ಆಭರಣ ಇಲ್ಲದಿದ್ದರೆ ಹೆಣ್ಣಿನ ಶೃಂಗಾರ ಅಪೂರ್ಣ ಎಂದೇ ಭಾವಿಸಲಾಗಿದೆ. ಈ ಕಾರಣದಿಂದಲೇ ಬದಲಾಗುತ್ತಿರುವ ಆಧುನಿಕ ಯುಗದಲ್ಲೂ ಆಭರಣಗಳ ಪ್ರಯೋಗ ಹೊಸ ಹೊಸ ರೀತಿಯಲ್ಲಿ ಆಗುತ್ತಿರುತ್ತದೆ. ಟ್ರೆಡಿಶನಲ್ ಡ್ರೆಸೆಸ್‌ ಬಯಸುವ ನಟಿ ವಿದ್ಯಾಬಾಲನ್‌ ಗೆ, ಜುಮಕಿ ಎಷ್ಟು ಇಷ್ಟ ಅಂದ್ರೆ, ಅವಳು ಇದನ್ನು ಕೊಳ್ಳುವ ಯಾವ ಅವಕಾಶವನ್ನೂ ಬಿಡುವುದಿಲ್ಲವಂತೆ! ರೈಲಿನಲ್ಲಿ ಪ್ರಯಾಣಿಸುವಾಗ ದೊರಕುವಂಥ 5-10 ರೂ.ಗಳ ಅಗ್ಗದ ಜುಮಕಿ ಸಹ ಬಿಡುವುದಿಲ್ಲವಂತೆ. ಪಾರಂಪರಿಕ ಒಡವೆಗಳು ಅಂದ್ರೆ ವಿದ್ಯಾಳಿಗ ಬಲು ಆಪ್ಯಾಯಮಾನ.

ಸೋನಂ ಕಪೂರ್‌ ಸದಾ ತನ್ನ ಸ್ಟೈಲ್ ‌ಗಾಗಿ ಖ್ಯಾತಿ. ಹಾಗಾಗಿ ಅದರಲ್ಲಿ ಬಗೆ ಬಗೆ ಪ್ರಯೋಗ ಮಾಡುತ್ತಿರುತ್ತಾಳೆ. ಆಕೆಯ ಇಂಥ ಲುಕ್ಸ್ ಎಲ್ಲವೂ ಆಧುನಿಕ ಅಭಿಮಾನಿಗಳಿಗೂ ಇಷ್ಟ. ಆಭರಣಗಳು ಅಂದ್ರೆ ಇವಳಿಗೆ ಬಲು ಖಯಾಲಿ. ಅದು ಅಗ್ಗ ಅಥವಾ ದುಬಾರಿ ಆಗಿರಲಿ, ಸೋನಂ ಮರೆಯದೆ ಕೊಳ್ಳುತ್ತಾಳಂತೆ. ತನ್ನ ಡ್ರೆಸ್‌ ಗೆ ಹೊಂದುವಂಥ ರಾಶಿ ರಾಶಿ ಒಡವೆ ಖರೀದಿಸಿದ್ದಾಳೆ.

ಟ್ರೆಡಿಶನಲ್ ಅಥವಾ ವೆಸ್ಟರ್ನ್‌ ಡ್ರೆಸ್‌ ಇರಲಿ, ಎಲ್ಲದಕ್ಕೂ ಯಾವುದೋ ಒಂದು ಒಡವೆ ಇರಲೇಬೇಕು ಅಂತಾಳೆ.

ನಟಿ ದೀಪಿಕಾ ಪಡುಕೋಣೆಗೆ ಟ್ರೆಡಿಶನಲ್ ಜ್ಯೂವೆಲರಿ ಎಂದರೆ ಇಷ್ಟ. ಆಕೆಗೆ ಹೆಚ್ಚಾಗಿ ಉದ್ದನೆ, ತೂಗಾಡುವ ಇಯರ್‌ ರಿಂಗ್ಸ್ ಇಷ್ಟ. ಹಾಗಾಗಿ ಆಕೆಯ ಮುಖ ಉದ್ದಕ್ಕಿದೆ ಅನಿಸುತ್ತದೆ.

ಈ ಕುರಿತಾಗಿ ಜ್ಯೂವೆಲರಿ ತಜ್ಞರ ಅಭಿಪ್ರಾಯ ಎಂದರೆ, ಮುಖ ಎಂಬುದು ವ್ಯಕ್ತಿಯ ವ್ಯಕ್ತಿತ್ವದ ಕನ್ನಡಿ. ಸರಿಯಾದ ಆಭರಣದ ಆಯ್ಕೆ ಸೌಂದರ್ಯವನ್ನು ಇಮ್ಮಡಿಸುತ್ತದೆ. ಹೀಗಾಗಿ ಭಾರಿ ಭಾರಿ ಒಡವೆಗಳನ್ನು ಹೇರಿಕೊಳ್ಳುವ ಬದಲು, ಎಲಿಗೆಂಟ್‌ ಲುಕ್ಸ್ ನೀಡುವಂಥ ಒಡವೆಗಳು ಮಾತ್ರವೇ ಇಂದಿನ ಆಧುನಿಕ ತರುಣಿಯರ ಆಯ್ಕೆಯಾಗಿದೆ, ಇದೇ ಈಗ ಟ್ರೆಂಡಿ ಎನಿಸಿದೆ.

ಹೀಗಾಗಿ ಹೆಂಗಸರು ಒಡವೆಗಳ ಶೋ ರೂಮಿಗೆ ಹೋದಾಗ, ಅಲ್ಲಿನ ಝಗಮಗಿಸುವ ಬೆಳಕಲ್ಲಿ, ಹೊಳೆಹೊಳೆಯುವ ಒಡವೆಗಳಿಗೆ ಮಾರುಹೋಗುವ ಬದಲು, ನಿಮ್ಮ ಮುಖಕ್ಕೆ ಒಪ್ಪುವಂಥ ಆಭರಣ ಮಾತ್ರ ಆರಿಸಿ. ಈ ರೀತಿ ಮಾಡದಿದ್ದರೆ, ಎಂಥ ದುಬಾರಿ ಒಡವೆ ಧರಿಸಿದರೂ ಸರಿ, ಮುಖದ ಅಂದ ಕಳೆಗುಂದಿದಂತೆ ಕಾಣುತ್ತದೆ, ಲುಕ್ಸ್ ಡೌನ್‌ ಆಗುತ್ತದೆ. ಹೀಗಾಗಿ ಯಾವ ಆಕಾರದ ಮುಖಕ್ಕೆ ಎಂಥ ಆಭರಣ ಆರಿಸಬೇಕು ಎಂಬುದನ್ನು ವಿವರವಾಗಿ ತಿಳಿಯೋಣ :

ಓವಲ್ ಫೇಸ್

ಇಂಥ ಮುಖ ಉಳ್ಳವರಿಗೆ ಗುಡ್‌ ನ್ಯೂಸ್‌ ಎಂದರೆ, ಇಂಥವರು ಯಾವುದೇ ಉದ್ದನೇ ಸ್ಟೈಲಿಶ್‌ ನೆಕ್‌ ಲೇಸ್‌ ಧರಿಸಬಹುದು. ಇದೇ ತರಹ ಓವಲ್ ಯಾ ಟಿಯರ್‌ ಡ್ರಾಪ್‌ ಡಿಸೈನಿನ ರೌಂಡ್‌ ನೆಕ್‌ ಲೇಸ್‌, ನಿಮ್ಮ ಮುಖದ ಆಕಾರದ ನಕಲಿನಂತೆ ಇರುವುದರಿಂದ, ಇದು ನಿಮಗೆ ಉತ್ತಮ ಆಯ್ಕೆಯಾಗಿದೆ. ಅದೇ ಜ್ಯಾಮಿಟ್ರಿಕ್‌ ಪೆಂಡೆಂಟ್‌ ಜೊತೆ ಶಾರ್ಟ್‌ ನೆಕ್‌ ಲೇಸ್‌ ಮಿನಿಮಲಿಸ್ಟಿಕ್‌ ಲುಕ್ಸ್ ಗಾಗಿ ಬಲು ಪ್ರಸಿದ್ಧವಾಗಿದೆ. ಲುಕ್ಸ್ ನ್ನು ಪರ್ಫೆಕ್ಟ್ ಗೊಳಿಸಲು, ವೈಡ್‌ ಇಯರ್‌ ರಿಂಗ್ಸ್ ನ ಮ್ಯಾಚಿಂಗ್‌ ಅತಿ ಉತ್ತಮ ಲುಕ್ಸ್ ನೀಡುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ