ಸಮರ್ಪಕ ಮೇಕಪ್‌ ಗಾಗಿ ಚರ್ಮದ ಬಣ್ಣದ ದೃಷ್ಟಿಯಿಂದ ಸರಿಯಾದ ಕಲರ್‌ ನ ಕಾಸ್ಮೆಟಿಕ್ಸ್ ಆರಿಸಿ. ನಿಮ್ಮ ಚರ್ಮಕ್ಕೆ ಅತ್ಯುತ್ತಮ ಗ್ಲೋ ಬರಲು ಇದನ್ನು ಹೇಗೆ ಬಳಸಬೇಕು? ಈ ಸಲಹೆ ಅನುಸರಿಸಿ :

ಮೇಕಪ್ಮಾಡು ಹಂತಗಳು                                                                                                                 

ಪ್ರೈಮರ್‌, ಕನ್ಸೀಲರ್‌, ಫೌಂಡೇಶನ್‌, ಕಂಟೂರಿಂಗ್‌, ಹೈಲೈಟಿಂಗ್‌, ಕಣ್ಣಿನ ರೆಪ್ಪೆಗಳಿಗೆ ಬಣ್ಣ,  ಐ ಶ್ಯಾಡೋ, ಮಸ್ಕರಾ, ಐ ಬ್ರೋಸ್‌, ಕೆನ್ನೆಗೆ ರಂಗು, ತುಟಿಗೆ ಬಣ್ಣ.

ವಾಟರ್ಪ್ರೂಫ್ಮೇಕಪ್

ಬೇಸಿಗೆ ಅಥವಾ ಬಿಸಿಲು ದಟ್ಟವಾಗಿರುವ ದಿನಗಳಲ್ಲಿ ಮುಖದ ಬೆವರು ಹಾಗೂ ವಾತಾವರಣದ ಹ್ಯುಮಿಡಿಟಿ ಗಮನದಲ್ಲಿಟ್ಟು ಕೊಂಡು ಮೇಕಪ್‌ ಮಾಡಬೇಕಾಗುತ್ತದೆ. ಈ ಸೀಸನ್‌ ನಲ್ಲಿ ವಾಟರ್‌ ಪ್ರೂಫ್‌ ಮೇಕಪ್‌ ಮಾಡಿಕೊಳ್ಳುವುದೇ ಲೇಸು. ಆಗ ಇದು ಬಹಳ ಹೊತ್ತು ನಿಮ್ಮ ಮುಖದಲ್ಲಿ ಉಳಿಯುತ್ತದೆ ಹಾಗೂ ದಿನವಿಡೀ ನೀವು ಫ್ರೆಶ್‌ ಆಗಿರುತ್ತೀರಿ.

ಇದನ್ನು ಮಾಡಿಕೊಳ್ಳುವುದು ಹೇಗೆ?

02112011vk0171

ಮುಖ್ಯವಾಗಿ ಇದು ಡ್ರೈ ಸ್ಕಿನ್‌ ಗೆ ಬಹಳ ಹೊತ್ತಿನವರೆಗೂ ಉಳಿಯುತ್ತದೆ. ಏಕೆಂದರೆ ಇದು ಮುಖದಲ್ಲಿನ ಜಿಡ್ಡಿನಾಂಶವನ್ನು ಬೇಗ ಹೀರಿ ಕೊಳ್ಳುತ್ತದೆ. ಆದರೆ ಇದೇ ಮೇಕಪ್‌ ಆಯ್ಲಿ ಸ್ಕಿನ್‌ ಮೇಲೆ ಬಹಳ ಹೊತ್ತು ಉಳಿಯದು, ಗರಿಷ್ಠ 3-4 ಗಂಟೆ ಕಾಲ ಇರುತ್ತದೆ. ಬೇಸಿಗೆ ದಿನಗಳಲ್ಲಿ ಡ್ರೈ ಸ್ಕಿನ್‌ ನವರು ವಾಟರ್‌ ಪ್ರೂಫ್‌ ಮೇಕಪ್‌ ಮಾಡಿಕೊಂಡರೆ ಯಾವುದೇ ತೊಂದರೆ ಇರದು. ಆದರೆ ಚರ್ಮ ಜಿಡ್ಡಾಗಿದ್ದರೆ, ಆಗ ಮೇಕಪ್‌ ಮಾಡಲು ಈ ವಿಷಯಗಳತ್ತ ಗಮನ ಕೊಡಿ :

ನಿಮ್ಮ ಚರ್ಮ ಆಯ್ಲಿ ಆಗಿದ್ದರೆ, ಮೇಕಪ್‌ ಮಾಡುವ ಮೊದಲು ಹೀಟ್‌ ಸ್ವೆಟಿಂಗ್‌ ಕಡಿಮೆ ಮಾಡಲು ಐಸ್‌ ಉಜ್ಜಬೇಕು.

ಫೌಂಡೇಶನ್‌ ನ್ನು ಆದಷ್ಟು ಕಡಿಮೆ ಬಳಸಿ. ಇದರಿಂದ ಆಟೋಮೆಟಿಕಲಿ ಸ್ವೆಟಿಂಗ್‌ ಕಡಿಮೆ ಆಗುತ್ತದೆ, ಮೇಕಪ್‌ ಹೆಚ್ಚು ಹೊತ್ತಿರುತ್ತದೆ.

ಲಿಪ್‌ ಸ್ಟಿಕ್‌ಐ ಶ್ಯಾಡೋಗಾಗಿ ನ್ಯೂಡ್‌ ಶೇಡ್ಸ್ ಬಳಸಿಕೊಳ್ಳಿ. ಇದರಿಂದ ಮೇಕಪ್‌ ಚೆನ್ನಾಗಿ ಕಾಣಿಸುತ್ತದೆ. ಪಾರ್ಟಿಗಾಗಿ ಮೇಕಪ್ ಟಿಪ್ಸ್ ಪಾರ್ಟಿಗಾಗಿ ಡ್ರೆಸ್‌ ಮಾತ್ರವಲ್ಲದೆ ಮೇಕಪ್‌ ಕುರಿತಾಗಿಯೂ ವಿಶೇಷ ಗಮನಕೊಡಬೇಕು. ಪಾರ್ಟಿಗೆ ಹೋಗಲು ಅವಸರದಲ್ಲಿ ಧಾವಿಸಬೇಡಿ. ಒಂದು ಮೇಕಪ್‌ ಪ್ರಾಡಕ್ಟ್ ಸಂಪೂರ್ಣ ಒಣಗಿದ ನಂತರವೇ ಇನ್ನೊಂದನ್ನು ಹಚ್ಚಬೇಕು. ಮೇಕಪ್ ಮಾಡಿಕೊಳ್ಳುವಾಗ ಎಲ್ಲಕ್ಕಿಂತಲೂ ಮೊದಲು ಪ್ರೈಮರ್‌ ಹಚ್ಚಿಕೊಳ್ಳಿ. ಇದರಿಂದ ಮುಖದ ಕಲೆ ಗುರುತು ಮರೆಯಾಗುತ್ತದೆ, ಬೊಕ್ಕೆಗಳು ತುಂಬಿಕೊಳ್ಳುತ್ತವೆ, ಮೇಕಪ್‌ ಚೆನ್ನಾಗಿ ಹೊಳೆ ಹೊಳೆದು ಕಾಂತಿ ತುಂಬಿಕೊಳ್ಳುತ್ತದೆ.

ಪ್ರೈಮರ್‌ ನಂತರ ಕನ್ಸೀಲರ್‌ ಬಳಸಿರಿ. ಇದರಿಂದ ಮುಖದಲ್ಲಿನ ಎಲ್ಲಾ ಕೊರತೆಗಳೂ ಮರೆಯಾಗುತ್ತವೆ. ಮೇಕಪ್‌ ಗೆ ಒಂದು ಹೆಚ್ಚಿನ ಸ್ಟಾಂಡರ್ಡ್‌ ನೀಡಲು ಮುಖದ ಮೇಲೆ ಪ್ಲೆಕ್ಸಿ ಡಸ್ಟ್ ಸಿಂಪಡಿಸಿ. ಹುಬ್ಬು, ಕೆನ್ನೆಗಳ ಮೇಲೆ ಹೆಚ್ಚು ಸಿಂಪಡಿಸಿ. ಮೇಕಪ್ ಕಂಪ್ಲೀಟ್‌ ಆದನಂತರ ಆಗಾಗ ಅದಕ್ಕೆ ಟಚ್‌ ಅಪ್‌ ನೀಡುತ್ತಿರಿ.

ಆಫೀಸ್ಗೆ ಹೊರಡುವ ಮುನ್ನ

foundation-according-skintone

ಎಷ್ಟೋ ಹೆಂಗಸರು ಆಫೀಸಿಗೆ ಹೊರಡುವಾಗ ಮೇಕಪ್‌ ಏಕೆ ಎನ್ನುತ್ತಾರೆ. ಕೆಲವರು ಅಗತ್ಯಕ್ಕಿಂತ ಹೆಚ್ಚಿಗೇ ಮೇಕಪ್ ಮಾಡಿಕೊಳ್ಳುತ್ತಾರೆ. ಹೀಗಾಗಿ ಆಫೀಸಿಗೆ ಹೊರಡುವಾಗ ಲೈಟ್‌ ಮೇಕಪ್‌ ಮಾಡಿಕೊಳ್ಳುವುದರಿಂದ, ನೀವು ಹೆಚ್ಚು ಆಕರ್ಷಕವಾಗಿ ಕಂಗೊಳಿಸುವಿರಿ, ಜೊತೆಗೆ ಟ್ರೆಂಡಿ ಎನಿಸುವಿರಿ. ಇದಕ್ಕಾಗಿ ಕೆಲವು ಟಿಪ್ಸ್ :

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ