ಜೀನ್ಸ್ ವಿಷಯ ಬಂದಾಗೆಲ್ಲ ಅದು ಪ್ಯಾಂಟ್‌ ಅಥವಾ ಜ್ಯಾಕೆಟ್‌ ಇರಲಿ, ಡೆನಿಮ್ ಎಲ್ಲರಿಗೂ ಅಚ್ಚುಕಟ್ಟಾಗಿ ಹೊಂದುತ್ತದೆ. ಹೆಣ್ಣುಮಕ್ಕಳು, ಯುವತಿಯರು, ಪ್ರೌಢ ಮಹಿಳೆಯರು, ಗಂಡಸರು ಎಲ್ಲರಿಗೂ ಇದು ಬೇಕೇಬೇಕು. ಎಲ್ಲ ಸೀಸನ್‌ನಲ್ಲೂ ಇದು ಅಂದವಾಗಿ ಒಪ್ಪುತ್ತದೆ. ಇದೀಗ ಫುಟ್‌ವೇರ್‌ ಫ್ಯಾಷನ್‌ನಲ್ಲೂ ಸಹ ಡೆನಿಮ್ ಪಾಲ್ಗೊಂಡಿದೆ. ನೀವು ಡೆನಿಮ್ ಬಯಸುವಿರಾದರೆ, ಮಾರುಕಟ್ಟೆಯಲ್ಲಿ ನಿಮಗಾಗಿ ಡೆನಿಮ್ ನ ಡಿಸೈನರ್‌ ಫುಟ್‌ವೇರ್‌ ಬಂದಿದೆ, ಇದನ್ನು ನೀವು ಯಾವುದೇ ಔಟ್‌ಫಿಟ್‌ ಜೊತೆ ಸಹ ಧರಿಸಬಹುದು.

ಮ್ಯಾಚಿಂಗ್‌ ಫುಟ್‌ವೇರ್‌

ಇತ್ತೀಚೆಗಂತೂ ಮಂಡಿವರೆಗಿನ ಬೂಟು, ಡೆನಿಮ್ ಸ್ಯಾಂಡಲ್, ಡೆನಿಮ್ ಜೀನ್ಸ್, ಡೆನಿಮ್ ಸ್ನೀಕರ್ಸ್‌ ಸಹ ಹೆಚ್ಚು ಚಾಲ್ತಿಯಲ್ಲಿವೆ. ನೀವು ಡೆನಿಮ್ ಧರಿಸುವ ಫ್ಯಾನ್‌ ಆಗಿದ್ದರೆ, ನೀವು ಪಾದಗಳ ಬೆರಳು ಎದ್ದು ತೋರಿಸುವ ಪೆನ್ಸಿಲ್‌ ಹೀಲ್‌ ಸಹ ಧರಿಸಬಹುದು. ಎತ್ತರದ ಹಿಮ್ಮಡಿಯ ಚಪ್ಪಲಿ ಧರಿಸುವವರಿಗೆಂದೇ ಪೆನ್ಸಿಲ್‌ ಹೀಲ್‌ನ ಚಪ್ಪಲಿಗಳಲ್ಲಿ ಸಾಕಷ್ಟು ಆಯ್ಕೆಗಳಿವೆ. ನೀವು ಆರಾಮ ಬಯಸುವವರಾದರೆ ಡೆನಿಮ್ ನ ಫ್ಲಾಟ್‌ ಫುಟ್‌ವೇರ್‌ ಸಹ ಮಾರ್ಕೆಟ್‌ನಿಂದ ಕೊಳ್ಳಬಹುದು. ಕಸೂತಿಗೊಳಿಸಲಾದ ಡೆನಿಮ್ ಫುಟ್‌ವೇರ್‌ನ್ನು ನೀವು  ನಿಮ್ಮ ವಾರ್ಡ್‌ರೋಬ್‌ ಕಲೆಕ್ಷನ್‌ಗೆ ಸೇರಿಸಬಹುದು. ಇದು ಎಲ್ಲಾ ಸೀಸನ್‌ನಲ್ಲೂ ಕೂಲ್‌ ಲುಕ್ಸ್ ಕೊಡುತ್ತದೆ.

Tags:
COMMENT