ಮೈಸೂರು ದಸರಾ ಎಂದರೆ ಕೇವಲ ವಿದ್ಯುತ್ ದೀಪಗಳಿಂದ ಕಂಗೊಳಿಸುವ ಅರಮನೆ, ಜಂಬೂ ಸವಾರಿ, ಅಂಬಾರಿ ಹೊತ್ತ ಆನೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಷ್ಟೇ ಅಲ್ಲ. ಅದರ ಹಿಂದೆ ಶತಮಾನಗಳ ಇತಿಹಾಸವಿರುವ ರಾಜಪರಂಪರೆ, ಧಾರ್ಮಿಕ ಆಚರಣೆಗಳು, ಕುಲದೇವತೆಯ ಆರಾಧನೆ ಮತ್ತು ಒಡೆಯರ್ ವಂಶದ ಸಂಪ್ರದಾಯಗಳಿವೆ.

ಹೊರಜಗತ್ತಿಗೆ ಕಾಣಿಸುವುದು ಸರ್ಕಾರ ಆಯೋಜಿಸುವ ಸಾರ್ವಜನಿಕ ದಸರಾ. ಆದರೆ ಅರಮನೆಯ ಒಳಗೆ ನಡೆಯುವ ಖಾಸಗಿ ದರ್ಬಾರ್ (ಖಾಸ್ ದರ್ಬಾರ್) ಇಂದಿಗೂ ಒಡೆಯರ್ ರಾಜವಂಶದ ಸಂಪ್ರದಾಯದ ಪ್ರಮುಖ ಭಾಗವಾಗಿದೆ. ಈ ಆಚರಣೆಗಳಲ್ಲಿ ರಾಜವಂಶದ ಸದಸ್ಯರು ಪಾಲ್ಗೊಳ್ಳುತ್ತಾರೆ; ಅರಮನೆಯ ಧಾರ್ಮಿಕ ವಿಧಿವಿಧಾನಗಳು ಮತ್ತು ರಾಜಮರ್ಯಾದೆಗಳಿಗೆ ವಿಶೇಷ ಸ್ಥಾನವಿರುತ್ತದೆ. ಈ ಖಾಸಗಿ ದರ್ಬಾರ್ ಹೇಗೆ ನಡೆಯುತ್ತದೆ? ಹತ್ತು ದಿನಗಳಲ್ಲಿ ಯಾವೆಲ್ಲ ಪೂಜೆಗಳು ನಡೆಯುತ್ತವೆ? ಅರಸರ ದಿನಚರಿ ಹೇಗಿರುತ್ತದೆ? ಇವೆಲ್ಲವನ್ನೂ ಐತಿಹಾಸಿಕ ಹಿನ್ನೆಲೆ ಮತ್ತು ಇಂದಿನ ಆಚರಣೆಗಳ ಆಧಾರದಲ್ಲಿ ತಿಳಿಯೋಣ.

Yaduveer Krishnadatta Wodeyar Performs Traditional Ayudha Puja at Mysore Palace - www.lokmattimes.com

ಮಹಾರಾಜರ ದಸರಾ, ಜನೋತ್ಸವದ ನಾಡ ಹಬ್ಬ ಆಗಿದ್ದು ಹೇಗೇ?

ಸ್ವಾತಂತ್ರ್ಯಾನಂತರವೂ 1969ರವರೆಗೆ ಶ್ರೀ ಜಯಚಾಮರಾಜ ಒಡೆಯರ್ ಅವರ ನೇತೃತ್ವದಲ್ಲಿ ಮೈಸೂರು ದಸರಾ ಅರಮನೆಯ ರಾಜಮರ್ಯಾದೆಗಳೊಂದಿಗೆ ನಡೆಯುತ್ತಿತ್ತು. ಆದರೆ 1970ರಲ್ಲಿ ರಾಜಧನ (ಪ್ರಿವಿ ಪರ್ಸ್) ರದ್ದಾದ ಬಳಿಕ, ಮಹಾರಾಜರು ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಸಂಪ್ರದಾಯಕ್ಕೆ ತೆರೆ ಬಿದ್ದಿತು. ತಾವು ಸಾಮಾನ್ಯ ಪ್ರಜೆಯಾಗಿರುವುದರಿಂದ ರಾಜಮೆರವಣಿಗೆಯಲ್ಲಿ ಪಾಲ್ಗೊಳ್ಳುವುದು ಸೂಕ್ತವಲ್ಲವೆಂದು ಜಯಚಾಮರಾಜ ಒಡೆಯರ್ ಅವರು ಹಿಂದೆ ಸರಿದರು. ಅರಮನೆಯೊಳಗೆ ಮಾತ್ರ ನಾಡಿನ ಸುಭಿಕ್ಷಕ್ಕಾಗಿ ರತ್ನಸಿಂಹಾಸನದ ಮೇಲೆ ಪಟ್ಟದ ಕತ್ತಿಯನ್ನಿಟ್ಟು ಪೂಜಾ ವಿಧಿಗಳನ್ನು ಮುಂದುವರಿಸಲಾಯಿತು.

ನವರಾತ್ರಿ 6ನೇ ದಿನ: ಮೈಸೂರು ಅರಮನೆಯಲ್ಲಿ ಸರಸ್ವತಿ ಪೂಜೆ | Mysuru Dasara 2021: Saraswati Puja Held At Mysuru Palace On 6th Day Of Navaratri - Kannada Oneindia

1970ರಲ್ಲಿ ಸಾರ್ವಜನಿಕ ಜಂಬೂಸವಾರಿ ನಡೆಯದ ಕಾರಣ, ನೂರಾರು ವರ್ಷಗಳ ರಾಜಪರಂಪರೆಯ ದಸರಾ ಮುಂದುವರಿಯುವುದೇ ಎಂಬ ಆತಂಕ ಜನರಲ್ಲಿ ಮೂಡಿತು. ಅರಮನೆಯ ದಸರಾ ಮೆರವಣಿಗೆಯನ್ನು ಹೇಗೆ ಮುಂದುವರಿಸಬೇಕು ಎಂಬ ಪ್ರಶ್ನೆಗೆ ತಕ್ಷಣದ ಪರಿಹಾರವೂ ಇರಲಿಲ್ಲ. ಆದರೆ ಮೈಸೂರಿನ ಸಾಂಸ್ಕೃತಿಕ ಗುರುತಾಗಿದ್ದ ದಸರಾ ನಿಲ್ಲಬಾರದು ಎಂಬ ಒತ್ತಾಯ ಜನರಲ್ಲಿ ಬಲವಾಯಿತು.

From 'Royal' Dasara to people's festivalಈ ಹಿನ್ನೆಲೆಯಲ್ಲಿ ಕನ್ನಡ ಚಳವಳಿಗಾರರು ಮತ್ತು ನಗರದ ಪ್ರಮುಖರು ಜನತಾ ದಸರಾ ಆಯೋಜಿಸಲು ಮುಂದಾದರು. ಮಹಾರಾಜರ ಬದಲಿಗೆ ಭಾರತಮಾತೆಯ ಪ್ರತಿಮೆಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವ ನಿರ್ಧಾರ ಕೈಗೊಳ್ಳಲಾಯಿತು. ಪ್ರಸಿದ್ಧ ಕಲಾವಿದ ಪದ್ಮಶ್ರೀ ಎಸ್.ಎನ್. ಸ್ವಾಮಿ ಅವರು ರೂಪಿಸಿದ, ನರಸಿಂಹಾಚಾರ್ ಅವರು ಮರದಲ್ಲಿ ಕೆತ್ತಿದ ಭಾರತಮಾತೆಯ ಪ್ರತಿಮೆಯನ್ನು 1971ರ ಸೆಪ್ಟೆಂಬರ್ 20ರಂದು ಶ್ರೀರಾಮ ಎಂಬ ಆನೆಯ ಮೇಲೆ ಕೂರಿಸಿ ಮಹಾರಾಜಾ ಕಾಲೇಜಿನ ಪೆವಿಲಿಯನ್‌ನಿಂದ ಮೆರವಣಿಗೆ ಹೊರಡಿಸಲಾಯಿತು. ವಿವಿಧ ಪೊಲೀಸ್ ಪಡೆಗಳು, ಎನ್‌ಸಿಸಿ, ಸ್ಕೌಟ್ಸ್, ಬ್ಯಾಂಡ್‌ಗಳು, ಜನಪದ ತಂಡಗಳು ಮತ್ತು ಸ್ತಬ್ಧಚಿತ್ರಗಳು ಸೇರಿದಂತೆ 77 ತಂಡಗಳು ಪಾಲ್ಗೊಂಡಿದ್ದವು.

ಮಹಾರಾಜ ಜಯಚಾಮರಾಜ ಒಡೆಯರ್ ಅವರು ಆ ಸಮಾರಂಭಕ್ಕೆ ವೀಕ್ಷಕರಾಗಿ ಆಗಮಿಸಿದಾಗ ಜನರು ಅಪಾರ ಗೌರವದಿಂದ ಸ್ವಾಗತಿಸಿದರು. ಆದರೆ ಅವರು ವೇದಿಕೆಯ ಮೇಲೆ ಕುಳಿತುಕೊಳ್ಳದೆ, ಸಾಮಾನ್ಯ ವೀಕ್ಷಕರಂತೆ ನೆಲಮಟ್ಟದಲ್ಲಿ ಕುಳಿತದ್ದು ಜನರಲ್ಲಿ ಭಾವನಾತ್ಮಕ ಪ್ರತಿಕ್ರಿಯೆ ಮೂಡಿಸಿತು. ಮಹಾರಾಜರಿಲ್ಲದ ಜಂಬೂಸವಾರಿಯ ಬಗ್ಗೆ ಜನರಿಗಿದ್ದ ಭಾವನಾತ್ಮಕ ನಂಟು ಈ ಘಟನೆಯಿಂದ ಸ್ಪಷ್ಟವಾಯಿತು. 1972 ಮತ್ತು 1973ರಲ್ಲಿ ಬರಗಾಲದ ಕಾರಣ ಸಾರ್ವಜನಿಕ ದಸರಾ ಮೆರವಣಿಗೆ ನಡೆಯಲಿಲ್ಲ. 1974ರಲ್ಲಿ ಜಯಚಾಮರಾಜ ಒಡೆಯರ್ ಅವರ ನಿಧನದಿಂದಲೂ ಉತ್ಸವದ ಚಟುವಟಿಕೆಗಳು ಸೀಮಿತವಾದವು. ಆದರೂ ದಸರಾ ಮೆರವಣಿಗೆಯನ್ನು ಶಾಶ್ವತವಾಗಿ ನಿಲ್ಲಿಸಬಾರದು ಎಂಬ ಜನರ ಒತ್ತಾಯ ಮುಂದುವರಿಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ
ಅನ್ ಲಿಮಿಟೆಡ್ ಕಥೆ, ಲೇಖನ ಓದಲುಸಬ್ ಸ್ಕ್ರೈಬ್ ಮಾಡಿ