ದೆಹಲಿ ಮೂಲದ ಬಾಲಿವುಡ್‌ನ ಬ್ಯೂಟಿಫುಲ್ ಕಲಾವಿದೆ ಹುಮಾ ಕುರೇಶಿಯನ್ನು ಚಿತ್ರರಸಿಕರು ಆಕೆಯ ಸೌಂದರ್ಯ, ಜಬರ್ದಸ್ತ್ ನಟನೆ, ಜೊತೆಗೆ ಹೆಲ್ದಿ ಪರ್ಸನಾಲಿಟಿಯಿಂದ ಚೆನ್ನಾಗಿ ಬಲ್ಲರು.

ಕಾಲೇಜು ಕಲಿಕೆಯ ನಂತರ ಹುಮಾ ನಾಟಕಗಳಿಗೆ ಅಂಟಿಕೊಂಡಳು. 2008ರಲ್ಲಿ ಆಕೆ ಹಿಂದೂಸ್ಥಾನ್‌ ಯೂನಿಲಿವರ್‌ನ ಮಾಡೆಲಿಂಗ್‌ ಆರಂಭಿಸಿ, ಮುಂದೆ ಅನುರಾಗ್‌ ಕಶ್ಯಪ್‌ರ `ಗ್ಯಾಂಗ್ಸ್ ಆಫ್‌ ವಾಸೆಪುರ್‌' ಚಿತ್ರದಲ್ಲಿ ಬಾಲಿವುಡ್‌ಗೆ  ಗ್ರ್ಯಾಂಡ್‌ ಎಂಟ್ರಿ ಪಡೆದಳು. ಈ ಚಿತ್ರದ ನಟನೆಯಿಂದ ಹುಮಾ ಎಲ್ಲರ ಪ್ರಶಂಸೆ ಗಿಟ್ಟಿಸಿದಳು. ಇದರ ನಂತರ `ಗ್ಯಾಂಗ್ಸ್ ಆಫ್‌ ವಾಸೆಪುರ್‌, ಲವ್ ಶ್‌ತೇ ಚಿಕನ್‌ ಖುರಾನಾ, ಏಕ್‌ಥೀ ಡಾಯ್‌್ನ, ಡೇಲ್ ಇಶ್ಕಿಯಾ' ಮುಂತಾದ ಚಿತ್ರಗಳಿಂದ ಎಲ್ಲರ ಗಮನ ಸೆಳೆದಳು.

ಇತ್ತೀಚೆಗೆ ಹುಮಾ ವಿಪುಲ್ ‌ಸ್ಯಾರೀಸ್‌ನವರ ಹೊಸ ಸೀರೆಗಳ ಕಲೆಕ್ಷನ್‌ ಲಾಂಚ್‌ ಮಾಡಿದ್ದಳು. ಅದೇ ಸಂದರ್ಭದಲ್ಲಿ ಆಕೆ ಜೊತೆ ನಡೆಸಿದ ಮಾತುಕಥೆ :

ನೀವೇನೋ ನಿಮ್ಮ ಕೆರಿಯರ್ನ್ನು ಥಿಯೇಟರ್ಮತ್ತು ಮಾಡಿಲಿಂಗ್ನಿಂದ ಶುರುಮಾಡಿದಿರಿ. ಈಗಲೂ ನಾಟಕಗಳ ಸಂಪರ್ಕವಿದೆಯೇ?

ನಾಟಕ ಅಂದ್ರೆ ಬಹಳ ಇಷ್ಟ. ಒಳ್ಳೆ ಅವಕಾಶ ಸಿಕ್ಕಿದರೆ ಈಗಲೂ ಮುಂದುರಿಸುವೆ. ಆದರೆ ನಾನೀಗ ಈ ನಿಟ್ಟಿನಲ್ಲಿ ಹಿರಿಯ ಆಸೆಗಳನ್ನು ಬೆಳೆಸಿಕೊಂಡಿದ್ದೇನೆ. ಸಿನಿಮಾದ ಗ್ಲಾಮರ್‌ ಹುಚ್ಚು ಅಂಟಿಸಿಕೊಂಡಿದ್ದೇನೆ, ಆ್ಯಕ್ಟಿಂಗ್‌ ಅಚ್ಚುಮೆಚ್ಚಾಗಿದೆ. ಸಿನಿಮಾ ಮೂಲಕ ಲಕ್ಷಾಂತರ ವೀಕ್ಷಕರನ್ನು ತಲುಪಬಹುದು.

ನಿಮ್ಮ ದೃಷ್ಟಿಯಲ್ಲಿ ಸೆಕ್ಸ್ ಅಪೀಲ್ ಅರ್ಥ.....?

ನನ್ನ ದೃಷ್ಟಿಯಲ್ಲಿ ಸೆಕ್ಸ್ ಅಪೀಲ್ ‌ಎಂದರೆ, ನೀವು ಯಾರನ್ನು ಎಷ್ಟು ಇಷ್ಟಪಡುತ್ತೀರಿ, ಅವರನ್ನು ಎಷ್ಟು ಮೆಚ್ಚುತ್ತೀರಿ, ಅವರ ಎಷ್ಟು ಸನಿಹ ಇರಲು ಬಯಸುತ್ತೀರಿ ಎಂಬುದನ್ನು ಅವಲಂಬಿಸಿದೆ. ನಮ್ಮಂಥ ಸ್ಟಾರ್ಸ್ ಪ್ರಯಾಣದಲ್ಲಿರುವಾಗ ಫ್ಯಾನ್ಸ್ ನಮ್ಮ ಕೈ ಕುಲುಕಿ ಮಾತನಾಡಬಯಸುತ್ತಾರೆ, ನಮ್ಮನ್ನು ಮುಟ್ಟಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇದುವೇ ಸೆಕ್ಸ್ ಅಪೀಲ್. ದಿಸ್‌ ಈಸ್‌ ಕೂಲ್‌.... ಎಲ್ಲರಿಗಿಂತ ಹೆಚ್ಚು  ಕೂಲೆಸ್ಟ್ ಆದವರು ಮಾತ್ರ ಅಪೀಲಿಂಗ್‌ ಅನಿಸುತ್ತಾರೆ.

ಬಾಲಿವುಡ್ನಲ್ಲಿ ಝೀರೋ ಸೈಜ್ ಫಿಗರ್ ಕ್ರೇಝ್ ಮುಗಿದುಹೋಗಿದೆ ಅನ್ಸುತ್ತಾ?

ಖಂಡಿತಾ ಹೌದು, ಇದು ಕಳೆದ ವರ್ಷವೇ ಆಗಿತ್ತು. ನಾನು ಒಂದು ಪತ್ರಿಕೆಯ ಮುಖಪುಟಕ್ಕಾಗಿ ಫೋಟೋ ತೆಗೆಸುತ್ತಿದ್ದಾಗ ಇದು ಸ್ಪಷ್ಟವಾಯಿತು. ಅಸಲಿ ಭಾರತೀಯ ಹೆಣ್ಣಿನ ದೇಹ ಸೌಂದರ್ಯದಲ್ಲೇ ಒಂದು ಅದ್ಭುತ ಗ್ರೇಸ್‌ ಇರುತ್ತದೆ. ಮಧ್ಯದಲ್ಲಿ ಸ್ವಲ್ಪಕಾಲ ಈ ಹುಚ್ಚು ಆವರಿಸಿತು. ಆದರೆ ಈಗ ಅದು ಮುಗಿದಿದೆ ಬಿಡಿ.

ನಿಮಗೆ ಸೀರೆ ಉಡುವುದು ಎಂದರೆ ಇಷ್ಟವೇ?

ಹೌದು, ಇಷ್ಟವಿದೆ. ಆದರೆ ಅಭ್ಯಾಸವಿಲ್ಲ. ಒಂದಂತೂ ನಿಜ, ಯಾವ ಹುಡುಗಿಗೇ ಆಗಲಿ, ಸೀರೆ ಬ್ಯೂಟಿಫುಲ್ ಲುಕ್‌ ಕೊಡುತ್ತದೆ. ಭಾರತೀಯ ಹೆಣ್ಣಿಗೆ ಸೀರೆಗಿಂತ ಯಾವುದು ತಾನೇ ಹೆಚ್ಚು ಕಳೆಕೊಟ್ಟೀತು? ಸೊರೋನಾ ಡುಪಾಂಟ್‌ ಸೀರೆಗಳು ಹೆಚ್ಚು ಕಂಫರ್ಟೆಬಲ್ ಎನಿಸುತ್ತವೆ. ಅದನ್ನು ನೀವು ಎಲ್ಲಿಗೆ ಬೇಕಾದರೂ ಸುಲಭವಾಗಿ ಕೊಂಡೊಯ್ಯಬಹುದು. ಶಿಫಾನ್‌, ಕ್ರೇಪ್‌, ಸ್ಯಾಟಿನ್ ಸೀರೆಗಳು ಸಹ ಹೆಚ್ಚು ಆರಾಮದಾಯಕ. ಇದು ಉಡುವವರ ಸ್ಟೈಲ್‌, ಅಭಿರುಚಿಯನ್ನು ಆಧರಿಸಿದೆ.

ದೆಹಲಿಯಿಂದ..... ಮುಂಬೈಗೆ ಹೇಗೆ ತಲುಪಿದಿರಿ?

ನಾನು ಸಿನಿಮಾ ಸೇರಲೆಂದೇ ಮುಂಬೈಗೆ ಬಂದಳು. ಬಾಲ್ಯದಿಂದಲೇ ನಾನು ಸಿನಿಮಾ ಬಗ್ಗೆ ಕನಸು ಕಟ್ಟಿಕೊಂಡಳು. ದೆಹಲಿಯ ಹುಡುಗಿ ಮುಂಬೈ ಬೆಡಗಿಯಾಗಿ ಸಿನಿಮಾ ಸೇರ್ತಾಳೆ ಎಂದರೆ ಎಲ್ಲರೂ ಹಾಸ್ಯ ಮಾಡುತ್ತಾರೆ. ಹೀಗಾಗಿಯೇ ನಾನು ಮೊದಲು ರಂಗಭೂಮಿಗೆ ಕಾಲಿಟ್ಟು ನಂತರ ಬೆಳ್ಳಿಪರದೆಯತ್ತ ಹೆಜ್ಜೆ ಹಾಕಿದೆ. ಹೀಗೆ ಮುಂಬೈ ತಲುಪಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ