- ರಾಘವೇಂದ್ರ ಅಡಿಗ ಎಚ್ಚೆನ್.

ಹೊಸಬರ ಹೊಸದಾದ ಕಂಟೆಂಟ್‌ ಉಳ್ಳ ಸಾಲು ಸಾಲು ಸಿನಿಮಾಗಳು ಇತ್ತೀಚೆಗೆ ತೆರೆಗೆ ಬರುತ್ತಿದೆ, ಅದರ ಸಾಲಿಗೆ ಇದೀಗ ಮತ್ತೊಂದು ಸೇರ್ಪಡೆ ʻಮಾರ್ನಮಿʼ ಸಿನಿಮಾ. ಈ ಸಿನಿಮಾ ಇದೇ ತಿಂಗಳ 20ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರತಂಡಕ್ಕೆ ಇದೀಗ ಕಿಚ್ಚ ಸುದೀಪ್‌ ಸಾಥ್‌ ಕೊಟ್ಟಿದ್ದಾರೆ.  ರಿತ್ವಿಕ್ ಮಠದ್ ಹಾಗೂ ಚೈತ್ರಾ ಆಚಾರ್ ನಟನೆಯ ಸಿನಿಮಾ ಇದಾಗಿದ್ದು, ಈಗಾಗಲೇ ಈ ಇಬ್ಬರು ಸ್ಯಾಂಡಲ್‌ವುಡ್‌ನಲ್ಲಿ ಸಾಲು ಸಾಲು ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದು, ಇದೀಗ ʻಮಾರ್ನಮಿʼ ಸಿನಿಮಾದ ಮೂಲಕ ತೆರೆಯ ಮೇಲೆ ಬರಲು ಸಜ್ಜಾಗಿದ್ದಾರೆ.

marnomi

ಕರಾವಳಿ ಸಂಸೃತಿ, ಹುಲಿ ವೇಷ,ಅಲ್ಲಿನ ಭಾಷೆ ಹೀಗೆ ಕರಾವಳಿಯ ಭಾಗಕ್ಕೆ ಸೇರಿದ ಹಲವು ವಿಚಾರಗಳನ್ನು ಹೊತ್ತು ಈ ಸಿನಿಮಾ ಇದೀಗ ತೆರೆಯ ಮೇಲೆ ಬರೋಕೆ ಸಜ್ಜಾಗಿದೆ. ಈಗಾಗಲೇ ಈ ಸಿನಿಮಾ ಎರಡು ಬಾರಿ ಬಿಡುಗಡೆಗೆ ಸಜ್ಜಾಗಿ, ಚಿತ್ರತಂಡ ಬಿಡುಗಡೆ ದಿನಾಂಕವನ್ನು ಮುಂದೂಡಿತ್ತು. ಆದರೆ, ಈ ಬಾರಿ ಯಾವುದೇ ಮುಂದೂಡಿಕೆ ಇಲ್ಲದೆ ನಿಗದಿಯಾದ ದಿನದಂದೇ ಸಿನಿಮಾ ಬಿಡುಗಡೆ ಮಾಡುವುದಾಗಿ ಸಿನಿಮಾ ತಂಡ ಹೇಳಿಕೊಂಡಿದೆ. ಈ ಚಿತ್ರವನ್ನು ರಿತೀಶ್‌ ಶೆಟ್ಟಿ ನಿರ್ದೇಶನ ಮಾಡಿದ್ದು, ಶಿಲ್ಪಾ ವಸಂತ್‌ ನಿರ್ಮಾಣ ಮಾಡಿದ್ದಾರೆ.

marnomi 3

ಚಿತ್ರದ ಕುರಿತು ಮಾತನಾಡುತ್ತಾ ನಿರ್ದೇಶಕ ರಿತೀಶ್ ಶೆಟ್ಟಿ, ಸಿನಿಮಾ ಇದೇ ತಿಂಗಳ 20ರಂದು ಬಿಡುಗಡೆಯಾಗಲಿದೆ, ಕರಾವಳಿ ಭಾಗದ ಅಂಶಗಳನ್ನು ಇಟ್ಟುಕೊಂಡು ಈ ಸಿನಿಮಾವನ್ನು ತಯಾರಿಸಲಾಗಿದೆ. ʻಮಾರ್ನಮಿʼ ಎಂಬುದು ಕರಾವಳಿ ಭಾಗದ ದಸರಾದ ಹೆಸರು, ಪ್ರೇಕ್ಷಕರಿಗೆ ನಮ್ಮ ಸಿನಿಮಾ ಖಂಡಿತವಾಗಿಯೂ ಇಷ್ಟವಾಗುತ್ತದೆ ಎಂದಿದ್ದಾರೆ.

marnomi 2

ಇನ್ನೂ ಚಿತ್ರದ ನಾಯಕ ನಟ ರಿತ್ವಿಕ್ ಮಠದ್ ಮಾತನಾಡಿ ಚಿತ್ರದಲ್ಲಿ ಹಲವಾರು ಅಂಶಗಳಿವೆ, ಮನುಷ್ಯ ತಾಳ್ಮೆ ಕಳೆದುಕೊಂಡಾಗ ಏನೆಲ್ಲಾ ಆಗುತ್ತದೆ ಎಂಬದು ಚಿತ್ರದಲ್ಲಿ ತೋರಿಸಿಕೊಡಲಾಗಿದೆ ಎಂದಿದ್ದಾರೆ.ಚಿತ್ರದ ನಾಯಕಿ ಚೈತ್ರಾ ಆಚಾರ್ ಮಾತನಾಡಿ "ಪ್ರೇಕ್ಷಕರು ರಿತ್ವಿಕ್ ಅವರನ್ನು ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಇಷ್ಟ ಪಡುತ್ತಾರೆ, ಅದೇ ರೀತಿಯಾಗಿ ಅವರ ಸಿನಿಮಾಗೂ ಸಪೋರ್ಟ್‌ ಕೊಡ್ತಾರೆ ಅಂದುಕೊಂಡಿದ್ಧೇನೆ" ಎಂದಿದ್ದಾರೆ.
ನಿರ್ಮಾಪಕ ನಿಶಾಂತ್ ಅವರು ಮಾತನಾಡಿ "ಕನ್ನಡದಲ್ಲಿ ಮೊದಲು ಸಿನಿಮಾವನ್ನು ಬಿಡುಗಡೆ ಮಾಡುವ ಯೋಜನೆ ಇದೆ, ಇದೀಗ ಕನ್ನಡದಲ್ಲಿ ಸಿನಿಮಾ ಹಿಟ್‌ ಆದರೆ, ಬೇರೆ ಭಾಷೆಗಳಲ್ಲಿಯೂ ಬಿಡುಗಡೆ ಮಾಡುವ ಯೋಜನೆ ಇದೆ" ಎಂದಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ