ದೀಪಾವಳಿ ಎಂದರೆ ಮನೆ ಮನಗಳಲ್ಲಿ ಹಬ್ಬದ ತಯಾರಿ ಆರಂಭವಾಗುತ್ತದೆ. ಈಗ ಬರಲಿರುವ ಹಬ್ಬದ ತಯಾರಿಯಲ್ಲಿ ಮನೆಯನ್ನು ಶುಚಿಗೊಳಿಸುವುದು ಮತ್ತು ಬಣ್ಣ ಹಚ್ಚುವುದು ಅತ್ಯಂತ ಮಹತ್ವದ್ದಾಗಿದೆ. ಹಾಗಾದರೆ, ಈ ದೀಪಾವಳಿಯಂದು ನಾವು ನಮ್ಮ ಮನೆಗೆ ಹೊಂದಿಕೆ ಆಗುವಂತಹ ಬಣ್ಣಗಳ ಮೂಲಕ ಹೊಸ ರೂಪವನ್ನು ಏಕೆ ನೀಡಬಾರದು? ಇದರಿಂದ ನಮ್ಮ ಮನೆಯನ್ನೇಕೆ ಇನ್ನಷ್ಟು ಸುಂದರಗೊಳಿಸಬಾರದು?

ಅದು ಮನೆಯಾಗಿರಲಿ ಅಥವಾ ಯಾವುದೇ ಕೋಣೆಯಾಗಿರಲಿ, ಸರಿಯಾದ ಬಣ್ಣಗಳ ಸಮಯೋಜನೆಯಿಂದ ಅದನ್ನು ಸುಂದರವಾಗಿ ಮಾಡಬಹುದು. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಸರಿಯಾದ ಬಣ್ಣಗಳ ಆಯ್ಕೆ, ಈ ಮಾಹಿತಿಯ ಮೂಲಕ ನಿಮ್ಮ ಮನೆಯನ್ನು ಹೇಗೆ ಸುಂದರವಾಗಿ ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ.

ಬಿಳಿ ಅಥವಾ ತಿಳಿ ಬಣ್ಣದ ಆಯ್ಕೆ

ಹೆಚ್ಚಿನ ಜನರು ಮನೆಯ ಗೋಡೆಗಳಿಗೆ ಬಿಳಿ ಅಥವಾ ತಿಳಿ ಬಣ್ಣವನ್ನು ಆರಿಸುತ್ತಾರೆ. ಏಕೆಂದರೆ, ಅದು ಕ್ಲಾಸಿ ಲುಕ್‌ ನೀಡುತ್ತದೆ. ಅದು ಯಾವಾಗಲೂ ನೋಡಲು ಚೆನ್ನಾಗಿಯೇ ಕಾಣುತ್ತದೆ. ಬಿಳಿ ಅಥವಾ ತಿಳಿ ಬಣ್ಣದ ಗೋಡೆಗಳು ಇಡೀ ಕೋಣೆಯನ್ನು ದೊಡ್ಡದಾಗಿ ಮತ್ತು ಉತ್ತಮವಾಗಿ ಕಾಣುವಂತೆ ಮಾಡಿ, ಉತ್ತಮ ಬೆಳಕನ್ನು ನೀಡುತ್ತದೆ. ಕೊಠಡಿ ಅಥವಾ ಮನೆಯಲ್ಲಿ ಇರುವ ಪೀಠೋಪಕರಣಗಳು ಅಥವಾ ಅಲಂಕಾರಿಕ ವಸ್ತುಗಳ ಮೇಲೆ ನೋಡುಗರ ಗಮನ ಸೆಳೆಯುತ್ತದೆ.

ರೀತಿಯ ಬಣ್ಣಗಳನ್ನು ಆರಿಸಿ

ಕಾಂಟ್ರಾಸ್ಟ್ ಬಣ್ಣಗಳನ್ನು ಆರಿಸುವ ಮೂಲಕ ನೀವು ನಿಮ್ಮ ಮನೆಯನ್ನು ಕಲರ್‌ ಫುಲ್ ಆಗಿ ಮಾಡಬಹುದು. ಇದಕ್ಕಾಗಿ ನೀವು ಹಳದಿ ಬಣ್ಣದೊಂದಿಗೆ ಕೆಂಪು, ಕಿತ್ತಳೆಯೊಂದಿಗೆ ಹಸಿರು ಅಥವಾ ಹಳದಿ ಇತ್ಯಾದಿ ಬಣ್ಣಗಳ ಕಾಂಬಿನೇಶನ್‌ ಮಾಡಬಹುದು. ಆದರೆ ಈ ಆಯ್ಕೆ ಮಾಡಿಕೊಂಡಿದ್ದೀರಿ, ನಂತರ ಅಲಂಕಾರಕ್ಕಾಗಿ ಬಳಸುವ ಕರ್ಟನ್‌ ಗಳು, ಬೆಡ್‌ ಶೀಟ್‌, ಕುಶನ್‌ ಅಥವಾ ಸೋಫಾ ಕವರ್‌ ನಂತಹ ಯಾವುದೇ ವಸ್ತುವನ್ನು ಇರಿಸುವುದು ಉತ್ತಮವಾಗಿರುತ್ತದೆ.

ನೀವು ಗೋಡೆಗಳಿಗೆ ಕೆಂಪು ಬಣ್ಣನ್ನು ಆರಿಸಿದ್ದರೆ, ಬೆಡ್‌ ಶೀಟ್‌ ಅಥವಾ ಕುಶನ್‌ ಗಳನ್ನು ಹಸಿರು ಬಣ್ಣದಲ್ಲಿ ಆಯ್ಕೆ ಮಾಡಬಹುದು. ಅದೇ ರೀತಿ, ನೀಲಿ ಮತ್ತು ಕಿತ್ತಳೆ ಬಣ್ಣದ ಕಾಂಟ್ರಾಸ್ಟ್ ಸಂಯೋಜನೆಗಳನ್ನು ಸಹ ಮಾಡಬಹುದು. ಈ ಬಣ್ಣಗಳ ಸಮನ್ವಯದಿಂದ ಮನೆಯನ್ನು ಅಲಂಕರಿಸುವುದರಿಂದ ಮನೆ ಕಳೆಕಳೆಯಾಗಿ ಕಾಣುತ್ತದೆ.

ಒಂದೇ ಬಣ್ಣದ ಶೇಡಿನ ಆಯ್ಕೆ

ಒಂದೇ ಕೋಣೆಯೊಳಗೆ ಒಂದೇ ಬಣ್ಣದ ವಿವಿಧ ಶೇಡ್‌ ಗಳನ್ನು ಆಯ್ಕೆ ಮಾಡುವುದರಿಂದ ನಿಮ್ಮ ಮನೆಗೆ ವಿಭಿನ್ನ ಮತ್ತು ಸುಂದರವಾದ ಲುಕ್‌ ನೀಡಬಹುದು. ಅದೇ ಕೋಣೆಯ ಗೋಡೆಯು ಕಡು ನೀಲಿ ಬಣ್ಣವನ್ನು ಹೊಂದಿರಬೇಕು ಮತ್ತು ಹೈಲೈಟ್ ಮಾಡಿದ ಗೋಡೆಗೆ ಕಡು ನೀಲಿ ಹಾಗೂ ತಿಳಿ ನೀಲಿ ಬಣ್ಣ ಹಚ್ಚಬಹುದು.

ಇತ್ತೀಚಿನ ದಿನಗಳಲ್ಲಿ ಇದು ಬಹಳ ಟ್ರೆಂಡ್‌ ನಲ್ಲಿದೆ ಮತ್ತು ಒಂದು ಗೋಡೆಯ ಮೇಲೆ ಅದೇ ಬಣ್ಣದ ಕಾಂಟ್ರಾಸ್ಟ್ ಪೇಪರ್‌ ನ್ನು ಹಚ್ಚುವ ಟ್ರೆಂಡ್‌ ಇದೆ. ನಂತರ ಇರುವ ಜಾಗಕ್ಕೆ ತಿಳಿ ನೀಲಿ ಅಥವಾ ಬಿಳಿ ಬಣ್ಣಕ್ಕೆ ಸ್ಥಾನ ನೀಡಬಹುದು. ಅಂತೆಯೇ, ಇದನ್ನು ಇತರ ಬಣ್ಣಗಳ ಫಲಕಗಳೊಂದಿಗೆ ಸಹ ಮಾಡಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ