``ಯಾಕೋ ಯಾವುದರಲ್ಲೂ ಉತ್ಸಾಹವೇ ಇಲ್ಲ, ಹಾಳು ಮರೆವು ಬೇರೆ ಕಾಡುತ್ತೆ, ಫ್ರಿಜ್‌ ಹತ್ತಿರ ಹೋಗಿರ್ತೀನಿ, ಏನು ತಗೋಳೋಕೆ ಬಂದಿದ್ದೀನಿ ಅನ್ನೋದೆ ಮರೆತು ಹೋಗಿರುತ್ತೆ. ದಪ್ಪಗೆ ಬೇರೆ ಆಗಿಬಿಟ್ಟಿದ್ದೀನಿ ಅಂತ ವಾಕಿಂಗ್‌ ಹೋಗ್ತೀನಿ. ಒಂದಷ್ಟು ದೂರ ಹೋದ ನಂತರ ಗ್ಯಾಸ್‌ ಆರಿಸಿ ಬಂದಿದ್ದೀನೋ ಇಲ್ಲವೋ ಎನ್ನುವ ಆತಂಕ, ಎರಡೆರಡು ಬಾರಿ ಚೆಕ್‌ ಮಾಡಿದ್ದರೂ ಲಾಕ್‌ ಸರಿಯಾಗಿ ಮಾಡಿದ್ದೇನೋ ಇಲ್ಲವೋ ಎನ್ನುವ ಕಳವಳ.

``ಜೊತೆಗೆ ಮಗನಿಗೆ ನನ್ನ ಮಾತೇ ಬೇಡಾ, ನಾನೇನಾದರೂ ಹೇಳಲು ಪ್ರಾರಂಭಿಸಿದರೆ ಸಾಕು ಜಾಗ ಖಾಲಿ ಮಾಡುತ್ತಾನೆ. ಮಗಳಿಗೆ ಕಾಲೇಜು ಲೈಫ್ `ಹದಿಹರೆಯ, ಸ್ವಲ್ಪ ಜಾಗರೂಕತೆ ವಹಿಸುವ,' ಎಂದರೆ `ಯಾಕಮ್ಮಾ ಯಾವಾಗಲೂ ಹೇಳಿದ್ದೇ ಹೇಳ್ತೀಯಾ? ನನಗೂ ಗೊತ್ತಾಗುತ್ತೆ,' ಎಂದು ಮೂಗು ಮುರಿಯುತ್ತಾಳೆ. ಜೊತೆಗೆ ನನಗೋ ಊರಿಗೆ ಮುಂಚೆ ಸಿಟ್ಟು ಬಂದುಬಿಡುತ್ತೆ. ನನ್ನ ಮಾತೂ ಅಂದ್ರೆ ಯಾರಿಗೂ ಬೇಡ, ಗೌರವವೇ ಇಲ್ಲ,

``ಇವರಿಗೇನಾದ್ರೂ ಹೇಳಿದ್ರೆ ನಕ್ಕುಬಿಡ್ತಾರೆ. ಇಲ್ಲದಿದ್ದರೆ `ಹೋಗಲಿ ಅವರಿಗ್ಯಾಕೆ ಮತ್ತೆ ಮತ್ತೆ ಹೇಳ್ತೀಯಾ, ನೀನಾದರೂ ಸುಮ್ಮನಿರಬಾರದಾ?' ಎಂದು ನನ್ನ ತಪ್ಪನ್ನೇ ಎತ್ತಿ ತೋರಿಸುತ್ತಾರೆ. ಯಾಕೋ ಜೀವನವೇ ಬೇಸರವಾಗಿಬಿಟ್ಟಿದೆ,' ಎಂದು ಗೆಳತಿ ಬೇಸರ ಮಾಡಿಕೊಂಡಳು.

ಪ್ರತಿಯೊಬ್ಬರ ಜೀವನದಲ್ಲೂ ನಲವತ್ತರ ನಂತರ ಕಾಡುವ ವಿಷಯಗಳಿವೆ. ಮಕ್ಕಳಿಗೆ ಈವರೆಗೂ ಎಲ್ಲಕ್ಕೂ ಬೇಕಾಗಿದ್ದ ತಾಯಿ ಅಷ್ಟೊಂದು ಬೇಕೆನಿಸುವುದಿಲ್ಲ, ಅವರ ಗೆಳತಿಯರ ಬಳಗ ಅವರಿಗೆ ಪ್ರಿಯವಾಗುತ್ತದೆ. ಅದಲ್ಲದೆ, ಈಗಿನ ಸಾಮಾಜಿಕ ಜಾಲತಾಣಗಳು ಅವರನ್ನು ಪೋಷಕರಿಂದ ದೂರ ಮಾಡುತ್ತದೆ. ಸದಾ ಫೇಸ್‌ಬುಕ್‌, ಟ್ವಿಟರ್‌ಮೊಬೈಲ್‌ನೊಂದಿಗೇ ಸಮಯ ಕಳೆದುಬಿಡುತ್ತಾರೆ. ಈವರೆಗೂ ಬಹಳ ಬಿಜಿಯಾಗಿದ್ದ ತಾಯಿಯ ಕೈ ಬಿಡುಲಾಗುವುದರ ಜೊತೆಗೆ ಏಕಾಂಗಿತನ ಭಾಸವಾಗುತ್ತದೆ. ಆರೋಗ್ಯ ಸ್ವಲ್ಪ ಮಟ್ಟಿಗೆ ಕೈ ಕೊಡುತ್ತದೆ.

ಈವರೆಗೂ ಇರದ ನೋವುಗಳು, ಸ್ಥೂಲಕಾಯ, ಮರೆವು ಪ್ರಾರಂಭವಾಗುತ್ತದೆ. ಜೊತೆಗೆ ಮೆನೋಪಾಸ್‌ನಿಂದ ಆಗುವ ದೈಹಿಕ ಮತ್ತು ಮಾನಸಿಕ ತೊಂದರೆಗಳು, ನಾನು ಏಕಾಂಗಿ ಎನ್ನುವ ಒಂದು ರೀತಿಯ ಅನಾಥ ಭಾವವನ್ನು ಮೂಡಿಸಿಬಿಡುತ್ತದೆ. ಈವರೆಗೂ ತಾವಿಲ್ಲದೆ ಏನೂ ಇಲ್ಲ ಎಂದುಕೊಳ್ಳುತ್ತಿದ್ದವರಿಗೆ ಪಾತ್ರದ ಬದಲಾವಣೆ ಖಿನ್ನತೆಯನ್ನುಂಟು ಮಾಡುತ್ತದೆ.

ಆದರೆ ಜೀವನದ ಈ ಹಂತದ ಸಮರ್ಪಕ ಉಪಯೋಗ ಮಾಡಿಕೊಂಡಲ್ಲಿ ಸಿಗುವ ಆನಂದಕ್ಕೆ ಎಣೆಯೇ ಇಲ್ಲ. ಮಕ್ಕಳು ಬೆಳೆದರೆನ್ನುವ ಸಕಾರಾತ್ಮಕ ಭಾವನೆಯನ್ನು ಬೆಳೆಸಿಕೊಂಡು ಈವರೆಗೂ ತಾವು ಮಾಡಲಾಗದ, ಸಾಧಿಸಲಾಗದ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ಸಿಗುವ ಸಂತಸವೇ ಬೇರೆ. ನಲವತ್ತರ ನಂತರ ನಮ್ಮೊಂದಿಗೆ ಬಂದು ಸೇರಲು ಒಂದೊಂದೇ ಅನಾರೋಗ್ಯಗಳು ಕಾಯುತ್ತಿರುತ್ತವೆ. ಅವುಗಳನ್ನು ನಿಯಂತ್ರಿಸಲು ಪಾಲಿಸಬೇಕಾದ ಡಯೆಟ್‌ ಮತ್ತು ದೈಹಿಕವಾಗಿ ಫಿಟ್ ಎನಿಸಿಕೊಳ್ಳಲು ವಾಕಿಂಗ್‌, ಯೋಗ, ಇಷ್ಟವೆನಿಸುವ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಎಲ್ಲ ಸಮಸ್ಯೆಗಳೂ ಮರೆತು ಹೋಗಿಬಿಡುತ್ತವೆ. ಮಿಡಲ್ ಏಜ್‌ ಕ್ರೈಸಿಸ್‌ ಅಥವಾ ಮಧ್ಯ ವಯಸ್ಸಿನ ಸಂಕಟದ ಸಮಯದ ಬಗ್ಗೆ ಸಂಶೋಧಕರು ತಮ್ಮದೇ ಆದ ಪರಿಭಾಷೆಗಳನ್ನು ನೀಡಿದ್ದಾರೆ. ಮನಶ್ಶಾಸ್ತ್ರದ ಪಿತಾಮಹ ಎನ್ನಿಸಿಕೊಂಡಿರುವ ಸಿಗ್ಮಂಡ್‌ ಫ್ರಾಯ್ಡ್ ಹೇಳುವುದು `ಈವರೆಗೂ ಜೀವನದಲ್ಲಿ ಏರುವಿಕೆ ಆದರೆ ನಲವತ್ತರ ನಂತರ ಇಳಿಯುವಿಕೆ ಆರಂಭವಾಗುತ್ತದೆ. ಈವರೆಗೂ ಕಾಣದ ಸಾವಿನ ಭಯ ಕಾಡುತ್ತದೆ,' ಎನ್ನುತ್ತಾನೆ. ಈವರೆಗೂ ಮಕ್ಕಳ ವಿಜಯವನ್ನೇ ವೈಭವೀಕರಿಸುವುದರಲ್ಲಿ ಜೀವನ ಕಳೆದುಹೋಗಿರುತ್ತದೆ. ಈಗ ಅವರಿಗೆ ತಮ್ಮದೇ ಆದ ಐಡೆಂಟಿಟಿ, ಗುರುತಿಸುವಿಕೆ ಬೇಕೆನ್ನುವ ತುಡಿತ ಆರಂಭವಾಗುತ್ತದೆ. ಇದಂತೂ ನಾವು ಬಹಳಷ್ಟು ಮಹಿಳೆಯರಲ್ಲಿ ಕಾಣುವ ವಿಷಯ. ನಲವತ್ತರವರೆಗೂ ಬರಿಯ ಸಂಸಾರ ಮನೆಗೆಲಸ ಎನ್ನುವವರು ತದ ನಂತರ ಅನೇಕ ಸಾಧನೆಗಳನ್ನು ಮಾಡುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ