- ರಾಘವೇಂದ್ರ ಅಡಿಗ ಎಚ್ಚೆನ್.
ಈಗಾಗಲೇ ಕಿರು ಚಿತ್ರದ ಮೂಲಕ ಸಂಪೂರ್ಣ ಮನೋರಂಜನೆ ನೀಡಿದಂತಹ " ಅಮೃತಾಂಜನ್" ಪ್ರೇಕ್ಷಕರ ಮನಸನ್ನ ಗೆದ್ದು ಮಿಲಿಯನ್ಸ್ ಗಟ್ಟಲೆ ವ್ಯೂಸನ್ನು ಪಡೆದುಕೊಂಡಿತ್ತು. ಆ ನಿಟ್ಟಿನಲ್ಲಿ ಯುವ ಪ್ರತಿಭೆಗಳ ತಂಡ ಸೇರಿಕೊಂಡು "ಅಮೃತ ಅಂಜನ್" ಎಂಬ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ. ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ನಗರದ ಜಿ ಟಿ ಮಾಲ್ ನಲ್ಲಿರುವ ಉತ್ಸವ್ ಲಗಸಿಯಲ್ಲಿ ಆಯೋಜನೆ ಮಾಡಿದ್ದು , ವಿಶೇಷವಾಗಿ ಮಾಜಿ ಎಂಎಲ್ಸಿ , ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷೆ , ಹಾಗೂ ಹಿರಿಯ ನಟಿ ಜಯಮಾಲಾ ರವರ ಮೂಲಕ ಟ್ರೈಲರ್ ಲೋಕಾರ್ಪಣೆ ಮಾಡಲಾಯಿತು. ನಂತರ ಮಾತನಾಡತ ನಾನು ಈ ಕಾರ್ಯಕ್ರಮಕ್ಕೆ ಬರಲು ಕಾರಣ ಲೋಕೇಶ್ ನಾಗಪ್ಪ , ಅವರು ಇಂಜಿನಿಯರ್ ಈಗ ನಾವು ಇರುವಂತ ಮನೆಯನ್ನ ಕಟ್ಟಿಕೊಟ್ಟಿದವರು ಅವರೇ, ಬಹಳ ಸಜ್ಜನಿಕೆಯ ವ್ಯಕ್ತಿ , ಅವರದು ಶಾಲೆ ಇದೆ , ಒಮ್ಮೆ ಶಾಲಾ ಫಂಕ್ಷನ್ ಗೆ ಬನ್ನಿ ಎಂದಿದ್ದರು , ಆಗ ಭೇಟಿ ಮಾಡಿದಾಗ ನಮ್ಮ ಶಾಲೆಯಲ್ಲಿ ಸುಧಾಕರ್ ಎಂಬ ವಿದ್ಯಾರ್ಥಿ ಇದ್ದಾನೆ.

ಅವನಿಗೆ ಸಿನಿಮಾ ಬಗ್ಗೆ ಬಹಳಷ್ಟು ಆಸಕ್ತಿ ಇದೇ ಎಂದಿದ್ದರು, ಅದರಂತೆ ಸುಧಾಕರ್ ಬಹಳ ಟ್ಯಾಲೆಂಟೆಡ್ ಹುಡುಗ , ನಾನು ಆತನಿಗೆ ಡಿಗ್ರಿ ಮುಗಿದ ನಂತರ ಸಿನಿಮಾ ಗೆ ಬನ್ನಿ , ವಿದ್ಯೆ ಬಹಳ ಮುಖ್ಯ ಎಂದಿದೆ , ಅದರಂತೆ ಕೆಮಿಕಲ್ ಇಂಜಿನಿಯರ್ ಕೂಡ ಆದರೂ , ಒಮ್ಮೆ ಅವರ ತಂಡ ಮಾಡಿದಂತಹ ವೆಬ್ ಸೀರೀಸ್ ನೋಡಿದೆ ಎರಡುವರೆ ಕೋಟಿ ಜನ ವೀಕ್ಷಣೆ ಮಾಡಿದ್ದಾರೆ. ಈ ಕಾಮಿಡಿ ವೆಬ್ ಸೀರೀಸ್ ಇಷ್ಟು ಜನ ನೋಡಿದ್ದಾರೆಂದರೆ ಇವರ ಭವಿಷ್ಯ ಮುಂದೆ ಹೇಗಿರಬಹುದು ಎಂದುಕೊಂಡಿದ್ದೆ , ಬಹಳ ಆಸಕ್ತಿಯಿಂದ ಇಡೀ ತಂಡ ಕೆಲಸ ಮಾಡಿದ್ದು , ಕಲಾವಿದರು , ನಿರ್ದೇಶಕರು, ತಂತ್ರಜ್ಞರಿಗೆ ಎಲ್ಲರಿಗೂ ಒಳ್ಳೆಯದಾಗಲಿ. ಈ ಚಿತ್ರ ಇದೆ 30ರಂದು ಬಿಡುಗಡೆಯಾಗುತ್ತಿದೆ ಎಲ್ಲರೂ ಈ ಯುವ ಪ್ರತಿಭೆಗಳ ಚಿತ್ರವನ್ನ ನೋಡಿ ಬೆಂಬಲ ನೀಡಿ ಎಂದು ಕೇಳಿಕೊಂಡರು.

ಇನ್ನು ಈ ಚಿತ್ರದ ನಿರ್ಮಾಪಕ ಲೋಕೇಶ್ ಮಾತನಾಡುತ್ತ ನಮ್ಮ ಶಾಲೆಯಲ್ಲಿ ಓದಿದಂತಹ ಸುಧಾಕರ್ ಇವತ್ತು ಈ ಮಟ್ಟಕ್ಕೆ ಬೆಳೆದಿದ್ದಾನೆ ಎಂದರೆ ನನಗೆ ಬಹಳ ಖುಷಿ ಇದೆ. ಬಹಳಷ್ಟು ಜನ ನನ್ನ ಬಳಿ ಸುಧಾಕರ ಕೋಪಿಷ್ಟ ಇವನಿಗೆ ಯಾಕೆ ಇಷ್ಟು ಬೆಂಬಲ ಎಂದಿದ್ದಾಗ , ನಾನು ಅವನಲ್ಲಿ ಖಂಡಿತ ಛಲ , ಮುಂದೆ ಬೆಳೆಯುತ್ತಾನೆ ಅಂದುಕೊಂಡೆ ಅದರಂತೆ ಇಂದು ಸಿನಿಮಾ ಮಾಡಿ ನಿಮ್ಮ ಮುಂದೆ ಬಂದಿದ್ದಾನೆ. ನಾನೊಬ್ಬನೇ ನಿರ್ಮಾಪಕನೆಲ್ಲ ನನ್ನ ಜೊತೆ ಇನ್ನೊಬ್ಬರು ಸಾತ್ ನೀಡಿದ್ದಾರೆ. ನಾನು ಈ ಚಿತ್ರದಿಂದ ಹಣ ಬರುತ್ತೆ ಎಂದು ನಿರೀಕ್ಷೆ ಮಾಡಿಲ್ಲ. ನಾನು ತಂಡಕ್ಕೆ ಹೇಳಿದೀನಿ ಪಾಸಿಟಿವ್ ಗಿಂತ ನೆಗೆಟಿವ್ ಬಗ್ಗೆ ಹೆಚ್ಚು ಗಮನ ಇರಲಿ, ಗೆಲ್ಲಲು ಪ್ರಯತ್ನ ಮಾಡಿ , ಗೆಲುವು ಸೋಲು ನಮ್ಮ ಕೈಯಲ್ಲಿ ಇಲ್ಲ ಎಂದಿದ್ದೇನೆ. ಚಿತ್ರ ಚೆನ್ನಾಗಿದ್ದಾರೆ ಖಂಡಿತ ಎಲ್ಲರೂ ಬೆಂಬಲ ನೀಡುತ್ತಾರೆ. ಅದರಂತೆ ಇಂದು ನಮ್ಮ ಕಾರ್ಯಕ್ರಮಕ್ಕೆ ಹಿರಿಯ ನಟಿ ಜಯಮಾಲ ರವರು ಬಂದು ಟ್ರೈಲರ್ ಬಿಡುಗಡೆ ಮಾಡಿ ಬೆಂಬಲ ನೀಡಿದ್ದಾರೆ. ಎಲ್ಲರೂ ಚಿತ್ರ ನೋಡಿ ಪ್ರೋತ್ಸಾಹಿಸಿ ಎಂದರು.





