ಮೈಸೂರು ಎಂದಾಕ್ಷಣ ಎಲ್ಲರಿಗೂ ಥಟ್ ಅಂತಾ ನೆನಪಿಗೆ ಬರುವುದೇ ಮೈಸೂರು ದಸರಾ, ಮೈಸೂರು ಅರಮನೆ, ಮೈಸೂರು ಮೃಗಾಲಯ ಇದರ ಜೊತೆಗೆ ಮೈಸೂರಿನ ಹೆಸರನ್ನು ಜಗದ್ವಿಖ್ಯಾತ ಮಾಡಿದ ಮತ್ತೊಂದು ಅಂಶವೆಂದರೆ, ಮೈಸೂರು ಪಾಕ್. ಅರೇ! ಈ ಸಿಹಿ ತಿಂಡಿಗೂ ಮೈಸೂರಿಗೂ ಏನು ಸಂಬಂಧ? ಅಂತ ತಿಳಿಯ ಬೇಕಾದರೆ, ಆ ಸಿಹಿ ತಿಂಡಿ ಆವಿಷ್ಕಾರದ ಹಿಂದಿರುವ ರೋಚಕವಾದ ಸಂಗತಿ ತಿಳಿಯೋಣ ಬನ್ನಿ.

1884-1940ರ ವರೆಗೂ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಶ್ರೀ ನಾಲ್ಮಡೀ ಕೃಷ್ಣರಾಜ ಒಡೆಯಯರ್ ಅವರಿಗೆ ಉಟೋಪಚಾರಗಳಲ್ಲಿ ವಿಶೇಷವಾದ ಆಸಕ್ತಿ ಇತ್ತು. ಹಾಗಾಗಿ ಆವರ ಅಂಬಾ ವಿಲಾಸ್ ಅರಮನೆಯಲ್ಲಿ ಬಗೆ ಬಗೆಯ ಆಹಾರವನ್ನು ತಯಾರಿಸಲು ಅನುವಾಗವಂತಹ ದೊಡ್ಡದಾದ ಅಡುಗೆಮನೆ ಇದ್ದು ಅದನ್ನು ನಿರ್ವಹಿಸಸಲು ಅನೇಕ ಬಾಣಸಿಗರು ಇದ್ದರು. ಅಲ್ಲಿ ದಕ್ಷಿಣ ಭಾರತಿಯ, ಉತ್ತರ ಭಾರತೀಯ, ಯುರೋಪಿಯನ್ ಅಡುಗೆ ಯಿಂದ ಹಿಡಿದು ಅರಮನೆಯೊಳಗಿನ ವಿವಿಧ ದೇವಾಲಯಗಳ ನೈವೇದ್ಯವೂ ಇದೇ ಅಡುಗೆ ಮನೆಯಿಂದಲೇ ತಯಾರಾಗುತ್ತಿತ್ತು.

mp3

ಅದೊಮ್ಮೆ ಅರಮನೆಗೆ ಬರುತ್ತಿದ್ದ ವಿಶೇಷ ಅತಿಥಿಗಳಿಗಾಗಿ ಒಂದು ಒಳ್ಳೆಯ ಸಿಹಿ ತಿಂಡಿಯನ್ನು ತಯಾರಿವಂತೆ ಮಹಾರಾಜರು ಅರಮನೆಯ ಪ್ರಮುಖ ಬಾಣಸಿಗರಾಗಿದ್ದ ಕಾಕಾಸುರ ಮಾದಪ್ಪನವರಿಗೆ ತಿಳಿಸಿದರು. ಮಹಾರಾಜರ ಅಪ್ಪಣೆಗೆ ಮರು ಮಾತನಾಡದೇ ಆಡುಗೆ ಮನೆಗೆ ಬಂದ ಮಾದಪ್ಪನವರಿಗೆ ದಿಢೀರ್ ಎಂದು ಯಾವ ಸಿಹಿ ತಿಂಡಿಯನ್ನು ತಯಾರಿಸಬೇಕು ಎಂದು ತೋಚದೇ ಹೋದಾಗ ತಮ್ಮ ಮುಂದಿದ್ದ ಸಕ್ಕರೆಯಿಂದ ಪಾಕವನ್ನು ತಯಾರಿಸಿ ಅದಕ್ಕೆ ಕಡಲೆ ಹಿಟ್ಟು, ತುಪ್ಪ ಮತ್ತು ಎಣ್ಣೆ ಸೇರಿಸಿ ಮಿಠಾಯಿ ಆಕಾರದಲ್ಲಿ ಬಿಸಿ ಬಿಸಿಯಾದ ಹೊಸದೊಂದು ಸಿಹಿ ತಿಂಡಿಯೊಂದನ್ನು ತಯಾರಿಸಿ ಅದನ್ನು ಅಲಂಕಾರಿಕವಾದ ತಟ್ಟೆಯಲ್ಲಿ ಇರಿಸಿ ಮಹಾರಾಜ ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರಿಗೆ ರುಚಿ ನೋಡಲು ಕೊಟ್ಟರು. ಆ ಸಿಹಿತಿಂಡಿಯ ರುಚಿ ನೋಡಿದ ಮಹಾರಾಜರಿಗೆ ತುಂಬಾ ಖುಷಿಯಾಗಿ ಕಾಕಾಸುರ ಮಾದಪ್ಪನವರ ಬೆನ್ನು ತಟ್ಟಿ ಪ್ರಶಂಶಿಸಿ, ಇದು ಯಾವು ಹೊಸಾ ತಿಂಡಿ? ಇದರ ಹೆಸರೇನು? ಎಂದು ಕೇಳಿದರು.

guruSweets2

ಮಹಾರಾಜರ ಈ ಪ್ರಶ್ನೆಗೆ ಉತ್ತರಿಸಲಾರದೇ ತಬ್ಬಿಬ್ಬಾದ ಮಾದಪ್ಪನವರು, ಬುದ್ದೀ, ಇದು ಅಜಾನಕ್ಕಾಗಿ ತಯಾರಿಸಿದ ಹೊಸಾ ರುಚಿ. ಹಾಗಾಗಿ ಇದಕ್ಕೆ ಹೆಸರೇನೂ ಇಲ್ಲ ಎಂದಾಗ, ಸರಿ. ಈ ಹೊಸ ತಿಂಡಿಗೆ ಏನಾದರೊಂದು ಹೆಸರಿಡಬೇಕಲ್ಲವೆ? ಎಂದು ಯೋಚಿಸಿ ರುಚಿ ಶುಚಿಯಾದ ಅಡುಗೆಗೆ ನಳಪಾಕ ಎಂದು ಕರೆಯುತ್ತೇವೆ. ಅದಲ್ಲದೇ ಸಕ್ಕರೆ ಪಾಕದಿಂದ ನಮ್ಮ ಮೈಸೂರು ಅರಮನೆಯಲ್ಲಿ ತಯಾರಾಗಿರುವುದರಿಂದ ಇದಕ್ಕೆ ಮೈಸೂರು ಪಾಕ (ಪಾಕ್ ಅಥವಾ ಪಾಕ, ಎಂದರೆ ಸಂಸ್ಕೃತ ಅಥವಾ ಭಾರತದ ಬೇರೆ ಯಾವುದೇ ಭಾಷೆಗಳಲ್ಲಿ ಸಿಹಿ ಎಂದು ಅರ್ಥ ಕೊಡುತ್ತದೆ) ಎಂದು ಹೆಸರಿಡೋಣ ಎಂದಾಗಾ, ಎಲ್ಲರೂ ಸಂತೋಷದಿಂದ ಅನುಮೋದಿಸಿದ ಪರಿಣಾಮವಾಗಿ ಮೈಸೂರ್ ಪಾಕ್ ಎಂಬ ಹೊಸಾ ಸಿಹಿ ತಿಂಡಿ ಮೈಸೂರಿನ ಅರಮನೆಯಲ್ಲಿ ಆವಿಷ್ಕಾರವಾಯಿತು.

guruSweets

ಇಂತಹ ಒಳ್ಳೆಯ ಸಿಹಿ ತಿಂಡಿ ಕೇವಲ ಅರಮನೆಗಷ್ಟೇ ಸೀಮಿತವಾಗಬಾರದೆಂದು ನಿರ್ಧರಿಸಿದ ಮಹಾರಾಜರು ಮುಂದೆ ತಮ್ಮ ಬಾಣಸಿಗ ಕಾಕಾಸುರ ಮಾದಪ್ಪನವರಿಗೆ ಗುರುರಾಜ ಸ್ವೀಟ್ಸ್ ಎಂಬ ಅಂಗಡಿಯನ್ನು ಮೈಸೂರಿನ ಸಯ್ಯಾಜಿ ರಾವ್ ರಸ್ತೆಯ ಉದ್ದಗಲಕ್ಕೂ ಚಾಚಿಕೊಂಡಿರುವ ದೇವರಾಜ ಮಾರ್ಕೆಟ್ಟಿನಲ್ಲಿ ಕಟ್ಟಿಸಿಕೊಡುತ್ತಾರೆ ಈ ಮೂಲಕ ಅಧಿಕೃತವಾದ ಮೈಸೂರು ಪಾಕ್ ಜನಸಾಮಾನ್ಯರಿಗೂ ಸಿಗುವಂತೆ ಮಾಡಿಕೊಡುತ್ತಾರೆ. ಇಂದಿಗೂ ಸಹಾ, ಮಾದಪ್ಪನವರ ಕುಟುಂಬದವರೇ ಗುರು ಸ್ವೀಟ್ಸ್ ಅಂಗಡಿಯನ್ನು ಅದೇ ಸ್ಥಳದಲ್ಲಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ