ಕೊರೋನಾ 2020 ಹಾಗೂ 2021ನೇ ಸಾಲಿನಲ್ಲಿ ತನ್ನ ಅಬ್ಬರ ತೋರಿಸಿತ್ತು. ಈ ವರ್ಷ ಅದು ಅಷ್ಟಾಗಿ ಇನ್ನೂ ತನ್ನ ಕೆಂಗಣ್ಣು ಬೀರಿಲ್ಲ. ಇದು ಒಳ್ಳೆಯ ಬೆಳವಣಿಗೆಯೇ ಸರಿ. ಆದರೆ ಹಾಗೆಂದು ನೀವು ನಿರ್ಲಕ್ಷ್ಯ ತೋರದಿರಿ. ಕೆಳಕಂಡ ಟಿಪ್ಸ್ ನಿಮಗೆ ಮೊದಲಿನಿಂದಲೇ ಸನ್ನದ್ಧರಾಗಿರಲು ನೆರವಾಗುತ್ತದೆ.......

ಕೊರೋನಾ ಮೊದಲು ಮತ್ತು ಎರಡನೇ ಅಲೆಗಳು ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ `ಹೆಲ್ತ್ ಎಮರ್ಜೆನ್ಸಿ' ಸ್ಥಿತಿಯನ್ನು ತಂದೊಡ್ಡಿದ. ಮೂರನೇ ಅಲೆ ಕೂಡ ಒಂದಷ್ಟು ಮಟ್ಟಿಗೆ ಸಮಸ್ಯೆ ತಂದೊಡ್ಡಿತು. ಇನ್ನು ಮುಂದೆ ಆ ಸಮಸ್ಯೆ ಬರುವುದೇ ಇಲ್ಲವೆಂದು ಬಹಳಷ್ಟು ಜನ ಅಂದುಕೊಂಡಿದ್ದಾರೆ. ಅದನ್ನೇ ಗಮನದಲ್ಲಿಟ್ಟುಕೊಂಡು ಸಾಕಷ್ಟು ನಿರ್ಲಕ್ಷ್ಯ ಧೋರಣೆ ಹೊಂದಿದ್ದಾರೆ.

ಕೊರೋನಾದ ಅಪಾಯ ಸಂಪೂರ್ಣವಾಗಿ ಮಾಯವಾಗಿಲ್ಲ. ಅದಿನ್ನೂ ಜೀವಂತವಾಗಿದೆ. ಭಾರತದ ಅಲ್ಲಲ್ಲಿ ಕೆಲವೊಮ್ಮೆ ಹೆಚ್ಚು, ಕೆಲವೊಮ್ಮೆ ಕಡಿಮೆ ಪ್ರಮಾಣದಲ್ಲಿ ಕಾಣಿಸಿಕೊಳ್ಳುವುದರ ಮೂಲಕ ತಾನಿನ್ನೂ ಅಸ್ತಿತ್ವದಲ್ಲಿದ್ದೇನೆ ಎಂದು ಸಾಬೀತುಪಡಿಸುತ್ತಿದೆ. ಕೊರೋನಾದ ಹಾವಳಿ ಸಂಪೂರ್ಣವಾಗಿ ಕಡಿಮೆ ಆಗಿಲ್ಲ. ಹಾಗಾಗಿ ನೀವು ಆತಂಕಗೊಳ್ಳದೆ, ಕೆಲವು ಮುನ್ನೆಚ್ಚರಿಕೆ ವಹಿಸುವುದರ ಮೂಲಕ ಅದನ್ನು ಎದುರಿಸಲು, ಸದಾ ಸನ್ನದ್ಧರಾಗಿರಿ. ಏಕೆಂದರೆ ಸಂಕಷ್ಟ ಎದುರಾದಾಗ ನೀವು ಒಮ್ಮೆಲೆ ಆತಂಕಗೊಳ್ಳುವ ಸ್ಥಿತಿ ಬರಬಾರದು. ಹಾಗಾಗಿ ಮನೆಯ ಯಾವ ಸಿದ್ಧತೆ ಮಾಡಿಕೊಳ್ಳಬೇಕೆಂದು ತಿಳಿದುಕೊಳ್ಳಲು ಈ ಟಿಪ್ಸ್ ಅನುಸರಿಸಿ :

ಕೊರೋನಾ ಫಸ್ಟ್ ಏಡ್ಕಿಟ್

kisspng-first-aid-supplies-first-aid-kits-health-care-medi-first-aid-box-5b2e89dfaa3098.7232894315297766076971

ನಾವು ನಮ್ಮ ಮನೆಯಲ್ಲಿ, ವಾಹನದಲ್ಲಿ, ಬ್ಯಾಗ್‌ ನಲ್ಲಿ ಫಸ್ಟ್ ಏಡ್‌ ಕಿಟ್‌ ಇರಿಸಿಕೊಳ್ಳುತ್ತೇವೆ. ಏಕೆಂದರೆ ಸಂದರ್ಭ ಬಂದಾಗ ಅದನ್ನು ನಿಯಂತ್ರಣದಲ್ಲಿ ತರಲು ಸಾಧ್ಯವಾಗುತ್ತದೆ. ಅದೇ ರೀತಿ ಕೊರೋನಾ ಆತಂಕದ ದಿನಗಳಲ್ಲಿ ಕೊರೋನಾದ ಫಸ್ಟ್ ಏಡ್ ಕಿಟ್‌ ಇರಿಸಿಕೊಳ್ಳಬೇಕು. ಏಕೆಂದರೆ ತುರ್ತು ಸ್ಥಿತಿ ಉಂಟಾದ ಸಂದರ್ಭದಲ್ಲಿ ನಾವು ಒಮ್ಮೆಲೇ ಗಾಬರಿಗೊಳ್ಳುವ ಸಂದರ್ಭ ಬಂದು ಬಿಡಬಾರದು.

ಕೊರೋನಾದ ಫಸ್ಟ್ ಏಡ್‌ ಕಿಟ್‌ ನಲ್ಲಿ ಏನೇನು ಇರಬೇಕು ಎಂದರೆ, ಪ್ಯಾರಾಸಿಟಮಲ್ ಮಾತ್ರೆ, ವಿಟಮಿನ್‌ ಸಿ, ಡಿ, ಝಿಂಕ್‌ಟ್ಯಾಬ್ಲೆಟ್‌, ಬಿ ಕಾಂಪ್ಲೆಕ್ಸ್, ಬಾಯಿ ಮುಕ್ಕಳಿಸಲು ಬೀಟಾಡೋನ್‌, ಪ್ಸ್‌ ಆಕ್ಸಿಮೀಟರ್‌, ಹಬೆ ತೆಗೆದುಕೊಳ್ಳಲು ಸ್ಟೀಮರ್‌, ಕ್ಯಾಪ್ಸೂಲ್‌ ಹಾಗೂ ಥರ್ಮಾಮೀಟರ್‌ ಅವಶ್ಯವಾಗಿ ಇಟ್ಟುಕೊಳ್ಳಿ. ಇವು ದೇಹದ ಯಾವುದೇ ಭಾಗಕ್ಕೆ ಯಾವುದೇ ತೊಂದರೆ ಉಂಟು ಮಾಡುವುದಿಲ್ಲ.

ನಿಮಗೆ ಯಾವುದಾದರೂ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಅವನ್ನು ತೆಗೆದುಕೊಳ್ಳಬೇಕಾಗುತ್ತದೆ. ವಿಟಮಿನ್‌ ಹಾಗೂ ಝಿಂಕ್‌ಟ್ಯಾಬ್ಲೆಟ್‌ ಗಳನ್ನು ನೀವು ಯಾವುದೇ ಲಕ್ಷಣಗಳು ಇಲ್ಲದೇ ಇದ್ದಾಗಲೂ ಆರಂಭಿಸಬಹುದು. ಏಕೆಂದರೆ ಇವು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೆಲಸ ಮಾಡುತ್ತವೆ.

ಮಾಸ್ಕ್ ಸಂಗ ತೊರೆಯದಿರಿ

covid-pahale-se-taiyari

ಆರೋಗ್ಯ ತಜ್ಞರು ಹೊರಗೆ ಹೋಗುವಾಗ ಮಾಸ್ಕ್ ಧರಿಸಲೇಬೇಕೆಂದು ಹೇಳುತ್ತಾರೆ. ಅವರ ಈ ಸಲಹೆಯನ್ನು ನಿರ್ಲಕ್ಷಿಸಬೇಡಿ. ನೀವು ನಿಮ್ಮ ಕಿಟ್‌ ನಲ್ಲೇ ಮಾಸ್ಕ್ ಗಳನ್ನು ಅವಶ್ಯವಾಗಿ ಇಡಿ. ಎನ್‌ -95 ಮಾಸ್ಕ್ ಅಥವಾ 3 ಪದರದ ಮಾಸ್ಕ್ ಗಳನ್ನು ಬಳಸಿ. ಇವು ಬ್ಯಾಕ್ಟೀರಿಯಾಗಳು ಹಾಗೂ ವೈರಸ್‌ ಗಳಿಂದ ಸುರಕ್ಷತೆ ದೊರಕಿಸಿಕೊಡುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ