ಸಾಂಗ್ ಹಿಟ್ ಆದ್ರೂ ನೆಟ್‌ಫ್ಲಿಕ್ಸ್‌ನಲ್ಲಿ ಊರ್ವಶಿಯ ಸೀನ್ಗಳನ್ನೇ ಕಟ್ ಮಾಡಿದ್ರು. ಇಂಡಿಯಾ ಪಾಕ್ ಮ್ಯಾಚ್ನಲ್ಲಿ ಡ್ಯಾನ್ಸ್ ಮಾಡಿದ್ದೇ ಮಾಡಿದ್ದು. ರಾತ್ರೋರಾತ್ರಿ ಪಾಕಿಸ್ತಾನದಲ್ಲಿ ಫುಲ್ ಫೇಮಸ್, ಬಾಲಯ್ಯನ ‘ಡಾಕು ಮಹರಾಜ್’ ಹೌಸ್ಫುಲ್. ಅಷ್ಟಕ್ಕೂ ಊರ್ವಶಿ ಮಾಡಿದ ಮ್ಯಾಜಿಕ್ ಏನು ಸ್ಟೋರಿ ಇಲ್ಲಿದೆ ನೋಡಿ..!
ದರ್ಶನ್ ಜೊತೆಗೆ ‘ಐರಾವತ’ ಸಿನಿಮಾದಲ್ಲಿ ಮಿಂಚಿದ್ದ ಊರ್ವಶಿ ರೌಟೇಲಾ ಮಾಡಿರೋದು ಬೆರಳೆಣಿಕೆ ಸಿನಿಮಾಗಳೇ ಆದ್ರೂ ಸೋಷಿಯಲ್ ಮೀಡಿಯಾದ ಸೆನ್ಸೇಷನ್, ಫ್ಯಾನ್ ಲೋಕದ ವೈಬ್ರೇಷನ್. ಊರ್ವಶಿಯನ್ನ ಎಷ್ಟೋ ಕಾರಣಕ್ಕೆ ಇಷ್ಟಪಡೋ ದೊಡ್ಡ ಫ್ಯಾನ್ ಬಳಗವೇ ಇದೆ. ಊರ್ವಶಿ ಇತ್ತೀಚೆಗೆ ಬಿಡುಗಡೆಯಾದ ನಂದಮೂರಿ ಬಾಲಕೃಷ್ಣ ಅಭಿನಯದ ‘ಡಾಕು ಮಹಾರಾಜ್’ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ರು, ಸಿನಿಮಾದ ‘ದಬಿಡಿ ದಿಬಿಡಿ’ ಸಾಂಗ್ ಕಾಂಟ್ರೋವರ್ಸಿ ನಡುವೆಯೂ ವೈರಲ್ ಆಗಿ, ಪ್ರೇಕ್ಷಕರನ್ನ ಸಿನಿಮಾಕ್ಕೆ ಕರೆದುಕೊಂಡು ಬಂದಿತ್ತು..
ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನೇ ನೀಡುತ್ತಾ ಬಂದಿರೋ ಬಾಲಯ್ಯ ಅಭಿನಯದ ‘ಡಾಕು ಮಹರಾಜ್’ ಕಳೆದ ವಾರ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಯ್ತು. ಆದ್ರೆ, ಈ ಸಿನಿಮಾದಲ್ಲಿನ ಊರ್ವಶಿ ರೌಟೇಲಾ ನಟಿಸಿರೋ ಸೀನ್‌ಗಳಿಗೆ ಕತ್ತರಿ ಹಾಕಲಾಗಿದೆ ಅನ್ನೋ ಸುದ್ದಿ ಹರಡಿತ್ತು. ಈ ಸುದ್ದಿ ಅಭಿಮಾನಿಗಳಷ್ಟೆ ಅಲ್ಲ ಊವರ್ಶಿಗೂ ಬೇಜಾರು ಮಾಡಿದ್ದು ಇದೆ.
ಇದೇ ಗ್ಯಾಪ್ನಲ್ಲಿ ಊರ್ವಶಿ ದುಬೈನಲ್ಲಿ ಮೊನ್ನೆ ಮೊನ್ನೆ ನಡೆದ ಇಂಡಿಯಾ - ಪಾಕಿಸ್ತಾನ್ ಚಾಂಪಿಯನ್ಸ್ ಟ್ರೋಫೀ ಮ್ಯಾಚ್ ನೋಡಲು ಹೋಗಿದ್ರು. ಮ್ಯಾಚ್ ನಡುವೆ ತಮ್ಮ ಬರ್ತ್ ಡೇ ಆಚರಿಸಿಕೊಂಡ ಊರ್ವಶಿ, ‘ಪುಷ್ಪ’ ನಿರ್ದೇಶಕ ಸುಕುಮಾರ್‌ರನ್ನ ಮೀಟ್ ಮಾಡಿದ್ರು, ನಂತರ ಜೊತೆಯಲ್ಲೇ ಬಂದಿದ್ದ ಬಾಲಿವುಡ್ ಡಿಸೈನರ್ ಫ್ರೆಂಡ್ ಓರ್ಹಾನ್ ಜೊತೆ ಕಾಂಟ್ರೋವರ್ಷಿಯಲ್ ‘ದಬಿಡಿ ದಿಬಿಡಿ’ ಸ್ಟೆಪ್ ಹಾಕಿದ್ರು. ಡ್ಯಾನ್ಸ್ ಮೂಲಕ ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಗಳು ತಮ್ಮ ಸಿನಿಮಾ ನೋಡುವಂತೆ ಫಿಕ್ಸಿಂಗ್ ಮಾಡಿಕೊಂಡ್ರು.
ಊವರ್ಶಿಯ ಈ ಡ್ಯಾನ್ಸ್ ಈ ಹಾಡು, ಈ ಹಾಡಿನಿಂದಾಗಿ ‘ಡಾಕು ಮಹರಾಜ್’ ಸಿನಿಮಾ ಪಾಕಿಸ್ತಾನ ಸೇರಿದಂತೆ ಮುಸ್ಲಿಂ ರಾಷ್ಟ್ರಗಳಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದಲ್ಲದೆ, ಸಿನಿಮಾಕ್ಕೆ ಡಿಮಾಂಡ್ ಹೆಚ್ಚಾಗಿ ಕೆಲಕ್ಷನ್ ಡಬಲ್ ಆಗಿದ್ಯಂತೆ. ಬಾಲಯ್ಯ ಕ್ರೇಜ್‌ಗೆ ಸಿನಿಮಾ ನೋಡ್ತಿದ್ದ ವಿದೇಶಿಗರು ಈಗ ಊರ್ವಶಿಗಾಗಿ ‘ಡಾಕು ಮಹಾರಾಜ್’ ಸಿನಿಮಾ ನೋಡೊ ಹಾಗಾಯ್ತು.
ಡಾಕು ಸಿನಿಮಾದ ‘ದಬಿಡಿ ದಿಬಿಡಿ’ ಸಾಂಗ್ ಅಸಹ್ಯ ಅಂದವ್ರು, ಕಾಂಟ್ರೋವರ್ಸಿ ಮಾಡಿದವ್ರು ಈಗ ಇದೇ ಕಾಂಟ್ರೋವರ್ಷಿಯಲ್ ಹಾಡಿನಿಂದ ಸಿನಿಮಾಕ್ಕೆ ಪ್ಲಸ್ ಆಗಿದ್ದು ಕಂಡು ತಲೆಕೆಡಿಸಿಕೊಂಡಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಡಿಲೀಟ್ ಆಗಿತ್ತು ಅನ್ನಲಾದ ಊರ್ವಶಿ ಸೀನ್‌ಗಳು ಈಗ ಸೇರ್ಪಡೆಯಾಗಿದ್ದಾವೆ ಅನ್ನೋ ಅಪ್‌ಡೇಟ್ ಕೂಡ ಸಿಕ್ಕಿದೆ.