ಉರ್ಫಿಯ ಫ್ಯಾಷನ್
ನಟಿ ಉರ್ಫಿ ಜಾವೇದ್ ಳ ಫ್ಯಾಷನ್ ಬಗ್ಗೆ ಎಷ್ಟು ಹೊಗಳಿದರೂ ಸಾಲದು. ಇತ್ತೀಚೆಗೆ ಒಂದು ಶೋಗಾಗಿ ಇವಳು ಸೇಫ್ಟಿ ಪಿನ್ನುಗಳಿಂದ ತಯಾರಾದ ಉಡುಗೆ ಧರಿಸಿ ವೇದಿಕೆಗೆ ಬಂದಾಗ, ವೀಕ್ಷಕರು ಕಣ್ಣು ಬಾಯಿ ಬಿಟ್ಟುಕೊಂಡು ನೋಡಿದ್ದೇ ಬಂತು! ಈ ಡ್ರೆಸ್ ನಲ್ಲಿ ಈಕೆ ಸಾಕಷ್ಟು ಕಾನ್ಛಿಡೆಂಟ್ ಆಗಿಯೂ ಇದ್ದಳು. ಅಸಲಿಗೆ, ಅವಳು ಒಂದು ವಿಡಿಯೋ ಪೋಸ್ಟ್ ಮಾಡಿದ್ದಳು, ಇದರಲ್ಲಿ ಅವಳು ಬಿಕಿನಿ ಮೇಲೆ ಕೇವಲ ಸೇಫ್ಟಿ ಪಿನ್ನುಗಳ ಡ್ರೆಸ್ ಧರಿಸಿ ಫ್ಯಾಷನ್, ಸ್ಟೈಲ್ ವಿಷಯದಲ್ಲಿ ತಾನೆಷ್ಟು ಹೈ ಲೆವೆಲ್ ಎಂದು ತೋರಿಸಿಕೊಂಡಳು. ಆಹಾ ಉರ್ಫಿ, ನಿನಗೆ ನೀನೇ ಸಾಟಿ!
ರೂಪಾಲಿಯ ಬದಲಾದ ದಿನಗಳು
`ಅನುಪಮಾ' ಧಾರಾವಾಹಿ ಮೂಲಕ ನಟಿ ರೂಪಾಲಿ ಗಂಗೂಲಿ ಇಷ್ಟು ಪ್ರಬುದ್ಧಳಾಗಿ ಹಣ, ಕೀರ್ತಿ ಗಳಿಸುತ್ತಾಳೆಂದು ಯಾರಿಗೆ ಗೊತ್ತಿತ್ತು? `ಅನುಪಮಾ' ಧಾರಾವಾಹಿ ಕಳೆದ ಎಷ್ಟೋ ದಿನಗಳಿಂದ TRP ಲಿಸ್ಟ್ ನಲ್ಲಿ ಸದಾ ನಂ.1 ಎನಿಸಿದೆ! ಇದರಲ್ಲಿ ಆದರ್ಶ ಸೊಸೆಯಾಗಿ ಮಿಂಚುತ್ತಿರುವ ರೂಪಾಲಿ ಎಲ್ಲರಿಗೂ ದಂಗು ಬಡಿಸಿದ್ದಾಳೆ. ಈ ಧಾರಾವಾಹಿಯ ಪ್ರತಿ ಕಂತಿಗಾಗಿ ಜನ ಕಾತುರದಿಂದ ಕಾಯುತ್ತಾರೆ. ಇವಳ ಸೆನ್ಸ್ ಆಫ್ ಹ್ಯೂಮರ್, ಎಲ್ಲರೊಂದಿಗೆ ಬೇಗ ಫ್ರೆಂಡ್ ಆಗಿ ಬೆರೆಯುವ ಗುಣ, ಇವಳಿಗೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಉತ್ತಮ ಪ್ರಾಜೆಕ್ಟ್ಸ್ ಗಳಿಸಿ ಕೊಡುವುದರಲ್ಲಿ ಎರಡು ಮಾತಿಲ್ಲ. ಮೇಡಂ ಅನುಪಮಾ, ದಿನೇ ದಿನೇ ನಿನ್ನ ಏಳಿಗೆ ಹೀಗೆ ಮುಂದುವರಿಯಲಿ, ನಿನ್ನ ನಟನೆ ಮತ್ತಷ್ಟು ಎತ್ತರಕ್ಕೇರಲಿ!
ಮದುವೆಯ ಬಂಧನದಲ್ಲಿ ಒಂದಾದ ಆಲಿಯಾ
ರಣಬೀರ್ ಅಂತೂ ಕಳೆದ ತಿಂಗಳ 14ರಂದು ಬಹುದಿನಗಳ ಗುಸುಗುಸು ಸುದ್ದಿ ಆಗಿದ್ದ ಬಾಲಿವುಡ್ ನ ಖ್ಯಾತ ತಾರೆಯರಾದ ಆಲಿಯಾ ಭಟ್ ರಣಬೀರ್ ಕಪೂರ್ ರ ಮದುವೆ ನಡೆಯಿತು. ಇಡೀ ಬಾಲಿವುಡ್ ಈ ದಿನಕ್ಕಾಗಿ ತುದಿಗಾಲಲ್ಲಿ ಕಾದಿತ್ತು. ಆದರೆ ಇವರ ಮದುವೆಗೆ ಔಪಚಾರಿಕ ಆಮಂತ್ರಣ ಇದ್ದದ್ದು ಮಾತ್ರ ಕೇವಲ 28 ಮಂದಿಗೆ ಅಂದ್ರೆ ನೀವು ನಂಬಲೇಬೇಕು! ಅದೂ ಕೇವಲ ನೆಂಟರಿಷ್ಟರು ಮಾತ್ರ.... ಆಲಿಯಾಳ ಅಣ್ಣ ರಾಹುಲ್ ಭಟ್ ಇದನ್ನು ಮೀಡಿಯಾಗೆ ಖಚಿತಪಡಿಸಿದ. ಹಾಗಾದರೆ ಇವರಿಬ್ಬರ ಫ್ರೆಂಡ್ಸ್ ಕೇವಲ ಮೊಬೈಲ್ ನಲ್ಲಿ ವರ್ಚುಯೆಲ್ ಆಗಿ ಇವರ ಮದುವೆ ನೋಡುವಂತಾಯಿತೇ....? ಹೀಗಾಗಬಾರದಿತ್ತು!
ಏಕಮಾತ್ರ ಭಾರತೀಯ ನಿರ್ದೇಶಕ
ಭಾರತೀಯ ನಿರ್ದೇಶಕ RRR ರಾಜಮೌಳಿಯರ ಮ್ಯಾಗ್ನ ಓಪನ್ `' ಪವರ್ ಬ್ಲಾಕ್ ಬಸ್ಟರ್`ರೌದ್ರಂ..... ರುಧಿರಂ.... ರಣರಂಗಂ' ಚಿತ್ರ ಮೂಲ ತೆಲುಗು ಮಾತ್ರವಲ್ಲದೆ ದಕ್ಷಿಣದ ಭಾಷೆಗಳು ಹಾಗೂ ಹಿಂದಿಯಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಂಡು, ಮೊದಲ ವಾರದಲ್ಲೇ ರೂ.1000 ಕೋಟಿಗೂ ಹೆಚ್ಚು ಗಳಿಸಿ ಅತ್ಯಮೋಘ ಹಣ ಬಾಚಿದ 3ನೇ ಭಾರತೀಯ ಚಿತ್ರ ಎನಿಸಿದೆ. ಇದರಲ್ಲಿ ಅತಿ ಸ್ವಾರಸ್ಯಕರ ವಿಚಾರವೆಂದರೆ, ರಾಜಮೌಳಿಯರ ಬಳಿ ವಿಶ್ವದೆಲ್ಲೆಡೆಯ ಭಾರತೀಯ ಚಿತ್ರಗಳ ಟಾಪ್ ಟೆನ್ ಲಿಸ್ಟ್ ನಲ್ಲಿ 3 ಶೀರ್ಷಿಕೆಗಳಿವೆ, ಇದರ ಆಧಾರದಿಂದಲೇ ಇವರು ದೇಶದಲ್ಲಿ ಬಾಕ್ಸ್ ಆಫೀಸ್ ನ್ನು ಲೂಟಿ ಹೊಡೆದು ಇತಿಹಾಸ ರಚಿಸುವ ಏಕಮಾತ್ರ ಭಾರತೀಯ ನಿರ್ದೇಶಕ ಎನಿಸಿದ್ದಾರೆ.