ಪ್ರತಿ ಋತುವಿನಲ್ಲಿಯೂ ಸುಂದರವಾಗಿ ಕಾಣಬೇಕೆಂಬುದು ಮಹಿಳೆಯರ ಆದ್ಯ ಬಯಕೆಯಾಗಿದೆ. ಆದ್ದರಿಂದ ಅವರು ಋತುವಿಗೆ ತಕ್ಕಂತೆ ಮತ್ತು ತಮಗೆ ಸೂಟ್‌ ಆಗುವ ಹಾಗೂ ಮೇಕಪ್‌ ಮಾಡಿಕೊಳ್ಳಲು ಇಚ್ಛಿಸುತ್ತಾರೆ. ಆದರೆ ಬೇಸಿಗೆಯ ಉರಿಬಿಸಿಲಿನಲ್ಲಿ ಬೆವರಿನಿಂದ ಮೇಕಪ್‌ನ್ನು ರಕ್ಷಿಸಿಕೊಳ್ಳುವುದು ಮಹಿಳೆಯರಿಗೆ ಸವಾಲಾಗಿರುತ್ತದೆ. ಅದರ ಬಗ್ಗೆ ಮೇಕಪ್‌ ಆರ್ಟಿಸ್ಟ್ ಪ್ರಿಯಾ ಹೀಗೆ ಹೇಳುತ್ತಾರೆ, “ಋತುವಿಗೆ ತಕ್ಕಂತೆ ಫ್ಯಾಷನ್‌ ಟ್ರೆಂಡ್‌ ಬದಲಾಗುತ್ತಿರುವಂತೆ ಮೇಕಪ್‌ ಕೂಡ ಬದಲಾಗುತ್ತದೆ. ಬೇಸಿಗೆಯಲ್ಲಿ ಸಿಂಪಲ್ ಆಗಿ ತೆಳುವಾಗಿ ಮೇಕಪ್‌ ಮಾಡಿಕೊಳ್ಳಿ. ಅದರಿಂದ ಮೇಕಪ್‌ನ್ನು ಪದೇ ಪದೇ ಸರಿಪಡಿಸುವ ಅಗತ್ಯವಿಲ್ಲ. ತ್ವಚೆಯಲ್ಲಿ ಮೇಕಪ್‌ ದೀರ್ಘಕಾಲ ಉಳಿಯಲು ಕೆಲವು ವಿಶೇಷ ಮೇಕಪ್‌ ಟಿಪ್ಸ್ ಅನುಸರಿಸಬೇಕು.”

ಬನ್ನಿ, ಪ್ರಿಯಾರಿಂದ ಕೆಲವು ಸುಲಭವಾದ ವಿಶೇಷ ಟಿಪ್ಸ್ ಕಲಿತು ಅವನ್ನು ಅನುಸರಿಸಿ ಈ ಹಾಟ್‌ ಸೀಸನ್‌ನಲ್ಲೂ ಕೂಲ್ ‌ಕೂಲ್ ‌ಆಗಿ ಕಾಣಬಹುದು.

ಮೇಕಪ್ಬೇಸ್

ಯಾವುದೇ ರೀತಿಯ ಮೇಕಪ್‌ನ ಆರಂಭ ಮೇಕಪ್‌ ಬೇಸ್‌ನಿಂದಲೇ ಉಂಟಾಗುತ್ತದೆ. ಆದ್ದರಿಂದ ಸಮ್ಮರ್‌ ಮೇಕಪ್‌ಗೂ ಮುಂಚೆ ಮೇಕಪ್‌ ಬೇಸ್‌ ತಯಾರಿಸಲಾಗುತ್ತದೆ. ಬೇಸಿಗೆಯಲ್ಲಿ ಫೌಂಡೇಶನ್‌ ಹಚ್ಚುವುದರಿಂದ ಮುಖ ಕೊಂಚ ಹೆವಿಯಾಗಿ ಕಾಣುತ್ತದೆ. ಆದ್ದರಿಂದ ಫೌಂಡೇಶನ್‌ ಬದಲು ಕನ್ಸೀಲರ್‌ ಉಪಯೋಗಿಸಿ. ಅದು ಮುಖದ ಕಲೆಗಳನ್ನು ಅಳಿಸಿ ಸೌಂದರ್ಯ ಕೊಡುತ್ತದೆ. ಸಿಂಪಲ್ ಆಗಿ ಕಾಣಲು ಲಿಕ್ವಿಡ್‌ ಕನ್ಸೀಲರ್‌ ಉಪಯೋಗಿಸಿ. ಮುಖದ ಮೇಲೆ ಯಾವುದಾದರೂ ತಂಪಾದ ಜಾಗವೆಲ್ಲಾ ಕನ್ಸೀಲರ್ ಉಪಯೋಗಿಸಿ. ಅದರಿಂದ ಮೇಕಪ್‌ ಮಾಡುವಾಗ ಬೆವರು ಬರುವುದಿಲ್ಲ ಮತ್ತು ಕನ್ಸೀಲರ್‌ ಸರಿಯಾಗಿ ಅಂಟುತ್ತದೆ.

makeup-mishaps-fixes-stylelist-canada-14ca

ಕಾಂಪ್ಯಾಕ್ಟ್ ಪೌಡರ್

ಕನ್ಸೀಲರ್‌ ಹಚ್ಚಿದ ನಂತರ ಗಲ್ಲ ಮತ್ತು ದವಡೆಯ ಸತ್ತಮುತ್ತಲಿರುವ ತ್ವಚೆಯ ಮೇಲೆ ಡಸ್ಟ್ ಇರುವ ಕಾಂಪ್ಯಾಕ್ಟ್ ಪೌಡರ್‌ ಹಚ್ಚಿ. ಅದನ್ನು ಹಚ್ಚುವಾಗ ತ್ವಚೆಯನ್ನು ಹಗುರವಾಗಿ ಸ್ಟ್ರೆಚ್‌ ಮಾಡಿ. ಅದರಿಂದ ಕಾಂಪ್ಯಾಕ್ಟ್ ಪೌಡರ್‌ ಇಡೀ ಮುಖದ ಮೇಲೆ ಚೆನ್ನಾಗಿ ಹರಡಿಕೊಳ್ಳುತ್ತದೆ. ಹೆಚ್ಚು ಕಾಂಪ್ಯಾಕ್ಟ್ ಪೌಡರ್‌ ಬಳಸಬೇಡಿ. ಏಕೆಂದರೆ ಅದು ಮುಖದ ತ್ವಚೆಯಲ್ಲಿನ ರಂಧ್ರಗಳನ್ನು ಮುಚ್ಚಿಬಿಡುತ್ತದೆ.

ಬ್ಲಶ್‌ ಆನ್‌ ಬೇಸಿಗೆಯಲ್ಲಿ ಪೌಡರ್‌ಯುಕ್ತ ಬ್ಲಶರ್‌ ಉಪಯೋಗಿಸಿ. ಬ್ಲಶರ್‌ ಹಚ್ಚುವಾಗ ನಿಮ್ಮ ಸ್ಕಿನ್‌ ಟೋನ್‌ ಗಮನದಲ್ಲಿಡಿ. ಅದಕ್ಕೆ ತಕ್ಕಂತೆ ಗುಲಾಬಿ ಅಥವಾ ಲೈಟ್‌ ಬ್ರೌನ್‌ ಕಲರ್‌ನ ಬ್ಲಶರ್‌ ಹಚ್ಚಿ ಲೈಟ್‌ ಸಮ್ಮರ್‌ ಲುಕ್‌ಗಾಗಿ ಮೇಕಪ್‌ ಆದಷ್ಟೂ ಸಿಂಪಲ್ ಆಗಿರಲಿ. ಕೆನ್ನೆಯ ಮೇಲ್ಬಾಗದಲ್ಲಿ ಬ್ಲಶರ್‌ ಹಚ್ಚಿ. ಮುಖಕ್ಕೆ ಪೌಡರ್‌ ಇರುವ ಬ್ಲಶರ್‌ ಹಚ್ಚಿ. ಕ್ರೀಮ್ ಯುಕ್ತ ಬ್ಲಶರ್‌ ಬೇಡ. ಅದನ್ನು ಹಚ್ಚಿದರೆ ಮುಖದ ಮೇಲೆ ಬೇಗನೆ ಬೆವರು ಬರುತ್ತದೆ.

ಲಿಪ್ಸ್ಟಿಕ್

ತುಟಿಗಳಿಗೆ ಲಿಪ್‌ ಲೈನರ್‌ನಿಂದ ಆಕಾರ ಕೊಟ್ಟು ಮ್ಯಾಟ್‌ ಲಿಪ್‌ಸ್ಟಿಕ್‌ ಹಚ್ಚಿ. ಅದರ ಮೇಲೆ ಲಿಪ್‌ ಸೀಲರ್‌ ಹಚ್ಚಿ. ತೆಳುವಾದ ಮತ್ತು ಅರಳಿದ ಬಣ್ಣ ಈ ದಿನಗಳಲ್ಲಿ ಚೆನ್ನಾಗಿರುತ್ತದೆ. ಆದ್ದರಿಂದ ನ್ಯೂಡ್‌ ಕಲರ್‌ನ್ನೇ ಆಯ್ಕೆ ಮಾಡಿಕೊಳ್ಳಿ. ಅಂದಹಾಗೆ ಈ ಸಮ್ಮರ್‌ನಲ್ಲಿ ನಿಯಾನ್‌ ಕಲರ್‌ಗಳೂ ಸಹ ಟ್ರೆಂಡ್‌ನಲ್ಲಿವೆ. ಆದ್ದರಿಂದ ನಿಮ್ಮ ಡ್ರೆಸ್‌ನೊಂದಿಗೆ ಮ್ಯಾಚ್‌ ಆಗುವ ಬಣ್ಣವನ್ನೂ ಆರಿಸಬಹುದು. ಬೇಸಿಗೆಯಲ್ಲಿ ತುಟಿಗಳಿಂದ ಲಿಪ್‌ಸ್ಟಿಕ್‌ ಬಹಳ ಬೇಗ ಬಂದುಬಿಡುತ್ತದೆ. ಆದ್ದರಿಂದ ಅದು ಹೆಚ್ಚು ಹೊತ್ತು ಇರಲು ತುಟಿಗಳ ಮೇಲೆ ಪ್ರೈಮರ್‌ ಉಪಯೋಗಿಸಬಹುದು. ಈ ವಾತಾವರಣದಲ್ಲಿ ಲಿಪ್‌ ಗ್ಲಾಸ್‌ ಹಚ್ಚಬೇಡಿ. ಅದು ಅಂಟಿಕೊಳ್ಳುವುದಿಲ್ಲ, ಬದಲಾಗಿ ಹರಡಿಕೊಳ್ಳುತ್ತದೆ.

blusher

ಕಾಡಿಗೆ

ಒಂದುವೇಳೆ ನೀವು ತೆಳುವಾಗಿ ಮೇಕಪ್‌ ಮಾಡುತ್ತಿದ್ದರೆ ಡಾರ್ಕ್‌ ಕಾಡಿಗೆ ಉಪಯೋಗಿಸಬೇಡಿ. ಬೆಳಗಿನ ಹೊತ್ತು ಕಾಡಿಗೆ ತೆಳುವಾಗಿ ಹಚ್ಚಿ. ರಾತ್ರಿ ಯಾವುದಾದರೂ ಪಾರ್ಟಿ ಅಥವಾ ಫಂಕ್ಷನ್‌ಗೆ ಹೋಗುತ್ತಿದ್ದರೆ ಡಾರ್ಕ್‌ ಕಾಡಿಗೆ ಹಚ್ಚಬಹುದು. ನಿಮ್ಮ ಐ ಲೈನರ್‌ ಹಾಗೂ ಐಶ್ಯಾಡೋ ಬಹಳ ಹೊತ್ತು ಕಣ್ಣುಗಳ ಮೇಲೆ ನಿಲ್ಲಬೇಕೆಂದರೆ ಲ್ಯಾನ್ಸ್ ಇರುವ ಐ ಶ್ಯಾಡೋ ಪ್ರೈಮರ್‌ಉಪಯೋಗಿಸಬಹುದು.

ಕಾಡಿಗೆ ಹಚ್ಚು ಮೊದಲು ಕಣ್ಣುಗಳ ಕೆಳಗೆ ಕಾಂಪ್ಯಾಕ್ಟ ಪೌಡರ್‌ ಹಚ್ಚಿ. ನಂತರ ಕಾಡಿಗೆ ಹಚ್ಚಿ. ಅದರಿಂದ ಕಾಡಿಗೆ ಹರಡುವುದಿಲ್ಲ. ಕಣ್ಣುಗಳಿಗೆ ಲಿಕ್ವಿಡ್‌ ಐಲೈನರ್‌ ಉಪಯೋಗಿಸಿ. ಅದರ ಜಾಗದಲ್ಲಿ ಪೆನ್ಸಿಲ್ ‌ಐ ಲೈನರ್‌ ಹಚ್ಚಿ.ಇದೂ ಗಮನದಲ್ಲಿರಲಿ

ಬೇಸಿಗೆಯಲ್ಲಿ ಮೇಕಪ್‌ಗೆ ಕಾಸ್ಮೆಟಿಕ್ಸ್ ಕೊಳ್ಳುವಾಗ ಆಯಿಲ್ ‌ಬೇಸ್ಟ್ ಮೇಕಪ್‌ ಬದಲು ವಾಟರ್‌ ಪ್ರೂಫ್‌ ಮೇಕಪ್‌ ಆಯ್ದುಕೊಳ್ಳಿ.

ಈ ಸೀಸನ್‌ನಲ್ಲಿ ಬ್ರೈಟ್‌ ಮೇಕಪ್‌ ಬದಲು ಲೈಟ್‌ ಮೇಕಪ್‌ಮಾಡಿಕೊಳ್ಳಿ.

ನಿಮ್ಮ ತ್ವಚೆಯಲ್ಲಿ ಕಲೆಗಳಿಲ್ಲದಿದ್ದರೆ ಅದರ ಮೇಲೆ ಫೌಂಡೇಶನ್‌ ಹಚ್ಚಬೇಡಿ.

ಮುಖ ಮತ್ತು ಕುತ್ತಿಗೆಯ ಮೇಲೆ ಆ್ಯಸ್ಟ್ರಿಂಜೆಂಟ್‌ ಲೋಶನ್‌ ಹಚ್ಚಿ ಮೇಕಪ್‌ನ್ನು ಆರಂಭಿಸಿ. ಈ ಲೋಶನ್‌ ನಿಮ್ಮ ಮುಖದಲ್ಲಿನ ಹೆಚ್ಚುವರಿ ತೈಲವನ್ನು ಹೀರಿಕೊಳ್ಳುವುದು.

ಈ ಋತುವಿನಲ್ಲಿ ಮುಖಕ್ಕೆ ಹೆಚ್ಚು ಪ್ರಮಾಣದಲ್ಲಿ ಪೌಡರ್‌ ಹಚ್ಚಬೇಡಿ. ಇಲ್ಲದಿದ್ದರೆ ಮುಖದ ರೋಮರಂಧ್ರಗಳು ಬೆವರು ಹರಿಯುವುದನ್ನು ಬ್ಲಾಕ್‌ ಮಾಡುತ್ತವೆ.

ಪೌಡರ್‌ ಹಚ್ಚಿದ ನಂತರ ಒದ್ದೆಯಾದ ಸ್ಪಂಜ್‌ ಅಥವಾ ಪಫ್‌ನ್ನು ಕೈಗಳಿಂದ ಹಗುರವಾಗಿ ತಪತಪನೆ ಹಚ್ಚಿ. ಹೀಗೆ ಮಾಡುವುದರಿಂದ ಪೌಡರ್‌ ಹೆಚ್ಚು ಕಾಲ ಮುಖದ ಮೇಲೆ ಉಳಿಯುತ್ತದೆ.

ಕಣ್ಣುಗಳ ಸುತ್ತಮುತ್ತ ಹೆಚ್ಚಿನ ಪ್ರಮಾಣದಲ್ಲಿ ಪೌಡರ್‌ ಹಚ್ಚಬೇಡಿ.

ಐ ಶ್ಯಾಡೋ ಪೆನ್ಸಿಲ್ ‌ಐ ಮೇಕಪ್‌ನ ಒಂದು ಮಹತ್ವಪೂರ್ಣ ಉಪಕರಣವಾಗಿದೆ. ಬ್ರೌನ್‌ ಅಥವಾ ಗ್ರೇ ಕಲರ್‌ನ ಐ ಶ್ಯಾಡೋ ಪೆನ್ಸಿಲ್ ‌ಕಣ್ಣುಗಳ ಮೇಕಪ್‌ಗೆ ಸಾಪ್ಟ್ ಮತ್ತು ಸ್ಮೋಕಿ ಲುಕ್‌ ಕೊಡುತ್ತದೆ.

ಉರಿಬಿಸಿಲಿನ ಈ ವಾತಾವರಣದಲ್ಲಿ ಪ್ಲೇನ್‌ ಲಿಪ್‌ ಗ್ಲಾಸ್‌, ಲಿಪ್‌ ಮೇಕಪ್‌ಗೆ ಸಾಕಷ್ಟಾಯಿತು. ಲೈಟ್‌ ಕಲರ್‌ನ ಲಿಪ್‌ಸ್ಟಿಕ್‌ ಹಾಕಿ ಅದರ ಮೇಲೆ ಲಿಪ್‌ಗ್ಲಾಸ್‌ ಹಚ್ಚಬಹುದು.

ಈ ಋತುವಿನಲ್ಲಿ ಲಿಪ್‌ಸ್ಟಿಕ್‌ನ ಡಾರ್ಕ್‌ ಶೇಡ್‌ ಹಚ್ಚಬೇಡಿ.

ಬೇಸಿಗೆಯಲ್ಲಿ ಟೀ ರೋನ್‌ನಲ್ಲಿ ಅತ್ಯಂತ ಹೆಚ್ಚು ಬೆವರು ಬರುತ್ತದೆ. ಆದ್ದರಿಂದ ನೀವು ಆಯಿಲ್ ‌ಹೀರಿಕೊಳ್ಳುವ ಪ್ಯಾಡ್‌ ಉಪಯೋಗಿಸಿ. ಅದನ್ನು ಆಯಿಲ್ ಅಬ್ಸಾರ್ಬ್‌ ಪ್ಯಾಡ್‌ ಎನ್ನುತ್ತಾರೆ. ಅದನ್ನು ಉಪಯೋಗಿಸಿದರೆ ಮುಖ ತಾಜಾ ಆಗಿ ಕಾಣುತ್ತದೆ.

ಮೇಕಪ್‌ ತೆಗೆಯಲು ಆಲ್ಕೋಹಾಲ್ ‌ಫ್ರೀ ಮೇಕಪ್‌ ರಿಮೂವರ್‌ನ್ನು ಉಪಯೋಗಿಸಿ.

–  ಪಿ. ವಿನುತಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ