ವೈರಲ್ ಆದ ಬೃಂದಾ ಅಮೋರ

`ಪ್ರೇಮ ಪೂಜ್ಯಂ’ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ನಟಿ ಬೃಂದಾ ಆಚಾರ್ಯ. `ಕೌಸಲ್ಸಾ ಸುಪ್ರಜಾ ರಾಮ’ ಚಿತ್ರದಲ್ಲಿನ ಅವರ  `ಶಿವಾನಿ’ ಪಾತ್ರ ಎಲ್ಲರ ಮೆಚ್ಚುಗೆ ಗಳಿಸಿತ್ತು. ತಮ್ಮ ನಿರಂತರ ಕೆಲಸ, ಅವಕಾಶಗಳಿಗೆ ತಮಗೆ ಸಿಗುತ್ತಿರುವ ಸಿನಿಮಾ ತಂಡಗಳೇ ಕಾರಣ ಎಂದಿರುವ ಬೃಂದಾ, ಅಜಯ್‌ ರಾವ್ ಗೆ ಜೋಡಿಯಾಗಿರುವ `ಪಾರ್ಟ್‌ ನರ್‌’ ಸಿನಿಮಾದ ಅಮೋರ ಹಾಡು ವೈರಲ್ ಆಗಿದೆ. ಬೃಂದಾ ಇದೀಗ ಬ್ಯಾಕು ಟು ಬ್ಯಾಕ್‌ ಸಿನಿಮಾಗಳಲ್ಲೂ ಬಿಝಿ ಇದ್ದಾರೆ. `ಎಕ್ಸ್  ವೈ, ಮಾರುತ, ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ,’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಬೃಂದಾ, ನಾನೊಬ್ಬ ನಟಿ. ಸೆಟ್‌ ನಲ್ಲಿ ಕಂಫರ್ಟೆಬಲ್ ವಾತಾವರಣ, ಅಲ್ಲಿರುವವರು ಹಾಗೂ ಸಹಕಲಾವಿದರ ಜೊತೆ ಸ್ನೇಹಸಂಬಂಧ ಹೇಗೆ ಇದ್ದರೂ, ನನ್ನ ನಟನೆಯ ಕೆಲಸ ಮಾಡಲೇಬೇಕು. ಶ್ರಮ ಹಾಕಲೇಬೇಕು. ಕೆಲಸವನ್ನು ಎಂಜಾಯ್‌ ಮಾಡುತ್ತಾ ಮಾಡಿದಾಗ ಫಲಿತಾಂಶ ಉತ್ತಮವಾಗಿ ಸಿಗುತ್ತದೆ ಎಂದಿದ್ದಾರೆ ಬೃಂದಾ.

Brinda-acharya-(4)

ಬಿಗ್‌ ಬ್ರೇಕ್‌ ಪಡೆದ ಯಾಮಿ ಗೌತಮ್

ಇತ್ತೀಚೆಗೆ `ಆರ್ಟಿಕಲ್ 370′ ಸಿನಿಮಾದಲ್ಲಿ ತೋರಿದ ಅತ್ಯುತ್ತಮ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಬಾಲಿವುಡ್‌ ನಟಿ ಯಾಮಿ ಗೌತಮ್, ತಮ್ಮ ನಟನಾ ಜೀವನದ ಕೆವಲ ಮೈಲುಗಲ್ಲುಗಳನ್ನು ಹೇಳಿಕೊಂಡಿದ್ದಾರೆ. ಕೆಲವೊಮ್ಮೆ ನಮ್ಮ ಬ್ರೇಕಿಂಗ್‌ ಪಾಯಿಂಟ್ ಗಳೆಲ್ಲಾ ಮುಗಿದ ನಂತರವೇ ಬಿಗ್‌ ಬ್ರೇಕ್‌ ಸಿಗುವ ಸಂದರ್ಭಗಳು ಬರುತ್ತವೆ. ನನ್ನ ಜೀವನದಲ್ಲೂ ಹೀಗೆಯೇ ಆಗಿದೆ ಎಂದಿದ್ದಾರೆ ಯಾಮಿ. `ಉರಿ’ ಮತ್ತು `ಬಾಲಾ’ ಸಿನಿಮಾಗಳು ಬರುವ ಮುನ್ನ ನಾನು ಆಗಲೇ ಚಿತ್ರೋದ್ಯಮ ತೊರೆದು ಪ್ರಶಾಂತ ಜೀವನ ನಡೆಸಲು ನಿರ್ಧರಿಸಿದ್ದೆ. ನನ್ನೂರು ಹಿಮಾಚಲ ಪ್ರದೇಶಕ್ಕೆ ತೆರಳಿ ಸಂಪೂರ್ಣ ವಿಭಿನ್ನ ಜೀವನ ಆರಂಭಿಸುವ ಕನಸು ಕಂಡಿದ್ದೆ. ಆದರೆ, ನಂತರ ನನ್ನ ಸಿನಿ ಬದುಕಿನ ಚಿತ್ರಣವೇ ಬದಲಾಯಿತು ಎಂದಿದ್ದಾರೆ ಯಾಮಿ ಗೌತಮ್.

Yami-Gowthm-(6)

ಬೂಮ್ ಬೂಮ್ ಶಕಲಕ ಎಂದ ರಚನಾ

ಕನ್ನಡ ಹಾಗೂ ತೆಲುಗು ಚಿತ್ರಗಳ ಉದಯೋನ್ಮುಖ ನಟಿ ರಚನಾ ಇಂದರ್‌, `ಲವ್ ಮಾಕ್‌ ಟೇಲ್‌’ ಚಿತ್ರದ ಮೂಲಕ ಚಿತ್ರೋದ್ಯಮಕ್ಕೆ ಅಡಿಯಿಟ್ಟರು. `ಹರಿಕಥೆ ಅಲ್ಲ ಗಿರಿಕಥೆ, ತ್ರಿಬಲ್ ರೈಡಿಂಗ್‌, ನಾಟ್‌ ಔಟ್‌, ನಾನು ಮತ್ತು ಗುಂಡ-2, ಲವ್ 360, ತೀರ್ಥರೂಪು ತಂದೆಯವರಿಗೆ, ಫೈರ್‌ ಫ್ಲೈ’ ಸಿನಿಮಾ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಬಬ್ಲಿ ಬಬ್ಲಿಯಾಗಿ ಕಾಣಿಸಿಕೊಂಡಿದ್ದರು. ಕ್ಯೂಟ್‌ ಪಾತ್ರಗಳಿಂದಲೇ ಕನ್ನಡಿಗರ ಮನಗೆದ್ದಿರುವ ನಟಿ ರಚನಾ ಇಂದರ್‌, ಈಗ `ಸ್ಪಾರ್ಕ್‌’ ಚಿತ್ರದ ಎನರ್ಜೆಟಿಕ್‌ `ಬೂಮ್ ಬೂಮ್ ಶಕಲಕ’ ಹಾಡಿಗೆ ಬೋಲ್ಡ್ ಆಗಿ ಹೆಜ್ಜೆ ಹಾಕಿದ್ದಾರೆ.

Rachana-Inder-(1)

ಗ್ಲಾಮರಸ್‌ ಬೊಂಬೆ ಸಂಗೀತಾ ಶೃಂಗೇರಿ

ಸ್ಯಾಂಡಲ್ ವುಡ್‌ ನಲ್ಲಿ ಸಕ್ರಿಯರಾಗಿರುವ ಪ್ರಮುಖ ನಟಿ ಸಂಗೀತಾ ಶೃಂಗೇರಿ. ಕಾಲೇಜು ದಿನಗಳಲ್ಲಿ ಎನ್‌ಸಿಸಿ ಕೆಡೆಟ್‌ ಆಗಿದ್ದ ಸಂಗೀತಾ, ಕರ್ನಾಟಕ ಖೋಖೋ ತಂಡ ಪ್ರತಿನಿಧಿಸಿ ಗೋಲ್ಡ್ ಮೆಡಲ್ ಪಡೆದಿದ್ದರು. 2014ರಲ್ಲಿ ಸಂಗೀತಾ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯ ಟಾಪ್‌ ಫೈನಲಿಸ್ಟ್ ಗಳಲ್ಲಿ ಸ್ಥಾನ ಪಡೆದಿದ್ದರು. ಅಲ್ಲದೇ ವರ್ಲ್ಡ್ ಸೂಪರ್‌ ಮಾಡೆಲ್ ‌ಸ್ಪರ್ಧೆಯಲ್ಲಿ ಭಾಗವಹಿಸಿ, ರನ್ನರ್‌ ಅಪ್‌ ಆಗಿದ್ದರು.`ಹರಹರ ಮಹಾದೇವ’ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿಕೊಟ್ಟ ಅವರು, ಪಾರ್ವತಿ ಪಾತ್ರದ ಮೂಲಕ ಖ್ಯಾತಿ ಗಳಿಸಿದರು. ಸಂಗೀತಾ ಎ+ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ `ಸಾಲಗಾರರ ಸಹಕಾರ ಸಂಘ, 777 ಚಾರ್ಲಿ, ಲಕ್ಕಿಮ್ಯಾನ್‌, ಶಿವಾಡಿ ಸುರತ್ಕಲ್’ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಂಗೀತಾ ಅವರಿಗೆ ಹೆಸರು ತಂದುಕೊಟ್ಟ ಚಿತ್ರ `777 ಚಾರ್ಲಿ.’ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ರಿಲೀಸ್‌ ಆಗಿ ಸದ್ದು ಮಾಡಿತ್ತು. ಬಿಗ್‌ ಬಾಸ್‌ ಕನ್ನಡ ಸೀಸನ್‌-10ರಲ್ಲೂ ಸ್ಪರ್ಧಿಯಾಗಿ ಪಾಲ್ಗೊಂಡಿದ್ದರು.

Sangeehtha-sringeri-(6)

ದುಬೈ ಚಿನ್ನದ ಆಪರೇಷನ್‌ ನಲ್ಲಿ ನಿಶ್ವಿಕಾ ನಾಯ್ಡು!

ಕ್ಯೂಟ್‌ ಪಾತ್ರಗಳಿಂದಾಚೆಗೆ ಒಂದು ಸ್ಟೈಲಿಶ್‌ ಬೋಲ್ಡ್ ಅವತಾರದಲ್ಲಿ ಚಿನ್ನದ ಸ್ಮಗ್ಲಿಂಗ್‌ ಮಾಡಲು ಸಜ್ಜಾಗಿದ್ದಾರೆ ಸ್ಯಾಂಡಲ್ ವುಡ್‌ ನ ಬೋಲ್ಡ್ ಬ್ಯೂಟಿ ನಿಶ್ವಿಕಾ ನಾಯ್ಡು. ಸಿನಿಮಾಗಳಲ್ಲಿ ಪಕ್ಕದ್ಮನೆ ಹುಡುಗಿಯಾಗಿ ಮನಗೆದ್ದರು. ರಿಯಾಲಿಟಿ ಶೋ ಒಂದರ ಜಜ್‌ ಆಗಿ ವೀಕ್ಷಕರ ಪ್ರೀತಿ ಸಂಪಾದಿಸಿದರು. ಇದೀಗ OTT ಅಡ್ಡಾಕ್ಕೆ ಎಂಟ್ರಿ ಕೊಟ್ಟಿರುವ ನಿಶ್ವಿಕಾ, ಗೋಲ್ಡನ್‌ ಗರ್ಲ್ ಆಗಿ `ಆಪರೇಷನ್‌ ಬಂಗಾರ’ ವೆಬ್‌ ಸೀರೀಸ್‌ ನಲ್ಲಿ ನಟಿಸುತ್ತಿದ್ದಾರೆ. ಮಾಡೆಲಿಂಗ್‌ ಕ್ಷೇತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ನಿಶ್ವಿಕಾ, `ಅಮ್ಮ ಐ ಲವ್ ಯೂ’ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದರು. ಇದಕ್ಕೂ ಮುನ್ನ `ವಾಸು ನಾನ್‌ ಪಕ್ಕಾ ಕಮರ್ಷಿಯಲ್’ ಸಿನಿಮಾದಲ್ಲಿ ನಟಿಸಿದ್ದರು. `ಪಡ್ಡೆಹುಲಿ, ಜೆಂಟಲ್ ಮೆನ್‌, ಕಾಳಿದಾಸ ಕನ್ನಡ ಮೇಷ್ಟ್ರು, ಸಖತ್‌, ರಾಮಾರ್ಜುನ, ಗಾಳಿಪಟ-2, ದಿಲ್ ‌ಪಸಂದ್‌, ಗುರುಶಿಷ್ಟರು, ಕರಟಕ ದಮನಕ’ ಸಿನಿಮಾಗಳಲ್ಲಿ ನಟಿಸಿದ್ದಾರೆ.

Nishvika-naidu-(4)

ನಿತ್ಯಾ ಮೆನನ್‌ ಡಾರ್ಕ್‌ ಕಾಮಿಡಿ

ಬಾಲ ಕಲಾವಿದೆಯಾಗಿ ಚಿತ್ರೋದ್ಯಮಕ್ಕೆ ಕಾಲಿಟ್ಟ ನಟಿ ನಿತ್ಯಾ ಮೆನನ್‌, ನಂತರ ನಾಯಕಿಯಾಗಿ ಕಳೆದ ಮೂರು ದಶಕಗಳಿಂದ ತೆರೆ ಮೇಲೆ ಮಿಂಚುತ್ತಿದ್ದಾರೆ. ಪಾತ್ರಗಳ ಆಯ್ಕೆ ವಿಷಯದಲ್ಲಿ ಚ್ಯೂಸಿಯಾಗಿರುವ ಅವರು, ಹಾರರ್‌ ಕಾಮಿಡಿ ಚಿತ್ರಗಳ ನಿರ್ದೇಶಕ ಡೀಕೆ ಅವರ ಬಹುಭಾಷಾ `ಡಾರ್ಕ್‌ ಕಾಮಿಡಿ’ ಸಿನಿಮಾಗೆ ಓ.ಕೆ ಎಂದಿದ್ದಾರೆ. ಕೇವಲ ಗ್ಲಾಮರ್‌ ಸಿನಿಮಾಗಳಿಗೆ ಮಾತ್ರ ಸೀಮಿತವಾಗದೆ ನಟನೆಗೆ ಹೆಚ್ಚು ಅವಕಾಶ ಇರುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ನಿತ್ಯಾ ಮೆನನ್‌ ಕನ್ನಡ, ತಮಿಳು, ತೆಲುಗು, ಮಲೆಯಾಳಂ ಸೇರಿದಂತೆ ಹಲವಾರು ಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ `7 ಓ ಕ್ಲಾಕ್‌’ ಸಿನಿಮಾ ಮೂಲಕ ಸ್ಯಾಂಡಲ್ ವುಡ್‌ ಗೆ ಪಾದಾರ್ಪಣೆ ಮಾಡಿದ್ದ ಅವರು, ಆ ಬಳಿಕ `ಮೈನಾ’ ಹಾಗೂ `ಕೋಟಿಗೊಬ್ಬ-2′ ಸಿನಿಮಾಗಳಲ್ಲಿ ನಟಿಸಿ ಭಾರೀ ಪ್ರಶಂಸೆ ಪಡೆದುಕೊಂಡಿದ್ದರು. ಸಿನಿಮಾ ಮಾತ್ರವಲ್ಲದೇ ಹಿನ್ನಲೆ ಗಾಯಕಿಯಾಗಿಯೂ ಹಲವು ಹಾಡುಗಳಿಗೆ ಧ್ವನಿ ನೀಡಿದ್ದಾರೆ. ನಿತ್ಯಾ ಮೆನನ್‌ ಇತ್ತೀಚೆಗೆ `ತಿರುಚಿತ್ರಂಬಲಂ’ ತಮಿಳು ಸಿನಿಮಾಗಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದ್ದಾರೆ.

Nithya-menon-6

ಕನ್ನಡದಲ್ಲಿ ಖುಷಿಯಾದ ಕಾಶಿಮಾ

ಸ್ವಸಾಮರ್ಥ್ಯ ಮತ್ತು ಪ್ರತಿಭೆಯಿಂದ ವಿಭಿನ್ನವಾಗಿ ನಿಲ್ಲಲು ಹೊರಟಿರುವ ಬೋಲ್ಡ್ ಹಾಗೂ ಬ್ಯೂಟಿಫುಲ್ ನಟಿ ಕಾಶಿಮಾ. ಸ್ಯಾಂಡಲ್ ವುಡ್‌ ನ `ನೀವು ನಂಗೇ ಅಲ್ಲಾ’ ಸಿನಿಮಾದಲ್ಲಿ ಖುಷಿಯಾಗಿಯೇ ಖುಷಿ ಪಾತ್ರ ನಿರ್ವಹಿಸುವ ಕಾಶಿಮಾ ಕನ್ನಡ, ತೆಲುಗು ಸಿನಿಮಾ ಹಾಗೂ ವೆಬ್‌ ಸೀರೀಸ್‌ ಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ಗಮನ ಸೆಳೆದರು. ನನ್ನ ಅದೃಷ್ಟಕ್ಕೆ ನನಗೆ ಒಂದೇ ಥರದ ಪಾತ್ರಗಳು ಬರುತ್ತಿಲ್ಲ. ನಾನು ಮೊದಲ ಕನ್ನಡ ಚಿತ್ರದಲ್ಲಿ ಹಳ್ಳಿ ಹುಡುಗಿ ಪಾತ್ರ ಮಾಡಿದ್ದರಿಂದ ಒಂದೆರಡು ಹಳ್ಳಿ ಸಿನಿಮಾಗಳೇ ಬಂದವು. ಒಂದೇ ರೀತಿಯ ಪಾತ್ರ ಬೇಡವೆಂದೇ ಸ್ವಲ್ಪ ಸಮಯ ತೆಗೆದುಕೊಂಡು ಕನ್ನಡ ಸಿನಿಮಾ ಓ.ಕೆ ಮಾಡಿದೆ. ಈಗ ವಿಭಿನ್ನ ಪಾತ್ರಗಳು ಅರಸಿ ಬರುತ್ತಿವೆ. ಅವುಗಳಲ್ಲಿ ಬೆಸ್ಟ್ ಆಯ್ಕೆ ಮಾಡುತ್ತಿದ್ದೇನೆ ಎನ್ನುತ್ತಾರೆ ಕಾಶಿಮಾ.

Kashima-(14)

ಸುಖಾಗಮನ ಬಯಸುವ ಸಂಜನಾ

Sanjana-Anand-(4)

ಸಂಜನಾ ಆನಂದ್‌ ಕನ್ನಡ ಚಿತ್ರರಂಗದಲ್ಲಿ ಸಕ್ರಿಯಾಗಿರುವ ಉದಯೋನ್ಮುಖ ನಟಿ. `ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ಚಿತ್ರದ ಮೂಲಕ ಚಂದನವನಕ್ಕೆ ನಾಯಕಿಯಾಗಿ ಪ್ರವೇಶಿಸಿದ ಸಂಜನಾ, ಎಂಜಿನಿಯರಿಂಗ್‌ ಪದವಿ ಪಡೆದು, ಡೆಲ್ ‌ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಭರತನಾಟ್ಯ ಕಲಾವಿದೆಯೂ ಆಗಿದ್ದ ಇವರಿಗೆ ಆಕಸ್ಮಿಕವೆಂಬಂತೆ `ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ಚಿತ್ರದಲ್ಲಿ ಅವಕಾಶ ಸಿಕ್ಕಿತು. ನಂತರ ಪೂರ್ಣವಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳಬೇಕೆಂದು ಉದ್ಯೋಗಕ್ಕೆ ರಾಜೀನಾಮೆ ನೀಡಿದರು. ಸದ್ಯ ಕನ್ನಡದ ಬೇಡಿಕೆಯ ಯುವ ನಟಿಯಾಗಿರುವ ಸಂಜನಾ ಆನಂದ್‌, ತೆಲುಗು ಚಿತ್ರರಂಗದಲ್ಲೂ ತೊಡಗಿಸಿಕೊಂಡಿದ್ದಾರೆ. `ಕುಶ್ಕ, ಸಲಗ, ಕ್ಷತ್ರಿಯ, ಮಳೆಬಿಲ್ಲು, ವಿಂಡೋಸೀಟ್‌, ಶೋಕಿವಾಲ’ ಚಿತ್ರಗಳಲ್ಲಿ ನಟಿಸಿರುವ ಸಂಜನಾ, ಇದೀಗ `ತಮ್ಮ ಸುಖಾಗಮನ ಬಯಸುವ’ ಚಿತ್ರದಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ಗೆ ಜೋಡಿಯಾಗಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ