- ರಾಘವೇಂದ್ರ ಅಡಿಗ ಎಚ್ಚೆನ್.

#GRAMMYs #Grammys2025
#GrammyAwards #Grammys67 #ChandrikaTandonಭಾರತೀಯ- ಅಮೆರಿಕನ್ ಗಾಯಕಿ ಮತ್ತು ಉದ್ಯಮಿ ಚಂದ್ರಿಕಾ ಟಂಡನ್ ಅವರಿಗೆ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಒಲಿದು ಬಂದಿದೆ. ಆಂಬಿಯೆಂಟ್ ಅಥವಾ ಚಾಂಟ್ ಆಲ್ಬಂ ವಿಭಾಗದಲ್ಲಿ 'ತ್ರಿವೇಣಿ' ಆಲ್ಬಂಗಾಗಿ ಅವರಿಗೆ ಗ್ರ್ಯಾಮಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಲಾಸ್ ಏಂಜಲೀಸ್‌ನ ಕ್ರಿಪ್ಟೋ ಡಾಟ್ ಕಾಮ್ ಅರೆನಾದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಸತ್ಕರಿಸಲಾಗಿದೆ. ರೆಕಾರ್ಡಿಂಗ್ ಅಕಾಡೆಮಿ ಆಯೋಜಿಸಿದ ಅತಿದೊಡ್ಡ ಸಂಗೀತ ಪ್ರಶಸ್ತಿಯ 67 ನೇ ಆವೃತ್ತಿ ಇದಾಗಿದೆ.

ಟಂಡನ್ ಪೆಪ್ಸಿಕೋದ ಮಾಜಿ ಸಿಇಒ ಇಂದ್ರಾ ನೂಯಿ ಅವರ ಹಿರಿಯ ಸಹೋದರಿಯಾಗಿದ್ದಾರೆ. ದಕ್ಷಿಣ ಆಫ್ರಿಕಾದ ಫ್ಲೌಟಿಸ್ಟ್ ವೂಟರ್ ಕೆಲ್ಲರ್‌ಮ್ಯಾನ್ ಮತ್ತು ಜಪಾನಿನ ಸೆಲಿಸ್ಟ್ ಎರು ಮಾಟ್ಸುಮೊಟೊ ಅವರೊಂದಿಗೆ ಚಂದ್ರಿಕಾ ಈ ಪ್ರಶಸ್ತಿ ಗೆದ್ದಿದ್ದಾರೆ.

1200-675-23461299-thumbnail-16x9-manu

ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ಅವರು, ಇದೊಂದು ಅದ್ಭುತ ಕ್ಷಣವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ನಾವು ಈ ಪ್ರಶಸ್ತಿ ಗೆದ್ದಿರುವುದು ನಿಜವಾಗಿಯೂ ನಮಗೆ ವಿಶೇಷ ಕ್ಷಣವಾಗಿದೆ. ಅಸಾಧಾರಣ ಸಂಗೀತ ದಿಗ್ಗಜ್ಜರನ್ನು ಹಿಂದಿಕ್ಕಿ ಪ್ರಶಸ್ತಿ ಪಡೆದಿರುವುದು ಆನಂದವನ್ನುಂಟು ಮಾಡಿದೆ ಎಂದು ಚಂದ್ರಿಕಾ ಅವರು ಖುಷಿ ವ್ಯಕ್ತಪಡಿಸಿದ್ದಾರೆ.

ಇದು ತ್ರಿವೇಣಿ ಸಂಗಮ: ಮೂರು ಪವಿತ್ರ ಭಾರತೀಯ ನದಿಗಳಾದ ಗಂಗಾ, ಯಮುನಾ ಮತ್ತು ಸರಸ್ವತಿಗಳ ಸಂಗಮ ಎಂಬ ಹೆಸರಿನಂತೆಯೇ, 'ತ್ರಿವೇಣಿ' ವೈವಿಧ್ಯಮಯ ಸಂಸ್ಕೃತಿಗಳನ್ನು ಪ್ರತಿನಿಧಿಸುವ ಮೂವರು ಕಲಾವಿದರಾದ ಟಂಡನ್, ಕೆಲ್ಲರ್‌ಮ್ಯಾನ್ ಮತ್ತು ಮಾಟ್ಸುಮೊಟೊ ಅವರ ಸಹಯೋಗದಿಂದ ಕೂಡಿದೆ.

FB_IMG_1738570377426

ಆಗಸ್ಟ್ 30, 2024 ರಂದು ಈ ಆಲ್ಬಂ ಬಿಡುಗಡೆಯಾಯಿತು, 'ತ್ರಿವೇಣಿ' ಯಲ್ಲಿನ ಏಳು ಟ್ರ್ಯಾಕ್‌ಗಳಲ್ಲಿ ಪ್ರತಿಯೊಂದೂ ತನ್ನದೇ ಆದ ಕಥೆಗಳನ್ನು ಹೇಳುತ್ತವೆ. ಆ ಹಾಡುಗಳೆಂದರೆ, ಪಥ್‌ವೇ ಟು ಲೈಟ್, ಚಾಂಟ್ ಇನ್ ಎ, ಜರ್ನಿ ವಿಥ್ ಇನ್, ಈಥರ್ಸ್ ಸೆರೆನೇಡ್, ಆನಿಸೆಂಟ್​ ಮೂನ್, "ಓಪನ್ ಸ್ಕೈ", ಮತ್ತು "ಸೀಕಿಂಗ್ ಶಕ್ತಿ.

ಭಾರತೀಯ ಶಾಸ್ತ್ರೀಯ ಸಂಗೀತ, ಹೊಸ ಯುಗದ ವಾತಾವರಣ ಮತ್ತು ಜಾಗತಿಕ ಸಂಪ್ರದಾಯಗಳ ಸಾಮರಸ್ಯದ ಮಿಶ್ರಣದಿಂದ ಕೂಡಿದೆ. ಟಂಡನ್ ಅವರು ಕೆನಡಿ ಸೆಂಟರ್, ಲಿಂಕನ್ ಸೆಂಟರ್ ಮತ್ತು ಯುರೋಪ್ ಮತ್ತು ಭಾರತದಾದ್ಯಂತ ವಿಶ್ವ ಸಂಸ್ಕೃತಿ ಉತ್ಸವಗಳಂತಹ ಸ್ಥಳಗಳಲ್ಲಿ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ

 

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ