ಬಾಡಿ ಟ್ಯಾಟೂ ನಂತರ ಹೊಸ ಫ್ಯಾಷನ್‌ ಬಾಡಿ ಪಿಯರ್ಸಿಂಗ್‌ ಅಂದರೆ ಶರೀರದ ಅಂಗಗಳಲ್ಲಿ ತೂತು ಮಾಡಿಸುವುದು. ಅಂದಹಾಗೆ ಭಾರತೀಯ ಸಂಸ್ಕೃತಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ವಿವಿಧ ಜಾತಿಯವರು ತಮ್ಮ ಶರೀರದ ಅಂಗಗಳ ಮೇಲೆ ಪಿಯರ್ಸಿಂಗ್‌ ಮಾಡಿಸಿಕೊಳ್ಳುತ್ತಾರೆ. ಕಾಶ್ಮೀರಿ ಮಹಿಳೆಯರು ಮತ್ತು ಹುಡುಗಿಯರು ತಮ್ಮ ಕಿವಿಯ ಮಧ್ಯಭಾಗದಲ್ಲಿ ತೂತು ಕೊರೆಯಿಸಿ ಆಭರಣ ಧರಿಸುತ್ತಾರೆ. ಕೆಲವು ಜಾತಿಗಳಲ್ಲಿ ಮಹಿಳೆಯರು ಇಡೀ ಕಿವಿಯ ಮೇಲೆ ತೂತುಗಳನ್ನು ಮಾಡಿಸುತ್ತಾರೆ. ಮೂಗುತಿಯನ್ನು ಧರಿಸಲು ಸಾಮಾನ್ಯವಾಗಿ ಮೂಗಿನ ಮಧ್ಯಭಾಗದಲ್ಲಿ ತೂತು ಮಾಡಲಾಗುತ್ತದೆ. ಆದರೆ ದಕ್ಷಿಣದಲ್ಲಿ ಮೂಗಿನ ಎರಡೂ ಕಡೆ ಚುಚ್ಚಾಗುತ್ತದೆ. ಹುಡುಗಿಯರಲ್ಲದೆ, ಅನೇಕ ಕಡೆ ಹುಡುಗರೂ ಕಿವಿ ಚುಚ್ಚಿಸಿಕೊಳ್ಳುತ್ತಾರೆ.

Jacklyn_Tongue_by_Tommy_T_Body_piercing (1)

25-30ರ ವಯಸ್ಸಿನ ಒಬ್ಬ ಯುವಕ ತನ್ನ ಐ ಬ್ರೋಸ್‌ ಮೇಲೆ ಒಂದು ಮಣಿಯನ್ನು ಹಾಕಿಸಿಕೊಂಡಿದ್ದ. ಅದಲ್ಲದೆ ಅವನು ಲೋಯರ್‌ ಲಿಪ್ಸ್ ನ ಕೆಳಗೆ ಒಂದು ಬೀಡ್‌ನ್ನು ಪಿಯರ್ಸ್‌ ಮಾಡಿದ್ದ. ಏಕೆಂದು ಕೇಳಿದಾಗ ಯಾವುದೇ ಪಾರ್ಟಿ ಅಥವಾ ಗ್ರೂಪ್‌ನಲ್ಲಿ ಹೋಗುವಾಗ ತಾನು ಸೆಂಟರ್‌ ಆಫ್‌ ಅಟ್ರ್ಯಾಕ್ಷನ್‌ ಆಗಲು ಹೀಗೆ ಮಾಡಿಸಿದ್ದೇನೆ ಎಂದ. ಇಂದಿನ ಯುವಕರು ಕೊಂಚ ವಿಭಿನ್ನವಾಗಿ ಮಾಡಲು ಬಯಸುತ್ತಾರೆ. ಆದ್ದರಿಂದ ಪಿಯರ್ಸಿಂಗ್‌ಗೆ ಹೆಚ್ಚು ಡಿಮ್ಯಾಂಡ್‌ ಇದೆ.

ಇನ್‌ಫೆಕ್ಷನ್‌ ಅಪಾಯ

23 (1)

ಪ್ರತಿ ನಾಣ್ಯಕ್ಕೂ 2 ಮುಖಗಳಿರುವಂತೆ ಪ್ರತಿ ವಸ್ತುವಿಗೂ ಸಕಾರಾತ್ಮಕ ಹಾಗೂ ನಕಾರಾತ್ಮಕವೆಂಬ 2 ಮುಖಗಳಿರುತ್ತವೆ. ಬ್ಯೂಟಿ ಸೆಲೂನ್‌ಗೆ ಒಬ್ಬ ಟೀನೇಜ್‌ ಹುಡುಗಿ ಬಂದಳು. ಅವಳ ಹೇರ್‌ ಸೆಟ್‌ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಅವಳು ಜೋರಾಗಿ ಕಿರುಚಿಕೊಂಡಳು.

ಏನಾಯಿತೆಂದು ಕೇಳಿದಾಗ ನಾನು ಯಾರನ್ನೋ ನೋಡಿಕೊಂಡು ನನ್ನ ಕಿವಿಯಲ್ಲೂ 4 ಕಡೆ ಚುಚ್ಚಿಸಿಕೊಂಡಿದ್ದೇನೆ. ಅಲ್ಲಿ ಇನ್‌ಫೆಕ್ಷನ್‌ ಆಗಿ ಗಂಟುಗಳಾಗಿವೆ. ಅಲ್ಲಿ ಎಷ್ಟು ನೋಯತ್ತದೆಯೆಂದರೆ ನಾನು ಯಾವ ಮಗ್ಗುಲಿಗೂ ಮಲಗಲಾಗುವುದಿಲ್ಲ. ಮಗ್ಗುಲಾಗಬೇಕೆಂದರೆ ನನ್ನ ಅಂಗೈಯನ್ನು ದಿಂಬು ಹಾಗೂ ಕಿವಿಯ ಮಧ್ಯದಲ್ಲಿ ಇಟ್ಟುಕೊಳ್ಳುತ್ತೇನೆ ಎಂದಳು.

2nuojfl (1)

ಅಷ್ಟು ನೋವಿದ್ದರೆ ಡಾಕ್ಟರ್‌ಗೆ ತೋರಿಸಬಹುದಿತ್ತು ಎಂದಾಗ, ಡಾಕ್ಟರ್‌ ಸರ್ಜರಿ ಮಾಡಿಸಬೇಕೆಂದರು. ಅದಕ್ಕೆ ನಾನು ಹಿಂದುಮುಂದು ನೋಡುತ್ತಿದ್ದೇನೆ. ಸ್ವಲ್ಪ ಆಲೋಚಿಸಿ ಸರ್ಜರಿ ಮಾಡಿಸಿಕೊಳ್ಳುತ್ತೇನೆ ಎಂದಳು.

ಪಿಯರ್ಸಿಂಗ್‌ನ್ನು ಶರೀರದ ಅನೇಕ ಭಾಗಗಳಲ್ಲಿ ಮಾಡಿಸಲಾಗುತ್ತದೆ. ಐ ಬ್ರೋಸ್‌ ಮೇಲೆ, ಕಣ್ಣುಗಳ ಪಕ್ಕದಲ್ಲಿ, ಲಿಪ್ಸ್ ನ ಕೆಳಭಾಗದಲ್ಲಿ, ಗಲ್ಲದಲ್ಲಿ, ಹೊಕ್ಕುಳದ ಮೇಲೆ, ನಾಲಿಗೆ ಮೇಲೆ ಎಲ್ಲಿಯವರೆಗೆಂದರೆ ಗುಪ್ತಾಂಗಗಳ ಮೇಲೂ ಸಹ ಮಾಡಿಸಲಾಗುತ್ತದೆ. ಪಿಯರ್ಸಿಂಗ್‌ನಲ್ಲಿ ಸಾಮಾನ್ಯವಾಗಿ ಆರಂಭದಲ್ಲಿ ಸಮಸ್ಯೆಯುಂಟಾಗುತ್ತದೆ. ಆದರೆ ಮುಂದೆ ಸರಿಹೋಗುತ್ತದೆ.

emo_piercing_tattoo_photo_030505_ (1)

ಬಾಡಿ ಪಿಯರ್ಸಿಂಗ್‌ಗೆ ಯಾವುದೇ ವಯಸ್ಸಿಲ್ಲ. ಆದರೆ 16 ಅಥವಾ ಅದಕ್ಕಿಂತ ಕೆಳ ವಯಸ್ಸಿನವರು ಪಿಯರ್ಸಿಂಗ್‌ ಮಾಡಿಸಿಕೊಳ್ಳಲು ತಮ್ಮ ಪೋಷಕರನ್ನು ಜೊತೆಗೆ ಇಟ್ಟುಕೊಳ್ಳಬೇಕು. ಆದರೆ ಇದೆಲ್ಲ ವಿದೇಶಗಳಲ್ಲಿ ಹೆಚ್ಚು.

nose-piercing2 (1)

ಪಿಯರ್ಸಿಂಗ್‌ನ ಹೀಲಿಂಗ್‌ ಟೈಂ ಇಯರ್‌ ಲೋಬ್‌

6 ವಾರಗಳು ಟಾಪ್‌ ಆಫ್‌ ದಿ ಇಯರ್‌  3 ರಿಂದ 4 ತಿಂಗಳು

ಬೆಲ್ಲಿ ಏರಿಯಾ 1 ವರ್ಷಕ್ಕೂ ಹೆಚ್ಚು

ನಾಲಿಗೆ 1 ರಿಂದ 2 ತಿಂಗಳು

ಮೂಗು 2 ರಿಂದ 3 ತಿಂಗಳು

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ