– ರಾಘವೇಂದ್ರ ಅಡಿಗ ಎಚ್ಚೆನ್.
ನಿನ್ನೆ(ಅಕ್ಟೋಬರ್ 03) ಕನ್ನಡದ ಸ್ಟಾರ್ ನಟಿ ರಚಿತಾ ರಾಮ್ ಹುಟ್ಟುಹಬ್ಬ ರಚಿತಾ ರಾಮ್ ಅವರು ಈ ಬಾರಿ ಅಭಿಮಾನಿಗಳು ಹಾಗೂ ಕುಟುಂಬದವರ ಜೊತೆಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಮೊನ್ನೆ(ಅಕ್ಟೋಬರ್ 02) ರಾತ್ರಿಯಿಂದಲೇ ರಚಿತಾ ರಾಮ್ ನಿವಾಸದ ಬಳಿ ಅಭಿಮಾನಿಗಳು ನೆರೆದಿದ್ದು, ನಟಿ ರಚಿತಾ ರಾಮ್ ಅವರು ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡರು. ದುನಿಯಾ ವಿಜಯ್ ನಟನೆಯ ಲ್ಯಾಂಡ್ ಲಾರ್ಡ್ ಸಿನಿಮಾ ಆಗಿದೆ. ರಚಿತರಾಮ್ ನಿವಾಸದ ಬಳಿ ಡೊಳ್ಳು ಕುಣಿತ, ಯಕ್ಷಗಾನ ಕಲಾವಿದರಿಂದ ನೃತ್ಯ ಪ್ರದರ್ಶನ ಕೂಡ ಇತ್ತು. ರಚಿತಾ ರಾಮ್ ನಿವಾಸದ ಬಳಿ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ “2 ವರ್ಷದ ನಂತರ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದೇನೆ. ಮಾಧ್ಯಮದವರ ಜೊತೆ ಫಸ್ಟ್ ಟೈಮ್ ಬರ್ತ್ ಡೇ ಸೆಲೆಬ್ರೇಷನ್ ಮಾಡುತ್ತಿದ್ದೇನೆ. ರಜನಿಕಾಂತ್ ಸರ್ ಕಾಲ್ ಮಾಡಿ ವಿಶ್ ಮಾಡಿದ್ರು . ಖುಷಿ ಆಯ್ತು . ಕೂಲಿ ಸಿನಿಮಾದಲ್ಲಿ ಒಳ್ಳೆ ಪಾತ್ರ ಸಿಕ್ಕಿದೆ. ಲ್ಯಾಂಡ್ ಲಾರ್ಡ್ ಸಿನಿಮಾ ಸಿಗೋದಕ್ಕೆ ದರ್ಶನ್ ಕಾರಣ. ನಾನು ದರ್ಶನ್ ಅವರ ಜೊತೆ ಮಾತಾಡಿದಾಗ ಒಪ್ಪಿಕೋ ಎಂದು ಹೇಳಿದ್ದರು. ನಿನ್ನೆ ರಾತ್ರಿ ಕಾಂತಾರ ಬಗ್ಗೆ ಮಾತಾಡಿದಾಗ ಮೈ ಜುಮ್ ಅನ್ನಿಸಿತ್ತು. ಲ್ಯಾಂಡ್ ಲಾರ್ಡ್ ಸಿನಿಮಾದ ಟೀಸರ್ ಅಷ್ಟೇ ಮೈ ಜುಮ್ ಅನ್ನಿಸುತ್ತೆ. ಲ್ಯಾಂಡ್ ಲಾರ್ಡ್ ಸಿನಿಮಾದಲ್ಲಿ ದುನಿಯಾ ವಿಜಯ್ ಮಗಳ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ” ಎಂದರು.
ಆದಷ್ಟು ಬೇಗ ವಿವಾಹ ಆಗುತ್ತೇನೆ
‘ವಿವಾಹ ಆಗಬೇಕು ಅಂತ ನಿರ್ಧರಿಸಿದ್ದೇನೆ. ಆದಷ್ಟು ಬೇಗ ಮದುವೆ ಆಗುತ್ತೇನೆ. ಮನೆಯಲ್ಲಿ ಹುಡುಗನ ಹುಡುಕುತ್ತಾ ಇದ್ದಾರೆ. ನಾನು ಅರೇಂಜ್ ಮ್ಯಾರೇಜ್ ಆಗ್ತೀನಿ’ ಎಂದರು.
ರಚಿತಾ ರಾಮ್ ಈ ಹಿಂದೆಯೂ ಮದುವೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಗೌಡ್ರ ಹುಡುಗ ಸಿಕ್ರೆ ಮದುವೆಯಾಗ್ತೀನಿ ಎಂದು ಹೇಳಿದ್ದರು. ಪ್ರತಿಬಾರಿಯೂ ಮದುವೆಯ ಪ್ರಸ್ತಾಪ ಬಂದಾಗಲೆಲ್ಲ ರಚಿತಾ, ಹಾರಿಕೆ ಉತ್ತರ ಕೊಟ್ಟು ಸುಮ್ಮನಾಗ್ತಿದ್ರು. ಈ ಸಲ ಶೀಘ್ರವೇ ಮದ್ವೆ ಆಗ್ತೀನಿ ಎಂದು ಹೇಳಿರುವ ಹಿಂದೆ ಅವರ ಕುಟುಂಬಸ್ಥರು ಹುಡುಗನ ಹುಡುಕುವ ಕೆಲಸ ನಡೆಸಿದ್ದಾರೆ ಅಂತಾನೇ ಹೇಳ್ಬಹುದು. ಬಹುತೇಕ 2026ರಲ್ಲಿ ರಚಿತಾ ಮದುವೆಯ ಸುಳಿವು ನೀಡಿದ್ದಾರೆ. ರಚಿತಾ ಫ್ಯಾನ್ಸ್ ಈ ಸುದ್ದಿ ಕೇಳಿ ಕುಣಿದು ಕುಪ್ಪಳಿಸುತ್ತಿದ್ದಾರೆ.
ಕೆಟ್ಟ ಕಾಮೆಂಟ್ ನನಗೂ ಬರ್ತವೆ..
‘ಕೆಟ್ಟ ಕಮೆಂಟ್ ಯಾರೇ ಮಾಡಿದ್ದರೂ ಅದು ತಪ್ಪು. ಈ ವಿಚಾರದಲ್ಲಿ ನಾನು ರಮ್ಯಾ ಪರ. ನನಗೂ ಕೆಟ್ಟ ಕಮೆಂಟ್ಗಳು ಬರುತ್ತವೆ. ಆದರೆ, ಆ ಬಗ್ಗೆ ನಾನು ಹೆಚ್ಚು ನೋಡೋಕೆ ಹೋಗಲ್ಲ’ ಎಂದಿದ್ದಾರೆ ರಚಿತಾ.
33ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ರಚಿತಾ ರಾಮ್ ಪರಭಾಷಾ ಸಿನಿಮಾಗಳಲ್ಲೂ ನಟಿಸಿದ್ದಾರೆ. ರಜನಿಕಾಂತ್ ಅವರ ಸಿನಿಮಾದಲ್ಲಿ ನಟಿಸಿದ್ದಾರೆ. ದುನಿಯಾ ವಿಜಯ್ ನಟನೆಯ ಲ್ಯಾಂಡ್ ಲಾರ್ಡ್, ಅಯೋಗ್ಯ-2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಇವೆರಡು ಸಿನಿಮಾಗಳ ಟೀಸರ್ ರಿಲೀಸ್ ಆಗಿದೆ. ವಿಭಿನ್ನ ಕಾನ್ಸೆಪ್ಟ್ನ ಲ್ಯಾಂಡ್ ಲಾರ್ಡ್ ಸಿನಿಮಾ ಮೂಲಕ ದುನಿಯಾ ವಿಜಯ್ ಜೊತೆ ಎರಡನೇ ಬಾರಿ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ ನಟಿ ರಚಿತಾ