ಸೀರೆ ಅಥವಾ ಗೌನ್ ಇರಲಿ, ನಿಮ್ಮ ಡ್ರೆಸ್ ಗೆ ತಕ್ಕಂತೆ ಈ ಸಲದ ಹಬ್ಬಕ್ಕೆ ಎಂಥ ಒಡವೆ ಆರಿಸಬೇಕು ಎಂದು ವಿವರವಾಗಿ ನೋಡೋಣವೇ.....?
ಹಬ್ಬಗಳ ಸೀಸನ್ ಅಂದ್ರೆ ಎಲ್ಲೆಲ್ಲೂ ಬೆಳಕಿನ ಪ್ರಭೆ, ಉತ್ಸಾಹ, ಉಲ್ಲಾಸ, ಫ್ರೆಂಡ್ಸ್, ನೆಂಟರಿಷ್ಟರ ಸಡಗರ ಸಂಭ್ರಮ ತುಂಬಿಕೊಂಡು ಎಲ್ಲರ ಮುಂದೆ ನೀವು ಮಿಂಚಲು ಒಂದು ಸದವಕಾಶ! ಅದರಲ್ಲೂ ದೀಪಾವಳಿಯ ಪಾರ್ಟಿ ಅಂದ ಮೇಲೆ ಅದು ಗ್ರಾಂಡಾಗಿ ಇರಲೇಬೇಕು. ಪ್ರತಿಯೊಬ್ಬ ಹೆಣ್ಣು ಈ ಶುಭ ಸಂದರ್ಭದಲ್ಲಿ ಸ್ಟೈಲಿಶ್, ಗ್ಲಾಮರಸ್, ಸುಂದರವಾಗಿ ಕಂಗೊಳಿಸ ಬಯಸುತ್ತಾಳೆ.
ಹೀಗಾಗಿಯೇ ಹೆಂಗಸರು ಈ ಫೆಸ್ಟಿವ್ ಸೀಸನ್ ನಲ್ಲಿ ತಮ್ಮ ಸೌಂದರ್ಯ, ಫ್ಯಾಷನ್ ಸ್ಟೈಲ್ ಗಾಗಿ ಹಲವು ಬಗೆಯ ಟಿಪ್ಸ್ ಫಾಲೋ ಮಾಡುತ್ತಾರೆ. ಇಂಥದ್ದರಲ್ಲಿ ಸೂಕ್ತ ಒಡವೆ ಕ್ಯಾರಿ ಮಾಡುವ ಸ್ಟೈಲ್ ಒಂದೇ ಅವರನ್ನು ಇತರರಿಗಿಂತ ಭಿನ್ನವಾಗಿ ತೋರಿಸಲು ಸಾಧ್ಯ. ನೀವು ಸಹ ಹೀಗೆ ಗಾರ್ಜಿಯಸ್ ಆಗಿ ಮಿಂಚ ಬಯಸಿದರೆ ಈ ಸಲಹೆಗಳನ್ನು ಅಗತ್ಯ ಅನುಸರಿಸಿ :
ಡ್ರೆಸ್ ಗೆ ತಕ್ಕಂತೆ ಒಡವೆ ಸೀರೆಗೆ ತಕ್ಕಂತೆ ಒಡವೆ ಆರಿಸುವುದು ಹೇಗೆ? : ಸೀರೆಗೆ ತಕ್ಕಂತೆ ನೀವು ಸೂಕ್ತ ಒಡವೆ ಆರಿಸಿದ್ದೇ ಆದರೆ, ಯಾವ ಅಪ್ಸರೆಯ ಬೆಡಗಿಗೂ ಕಡಿಮೆ ಇಲ್ಲದಂತೆ ಮೆರೆಯಬಹುದು. ಸೀರೆಯ ಡ್ರೇಪಿಂಗ್ ಅಷ್ಟೇ ಸ್ಟೈಲಿಶ್‌ಗ್ಲಾಮರಸ್‌ಆಗಿರಬೇಕೆಂಬುದು ಮುಖ್ಯ.
ಸೀರೆಗಳ ಟೆಕ್ಸ್ ಚರ್, ಫ್ಯಾಭ್ರಿಕ್ಸ್, ಬಣ್ಣಕ್ಕೆ ತಕ್ಕಂತೆ ಒಡವೆ ಆರಿಸಬೇಕು. ಲೈಟ್ ಕಲರ್ ಬಣ್ಣದ ಸೀರೆಗಳ ಜೊತೆ, ಲೈಟ್‌ಹೆವಿ ಒಡವೆ ಎರಡೂ ಓಕೆ. ಆದರೆ ಡಾರ್ಕ್ ಬಣ್ಣದ ಸೀರೆಗಳಿಗೆ ಮಾತ್ರ, ಒಡವೆಗಳನ್ನು ಬಲು ಎಚ್ಚರಿಕೆಯಿಂದ ಮ್ಯಾಚ್ ಮಾಡಬೇಕು.
ಮುತ್ತುಗಳ ಸೆಟ್, ಪರ್ಲ್ ಜ್ಯೂವೆಲರಿಯನ್ನು ಎಲ್ಲಾ ಬಗೆಯ ಸೀರೆಗಳ ಜೊತೆಗೂ ಧರಿಸಬಹುದಾಗಿದೆ.
ಸೀರೆಗಳ ಜೊತೆ ಒಂದೇ ಸಲ ಬಹು ಬಗೆಯ ಒಡವೆಗಳನ್ನು ಧರಿಸಬೇಡಿ. ಭಾರಿ ನೆಕ್ ಪೀಸ್ ಜೊತೆಗೆ ವೆರಿ ಲೈಟ್ ಇಯರ್ ಸ್ಟಡ್ಸ್ ಇರಲಿ, ಅಥವಾ ಸ್ಟಡ್ಸ್ ಇಲ್ಲದೆ ಸಣ್ಣ ಸ್ಟಾರ್ ಆದರೂ ಓಕೆ. ಭಾರಿ ಜುಮಕಿ ಯಾ ಡ್ಯಾಂಗಲರ್ಸ್ ಜೊತೆ ಖಾಲಿ ಕುತ್ತಿಗೆ ಅಥವಾ ಒಂದೆಳೆಯ ಸಣ್ಣ ಚೇನ್ (ಮಾಂಗಲ್ಯದ ಸರ) ಇದ್ದರೂ ಸರಿ. ಇದಕ್ಕೆ ಸೂಕ್ತ ಡಿಸೈನರ್ ಬ್ಲೌಸ್ ಆರಿಸಬೇಕು ಎಂಬುದನ್ನು ಮರೆಯದಿರಿ.
ಸೀರೆಯ ಜೊತೆ ಒಮ್ಮೊಮ್ಮೆ ಸಿಂಗಲ್ ಒಡವೆ ಸಹ ಧರಿಸಬಹುದು, ಅದು ಸಾಕಷ್ಟು ಹೈಲೈಟ್ ಆಗುವಂತಿರಬೇಕು. ಹ್ಯಾಂಡ್ ಲೂಂ ಕಾಟನ್ ಸೀರೆಗಳ ಜೊತೆ ಕೃತಕ ಒಡವೆಗಳು (ಅಮೆರಿಕನ್ ಡೈಮಂಡ್, ರೋಲ್ಡ್ ಗೋಲ್ಡ್ ಇತ್ಯಾದಿ) ಯಾ ಕೋರ್‌ಡ್ಯಾಂಗ್ಲರ್ಸ್‌ಬ್ರೇಸ್ ಲೆಟ್ಸ್ ಬಲು ಸುಂದರ ಎನಿಸುತ್ತದೆ.

ಕೈಗಳಿಂದ ನೇಯಲ್ಪಟ್ಟ ಸೀರೆಗಳೊಂದಿಗೆ ಬ್ಲ್ಯಾಕ್ ಮೆಟಲ್ ನ ಒಡವೆಗಳು ಹೆಚ್ಚು ಕಳೆಗಟ್ಟುತ್ತವೆ. ಇದೇ ತರಹ ಚಂದೇರಿ ಕಾಟನ್ ಯಾ ಸಿಲ್ಕ್ ಜೊತೆಗೆ ಬಣ್ಣಗಳಿಗೆ ತಕ್ಕಂತೆ, ಬೆಳ್ಳಿಚಿನ್ನದ ಒಡವೆಗಳು ಚೆನ್ನಾಗಿರುತ್ತವೆ. ಬೆನಾರಸ್ ಸಿಲ್ಕ್, ಕಾಂಚೀಪುರಂ ಸಿಲ್ಕ್ ಹಾಗೂ ಅಸ್ಸಾಂ ಮುಗಾ ಸಿಲ್ಕ್ ಜೊತೆ ಸ್ವರ್ಣಾಭರಣಗಳು ಯಾ ಬೆಳ್ಳಿ ಒಡವೆಗಳು ಸೀರೆಗೆ ಉತ್ತಮ ಲುಕ್ಸ್ ನೀಡುತ್ತವೆ. ಇವುಗಳ ಜೊತೆ ಮುತ್ತು, ಪ್ರೇಶಿಯಸ್ ಸ್ಟೋನ್ಸ್ ಜ್ಯೂವೆಲರಿ ಸಹ ಸೊಗಸಾಗಿ ಹೊಂದುತ್ತವೆ.





