ಜಾಗೀರ್ದಾರ್*
ಕೆನೋಪಸ್ ಸಿನಿಮಾಸ್ ಪ್ರೊಡಕ್ಷನ್ ಹಾಗೂ ತಂಬೂರಿ ಫಿಲಂಸ್ ಅರ್ಪಿಸಿರುವ ಡಿ.ಪಿ.ಆಂಜನಪ್ಪ ಅವರು ನಿರ್ಮಿಸಿರುವ ಹಾಗೂ ಲೋಕೇಶ್ ಗೌಡ ಅವರ ಸಹ ನಿರ್ಮಾಣವಿರುವ "ರಾಜನಿವಾಸ" ಚಿತ್ರ ನವೆಂಬರ್ 6ರಂದು ತೆರೆಕಾಣಲಿದೆ. ಈ ಚಿತ್ರದ ಬಿಡುಗಡೆ ದಿನಾಂಕವನ್ನು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ನಾರಾಯಣಗೌಡ ಅವರು ಪ್ರಕಟಿಸಿದರು.
ಮಿಥುನ್ ಸುವರ್ಣ ಅವರ ನಿರ್ದೇಶನದ ರಾಜನಿವಾಸ ಚಿತ್ರದಲ್ಲಿ ರಾಘವ್ ನಾಯಕ್, ಕೃತಿಕಾ ರವೀಂದ್ರ ಪ್ರಮುಖ ಪಾತ್ರಗಳಲ್ಲಿ ಹಾಗೂ ಶ್ರೀನಗರ ಕಿಟ್ಟಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಈವೇಳೆ ಕರವೇ ರಾಜ್ಯ ಮಹಿಳಾ ಘಟಕದ ಅಶ್ವಿನಿಗೌಡ ಕೂಡ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಿರ್ದೇಶಕ ಮಿಥುನ್ ಸುವರ್ಣ ಮಾತನಾಡುತ್ತ ನಮ್ಮ ಸಿನಿಮಾ ನ.6 ರಂದು ತೆರೆಕಾಣುತ್ತಿದೆ ಅದೇದಿನ ರಾಮಾಯಣ ಕೂಡ ಬರುತ್ತಿದೆ ಅಂತ ತಿಳಿಯಿತು. ನಮ್ಮ ಚಿತ್ರದ ಕಂಟೆಂಟ್ ಚೆನ್ನಾಗಿದೆ, ಜನ ಬರ್ತಾರೆ, ನಿಂತೇ ನಿಲ್ಲುತ್ತೆ ಅಂತ ನಮಗೆ ಸಂಪೂರ್ಣ ಭರವಸೆಯಿದೆ. ಇತ್ತೀಚೆಗೆ ಕೆಲವರು ಥೇಟರಿಗೆ ಜನ ಬರ್ತಿಲ್ಲ ಅಂತ ಬೇಸರದಿಂದ ಹೇಳಿಕೊಳ್ಳುತ್ತಿದ್ದಾರೆ. ಇದನ್ನು ನಾನು ಒಪ್ಪಲ್ಲ, ಒಳ್ಳೆ ಚಿತ್ರಗಳನ್ನು ಫ್ರೇಕ್ಷಕರು ಯಾವತ್ತೂ ಗೆಲ್ಲಿಸುತ್ತಲೇ ಬಂದಿದ್ದಾರೆ. ಕನ್ನಡ ಸೇರಿದಂತೆ ದಕ್ಷಿಣದ ನಾಲ್ಕು ಭಾಷೆಗಳಲ್ಲಿ ರಾಜನಿವಾಸ ಬಿಡುಗಡೆಯಾಗಲಿದೆ. ನಮ್ಮ ಚಿತ್ರದ ಕಂಟೆಂಟ್, ಮೌತ್ ಪಬ್ಲಿಸಿಟಿಯಿಂದ ಗೆಲ್ಲುತ್ತೆ ಅಂತ ನಿರ್ಮಾಪಕರಿಗೆ ಹೇಳಿದ್ದೇನೆ ಎಂದರು.
ವೇದಿಕೆಯಲ್ಲಿ ನಾರಾಯಣಗೌಡ್ರು ಮಾತನಾಡುತ್ತ ರಾಜ್ಯೋತ್ಸವದ ದಿನಗಳಲ್ಲಿ ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ಕಥೆ ನಿರೂಪಣೆ ಚೆನ್ನಾಗಿದ್ರೆ ಜನ ಖಂಡಿತ ಬರ್ತಾರೆ ಅಂತ ಹೇಳಿದ್ದಾರೆ. ನಿರ್ಮಾಪಕ ಆಂಜನಪ್ಪ ಅವರು 35 ವರ್ಷಗಳಿಂದ ಕನ್ನಡಪರ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಅವರು ಸಿನಿಮಾಗೆ ಹಾಕಿರುವ ಬಂಡವಾಳವನ್ನು ಲ್ಯಾಂಡ್ ಮೇಲೆ ಹಾಕಿದ್ದರೆ ಒಳ್ಳೆ ಲಾಭ ಗಳಿಸುತ್ತಿದ್ದರು. ಅದೇನೋ ಸಿನಿಮಾ ಮಾಡಲೇಬೇಕೆಂಬ ಆಸೆಯಿಂದ ಚಿತ್ರದ ಮೇಲೆ ಹಾಕಿದ್ದಾರೆ. ನಾನೂ ಕೆಲ ದೃಶ್ಯಗಳನ್ನು ನೋಡಿದ್ದೇನೆ. ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಿದರೆ ಇಂಡಸ್ಟ್ರಿ ಬೆಳೆಯುತ್ತೆ. ಹೋರಾಟಗಾರ ಆಂಜನಪ್ಪ ಅವರ ಜತೆ ನಮ್ಮ ತಂಬೂರಿ ಫಿಲಂಸ್ ಯಾವಾಗಲೂ ಇರುತ್ತೆ.ಲಕ್ಷಾಂತರ ಕರವೇ ಕಾರ್ಯಕರ್ತರು ನಿಮ್ಮಜತೆ ಇರ್ತಾರೆ, ಚಿತ್ರ ಗೆದ್ದೇಗೆಲ್ಲುತ್ತೆ ಎಂದರು.

ಅಶ್ವಿನಿಗೌಡ ಮಾತನಾಡಿ ನಾನೂ ಒಬ್ಬ ಕಲಾವಿದೆ ಆಗಿರುವುದರಿಂದ ನಿರ್ಮಾಪಕರ ಕಷ್ಟ ಏನಂತ ನನಗೂ ಗೊತ್ತು. ಟೀಕೆ ಮಾಡುವವರ ಮುಂದೆ ಗೆದ್ದು ತೋರಿಸಬೇಕು. ಸೋಲು, ಗೆಲುವು ಇದ್ದದ್ದೇ, ನಮ್ಮ ಪ್ರಯತ್ನ ನಿರಂತರವಾಗಿರಬೇಕು. ನಿರ್ದೇಶಕರ ಕಾನ್ಫಿಡೆಂಟ್ ನನಗಿಷ್ಟವಾಯಿತು ಎಂದರು.
ಉಳಿದಂತೆ ಚಿತ್ರದ ನಿರ್ಮಾಪಕ ಆಂಜನಪ್ಪ, ಸಹ ನಿರ್ಮಾಪಕ ಲೋಕೇಶ್ ಗೌಡ್ರು, ಹಾಸ್ಯನಟ ವಿಜಯ್ ಚೆಂಡೂರು, ಸಂಗೀತ ನಿರ್ದೇಶಕ ವಿಜಯ್ ಯಾರ್ಡ್ಲಿ, ಅಶ್ವಿನಿಗೌಡ, ಲಲ್ಲೇಶ್ ರೆಡ್ಡಿ, ನಾಗೇಶ್ ರೆಡ್ಡಿ, ಮುನಿಕೃಷ್ಣಣ್ಣ, ರಾಜಶೇಖರ್ ಹಾಗೂ ಇತರರು ಚಿತ್ರದ ಬಗ್ಗೆ ಮಾತನಾಡಿದರು. A2 ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ಈ ಚಿತ್ರದ ಹಾಡುಗಳು, ಟ್ರೇಲರ್ ಬಿಡುಗಡೆಯಾಗಿದೆ.
ನಮ್ಮ ಚಿತ್ರ ಕರ್ನಾಟಕ ಮಾತ್ರವಲ್ಲದೆ ಭಾರತದಾದ್ಯಂತ ಎಲ್ಲರ ಮೆಚ್ಚುಗೆ





