ಹಬ್ಬದಲ್ಲಿ ನೀವು ಸ್ನೇಹಿತರು, ಸಂಗಾತಿ ಅಥವಾ ಸಂಬಂಧಿಕರಿಗೆ ಉಡುಗೊರೆಗಳನ್ನು ನೀಡಲು ಬಯಸಿದರೆ, ಇವು ಅತ್ಯುತ್ತಮ ಆಯ್ಕೆಗಳಾಗಿವೆ......

ಯಾರಿಗಾದರೂ ಉಡುಗೊರೆಯನ್ನು ನೀಡುವುದರಿಂದ ನಿಮ್ಮ ಮತ್ತು ಅವರ ನಡುವೆ ಉತ್ತಮವಾದ ಬಾಂಧ್ಯವವನ್ನು ಸೃಷ್ಟಿಸುತ್ತದೆ. ಇದು ಕೊಡುವವರ ಮತ್ತು ತೆಗೆದುಕೊಳ್ಳುವವರ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಹೊಸ ಸಂಬಂಧದ ಆರಂಭ ಅಥವಾ ಹಳೆಯ ಸಂಬಂಧವನ್ನು ಬಲಿಷ್ಠಗೊಳಿಸಲು ಉಡುಗೊರೆ ಸಾಮಾನ್ಯವಾಗಿ ಪ್ರೀತಿ, ಕೃತಜ್ಞತೆ ಮತ್ತು ಸಂತೋಷದ ಅಭಿವ್ಯಕ್ತಿಯಾಗಿದೆ.

ನಾವು ಉಡುಗೊರೆಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಆಗಾಗ್ಗೆ ಸಮಸ್ಯೆಗಳನ್ನು ಎದುರಿಸುತ್ತೇವೆ. ಏಕೆಂದರೆ, ಇತರ ವ್ಯಕ್ತಿಯ ಆದ್ಯತೆಗಳನ್ನು ಅರ್ಥ ಮಾಡಿಕೊಳ್ಳುವುದು ಸುಲಭವಲ್ಲ. ಅಂತಹ ಪರಿಸ್ಥಿತಿಯಲ್ಲಿ ಈ ಕೆಲವು ವಿಶೇಷ ಉಡುಗೊರೆಗಳ ಬಗ್ಗೆ ನೀವು ಯೋಚಿಸಬಹುದು.

ಮದುವೆ ನಿಶ್ಚಯವಾಗಿದ್ದರೆ, ಸಂಗಾತಿಗೆ ವಿಶೇಷ ಭಾವನೆ ಮೂಡಿಸಲು ಉಡುಗೊರೆಯನ್ನು ಹೇಗೆ ಆರಿಸುವುದು ಎಂಬ ಪ್ರಶ್ನೆ ಪುರುಷರ ಮನಸ್ಸಿನಲ್ಲಿ ಹೆಚ್ಚಾಗಿ ಉದ್ಭವಿಸುತ್ತದೆ. ಅಂದರೆ, ಹುಡುಗಿಯರು ಏನು ಇಷ್ಟಪಡುತ್ತಾರೆ? ಎಂಬುದರ ಕುರಿತು ಯೋಚಿಸುವುದು ಬಹಳ ಮುಖ್ಯ.

ಹಬ್ಬ ಹರಿದಿನಗಳಂದು ನಿಮ್ಮ ಭಾವಿ ಜೀವನ ಸಂಗಾತಿ, ಗೆಳತಿ, ದೂರದಲ್ಲಿ ನೆಲೆಸಿರುವ ಅಕ್ಕ ತಂಗಿಯರಿಗೆ ಯಾವ ರೀತಿಯ ಉಡುಗೊರೆಗಳನ್ನು ನೀಡಬಹುದು ಎಂಬುದರ ಕುರಿತು ಒಂದಿಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ :

rubans-brown-and-cream-colour-box

ಪರ್ಸ್‌ : ಹುಡುಗಿಯರು ವಿವಿಧ ರೀತಿಯ ಪರ್ಸ್‌ ಅಥವಾ ಬ್ಯಾಗ್‌ ಗಳನ್ನು ಬಹಳ ಇಷ್ಟಪಡುತ್ತಾರೆ. ಹೀಗಿರುವಾಗ, ಅವರಿಗೆ ಸುಂದರವಾದ ಬ್ಯಾಗ್‌ ಅಥವಾ ಪರ್ಸ್‌ ನ್ನು ಉಡುಗೊರೆಯಾಗಿ ನೀಡುವುದು ಉತ್ತಮ ಆಯ್ಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಅನೇಕ ರೀತಿಯ ಸ್ಟೈಲಿಶ್‌ ಬ್ಯಾಗ್‌ ಗಳು ಮಾರುಕಟ್ಟೆಯಲ್ಲಿ ಮತ್ತು ಆನ್‌ ಲೈನ್‌ ನಲ್ಲಿ ಲಭ್ಯವಿರುತ್ತವೆ. ಟ್ರೆಂಡಿ ಮತ್ತು ಫ್ಯಾಷನೆಬಲ್ ಆಗಿ ಕಾಣುವ ಜೊತೆಗೆ ಉಪಯುಕ್ತವಾದ ಪರ್ಸ್‌ ಆಯ್ಕೆ ಮಾಡಿ.

ರೂಮ್ ಡಿಫ್ಯೂಸರ್‌ :  ದಿನವಿಡೀ ಕೆಲಸ ಮುಗಿಸಿ, ನಿಮ್ಮ ಕೋಣೆಗೆ ಪ್ರವೇಶಿಸಿದಾಗ, ಆಹ್ಲಾದಕರವಾದ ಪರಿಮಳ ನಿಮ್ಮ ಮೂಗಿಗೆ ಬಡಿದರೆ, ಎಂತಹವರಿಗೂ ದಣಿವು ದೂರವೆನಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ಈ ಭಾವನೆಯನ್ನು ಪಡೆಯಲು, ನಿಮ್ಮ ಸಂಗಾತಿಗೆ ನೀವು ಡಿಫ್ಯೂಸರ್‌ ನ್ನು ಉಡುಗೊರೆಯಾಗಿ ನೀಡಬಹುದು. ಆಕೆಗೆ ಇಷ್ಟವಾಗುವ ಸುಗಂಧದ ಎಸೆನ್ಶಿಯ್‌ ಆಯಿಲ್ ‌ಅಥವಾ ಡಿಫ್ಯೂಸರ್‌ ಸಂಯೋಜನೆ ಒಂದು ಉತ್ತಮ ಉಡುಗೊರೆ ಆಗಬಹುದು. ಇದು ಆ್ಯರೋಮಾ ಥೆರಪಿಯಂಥ ಕೆಲಸ ಮಾಡುವ ಜೊತೆಗೆ, ಆಯಾಸದ ಮನಸ್ಥಿತಿಯನ್ನು ದೂರ ಮಾಡುತ್ತದೆ.

ಕಸ್ಟಮೈಸ್ಡ್ ಉಂಗುರ : ನಿಮ್ಮ ಗರ್ಲ್ ಫ್ರೆಂಡ್‌ ಗೆ ಏನು ಉಡುಗೊರೆ ಕೊಡಬಹುದು ಎಂದು ಯೋಚಿಸುವುದಾದರೆ, ಕಸ್ಟಮೈಸ್ಡ್ ರಿಂಗ್‌ ಒಂದು ಉತ್ತಮ ಆಯ್ಕೆ ಆಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರೀತಿಯನ್ನು ವ್ಯಕ್ತಪಡಿಸಲು ಇದೊಂದು ಉತ್ತಮ ಮಾರ್ಗವಾಗಿದೆ. ರಿಂಗ್‌ ಮೇಲೆ ನಿಮ್ಮ ಸಂಗಾತಿಯ ಹೆಸರಿನ ಜೊತೆಗೆ ನಿಮ್ಮ ಹೆಸರಿನ ಮೊದಲ ಅಕ್ಷರವನ್ನು ಬರೆಯುವ ಮೂಲಕ ನಿಮ್ಮ ಸಂಗಾತಿಯನ್ನು ಅಚ್ಚರಿಗೊಳಿಸಬಹುದು. ಇದನ್ನು ನಿಮ್ಮ ಗೆಳತಿಗೆ ನೀಡುವ ಮೂಲಕ, ಆಕೆಯ ಹೃದಯದಲ್ಲಿ ನಿಮ್ಮ ಬಗ್ಗೆ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ