ಲೈಟ್‌ ಗ್ರೀನ್‌ ಕಲರ್‌ನ ಸ್ಟ್ರೈಪ್ಡ್ ಲಾಂಗ್‌ ಗೌನ್‌, ಸಮ್ಮರ್‌ ಸೀಸನ್ನಿನಲ್ಲಿ ಟ್ರೆಂಡಿ ಲುಕ್ಸ್ ಗೆ ಪರ್ಫೆಕ್ಟ್ ಎನಿಸುತ್ತದೆ.

ಸಮ್ಮರ್‌ ಪಾರ್ಟಿಗಾಗಿ ಸ್ಯಾಟಿನ್‌ ಫ್ಯಾಬ್ರಿಕ್‌ನಲ್ಲಿ ರೂಪುಗೊಂಡ ಈ ಒನ್‌ ಸೈಟೆಡ್‌ ಆಫ್‌ ಶೋಲ್ಡರ್ಡ್‌ ಸ್ಲೀವ್ ಲೆ‌ಸ್‌ ಡ್ರೆಸ್‌ನ ಗೆಟಪ್‌ ಬಹಳ ಸ್ಟೈಲಿಶ್‌ ಎನಿಸಿದೆ.

ಲಾಂಗ್‌ ಶರ್ಟ್‌ನ್ನು ಕ್ರಾಪ್‌ ಟಾಪ್‌ ಮತ್ತು ಫ್ಲೀಟೆಡ್‌ ಶಾರ್ಟ್‌ ಸ್ಕರ್ಟ್‌ ಜೊತೆ ಪೇರ್‌ ಮಾಡಿ. ಇದು ನಿಮಗೆ ಬೇಸಿಗೆಗೆ ಬೇಕಾದ ಲೇಟೆಸ್ಟ್ ಲುಕ್ಸ್ ಕೊಡುತ್ತದೆ.

ಡೀಪ್‌ ನೆಕ್‌ಲೈನ್‌ವುಳ್ಳ ಪೀಚ್‌ ಕಲರ್‌ನ ಮ್ಯೂಲೆಟ್‌ ಡ್ರೆಸ್‌ ಜೊತೆ ಕ್ರೋಶಿಯಾ ಕಸೂತಿಯ ಬ್ರೆಸ್ಟ್ ಲೈನಿನ ಕಾಂಬಿನೇಶನ್‌ ನಿಜಕ್ಕೂ ಅದ್ಭುತ ಎನಿಸುತ್ತದೆ. ಜೊತೆಗೆ ಸಿಂಪಲ್ ಮೇಕಪ್‌ ಮ್ಯಾಚಿಂಗ್‌ ಆ್ಯಕ್ಸೆಸರೀಸ್‌, ಒಂದು ಪ್ಲಸ್‌ ಪಾಯಿಂಟ್‌.

ಫಂಕಿ ಲುಕ್ಸ್ ಗಾಗಿ ರೆಟ್ರೋ ಲುಕ್ಸ್ ನ ಲಾಂಗ್‌ ಡೆನಿಮ್ ಶರ್ಟ್‌ನ್ನು, ಪ್ರಿಂಟೆಡ್‌ ಡಿಸೈನ್‌ವುಳ್ಳ ಬಿಳಿಯ ಟೀಶರ್ಟ್‌ ಮತ್ತು ಟೈಟ್‌ ಶಾರ್ಟ್‌ ಪ್ಯಾಂಟ್‌ ಜೊತೆ ಪೇರ್‌ ಮಾಡಿ. ಪ್ರವಾಸಕ್ಕೆ ಇದು ಹೇಳಿ ಮಾಡಿಸಿದ ಫ್ಯಾಷನೆಬಲ್ ಗೆಟಪ್‌!

ಹಾಟ್‌ ಸೀಸನ್‌ನಲ್ಲಿ ಕೂಲ್‌ ಲುಕ್ಸ್ ಗಾಗಿ ಲಾಂಗ್‌ ಸ್ಕರ್ಟ್‌ ಜೊತೆ ಕ್ಯಾಶ್ಯುಯೆಲ್ ಪ್ರಿಂಟೆಡ್‌ ಟೀಶರ್ಟ್‌ ಬೆಸ್ಟ್ ಎನಿಸುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ