ಬಿಸಿಲಿನ ಉಷ್ಣತೆ, ಬಿಸಿ ಗಾಳಿ ನಿಮ್ಮ ತ್ವಚೆಗಷ್ಟೇ ಅಲ್ಲ, ಕೂದಲಿಗೂ ಹಾನಿ ತರುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಅವನ್ನು ಗಮನಿಸುವುದು ಬಹಳ ಅಗತ್ಯವಾಗಿದೆ.
ಈ ಋತುವಿನಲ್ಲಿಯೂ ಕೂದಲನ್ನು ಮೃದುವಾಗಿಸಿ ಹೊಳೆಯುವಂತೆ ಮಾಡುವುದು ಹೇಗೆಂದು ತಿಳಿಯೋಣ ಬನ್ನಿ……
ಕ್ಲೋರಿನ್ನಿಂದ ಪಾರಾಗಿ
ಬಿಸಿಲಿನಿಂದ ಪಾರಾಗಲು ಸ್ವಿಮ್ಮಿಂಗ್ ಪೂಲ್‌ಗಿಂತ ಉತ್ತಮವಾದದ್ದು ಯಾವುದಿದೆ? ಆದರೆ ಪೂಲ್‌ನ ನೀರಿನಲ್ಲಿರುವ ಕ್ಲೋರಿನ್ ಕೂದಲಿಗೆ ಬಹಳ ಹಾನಿಕಾರಕ. ಹೀಗಿರುವಾಗ ಪೂಲ್‌ನ ಮಜಾ ಪಡೆಯುವ ಮೊದಲು ಕೂದಲಿಗೆ ಅಗತ್ಯವಾಗಿ ಹೇರ್ ಆಯಿಲ್ ಹಚ್ಚಿಕೊಳ್ಳಿ ಮತ್ತು ಸ್ವಿಮ್ಮಿಂಗ್ ಕ್ಯಾಪ್ ಉಪಯೋಗಿಸಲು ಮರೆಯದಿರಿ.
ಪೂಲ್‌ನಿಂದ ಹೊರ ಬಂದ ಬಳಿಕ ಶ್ಯಾಂಪೂ ಉಪಯೋಗಿಸದೆ ಶವರ್‌ನಿಂದ ಸ್ನಾನ ಮಾಡಿ. ನೀವು ಆಗಾಗ್ಗೆ ಸ್ವಿಮ್ಮಿಂಗ್‌ಗೆ ಹೋಗುವುದಿದ್ದರೆ ಎಂದಾದರೂ ಹೇರ್ ಸ್ಪಾ ಕೂಡ ಮಾಡಿಸಿ. ನಿಮ್ಮ ಕೂದಲು ಸದಾ ಆರೋಗ್ಯವಾಗಿರುತ್ತದೆ.
ತಲೆಯ ತ್ವಚೆ ಜಿಡ್ಡಿನಿಂದ ಕೂಡಿದ್ದರೆ
ನಿಮ್ಮ ನೆತ್ತಿ ಜಿಡ್ಡಿನಿಂದ ಕೂಡಿದ್ದರೆ ಕಂಡೀಶನರ್ ಉಪಯೋಗಿಸಬೇಡಿ. ಅದು ನಿಮ್ಮ ಕೂದಲನ್ನು ಇನ್ನಷ್ಟು ಆಯ್ಲಿ ಮಾಡುತ್ತದೆ. ಕಂಡೀಶನರ್ ಉಪಯೋಗಿಸುವುದಿದ್ದರೆ ವಾಟರ್ ಬೇ,ಡ್ ಕಂಡೀಶನರ್ ಆರಿಸಿಕೊಳ್ಳಿ. ಕೂದಲಿನಿಂದ ಆಯಿಲ್ ಕಡಿಮೆ ಮಾಡಲು, ನೀರಿನಲ್ಲಿ ಕೊಂಚ ನಿಂಬೆರಸ ಬೆರೆಸಿ ಕೂದಲನ್ನು ತೊಳೆಯಿರಿ. ಕೂದಲು ಹೊಳೆಯುವಂತೆ ಮಾಡಲು ಅದರ ಮೇಲೆ ಆ್ಯಸ್ಟ್ರಿಂಜೆಂಟ್ ಸ್ಪ್ರೇ ಮಾಡಿ ಬಾಚಿರಿ.
ಶುಷ್ಕ ಕೂದಲು
ಚಳಿಗಾಲದಲ್ಲಿ ಕೂದಲಿನಲ್ಲಿ ಶುಷ್ಕತನದ ಸಮಸ್ಯೆ ಉಂಟಾಗುತ್ತದೆ. ಬೇಸಿಗೆಯಲ್ಲಿ ಈ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ಏಕೆಂದರೆ ನಾವು ಹೆಚ್ಚು ಕಾಲ ಏರ್ ಕಂಡೀಶನ್ಡ್ ಮುಚ್ಚಿದ ಕೋಣೆಗಳಲ್ಲಿ ಕಳೆಯುತ್ತೇವೆ. ಆಗ ಕೂದಲಿನ ಆರ್ದ್ರತೆ ಕಡಿಮೆಯಾಗಿ ಅವು ಶುಷ್ಕವಾಗುತ್ತವೆ.
ಈ ಸಮಸ್ಯೆಯಿಂದ ಪಾರಾಗಲು ಲೀವ್ ಇನ್ ಸೀರಮ್ ಸ್ಪ್ರೇ ಮಾಡಿ ಬಾಚಿ. ಇದಲ್ಲದೆ, ಸ್ವಲ್ಪ ಸಮಯದ ನಂತರ ಹೇರ್ ಆಯಿಲಿಂಗ್ ಅಗತ್ಯವಾಗಿ ಮಾಡಿ. ಕೂದಲಿಗೆ ತೆಳುವಾಗಿ ಸ್ಟೀಮಿಂಗ್ ಮತ್ತು ಬನಾನಾ ಹೇರ್ ಮಾಸ್ಕ್ ಉಪಯೋಗದಿಂದಲೂ ಶುಷ್ಕತನ ಹೋಗುತ್ತದೆ.
ನಿರ್ಜೀವ ಕೂದಲು
ಯಾವುದೇ ಋತುವಿನಲ್ಲೂ ಕೂದಲು ನಿರ್ಜೀವಾಗುವುದು ಸಾಮಾನ್ಯ. ಆದ್ದರಿಂದ ನಿಮ್ಮ ಲುಕ್ ಹಾಳಾಗುತ್ತದೆ. ಈ ಸಮಸ್ಯೆ ದೂರ ಮಾಡಲು ಕೂದಲನ್ನು ಕೋಕೋನಟ್ ಮಿಲ್ಕ್ ನಿಂದ ತೊಳೆಯಿರಿ. ಹೇರ್ ಎಕ್ಸ್ ಪರ್ಟ್‌ರಿಂದ ಟೆಕ್ಸ್ಚ ರಿಂಗ್ ಕೂಡ ಮಾಡಿಸಬಹುದು.
ಕೂದಲಿಗೆ ಬಣ್ಣ
ಬೇಸಿಗೆಯ ಸೆಕೆಯಿಂದ ಪಾರಾಗುವುದು ಈ ಋತುವಿನಲ್ಲಿ ಅಸಾಧ್ಯ. ಮನೆಯಿಂದ ಹೊರಹೋಗುವ ಮೊದಲು ಸ್ಕಾರ್ಫ್‌ನಿಂದ ಕೂದಲನ್ನು ಚೆನ್ನಾಗಿ ಕವರ್ ಮಾಡಿಕೊಳ್ಳಿ. ನೀವು ಹೆಚ್ಚು ಕಾಲ ಮನೆಯಿಂದ ಹೊರಗೆ ಬಿಸಿಲಿನಲ್ಲಿ ಇರಬೇಕಾದಾಗ ಸಂಜೆ ಅಗತ್ಯವಾಗಿ ಶವರ್ ಬಾತ್ ತೆಗೆದುಕೊಳ್ಳಿ. ಯಾವಾಗಲೂ ತಣ್ಣೀರಿನ ಶವರ್‌ನ್ನೇ ತೆಗೆದುಕೊಳ್ಳಿ. ಏಕೆಂದರೆ ತಣ್ಣೀರು ಹೇರ್ ಕಲರ್‌ಗೆ ಹಾನಿಯುಂಟು ಮಾಡುವುದಿಲ್ಲ.
ತಣ್ಣೀರು ಕೂದಲಿನಲ್ಲಿ ಕ್ಯೂಟಿಕಲ್‌ನ್ನು ಲಾಕ್ ಮಾಡುತ್ತದೆ. ಆದ್ದರಿಂದ ಅವು ಯಾವಾಗಲೂ ಹೊಳೆಯುವಂತೆ ಕಾಣುತ್ತದೆ. ಕೂದಲಿನ ಮೇಲೆ ಹೇರ್ ಸನ್‌ಸ್ಕ್ರೀನ್ ಎಸ್‌ಪಿಎಫ್ 10ನ್ನೂ ಉಪಯೋಗಿಸಬಹುದು.
ಅಂಟಂಟಾದ ಕೂದಲು
ಅಂಟಂಟಾದ ಕೂದಲನ್ನು ತೊಳೆಯಲು ಡ್ರೈ ಶ್ಯಾಂಪೂ ಉಪಯೋಗಿಸಿ. ನಿಂಬೆರಸದಲ್ಲಿ ಮೊಟ್ಟೆಯ ಬಿಳಿ ಭಾಗ ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಅದರಿಂದ ಕೂದಲನ್ನು ತೊಳೆಯಿರಿ. ವಾರಕ್ಕೆ 3 ಬಾರಿ ಹೀಗೆ ಮಾಡುವುದರಿಂದ ಕೂದಲಿನ ಅಂಟುವಿಕೆ ಕಡಿಮೆಯಾಗುತ್ತದೆ. ಚಿಗರೆಪುಡಿ ಬೆರೆತ ಸೀಗೆಕಾಯಿಯನ್ನು ಉಪಯೋಗಿಸುವುದರಿಂದಲೂ ಬೇಸಿಗೆಯಲ್ಲಿ ಕೂದಲಿಗೆ ಲಾಭವಿದೆ.
ತೆಳುವಾದ ಕೂದಲು
ಕೂದಲು ತೆಳುವಾಗುವುದು ಸಾಮಾನ್ಯ ಸಮಸ್ಯೆ. ಅದರಿಂದ ಪಾರಾಗಲು 30-40 ದಿನಗಳಿಗೊಮ್ಮೆ ಕೂದಲನ್ನು ಟ್ರಿಮ್ ಮಾಡಿಸಿ. ಅದರಿಂದ ಕೂದಲಿನ ಬೆಳವಣಿಗೆ ಹೆಚ್ಚುತ್ತದೆ. ಸೀಳು ತುದಿಯ ಕೂದಲಿನಿಂದಲೂ ಮುಕ್ತಿ ಸಿಗುತ್ತದೆ. ಮೃದುವಾದ ಬ್ರಿಸಲ್ಸ್ ಇರುವ ಬಾಚಣಿಗೆಯನ್ನು ಉಪಯೋಗಿಸಿ. ಒಂದು ವೇಳೆ ಕೂದಲು ಸಿಕ್ಕಾದರೆ ಬಲವಂತವಾಗಿ ಬಿಡಿಸುವ ಬದಲು ಕೈಗಳಿಂದ ಹಗುರವಾಗಿ ಬಾಚಿ ಸರಿಪಡಿಸಿ.
ಎಲ್ಲರೂ ನಿಮ್ಮ ಕೂದಲನ್ನು ಹೊಗಳಬೇಕೆಂಬ ಬಯಕೆ ಇದ್ದರೆ ಈ ಉಪಾಯವನ್ನು ನಿಮ್ಮದಾಗಿಸಿಕೊಂಡು ಕೂದಲಿನ ಸಮಸ್ಯೆಗೆ ಬೈ ಬೈ ಹೇಳಿ.
– ಕೆ ಮಮತಾ