ಹಾಟೆಸ್ಟ್ ಇಂಡಿಯನ್ ಬ್ಯೂಟಿ ಜ್ಯೋತಿ ರೈ.. ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಆಗಿರೋ ಬ್ಯೂಟಿ ಈಕೆ. ಅದಕ್ಕೆ ಕಾರಣ ಕಳೆದ ವರ್ಷ ವೈರಲ್ ಆದ ಈಕೆಯ ಖಾಸಗಿ ವಿಡಿಯೋ. ಹೌದು.. 2017ರಲ್ಲಿ ‘ಮದಿಪು’ ಅನ್ನೋ ಚಿತ್ರದಿಂದ ನಾಯಕನಟಿಯಾಗಿ ಬೆಳ್ಳಿತೆರೆಗೆ ಕಾಲಿಟ್ಟ ಈಕೆ, ಅದಕ್ಕೂ ಮುನ್ನ ಸೀರಿಯಲ್ ದುನಿಯಾದಲ್ಲಿ ಸಾಕಷ್ಟು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿ ಎಲ್ಲರ ದಿಲ್ ದೋಚಿದ್ರು. ಬಂದೇ ಬರತಾವ ಕಾಲ, ಜೋಗುಳ, ಕಿನ್ನರಿ, ಗೆಜ್ಜೆ ಪೂಜೆ, ಮೂರು ಗಂಟು, ಲವಲವಿಕೆ, ಕನ್ಯಾದಾನ, ಕಸ್ತೂರಿ ನಿವಾಸ ಹೀಗೆ ಸಾಲು ಸಾಲು ಸೀರಿಯಲ್ ಗಳಲ್ಲಿ ಮಿಂಚು ಹರಿಸಿದ್ರು.

JYOTHI RAI (4)

ಕನ್ನಡಕ್ಕಷ್ಟೇ ಸೀಮಿತ ಆಗದ ಈ ಚೆಲುವೆ ತೆಲುಗು, ತಮಿಳು ಸೀರಿಯಲ್ ಗಳಲ್ಲೂ ಕಮಾಲ್ ಮಾಡಿದ್ರು. ಇದೀಗ ಪರ್ಮನೆಂಟ್ ಆಗಿ ಹೈದ್ರಾಬಾದ್ ಗೆ ಶಿಫ್ಟ್ ಆಗಿರೋ ಜ್ಯೋತಿ, ಅಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಅಲ್ಲದೆ ಕನ್ನಡದ ದಿಯಾ, 99, ಸಪ್ಲೈಯರ್ ಶಂಕರ, ಸೀತಾ ರಾಮ, 5ಡಿ, ಗಂಧದ ಗುಡಿ ಹೀಗೆ ಒಂದಷ್ಟು ಕನ್ನಡದ ಚಿತ್ರಗಳಲ್ಲೂ ತನ್ನದೇ ಆದ ಛಾಪು ಮೂಡಿಸಿದ ಕ್ಯೂಟಿ ಈ ಕನ್ನಡತಿ ಜ್ಯೋತಿ ರೈ.

JYOTHI RAI (1)

ಪ್ರೆಟಿ ಗರ್ಲ್ ಅನ್ನೋ ಇಂಗ್ಲಿಷ್ ಹಾಗೂ ಹಿಂದಿ ವೆಬ್ ಸೀರೀಸ್ ನಲ್ಲಿ ಸಖತ್ ಬೋಲ್ಡ್ ಆಗಿ ಬಣ್ಣ ಹಚ್ಚಿದ್ದ ಜ್ಯೋತಿ ರೈ, ಸೌಂದರ್ಯದ ವಿಚಾರದಲ್ಲಿ ನಿಜಕ್ಕೂ ಸೌಂದರ್ಯ ದೇವತೆ. ಖಾಸಗಿ ವಿಡಿಯೋ ವೈರಲ್ ಬಳಿಕ ಈಕೆ ಇಡೀ ಸೌತ್ ದುನಿಯಾಗೆ ಚಿರಪರಿಚಿತರಾದರು.

JYOTHI RAI (7)

ಅದೇ ಕಾರಣದಿಂದ ನೈಟ್ ರೋಡ್ ಅನ್ನೋ ಕನ್ನಡ ಚಿತ್ರದ ಪ್ರಮೋಷನ್ಸ್ ಗೆ ಕೂಡ ಬೆಂಗಳೂರಿಗೆ ಬರಲಿಲ್ಲ ಜ್ಯೋತಿ ರೈ. ಅಲ್ಲದೆ ಕನ್ನಡ ಬಿಗ್ ಬಾಸ್ ಸೀಸನ್-11ಕ್ಕೆ ಆಫರ್ ಬಂದ್ರೂ ನೋ ವೇ ಚಾನ್ಸೇ ಇಲ್ಲ ಅಂತ ಸುಮ್ಮನಾಗಿದ್ರು ಜ್ಯೋತಿ ರೈ. ಆದ್ರೆ ಈಕೆಯ ಸೋಶಿಯಲ್ ಮೀಡಿಯಾ ಪೋಸ್ಟ್ ಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಅದಕ್ಕೆ ಕಾರಣ ಆಕೆಯ ಫಿಟ್ನೆಸ್ ಮಂತ್ರ.

JYOTHI RAI (9)

ಹೌದು.. ಸದಾ ಜಿಮ್ ನಲ್ಲಿ ಬೆವರಿಳಿಸೋ ಈ ಕ್ಯೂಟ್ ಕ್ವೀನ್, ಗ್ಲಾಮರ್ ಲೋಕದ ದಂತದ ಗೊಂಬೆ ಅಂದ್ರೆ ತಪ್ಪಾಗಲ್ಲ. ಈಕೆಯ ಒಂದೊಂದು ಪೋಸ್ಟ್ ಗೂ ಪಡ್ಡೆ ಹುಡುಗರು ನಿದ್ದೆ ಕೆಡಿಸಿಕೊಳ್ತಾರೆ. ಅಷ್ಟರ ಮಟ್ಟಿಗೆ ಬ್ಯೂಟಿ ಮೆಂಟೇನ್ ಮಾಡಿದ್ದಾರೆ. 39 ವರ್ಷದ ಜ್ಯೋತಿ ರೈ, ಮದ್ವೆ ಆಗಿ ಡಿವೋರ್ಸ್ ಕೂಡ ಪಡೆದಿದ್ದಾರೆ ಅಂದ್ರೆ ನೀವು ನಂಬಲೇಬೇಕು.

JYOTHI RAI (6)

20ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜ್ಯೋತಿ ರೈ, ಪತಿ ಪದ್ಮನಾಭ್ ಗೆ ವಿಚ್ಚೇದನ ನೀಡಿ, ಮಗನೊಂದಿಗೆ ಜೀವನ ನಡೆಸ್ತಿದ್ದಾರೆ. ಸದ್ಯ ಸುಕುಮಾರ್ ಪೂರ್ವಜ್ ಅನ್ನೋ ತೆಲುಗು ಡೈರೆಕ್ಟರ್ ಜೊತೆ ಸಂಬಂಧದಲ್ಲಿದ್ದು, ಇವರನ್ನ ಬಹುತೇಕ ಮಂದಿ ಸತಿ-ಪತಿ ಅಂತಲೇ ಕರೆಯುತ್ತಾರಂತೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ