್ದಾರೆ.

prem-rog

ಇದೆಂಥ ವ್ಯಂಗ್ಯ?

ತಮ್ಮ ಅಭಿನಯದಿಂದ ಒಂದು ಪ್ರತ್ಯೇಕ ವ್ಯಕ್ತಿತ್ವ ರೂಪಿಸಿಕೊಂಡಿರುವ ಕಲಾವಿದ ನಾಜಿರುದ್ದೀನ್‌ ಸಿದ್ದಿಕಿ, ತಮ್ಮ ಹೊಸ ಚಿತ್ರ `ಬದ್ಲಾಪುರ್‌'ನಲ್ಲಿ ಅದ್ಭುತ ಪ್ರತಿಭೆ ಪ್ರದರ್ಶಿಸಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಅವರ ಮೇಲೆ ಮಾಡಲಾಗಿರುವ ಕಿಡಿಗೇಡಿ ಕಾಮೆಂಟ್ಸ್ ಇವರನ್ನು ರೊಚ್ಚಿಗೆಬ್ಬಿಸಿದೆ. ಅಸಲಿಗೆ, ಯಾರೋ ಟ್ವಿಟರ್‌ನಲ್ಲಿ, ಇವರ ಫೋಟೋ ಹಾಕಿ ಕಡುಬಡವ, ಎಂಬಂತೆ ಹ್ಯಾಂಡ್‌ ಹಾಕಿದ್ದಾರೆ. ಇದಕ್ಕೆ ಎಷ್ಟೋ ಜನ ವ್ಯಂಗ್ಯವಾಗಿ ಕಮೆಂಟ್‌ ಮಾಡಿದ್ದಾರೆ. ನಾನು ಬಡವ ಇರಬಹುದು, ಆದರೆ ಅದಕ್ಕಾಗಿ ತಲೆ ತಗ್ಗಿಸಿಲ್ಲ. ಹಿಂದೆಲ್ಲ ವಾಚ್‌ಮ್ಯಾನ್‌ ಕೆಲಸ ಸಹ ಮಾಡಿದ್ದೀನಿ, ಇಂದು ನನ್ನ ಸ್ವಪ್ರತಿಭೆಯಿಂದ ಈ ಮಟ್ಟ ಏರಿದ್ದೀನಿ ಎಂದಿದ್ದಾರೆ.

ತಂದೆಗೆ ತಕ್ಕ ಮಗಳು

ಈ ಬಾರಿಯ ವಸಂತ ಋತು  ಅದೇಕೋ ಬಾಲಿವುಡ್‌ನ ಮಂದಿಗೆ ಹಿತಾನುಭವ ನೀಡುತ್ತಿಲ್ಲ. ಮೊದಲು ಅನುಷ್ಕಾಳಿಗೆ `-10' ಚಿತ್ರದಲ್ಲಿ ಒಂದು ಆಘಾತವಾಯಿತು. ನಂತರದ ಸುದ್ದಿ ಎಂದರೆ ಹಿರಿಯ ನಟ ಅನಿಲ್ ‌ಕಪೂರ್‌ರ ಮಗಳು ಸೋನಂ ಕಪೂರ್‌`ಪ್ರೇಂ ರತನ್‌ ಧನ್‌ ಪಾಯೋ' ಚಿತ್ರದ ಶೂಟಿಂಗ್‌ ಮಧ್ಯೆ ಧುತ್ತೆಂದು ಕುಸಿದುಬಿದ್ದಳು. ರಾಜಸ್ಥಾನದಲ್ಲಿ ಈ ಚಿತ್ರದ ಹಾಡಿನ ಶೂಟಿಂಗ್‌ ನಡೆಯುತ್ತಿತ್ತು. ಕೆಳಗೆ ಬಿದ್ದ ಈಕೆಯ ಮಂಡಿಗೆ ತೀವ್ರ ಪೆಟ್ಟಾಯಿತು. ಸೋನಂ ಆಗ ರಾಜಸ್ಥಾನಿ ಕಾಸ್ಟ್ಯೂಮ್ಸ್ ಧರಿಸಿ ಸೂತ್ರದ ಗೊಂಬೆಗಳ ಜೊತೆ ಕುಣಿಯುತ್ತಿರುವಂಥ ಹಾಡಿನ ಚಿತ್ರೀಕರಣವಿತ್ತು. ಹೆವಿ ಜ್ಯೂವೆಲರಿ, ಲೆಹಂಗಾ ಕಾರಣ ಸೋನಂ ಕುಸಿದಿದ್ದಳು. ಆದರೆ ಶೂಟಿಂಗ್‌ ನಿಲ್ಲಿಸದೆ ಸಹಕರಿಸಿದಳಂತೆ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ