ಜಾಗೀರ್ದಾರ್*.

ಕಮಲ ಫಿಲಂಸ್ ಲಾಂಛನದಲ್ಲಿ ಚಂದ್ರಶೇಖರ್ ಕೆ ಅವರು ನಿರ್ಮಿಸುತ್ತಿರುವ, "ಹಫ್ತಾ" ಚಿತ್ರದ ಖ್ಯಾತಿಯ ಪ್ರಕಾಶ್ ಹೆಬ್ಬಾಳ್ ನಿರ್ದೇಶಿಸುತ್ತಿರುವ ಹಾಗೂ ತಮ್ಮ ಅಭಿನಯದ ಮೂಲಕ ಅಭಿಮಾನಿಗಳ ಮನಸೂರೆಗೊಂಡಿರುವ ಕಾಕ್ರೋಚ್ ಸುಧೀ ನಾಯಕನಾಗಿ ನಟಿಸುತ್ತಿರುವ ನೂತನ ಚಿತ್ರ "ಚೈಲ್ಡೂ". ಇತ್ತೀಚಿಗೆ ಈ ಚಿತ್ರದ ಶೀರ್ಷಿಕೆಯನ್ನು ಸಮಾಜ ಸೇವಕರಾದ ಕಿರಣ್ ರೆಡ್ಡಿ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

childhood

"ಹಫ್ತಾ" ಚಿತ್ರದ ನಂತರ ನಾನು ನಿರ್ದೇಶಿಸುತ್ತಿರುವ ಚಿತ್ರವಿದು. ಆಕ್ಷನ್, ಕಾಮಿಡಿ, ಸೆಂಟಿಮೆಂಟ್, ಲವ್ ಹೀಗೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳನ್ನೊಳಗೊಂಡಿರುವ ಚಿತ್ರವಿದು. ಇಂದಿನಿಂದಲೇ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭವಾಗಲಿದೆ. ತಾರಾ ಅನುರಾಧ, ಅಶ್ವಿನ್ ಹಾಸನ್, ವಲ್ಲಭ್, ಉದಯ್ ಪ್ರಸನ್ನ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿರುತ್ತಾರೆ. ರಂಗಾಯಣ ರಘು ಅವರ ಜೊತೆಗೂ ಮಾತುಕತೆ ನಡೆಯುತ್ತಿದೆ. ಸುಧೀ ಅವರು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡುವುದಾಗಿ ನಿರ್ದೇಶಕ ಪ್ರಕಾಶ್ ಹೆಬ್ಬಾಳ್ ತಿಳಿಸಿದರು.

childhood 2

ಇದು ನಾನು ನಾಯಕನಾಗಿ ನಟಿಸುತ್ತಿರುವ ಮೂರನೇ ಚಿತ್ರ. ನಿರ್ದೇಶಕ ಪ್ರಕಾಶ್ ಅವರು ಹೇಳಿದ ಕಥೆ ಬಹಳ ಇಷ್ಟವಾಯಿತು. ಅದಕ್ಕಿಂತ ನೀವು ಈ ಚಿತ್ರದ ನಾಯಕ ಅಂತ ಹೇಳಿದ್ದು ಖುಷಿಯಾಯಿತು‌. ನನಗೆ ತಕ್ಕಂತಹ ಕಥೆಯನ್ನು ನಿರ್ದೇಶಕರು ಮಾಡಿದ್ದಾರೆ. ರೌಡಿಸಂ ಚಿತ್ರವಾದರೂ, ಲವ್ ಕೂಡ ಇರುತ್ತದೆ‌. ನನ್ನ ಲುಕ್ ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಿದ ನಟ ಕಾಕ್ರೋಜ್ ಸುಧೀ, ತಮ್ಮ ಬೆಳವಣಿಗೆಗೆ ಕಾರಣರಾದ ಮಾಧ್ಯಮದವರಿಗೆ ಧನ್ಯವಾದ ಹೇಳಿದರು.

ಛಾಯಾಗ್ರಾಹಕ ಸಿದ್ದು ಕೆಂಚನಹಳ್ಳಿ, ಕಲಾವಿದರಾದ ಅಶ್ವಿನ್ ಹಾಸನ್, ವಲ್ಲಭ್ ಹಾಗೂ ಉದಯ್ ಪ್ರಸನ್ನ ಮುಂತಾದರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ