ತಾಯಿಯಾಗುವುದು ಪ್ರತಿಯೊಬ್ಬ ಮಹಿಳೆಯ ಎಲ್ಲಕ್ಕೂ ಒಳ್ಳೆಯ ಸುಖಾನುಭೂತಿಯಾಗಿರುತ್ತದೆ. ಗರ್ಭದಲ್ಲಿ ಬೆಳೆಯುತ್ತಿರುವ ಕಂದ ಮಹಿಳೆಗೆ ಹಲವು ಸಂಗತಿಗಳನ್ನು ಕಲಿಸುತ್ತದೆ. ಸಂವೇದನಾಶೀಲಳಾಗಿ ಮಾಡುತ್ತದೆ. ಪ್ರೀತಿ ವಾತ್ಸಲ್ಯ ತೋರುವುದನ್ನೂ ಕಲಿಸುತ್ತದೆ.

ಮೇಲ್ಕಂಡ ಕಾರಣಗಳಿಂದ ಯಾವುದೇ ಮಹಿಳೆ ಗರ್ಭ ಧರಿಸುತ್ತಲೇ ತನ್ನ ಬಗ್ಗೆ ವಿಶೇಷ ಗಮನಹರಿಸುತ್ತಾಳೆ. ಏಕೆಂದರೆ ಆ ಸಮಯದಲ್ಲಿ ತಾಯಿಯಾಗುವ ಮಹಿಳೆ ಕೇವಲ ತನಗಾಗಿ ಮಾತ್ರ ಆಹಾರ ಸೇವಿಸುವುದಿಲ್ಲ, ಮಗುವಿಗಾಗಿಯೂ ಸೇವಿಸುತ್ತಾಳೆ.

ತಾಯಿಯಾಗುವ ಉದ್ಯೋಗಸ್ಥ ಮಹಿಳೆಯು ಸಾಮಾನ್ಯವಾಗಿ ದಣಿವಿನ ಅನುಭೂತಿ ಮಾಡಿಕೊಳ್ಳುತ್ತಾಳೆ. ಆಫೀಸ್‌ನಲ್ಲಿ 8-9 ಗಂಟೆ ಇರುವುದರಿಂದ ಆಕೆಗೆ ದಣಿವಾಗುತ್ತದೆ. ಆ ಬಳಿಕ ಆಕೆಗೆ ಮನೆಯಲ್ಲೂ ಕೆಲಸ ಮಾಡಬೇಕಾಗಿ ಬರುತ್ತದೆ. ಹೀಗಾಗಿ ಆಕೆಗೆ ಇಡೀ ದಿನ ಬಹಳ ಕಷ್ಟಕರವಾಗಿ ಕಳೆಯುತ್ತದೆ. ತಾಯಿಯಾಗ ಬಯಸುವ ಉದ್ಯೋಗಸ್ಥ ಮಹಿಳೆಯ ದಿನವಿಡಿಯ ಡಯೆಟ್‌ ಪ್ಲಾನ್ ಹೇಗಿರಬೇಕು ಎನ್ನುವುದನ್ನು ತಿಳಿದುಕೊಳ್ಳಿ.

ಒಂದು ವೇಳೆ ನೀವು ಎದ್ದ ಕೂಡಲೇ ಆಹಾರ ತಯಾರಿಸಲು ಅಥವಾ ಮನೆಯ ಇತರೆ ಕೆಲಸಗಳನ್ನು ಮಾಡುತ್ತೀರೆಂದರೆ ಅದು ತಪ್ಪು. ಮುಂಜಾನೆ ಏಳುತ್ತಿದ್ದಂತೆ ನೀವು ಗ್ರೀನ್‌ ಟೀ ಕುಡಿಯಿರಿ. ಒಂದು ವೇಳೆ ನೀವು ದಿನದ ಆರಂಭವನ್ನು ಗ್ರೀನ್‌ ಟೀಯಿಂದ ಆರಂಭಿಸಿದರೆ, ನೀವು ದಿನವಿಡೀ ತಾಜಾತನದ ಅನುಭೂತಿ ಪಡೆದುಕೊಳ್ಳುವಿರಿ. ಆ ಬಳಿಕ ನೀವು ತಕ್ಷಣವೇ ಸ್ನಾನ ಮಾಡಿ ಫ್ರೆಶ್‌ಆಗಿ. ಊಟದ ವ್ಯವಸ್ಥೆಯನ್ನು ನೀವೇ ಮಾಡಬೇಕಿದ್ದರೆ ರಾತ್ರಿಯೇ ಅದರ ಸಿದ್ಧತೆ ಮಾಡಿಕೊಳ್ಳಿ. ಮುಂಜಾನೆ ಎಲ್ಲ ಸಿದ್ಧವಾಗಿರುವಾಗ ಅಡುಗೆ ಮಾಡುವುದು ನಿಮಗೆ ತಲೆನೋವಿನ ವಿಷಯ ಅನಿಸಲಾರದು. ಅಡುಗೆಯ ಸಿದ್ಧತೆಯ ಬಳಿಕ ತಕ್ಷಣವೇ ನಿಮ್ಮ ಉಪಾಹಾರ ಮುಗಿಸಿಕೊಳ್ಳಿ. ಮಂಜಾನೆ ಉಪಾಹಾರದಲ್ಲಿ ಚಪಾತಿ ಅಥವಾ ರೊಟ್ಟಿ ಪಲ್ಯ, ಬೇಯಿಸಿದ ಮೊಟ್ಟೆ ಯಾವುದಾದರೂ ಆಗಿರಬಹುದು. ಆ ಬಳಿಕ ನಿಮ್ಮ ಡಬ್ಬಿಗೆ ಫ್ರೂಟ್ಸ್ ನಟ್ಸ್ ಕೂಡ ಇರಲಿ. ಮಧ್ಯಾಹ್ನಕ್ಕೂ ಒಂದಿಷ್ಟು ಆರೋಗ್ಯಕರ, ಪೌಷ್ಟಿಕ ಆಹಾರ ಇರಲಿ. ಇದರ ಜೊತೆಗೆ ಮೊಸರು ಮಜ್ಜಿಗೆ ಕೂಡ ಇರಲಿ.

ಊಟದಲ್ಲಿ ಏನೇನಿರಬೇಕು?

ಊಟದಲ್ಲಿ ಚಪಾತಿ ಪಲ್ಯ, ಮೊಸರು ಎಲ್ಲ ಸೇವಿಸಿ. ನೀವು ಏನೇ ಸೇವಿಸಿದರೂ ನಿಧಾನವಾಗಿ ತಿನ್ನಿ. ಚೆನ್ನಾಗಿ ಅಗಿದು ತಿನ್ನಿ. ಊಟದ ಜೊತೆಗೆ ಸೌತೆಕಾಯಿ ಕೂಡ ಇರಲಿ. ಗರ್ಭಾವಸ್ಥೆಯಲ್ಲಿ ಸಲಾಡ್‌ ಸೇವನೆ ನಿಮಗೆ ಹಾಗೂ ಮಗುವಿಗೆ ತುಂಬಾ ಒಳ್ಳೆಯದು.

ಸಂಜೆ ಸ್ನ್ಯಾಕ್ಸ್

ಸಂಜೆಯ ತಿಂಡಿಗಳಲ್ಲಿ ಸಾಮಾನ್ಯವಾಗಿ ಬಜ್ಜಿ, ಬೋಂಡಾ, ಸಮೋಸಾ ಮುಂತಾದವನ್ನು ಸೇವಿಸುತ್ತಾರೆ. ಇವು ರುಚಿಯೇನೊ ಆಗಿರುತ್ತವೆ. ಆದರೆ ಗರ್ಭಿಣಿಯಾಗಿರುವ ನಿಮಗೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ನೀವು ಡಬ್ಬಿಯಲ್ಲಿ  ಒಂದಿಷ್ಟು ಖರ್ಜೂರ, ಒಣದ್ರಾಕ್ಷಿ, ಬಾದಾಮಿ ಸೇವಿಸಿದರೆ ಒಳ್ಳೆಯದು. ಆ ಬಳಿಕ ನಿಮಗೆ ಚಹಾ ಅಥವಾ ಕಾಫಿ ಕುಡಿಯಬೇಕು ಅನ್ನಿಸಿದರೆ ಕುಡಿಯಬಹುದು. ಸಂಜೆಯ ಸ್ನ್ಯಾಕ್ಸ್ ಎಷ್ಟು ಬೇಕೋ ಅಷ್ಟು ಮಾತ್ರ ಇರಲಿ. ತೀರಾ ಹೊಟ್ಟೆ ತುಂಬಾ ಭಾರ ಆಯ್ತು ಎನ್ನುವಂತಿರಬಾರದು. ಏಕೆಂದರೆ ರಾತ್ರಿ ಹೊತ್ತು ಊಟವನ್ನು ಮಾಡಬೇಕು.

ಮನೆ ತಲುಪಲು ಆತುರ ಬೇಡ. ಒಂದು ವೇಳೆ ನಿಮಗೆ ಆಫೀಸ್‌ನ ಕ್ಯಾಬ್‌ ಇದ್ದರೆ ಏನೂ ಸಮಸ್ಯೆ ಇಲ್ಲ. ಇಲ್ಲದಿದ್ದರೆ ಸಂಜೆ ಹೊತ್ತು ರಸ್ತೆಗಳಲ್ಲಿ ಸಾಕಷ್ಟು ಟ್ರಾಫಿಕ್‌ ಇರುತ್ತದೆ. ಆಫೀಸ್‌ನಿಂದ ಹೊರಡುವಾಗ ನಿಧಾನವಾಗಿ ಹೋಗಿ, ಮನೆ ತಲುಪಲು ಸ್ವಲ್ಪ ತಡವಾದರೂ ಚಿಂತೆಯಿಲ್ಲ. ಯಾವುದೇ ತೊಂದರೆ ಇಲ್ಲದೆ ತಲುಪಿ. ಮನೆ ತಲುಪಿದ ಬಳಿಕ ಸ್ವಲ್ಪ ನೀರು ಕುಡಿಯಿರಿ. ಬಳಿಕ ವಿಶ್ರಾಂತಿ ಪಡೆದು ನಂತರ ಮನೆಗೆಲಸದಲ್ಲಿ ತೊಡಗಿರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ