ಸರಸ್ವತಿ*

ಬೆಂಗಳೂರು: ಹೊಸ ವರ್ಷಕ್ಕೆ ಹೊಸ ಪ್ರತಿಭೆಗಳ ತಂಡವೊಂದು ಹೊಸ ಚಿತ್ರ “ಪ್ರೇಮ್ ಲವ್ ನಂದಿನಿ” ಚಿತ್ರ ಮಾಡುವ ಮೂಲಕ ಚಿತ್ರೀಕರಣ ಮುಗಿಸಿದ್ದಾರೆ.

ಹೌದು ಜೀ ಕನ್ನಡ ವಾಹಿನಿಯಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಬಸವರಾಜ ನಂದಿ ಅವರ ನಿರ್ಮಾಣದಲ್ಲಿ, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ ಸುಧಾ ಅಣ್ಣಾಶೇಠ.

sudha

ಪತ್ರಕರ್ತ ಹಾಗೂ ನಟ ವಿಶ್ವಪ್ರಕಾಶ ಟಿ ಮಲಗೊಂಡ ನಾಯಕ ನಟನಾಗಿ, ಸಿರಿ ವೆಂಕಟೇಶ್ ನಾಯಕಿ ನಟಿಯಾಗಿ ಅಭಿನಯಿಸಿದ “ಪ್ರೇಮ್ ಲವ್ ನಂದಿನಿ” ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ ಚಿತ್ರ ತಂಡ.

ಕಾಮಿಡಿ ಕಿಲಾಡಿಗಳು ಖ್ಯಾತಿಯ ದೀಕ್ಷಿತ್, ಮಧು ಅರಕೆರೆ ಸಹ ಕಲಾವಿದರಾಗಿ ಅಭಿನಯಿಸಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಚಿತ್ರ ಬಿಡುಗಡೆಯಾಗಲಿದೆ ಎನ್ನುತ್ತಾರೆ ನಿರ್ಮಾಪಕ ಬಸವರಾಜ ಎಸ್ ನಂದಿ.

ಇತ್ತೀಚೆಗೆ ನಡೆಯುತ್ತಿರುವ ಪ್ರೇಮ ಕಥೆಯಿಂದ ಶುರುವಾಗಿ ಡೈವೋರ್ಸ್ ವರೆಗೆ ನಡೆಯುವ ಕಥೆಯೇ ಈ ಚಿತ್ರದ ಸಾರಾಂಶ. ಹೊಸ ಕಥೆ ಜೊತೆಗೆ ಸಾಮಾಜಿಕ ಸಂದೇಶ ನೀಡುವ ಚಿತ್ರ ಇದಾಗದೆ ಎನ್ನುತ್ತಾರೆ ನಿರ್ದೇಶಕಿ ಸುಧಾ ಅಣ್ಣಾಶೇಠ.

ಇನ್ನು ಈ ಚಿತ್ರಕ್ಕೆ ಬಸವರಾಜ ನಂದಿ ಹಾಗೂ ಸಚಿನ್ ಅವರ ಛಾಯಾಗ್ರಾಹಣವಿದ್ದು, ಪ್ರಜ್ವಲ್ ನಂದಿ ಅವರ ಸಂಕಲನ, ಕ್ರಿಯೇಟಿವ್ ಹೆಡ್ ಆಗಿ ಅಣ್ಣಾಶೇಠ ಅವರು ಕಾರ್ಯ ನಿರ್ವಹಿಸಿದ್ದು, ಪ್ರಸಾದ ತೋಟದ ಅವರ ಪೋಸ್ಟರ್ ಡಿಸೈನ್, ಮೇಕಪ್ ಮಧು, ಡಾ. ಪ್ರಭು ಗಂಜಿಹಾಳ, ಡಾ. ವಿರೇಶ್ ಹಂಡಗಿ, ಹರೀಶ್ ಅರಸು ಅವರ ಪತ್ರಿಕಾ ಸಂಪರ್ಕ, ಉಮೇಶ್ ಕೆ ಎನ್ ಅವರು ಪಬ್ಲಿಸಿಟಿ ಜವಾಬ್ದಾರಿ ಹೊತ್ತಿದ್ದು, ನಿಂಗರಾಜ ಕಟ್ಟಿಗೇರಿ ಹೀಗೆ ಅನೇಕರು ತಂತ್ರಜ್ಞಾನದಲ್ಲಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ