ಪೀರಿಯಡ್ಸ್ ಸಮಯ ತಿಂಗಳಿನ ಅತ್ಯಂತ ಕಠಿಣ ದಿನಗಳಾಗಿರುತ್ತವೆ. ಆಗ ಶರೀರದಿಂದ ವಿಷಯುಕ್ತ ಪದಾರ್ಥಗಳು ಹೊರಬರುವುದರಿಂದ ಶರೀರದಲ್ಲಿ ಕೆಲವು ವಿಟಮಿನ್‌ಗಳು ಹಾಗೂ ಮಿನರಲ್ ಗಳ ಕೊರತೆಯುಂಟಾಗುತ್ತದೆ. ಅದರಿಂದಾಗಿ ಮಹಿಳೆಯರಲ್ಲಿ ಬಲಹೀನತೆ, ತಲೆ ಸುತ್ತುವುದು, ಹೊಟ್ಟೆ ಹಾಗೂ ಸೊಂಟದಲ್ಲಿ ನೋವು, ಕೈಕಾಲು ಜೋಮು ಹಿಡಿಯುವುದು, ಸ್ತನಗಳಲ್ಲಿ ಊತ, ಅಸಿಡಿಟಿ, ಮುಖದಲ್ಲಿ ಮೊಡವೆಗಳು ಮತ್ತು ಸುಸ್ತು ಅನುಭವವಾಗುತ್ತದೆ. ಕೆಲವು ಮಹಿಳೆಯರಲ್ಲಿ ಒತ್ತಡ, ಸಿಡಿಮಿಡಿ ಹಾಗೂ ಕೋಪ ಉಂಟಾಗುತ್ತದೆ. ಅವರು ಬಹಳ ಬೇಗ ಭಾವುಕರಾಗುತ್ತಾರೆ. ಅದನ್ನು ಪ್ರಿಮೆನ್‌ಸ್ಟ್ರುಯ್‌ ಟೆನ್ಶನ್‌(ಪಿಎಂಟಿ) ಎಂದು ಕರೆಯುತ್ತಾರೆ. ಟೀನೇಜರ್ಸ್‌ಗೆ ಪೀರಿಯಡ್ಸ್ ಸಾಕಷ್ಟು ಪೇನ್‌ ಫುಲ್ ಆಗಿುತ್ತದೆ. ಅವರು ನೋವಿನಿಂದ ಪಾರಾಗಲು ಅನೇಕ ರೀತಿಯ ಔಷಧಗಳನ್ನು ಸೇವಿಸುತ್ತಾರೆ. ಅವು ಹಾನಿಕಾರಕ ಹೌದು. ಆದರೆ ಆಹಾರದ ಬಗ್ಗೆ ಗಮನಕೊಟ್ಟು ಅಂದರೆ ಡಯೆಟ್‌ನ್ನು ಪೀರಿಯಡ್ಸ್ ಫ್ರೆಂಡ್ಲಿ ಮಾಡಿಕೊಂಡು ಆ ದಿನಗಳನ್ನು ಆರಾಮದಾಯಕವನ್ನಾಗಿ ಮಾಡಿಕೊಳ್ಳಬಹುದು.

ನ್ಯೂಟ್ರಿಕೇರ್‌ ಪ್ರೋಗ್ರಾಂನ ಸೀನಿಯರ್‌ ಡಯೆಟೀಶಿಯನ್‌ ಪ್ರಗತಿ ಮತ್ತು ಡಯೆಟ್‌ ಅಂಡ್‌ ವೆಲ್‌ನೆಸ್‌ ಕ್ಲಿನಿಕ್‌ನ ಡಯೆಟೀಶಿಯನ್‌ಸೋನಿಯಾ ಪೀರಿಯಡ್ಸ್ ದಿನಗಳಲ್ಲೂ, ನೀವು ಹ್ಯಾಪಿ ಹ್ಯಾಪಿಯಾಗಿರಲು ಯಾವ ರೀತಿಯ ಪ್ಲ್ಯಾನ್‌ ಮಾಡಬೇಕೆಂದು ತಿಳಿಸುತ್ತಾರೆ.

ಇವುಗಳನ್ನು ಪಥ್ಯದಲ್ಲಿಡಿ

ವೈಟ್‌ ಬ್ರೆಡ್‌, ಪಾಸ್ತಾ ಮತ್ತು ಸಕ್ಕರೆ ತಿನ್ನಬೇಡಿ.

ಬಿಸ್ಕೆಟ್‌, ಕೇಕ್‌, ಫ್ರೆಂಚ್‌ ಫ್ರೈ ಇತ್ಯಾದಿ ಬೇಕ್ಡ್ ಪದಾರ್ಥಗಳನ್ನು ತಿನ್ನಬೇಡಿ.

ಪೀರಿಯಡ್ಸ್ ದಿನಗಳಲ್ಲಿ ಎಂದೂ ಖಾಲಿ ಹೊಟ್ಟೆಯಲ್ಲಿ ಇರಬೇಡಿ. ಏಕೆಂದರೆ ಖಾಲಿ ಹೊಟ್ಟೆಯಲ್ಲಿದ್ದರೆ ಇನ್ನೂ ಹೆಚ್ಚು ಸಿಡಿಮಿಡಿಯುಂಟಾಗುತ್ತದೆ.

ಸಾಫ್ಟ್ ಡ್ರಿಂಕ್ಸ್ ಕುಡಿಯುವುದರಿಂದ ಹೊಟ್ಟೆ ನೋವು ಕಡಿಮೆಯಾಗುತ್ತದೆ ಎಂದು ಕೆಲವು ಮಹಿಳೆಯರು ತಿಳಿದಿದ್ದಾರೆ. ಅದು ತಪ್ಪು.

ಹೆಚ್ಚು ಉಪ್ಪು ಹಾಗೂ ಸಕ್ಕರೆ ಸೇವಿಸಬೇಡಿ. ಅವು ಪೀರಿಯಡ್ಸ್ ಗೆ ಮೊದಲು ಹಾಗೂ ಪೀರಿಯಡ್ಸ್ ನಂತರ ನೋವು ಹೆಚ್ಚಿಸುತ್ತವೆ.

ಕೆಫೀನ್‌ ಸೇವಿಸಬೇಡಿ.

ಒಂದು ವೇಳೆ ಪೀರಿಯಡ್ಸ್ ಬರಲು ತೊಂದರೆಯಾಗಿದ್ದರೆ ಈ ಕೆಳಗಿನವನ್ನು ಸೇವಿಸಿ.

ಹೆಚ್ಚು ಚಾಕಲೇಟ್‌ ಪರಂಗಿ ಹಣ್ಣು ತಿನ್ನಿ.  ಪೀರಿಯಡ್ಸ್ ಸುಲಭವಾಗುತ್ತದೆ.

ಒಂದು ವೇಳೆ ಪೀರಿಯಡ್ಸ್ ತಡವಾಗುತ್ತಿದ್ದರೆ ಬೆಲ್ಲ ತಿನ್ನಿ.

ಹಾಟ್‌ ವಾಟರ್‌ ಬ್ಯಾಗಿನಿಂದ ಹೊಟ್ಟೆಯ ಕೆಳ ಭಾಗಕ್ಕೆ ಸ್ವಲ್ಪ ಹೊತ್ತು ಬಿಸಿ ಕಾವು ಕೊಡಿ. ಹೀಗೆ ಮಾಡಿದರೆ ಪೀರಿಯಡ್ಸ್ ನ ದಿನಗಳಲ್ಲಿ ಆರಾಮವಾಗಿರುತ್ತದೆ.

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೋಂಪನ್ನು ಸೇವಿಸಿದರೆ ಅದರಿಂದಲೂ ಪೀರಿಯಡ್ಸ್ ಸರಿಯಾದ ಸಮಯದಲ್ಲಿ, ಸುಲಭವಾಗಿ ಆಗುತ್ತದೆ. ಸೋಂಪನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಿ.

ಗಮನದಲ್ಲಿಡಿ

ಒಮ್ಮೆಗೇ ಹೆಚ್ಚು ತಿನ್ನುವ ಬದಲು ಸಣ್ಣ ಪ್ರಮಾಣದಲ್ಲಿ 5-6 ಬಾರಿ ತಿನ್ನಿ. ಅದರಿಂದ ನಿಮಗೆ ಎನರ್ಜಿ ಸಿಗುತ್ತದೆ ಹಾಗೂ ನೀವು ಫಿಟ್‌ ಆಗಿರುತ್ತೀರಿ.

ಹೆಚ್ಚು ನೀರು ಕುಡಿಯಿರಿ. ಅದರಿಂದ ಶರೀರದಲ್ಲಿ ನೀರಿನ ಪ್ರಮಾಣ ಸಾಕಷ್ಟು ಇರುತ್ತದೆ. ಶರೀರ ಡೀಹೈಡ್ರೇಟ್‌ ಆಗುವುದಿಲ್ಲ. ಸಾಮಾನ್ಯವಾಗಿ ಮಹಿಳೆಯರು ಪೀರಿಯಡ್ಸ್ ದಿನಗಳಲ್ಲಿ ಪದೇಪದೇ ಬಾಥ್‌ ರೂಮಿಗೆ ಹೋಗಬೇಕಾಗುತ್ತದೆಂಬ ಭಯಕ್ಕೆ ಕಡಿಮೆ ನೀರು ಕುಡಿಯುತ್ತಾರೆ. ಅದು ತಪ್ಪು.

7-8 ಗಂಟೆಗಳ ಕಾಲ ಒಳ್ಳೆಯ ನಿದ್ರೆ ಮಾಡಿ.

ನಿಮಗಿಷ್ಟವಾದ ವಸ್ತುಗಳ ಬಗ್ಗೆ ಮನಸ್ಸು ಕೊಡಿ ಹಾಗೂ ಸಂತೋಷವಾಗಿರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ