ಕಂಗನಾಳ ಕರಾಮತ್ತು

2006ರಲ್ಲಿ ಬಿಡುಗಡೆಯಾದ `ಗ್ಯಾಂಗ್‌ಸ್ಟರ್‌' ಚಿತ್ರದಲ್ಲಿನ ಈ ಗ್ಲಾಮರಸ್‌ ನಟಿಯ ಗೆಟಪ್‌, ಮುಂದೆ ಘಟಾನಾಘಟಿಗಳನ್ನೂ ಸೋಲಿಸಿಬಿಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಗ್ಲಾಮರಸ್‌ ಕ್ವೀನ್‌ ಎಂದೇ ಗುರುತಿಸಲ್ಪಟ್ಟ ಕಂಗನಾ ರಾಣಾವತ್‌, ಮುಂದೆ ಬಾಲಿವುಡ್‌ನಲ್ಲಿ ಗೆಲ್ಲುವ ಕುದುರೆ ಎಂದೇ ಖ್ಯಾತಳಾದಳು. ಕೇವಲ ಸೆಕ್ಸ್ ಸಿಂಬಲ್ ಆಗದೆ, ತನ್ನ ಅದ್ಭುತ ನಟನೆಯಿಂದ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದಳು.

ತನ್ನ 9 ವರ್ಷಗಳ ಕೆರಿಯರ್‌ನಲ್ಲಿ ಕಂಗನಾಳ ಹೆಸರು ಹಲವು ನಟರೊಂದಿಗೆ ಥಳುಕು ಹಾಕಿಕೊಂಡಿತ್ತು. `ಕೃಷ್‌' ಚಿತ್ರದ ನಂತರ ಆಕೆ ಹೆಸರು ಹೃತಿಕ್‌ ಜೊತೆ ಹೆಚ್ಚಾಗಿ ಕೇಳಿಬಂತು. ತನ್ನ ಜೀವನದಲ್ಲಿ ಯಾರೋ ಸ್ಪೆಷಲ್ ಇದ್ದಾರೆ ಎಂದು ಆಕೆ ಹೇಳಿದ್ದೂ ಉಂಟು! ಒಂದು ಆಂಗ್ಲ ವೆಬ್‌ಸೈಟ್‌ ಪ್ರಕಾರ ಆ ಸ್ಪೆಷಲ್ ಹೃತಿಕ್‌ ಎಂಬುದು ಕನ್‌ಫರ್ಮ್ ಆಯ್ತು. ಅದಾದ ಮುಂದಿನ 2-3 ತಿಂಗಳಲ್ಲಿ ಹೃತಿಕ್‌ ಸುಸೇನ್‌ರ ವಿವಾಹ ರದ್ದಾಗುವ ಹಂತ ತಲುಪಿದಾಗ ಕಂಗನಾ ಕಣ್ಕಣ್ಣು ಬಿಟ್ಟಳು.

ಮುಂದೂ ಇವರಿಬ್ಬರೂ ತಮ್ಮ ರಿಲೇಷನ್‌ ಶಿಪ್‌ ಕುರಿತಾಗಿ ಏನೂ ಬಾಯಿಬಿಡಲಿಲ್ಲ, ಆದರೆ ಬಲ್ಲ ಮೂಲಗಳ ಪ್ರಕಾರ ಇಬ್ಬರೂ ತಮ್ಮ ಸಂಬಂಧದ ಕುರಿತು ಬಹಳ ಸೀರಿಯಸ್‌ ಆಗಿದ್ದಾರಂತೆ. ಹಲವು ವರ್ಷಗಳಿಂದ ಬೆಸ್ಟ್ ಫ್ರೆಂಡ್ಸ್ ಎನಿಸಿರುವ ಇವರು `ಕೃಷ್‌, ಕೈಟ್ಸ್' ಚಿತ್ರಗಳಿಂದ ಹೆಚ್ಚು ನಿಕಟರಾದರು. ಗಮ್ಮತ್ತು ಎಂದರೆ, ಇದನ್ನು ಖಂಡಿಸದ ಹೃತಿಕ್‌ ಶಾಂತವಾಗಿಯೇ ಕೇಳಿದವರಿಗೆ ಉತ್ತರಿಸುತ್ತಿದ್ದ. ಒಂಟಿಯಾಗಿ ತಾನು ಪಡುತ್ತಿರುವ ಕಷ್ಟ ತನಗೊಬ್ಬನಿಗೇ ಗೊತ್ತು ಎಂದು ಹೇಳಿಕೊಂಡ.

ನಿರ್ದೇಶಕ ಹಸ್‌ ಮೆಹ್ತಾ ಬಚೇಂದ್ರಿ ಪಾಲ್‌ರ ಕುರಿತು ಚಿತ್ರ ಮಾಡಲು ಈಕೆಯನ್ನು ನಾಯಕಿಯಾಗಿ ಆರಿಸಿದ್ದಾರೆ. ಜೊತೆಗೆ `ತನು ವೆಡ್ಸ್ ಮನು ರಿಟರ್ನ್ಸ್' ಚಿತ್ರಗಳಲ್ಲೂ ಬಿಝಿಯಾಗಿದ್ದಾಳೆ. ಒಟ್ಟಾರೆ 2015 ಕಂಗನಾಳ ಪಾಲಿಗೆ ಹೆಚ್ಚು ಶೈನ್‌ ಆಗಲಿದೆ.

ಅಮಿತ್ಜಿ ಈಸ್ಆಲ್ವೇಸ್ಹಾಟ್‌!

ಬಿಪಾಶಾಳ ಇತ್ತೀಚಿನ `ಅಲೋನ್‌' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡದೆ ಅಲೋನ್‌ ಆಗಿಯೇ ಉಳಿಯಿತು. ಚಿತ್ರ ತೋಪಾದರೂ ಈ ಮೇಡಂ ತನ್ನ ಗತ್ತು ಬಿಟ್ಟಿಲ್ಲ. ಆಕೆ ಸಲ್ಮಾನ್‌ಗೆ ಮದುವೆ ಆಗದೆ ಇರೋದೇ ಒಳ್ಳೆಯದು ಎಂದು ಸಲಹೆ ನೀಡಿದ್ದು, ಮೀಡಿಯಾದಲ್ಲಿ ದೊಡ್ಡ ಸುದ್ದಿ ಆಯ್ತು. ಅದಾದ ತಕ್ಷಣ ಅಮಿತಾಭ್ ‌ಟೂ ಹಾಟ್‌ ಎಂದದ್ದು ಮತ್ತೊಂದು ಸುದ್ದಿಯಾಗಿದೆ. ಅವರ ಆಕರ್ಷಕ ವ್ಯಕ್ತಿತ್ವದ ಕುರಿತು ಹೊಗಳುತ್ತಾ ಬಿಪಾಶಾ, ``72ರ ಹರೆಯದಲ್ಲೂ ಅಮಿತ್‌ಜಿ ಸಖತ್‌ ಹಾಟ್‌ ಎನಿಸುತ್ತಾರೆ. ಈ ಪ್ರಾಯದಲ್ಲೇ ಹೀಗಿರುವವರು ಇನ್ನು ಆ ತುಂಬು ಹರೆಯದಲ್ಲಿ ಇನ್ನೆಷ್ಟು ಸೆಕ್ಸಿ ಇದ್ದಿರಬಹುದು? ನಮ್ಮಂಥ ಯುವ ಪೀಳಿಗೆ ಇವರ ವ್ಯಕ್ತಿತ್ವದಲ್ಲಿನ ಶೇ.10ರಷ್ಟು ಚಾರ್ಮ್ ಉಳಿಸಿಕೊಂಡರೂ ಎಷ್ಟೋ ಆಯ್ತು.'' ಮುಂದೆ ಆ್ಯಕ್ಷನ್‌ ಚಿತ್ರಗಳ ಕಡೆ ಹೆಚ್ಚು ಗಮನಹರಿಸುವುದಾಗಿ ಹೇಳಿರುವ ಬಿಪ್ಸ್, ಆ್ಯಕ್ಷನ್‌ ಚಿತ್ರಗಳಲ್ಲಿ ನಾಯಕಿಯರಿಗೂ ಸಮಾನ ಪ್ರಾಶಸ್ತ್ಯ ಕೊಡಬೇಕು ಎಂದು ಒತ್ತಾಯಿಸುತ್ತಾಳೆ.

ಟಿಕೆಟ್ಟು ಹಾಲಿವುಡ್

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ