ಸರಸ್ವತಿ ಜಾಗೀರ್ದಾರ್*
ಸ್ಯಾಂಡಲ್ ವುಡ್ ನಲ್ಲಿ ಮದುವೆ ಸಂಭ್ರಮ ಜಯಮಾಲಾ ರಾಮಚಂದ್ರ ಅವರ ಮಗಳು ಸೌಂದರ್ಯ ಜಯಮಾಲಾ , ಅಂದೇ ಮಮತಾ ರಾವ್ ಸತೀಶ್ ಮಗ ರಾಣಾ ಮದುವೆ ಹೀಗಾಗಿ ಚಿತ್ರರಂಗದವರು ಎರಡೂ ಕಡೆ ಅಟೆಂಡೆನ್ಸ್ ಹಾಕಿ ಶುಭ ಹಾರೈಸಿದರು. ರಾಣಾ ತಾನು ಕಾಲೇಜು ದಿನಗಳಿಂದಲೂ ಪರಿಚಯವಿದ್ದ ಹುಡುಗಿಯನ್ನು ಇಷ್ಟ ಪಟ್ಟು ಮದುವೆಯಾಗಿದ್ದಾನೆ.
ವಿಶೇಷವೆಂದರೆ ಆ ಹುಡುಗಿ ಹೆಸರೂ ರಕ್ಷಿತಾ. ಚಾಮರವಜ್ರದಲ್ಲಿ ಗ್ರಾಂಡಾಗಿ ಮದುವೆ , ರಿಸೆಪ್ಷನ್ ನಡೆಯಿತು, ಸಿನಿಮಾ ರಂಗವೇ ಅಲ್ಲಿ ಸೇರಿತ್ತು ವಿಶೇಷ ಸರ್ಪ್ರೈಸ್ ಕೊಟ್ಟಿದ್ದು ದರ್ಶನ್ ವಿಜಯಲಕ್ಷ್ಮಿ ಮೊದಲಬಾರಿಗೆ ದರ್ಶನ್ ಈ ಆರು ತಿಂಗಳಲ್ಲಿ ಪಬ್ಲಿಕ್ ದರ್ಶನ ಕೊಟ್ಟಿದ್ದು..
ಪ್ರಾಣ ಸ್ನೇಹಿತೆ ರಕ್ಷಿತಾ ಪ್ರೇಮ್ ಹಾಗೂ ಗುರುಗಳಾದ ಗೌರಿಶಂಕರ್ ಬಗ್ಗೆ ಅಪಾರವಾದ ಪ್ರೀತಿ ಇಟ್ಟುಕೊಂಡಿದ್ದಾರೆ. ರಿಸೆಪ್ಷನ್ ಗೆ ಬಂದಾಗ ಅಭಿಮಾನಿಗಳ ಆ ಕ್ರೇಜ್ ಅಲ್ಲಿ ಎದ್ದು ಕಾಣುತ್ತಿತ್ತು.
ಮದುವೆಗೆ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಜೊತೆ ಆಗಮಿಸಿ ವಿಶ್ ಮಾಡಿದ್ರು. ಇಡೀ ಚಿತ್ರರಂಗವೇ ಅಲ್ಲಿತ್ತು ಎನ್ನಬಹುದು. ಹಿರಿಯ ತಾರೆಯರು, ನಿರ್ದೇಶಕರು, ನಿರ್ಮಾಪಕರು, ಪತ್ರಕರ್ತರು ಆಗಮಿಸಿ ಶುಭ ಹಾರೈಸಿದರು.
ಮದುವೆ, ರಿಸೆಪ್ಷನ್ ಸಡಗರದ ನಂತರ ಪಾರ್ಟಿ.. ಅಲ್ಲಿ ಮೇಘನಾ ರಾಜ್, ರಕ್ಷಿತಾ, ರಾಣಾ, ಪತ್ನಿ ರಕ್ಷಿತಾ, ಮಮತಾ ರಾವ್,ಶ್ರೀರಕ್ಷಾ,ಪ್ರಮಿಳಾ ,ಸುಂದರ್ ರಾಜ್ ಸಖತ್ ಡಾನ್ಸ್ ಮಾಡಿ ಪಾರ್ಟಿ ರಂಗೇರುವಂತೆ ಮಾಡಿದ್ದರು.