ಪ್ರತಿ ದಿನ ಮುಂಜಾನೆ 1 ಲೋಟ ಬಿಸಿ ನೀರಿಗೆ ತುಸು ಜೇನುತುಪ್ಪ ಬೆರೆಸಿ, ನಿಂಬೆಹಣ್ಣು ಹಿಂಡಿಕೊಳ್ಳುವುದರಿಂದ ಆರೋಗ್ಯಕ್ಕೆ ಎಷ್ಟು ಲಾಭಕರ ಎಂದು ಗೊತ್ತೇ ಇದೆ. ಇದು ನಮ್ಮ ದೇಹದ ತೂಕ ಕರಗಿಸುವುದಲ್ಲದೆ, ಈ ಬಿರು ಬಿಸಿಲಿನ ದಿನಗಳನ್ನು ಉತ್ಸಾಹದಿಂದ ಎದುರಿಸಲು ಹೊಸ ಲವಲವಿಕೆ ತುಂಬಿಕೊಡುತ್ತದೆ. ಇಲ್ಲಿವೆ ಅದರ ನಾನಾ ಪ್ರಯೋಜನಗಳು.

ಮಲಬದ್ಧತೆ ಓಡಿಸುತ್ತದೆ : ಈ ಮಿಶ್ರಣ ನಿಮ್ಮ ಮಲಬದ್ಧತೆಯ ಸಮಸ್ಯೆಗೆ ರಾಮಬಾಣವಾಗಿದೆ. ಇದು ನಿಮ್ಮ ಆಂತರಿಕ ಮಲಿನತೆಗಳನ್ನು ಶುದ್ಧಗೊಳಿಸಿ ಮಲವಿಸರ್ಜನೆಗೆ ಸಹಕರಿಸುತ್ತದೆ. ಇದು ಕರುಳಿನ ಹಾರ್ಮೋನುಗಳ ಸ್ರವಿಸುವಿಕೆಗೆ ಸಹಕರಿಸಿ, ಹೈಡ್ರೇಷನ್‌ಗೆ ಒತ್ತುಕೊಡುತ್ತದೆ. ಒಣಗಿದ ಮಲಕ್ಕೆ ತೇವಾಂಶ ತುಂಬಿ ಹೊರದಬ್ಬುತ್ತದೆ. ಒಟ್ಟಾರೆ ಮಲಬದ್ಧತೆಯ ಸಮಸ್ಯೆಗೆ ಇದು ಸುಲಭದ ಮನೆಮದ್ದು.

ಪಚನಕ್ರಿಯೆ ಸುಧಾರಿಸುತ್ತದೆ : ನಿಂಬೆ, ಜೇನು, ಬಿಸಿನೀರಿನ ಮಿಶ್ರಣ ನಿಮ್ಮ ಪಚನಕ್ರಿಯೆಗೆ ಬಲು ಸಹಕಾರಿ. ನಿಮ್ಮ ಜೀರ್ಣಶಕ್ತಿಗೆ ಇನ್‌ಸ್ಟೆಂಟ್‌ ಬೂಸ್ಟರ್‌ ಆಗಿದೆ. ನಿಂಬೆ ನಮ್ಮ ಲಿವರ್‌ನ್ನು ಹೆಚ್ಚು ಬೈಲ್ ಜೂಸ್‌ ಸುರಿಸುವಂತೆ ಮಾಡುವುದಲ್ಲದೆ, ಜೀರ್ಣಾಂಗ ವ್ಯೂಹಕ್ಕೆ ಅನಗತ್ಯ ವಿಷಮಯ ಪದಾರ್ಥ ತೆಗೆದುಹಾಕಲು, ತನ್ನ ಆಮ್ಲೀಯ ಗುಣದಿಂದ ಧಾರಾಳ ಸಹಾಯ ನೀಡುತ್ತದೆ. ಜೇನು ಆ್ಯಂಟಿ ಬ್ಯಾಕ್ಟೀರಿಯಲ್ ಆಗಿ ಕೆಲಸ ಮಾಡಿ, ಜೀರ್ಣಾಂಗಗಳ ಸೋಂಕು ನಿವಾರಿಸುತ್ತದೆ. ಜೊತೆಗೆ ಜೀರ್ಣಕ್ರಿಯೆಗೆ ಬೇಕಾಗುವ ರಸಗಳನ್ನು ಸ್ರವಿಸಲು ನೆರವಾಗಿ, ವಿಷಾಣುಗಳನ್ನು ನಿವಾರಿಸುತ್ತದೆ.

ಜಠರ ಶುದ್ಧೀಕರಣ ಹಾಗೂ ದೊಡ್ಡ ಕರುಳಿನ ಕ್ರಿಯಾಶೀಲತೆ : ಆಯುರ್ವೇದದ ಪ್ರಕಾರ, ನಮ್ಮ ಹೊಟ್ಟೆಯಲ್ಲಿ `ಆಮ' ಅಥವಾ ವಿಷಮಯ ಪದಾರ್ಥ ಸಂಗ್ರಹಗೊಳ್ಳುತ್ತದೆ. ಅದರಲ್ಲಿ ಅಜೀರ್ಣಗೊಂಡ ಆಹಾರ, ಕರುಳಿನ ಮೃತಕೋಶಗಳು, ಡೆಡ್‌ ಬ್ಯಾಕ್ಟೀರಿಯಾ ಇತ್ಯಾದಿಗಳು ಪದರಗಟ್ಟಿ ಜೀರ್ಣ ವ್ಯವಸ್ಥೆಗೆ ಅಡ್ಡಿಪಡಿಸುತ್ತವೆ. ಇದು ಹಲವು ರೋಗಗಳಿಗೆ ಮೂಲ. ನಿಂಬೆ, ಜೇನಿನ ಬಿಸಿನೀರು ಮಿಶ್ರಣದಿಂದ ದೊಡ್ಡ ಕರುಳಿನ ಆಂತರಿಕ ಭಾಗಗಳು ಪ್ರಭಾವಿತಗೊಂಡು ಈ `ಆಮ'ದ ನಿವಾರಣೆಗೆ ದಾರಿಯಾಗುತ್ತದೆ. ಸುಲಭದ ಮಾತುಗಳಲ್ಲಿ ಹೇಳಬೇಕೆಂದರೆ, ಈ ಮಿಶ್ರಣ ನಮ್ಮ ಜಠರ, ಕರುಳಿನ ಒಳ ಭಾಗಗಳನ್ನು ಚೆನ್ನಾಗಿ ಶುದ್ಧೀಕರಿಸಿ ಜೀರ್ಣಕ್ರಿಯೆ ಸಲೀಸಾಗುವಂತೆ ಮಾಡುತ್ತದೆ. ಆಗ ದೇಹದ ವಿಷಮಯ ಪದಾರ್ಥ ಹೊರಹೋಗಲು, ಪೌಷ್ಟಿಕಾಂಶಗಳನ್ನು ಹೀರಿಕೊಳ್ಳಲು, ಹೈಡ್ರೇಟೆಡ್‌ ಆಗಿರಲು ನೆರವು ಸಿಗುತ್ತದೆ. ಅದನ್ನು ನಿರ್ಲಕ್ಷಿಸಿದರೆ ಹೊಟ್ಟೆ ಉಬ್ಬರಿಸಿಕೊಂಡು ಇನ್ನಿಲ್ಲದ ತೊಂದರೆಗೆ ದಾರಿಯಾಗುತ್ತದೆ.

ದುಗ್ಧನಾಳ ವ್ಯವಸ್ಥೆಯ ಶುದ್ಧೀಕರಣ : ನಮ್ಮ ಆಂತರಿಕ ದುಗ್ಧನಾಳ ವ್ಯವಸ್ಥೆ ನಿರ್ಜಲೀಕರಣಗೊಂಡಾಗ ಅದು ಹಲವು ರೋಗಗಳಿಗೆ ನಾಂದಿಯಾಗುತ್ತದೆ. ಅಗತ್ಯ ರಸಗಳ ಹಾಗೂ ನೀರಿನ ಕೊರತೆಯುಂಟಾದಾಗ ಈ ವ್ಯವಸ್ಥೆಯಲ್ಲಿ ಅಸಮತೋಲನ ಉಂಟಾಗಿ, ಅದು ಮಲಬದ್ಧತೆಗೆ ತಿರುಗುತ್ತದೆ. ಜೊತೆಗೆ ಅನಿದ್ರೆ, ಹೈ ಬಿ.ಪಿ., ತೀವ್ರ ಮಾನಸಿಕ ಒತ್ತಡ ಇತ್ಯಾದಿ ಕಾಡುತ್ತವೆ. ನಿಂಬೆ ಜೇನಿನ ಈ ಮಿಶ್ರಣ ಸೇವಿಸುವುದರಿಂದ, ಈ ಇಡೀ ವ್ಯವಸ್ಥೆ ಹೈಡ್ರೇಟ್‌ಗೊಂಡು ಮೇಲಿನ ಎಲ್ಲಾ ಸಮಸ್ಯೆಗಳನ್ನೂ ನಿವಾರಿಸುವುದಲ್ಲದೆ, ನಿಮ್ಮ ಇಮ್ಯುನಿಟಿಯನ್ನೂ ಸುಧಾರಿಸುತ್ತದೆ.

ಇನ್ಸ್ಟೆಂಟ್ಶಕ್ತಿವರ್ಧಕ ಬೂಸ್ಟರ್‌ : ಬಹಳ ಸುಸ್ತು, ಏನೂ ಮಾಡಲಾಗುತ್ತಿಲ್ಲ ಅನಿಸುತ್ತಿದೆಯೇ? ಈ ಮಿಶ್ರಣ ನಿಮಗೆ ಬಲು ಸೂಕ್ತ. ಇಲ್ಲಿನ ಜೇನು ಇನ್‌ಸ್ಟೆಂಟ್‌ ಶಕ್ತಿವರ್ಧಕ ಬೂಸ್ಟರ್‌ ಆಗಿ ಕೆಲಸ ಮಾಡುತ್ತದೆ. ಮೈಂಡ್‌ ಕ್ಲಿಯರ್‌ ಆಗಲು ನೀರು ಸಹಕರಿಸುತ್ತದೆ. ಮೆದುಳಿಗೆ ತಾಜಾ ರಕ್ತದ ರವಾನೆಯಾಗುತ್ತದೆ. ನಿಂಬೆ ಹೊಟ್ಟೆಯಲ್ಲಿನ ಕಿಣ್ವಗಳನ್ನು ಚುರುಕುಗೊಳಿಸಿ, ಆಹಾರ ಪಚನಕ್ಕೆ ಪೂರಕವಾಗುವಂತೆ ಮಾಡುತ್ತದೆ. ಜೊತೆಗೆ ನಿಂಬೆಯ ಸುವಾಸನೆ ಮೂಡ್‌ ಫ್ರೆಶ್‌ ಆಗಲು ಸಹಕಾರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ