ಮದುವೆ ಎಂಬ ಸೀಸನ್‌ ಪ್ರಾರಂಭವಾಗಿದೆ. ಪ್ರಿಯತಮನ ಭೇಟಿಯ ಕನಸನ್ನು ಕಾಣುತ್ತಾ ನಿಂತಿರುವ ಮದುಮಗಳು, ತನ್ನ ವಿವಾಹದ ಶುಭ ದಿನದಂದು ಅತ್ಯಂತ ಸುಂದರವಾಗಿ ಕಾಣಬೇಕೆಂಬ ಬಯಕೆ ಹೊಂದಿರುತ್ತಾಳೆ. ಅವಳು ವಿವಾಹ ಮಂಟಪವನ್ನು  ಪ್ರವೇಶಿಸುತ್ತಿರುವಂತೆ ಎಲ್ಲ ಅತಿಥಿಗಳ ಗಮನ ಅವಳತ್ತ ಕೇಂದ್ರೀಕೃತವಾಗುತ್ತದೆ. ಮದುಮಗನೂ ಓರೆಗಣ್ಣಿನಿಂದ ತನ್ನ ಮನದನ್ನೆಯ ಮೊಗವನ್ನು ವೀಕ್ಷಿಸುತ್ತಾನೆ. ಹೀಗೆ ಆಕರ್ಷಣೆಯ ಕೇಂದ್ರಬಿಂದುವಾಗುವ ಮದುಮಗಳು ತನ್ನ ವಿವಾಹಕ್ಕೆ 1 ತಿಂಗಳ ಮೊದಲಿನಿಂದಲೇ ಬ್ಯೂಟಿ ಟ್ರೀಟ್‌ಮೆಂಟ್‌ ಪ್ರಾರಂಭಿಸುವುದು ಒಳ್ಳೆಯದು.

ಕೋಮಲ ತ್ವಚೆ : ಚರ್ಮ ಸ್ವಾಭಾವಿಕ ಸೌಂದರ್ಯ ಪಡೆಯಲು ಅದಕ್ಕೆ ನಿಯಮಿತವಾಗಿ ಪೋಷಣೆ ಮತ್ತು ಮೇಲ್ವಿಚಾರಣೆ ಅಗತ್ಯ. ದಿನನಿತ್ಯದ ಕ್ಲೀನಿಂಗ್‌, ಟೋನಿಂಗ್‌ ಮತ್ತು ಮಾಯಿಶ್ಚರೈಸಿಂಗ್‌ನಿಂದ ಚರ್ಮ ನಿಧಾನವಾಗಿ ಅರಳುತ್ತದೆ. ಕ್ಲೀನಿಂಗ್‌ಗಾಗಿ ಮಲಗುವ ಮೊದಲು ಯಾವುದಾದರೂ ಒಳ್ಳೆಯ ಕ್ಲೀನಿಂಗ್‌ ಲೋಶನ್‌ನಿಂದ ಮುಖ, ಕತ್ತು ಮತ್ತು ಕೈ ಕಾಲುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ನಂತರ ಟೋನರ್‌ ಮತ್ತು ಮಾಯಿಶ್ಚರೈಸರ್‌ನಿಂದ ಚರ್ಮವನ್ನು ಚೆನ್ನಾಗಿ ಮಸಾಜ್‌ ಮಾಡಿ.

ಚರ್ಮದ ಕೋಮಲತೆಗಾಗಿ ಹಾಲು ಮತ್ತು ಮೊಸರಿನ ಪ್ರೋಟೀನ್‌ನ್ನು ಬಳಸಿ. ಇದಲ್ಲದೆ ಮಸಾಜ್‌ಗೆ ಎಸೆನ್ಶಿಯಲ್ ಆಯಿಲ್‌ ಸಹ ಸೂಕ್ತ. ಲೂಫಾ ಮತ್ತು ಸ್ಕ್ರಬ್‌ನಿಂದ ಇಡೀ ಶರೀರವನ್ನು ಸ್ಕ್ರಬ್‌ ಮಾಡಿ. ಇದರಿಂದ ಮೃತ ಚರ್ಮ ನಿವಾರಣೆಯಾಗಿ ಚರ್ಮಕ್ಕೆ ಬಹಳಷ್ಟು ಆಕ್ಸಿಜನ್‌ ದೊರೆಯಲು ಸಾಧ್ಯವಾಗುತ್ತದೆ.

ಹೋಮ್ ಬ್ಲೀಚಿಂಗ್‌ : ಮದುವೆಗಾಗಿ ಶಾಪಿಂಗ್‌ ಮಾಡುವ ಸಂದರ್ಭದಲ್ಲಿ ಬಿಸಿಲಿನಿಂದ ಚರ್ಮದ ಬಣ್ಣ ಕಪ್ಪಾಗಬಹುದು. ಇದನ್ನು ಸರಿಪಡಿಸಲು ಮನೆಯಲ್ಲಿ ತಯಾರಿಸಿದ ಬ್ಲೀಚ್‌ ಬಲು ಉತ್ತಮ. ಇದಕ್ಕಾಗಿ ಫುಲ್‌ಕ್ರೀಮ್ ಮಿಲ್ಕ್ ಪೌಡರ್‌ಗೆ ಹೈಡ್ರೋಜನ್‌ ಆಕ್ಸೈಡ್‌ನ ಕೆಲವು ಹನಿಗಳನ್ನು ಸೇರಿಸಿ ಪೇಸ್ಟ್ ತಯಾರಿಸಿ. ನಂತರ ಇದಕ್ಕೆ ಕೊಂಚ ಗ್ಲಿಸರಿನ್‌ ಹನಿಗಳನ್ನು ಮಿಶ್ರ ಮಾಡಿ ಚರ್ಮಕ್ಕೆ ಹಚ್ಚಿ. 15 ನಿಮಿಷಗಳ ನಂತರ ತೊಳೆಯಿರಿ. ಕೆಲವೊಮ್ಮೆ ಬ್ಲೀಚಿಂಗ್‌ನಿಂದ ಚರ್ಮ ಶುಷ್ಕವಾಗುವುದುಂಟು. ಹಾಗಾದಾಗ ಒಳ್ಳೆಯ ಮಾಯಿಶ್ಚರೈಸರ್‌ ಲೋಶನ್‌ ಹಚ್ಚಿ. ಚರ್ಮದಲ್ಲಿ ಪಿಗ್ಮೆಂಟೇಶನ್‌ ಇದ್ದರೆ,  ವಿಟಮಿನ್‌ ಇ ಕ್ಯಾಪ್ಸೂಲ್‌‌ನ್ನು ಮುರಿದು ಅದರ ಪುಡಿಗೆ ಕ್ಯಾಸ್ಟರ್‌ ಆಯಿಲ್ ಸೇರಿಸಿ ಮುಖಕ್ಕೆ ಹಚ್ಚಿ.

ಹೇರ್‌ ಕೇರ್‌ : ಕೂದಲಿನ ಮೇಲ್ವಿಚಾರಣೆಗೆ ಉತ್ತಮ ವಿಧಾನವೆಂದರೆ, ನಿಯಮಿತವಾಗಿ ಕ್ಲೀನಿಂಗ್‌ ಮತ್ತು ಕಂಡೀಶನಿಂಗ್‌ ಮಾಡುವುದು, ಕೂದಲನ್ನು ತಪ್ಪದೆ ಬಿಸಿ ಎಣ್ಣೆಯಿಂದ ಮಸಾಜ್‌ ಮಾಡಿ. ಕ್ಯಾಸ್ಟರ್‌ ಆಯಿಲ್, ಸನ್‌ಫ್ಲವರ್‌ ಆಯಿಲ್‌ ಅಥವಾ ಕೋಕೋನಟ್‌ ಆಯಿಲ್‌ಗೆ ಕೆಲವು ಹನಿಗಳಷ್ಟು ಆ್ಯರೊಮಾ ಪಿಂಗ್‌ ಪಾಂಗ್‌ ಆಯಿಲ್‌ ಬೆರೆಸಿ ಮಸಾಜ್‌ ಮಾಡಿ. ಇದರಿಂದ ಕೂದಲಿಗೆ ಪೋಷಣೆ ದೊರೆಯುವುದಲ್ಲದೆ, ಕೂದಲು ರೇಷ್ಮೆಯಂತೆ ಸುಂದರ ಆಗುತ್ತದೆ. ಕೂದಲ ಕಂಡೀಶನಿಂಗ್‌ಗಾಗಿ ಮೆಂತ್ಯ ಮತ್ತು ಮೊಸರಿನ ಪ್ಯಾಕ್‌ ಮಾಡಿ ಹಚ್ಚಿ. ಕೂದಲನ್ನು ಕಲರ್‌ ಮಾಡಿಸಬೇಕೆಂದಿದ್ದರೆ, ಆ ಬಣ್ಣ ಹೊಂದುವುದೇ ಎಂದು ತಿಳಿಯಲು ಮೊದಲೇ ಟೆಸ್ಟ್ ಮಾಡಿಸಿ.

ಕೂದಲಿನ ಸ್ಟ್ರೇಟ್‌ನಿಂಗ್‌ನ್ನು ಎಲ್ಲಕ್ಕಿಂತ ಕಡೆಯಲ್ಲಿ ಮಾಡಿಸಿ. ಕೂದಲಿನಲ್ಲಿ ಹೊಟ್ಟಿದ್ದರೆ ಮೊದಲೇ ಟ್ರೀಟ್‌ಮೆಂಟ್‌ ತೆಗೆದುಕೊಳ್ಳಿ. ಮೊಸರು ಕೂದಲಿಗೆ ಪ್ರೋಟೀನ್‌ ಒದಗಿಸುವುದಲ್ಲದೆ, ಹೊಟ್ಟನ್ನೂ ದೂರ ಮಾಡುತ್ತದೆ. ನಿತ್ಯ ಮಲಗುವ ಮೊದಲು ಕೂದಲನ್ನೂ ಚೆನ್ನಾಗಿ ಬಾಚಿಕೊಳ್ಳಿ. ಇದರಿಂದ ಕೂದಲಿನ ಒಳ ಚರ್ಮದಲ್ಲಿ ಬ್ಲಡ್‌ ಸರ್ಕ್ಯುಲೇಶನ್‌ ಚೆನ್ನಾಗಿ ಆಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ