ದೇಹದಲ್ಲಾಗುವ ಅನೇಕ ಬದಲಾವಣೆಗಳಿಗೆ ಇದೇ ಮೂಲಕಾರಣ ಅಲ್ಲ ತಾನೇ....?

30 ವರ್ಷದ ತಾರುಣ್ಯವಿರಲಿ, 70ರ ವೃದ್ಧಾಪ್ಯ ಇರಲಿ, ಭಾರತದಲ್ಲಿ ಹೃದ್ರೋಗಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಕೊರೋನಾ ಕಾಲದಲ್ಲಿ ಒಂದಿಷ್ಟು ಅಲರ್ಟ್‌ ಆಗಿದ್ದ ನಾವು ನಂತರ ನಮ್ಮ ಆರೋಗ್ಯದ ಕಡೆ ಗಮನ ಕೊಡುತ್ತಿದ್ದೇವೆಯೇ? ದಿನನಿತ್ಯದ ಈ ಲಂಗುಲಗಾಮಿಲ್ಲದ ಓಟದ ನಡುವೆ, ಆಧುನಿಕರಾದ ನಾವೆಲ್ಲ ಯಂತ್ರಗಳೇ ಆಗಿಹೋಗಿದ್ದೇವೆ. ಒಂದು ಕೆಲಸ ಮುಗಿಯುತ್ತಿದ್ದಂತೆಯೇ ಮತ್ತೊಂದು ಕೆಲಸಕ್ಕೆ ತೊಡಗುತ್ತೇವೆ. ಮುಖ್ಯ, ಹೆಂಗಸರಿಗೆ ತಮ್ಮ ಮನೆಗೆಲಸ ಆಫೀಸ್‌ ಕೆಲಸ ಸರಿದೂಗಿಸುವಷ್ಟರಲ್ಲಿ, ತಮ್ಮ ಆರೋಗ್ಯದ ಕಡೆ ಗಮನಹರಿಸಲಿಕ್ಕೂ ಪುರಸತ್ತೇ ಇರುವುದಿಲ್ಲ. ಅದನ್ನು ಗುರುತಿಸುವಷ್ಟರಲ್ಲಿ ಬಹಳ ತಡ ಆಗಿರುತ್ತದೆ.

ಕೆಲವು ರೋಗ ಹೊರತುಪಡಿಸಿದರೂ, ನಮ್ಮ ದೇಹ, ಹಲವಾರು ಇನ್ನಿತರ ರೋಗಗಳ ಬಗ್ಗೆ ಮೊದಲೇ ಮುನ್ಸೂಚನೆ ನೀಡುತ್ತಿರುತ್ತದೆ. ಅವಕಾಶ ಇದ್ದಾಗಲೇ ಈ ಸಂಕೇತಗಳನ್ನು ಅರ್ಥ ಮಾಡಿಕೊಳ್ಳಬೇಕು. ಆಗ ಮುಂದೆ ಬರಬಹುದಾದ ದೊಡ್ಡ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು. ಇಂಥದ್ದೇ ಒಂದು ಸಂಕೇತ, ಕೊಲೆಸ್ಟ್ರಾಲ್ ಹೆಚ್ಚುವಿಕೆ! ಇದರ ಲಕ್ಷಣ ಮತ್ತು ಚಿಕಿತ್ಸೆ ಹೀಗಿದೆ :

ಕೊಲೆಸ್ಟ್ರಾಲ್ ಎಂದರೇನು?

ನಮ್ಮ ರಕ್ತದಲ್ಲಿ ಬೆರೆತಿರುವ ಮೇಣದಂಥ ಘಟಕವೇ ಕೊಲೆಸ್ಟ್ರಾಲ್. ಇದು ಆರೋಗ್ಯಕರ ಜೀವಕೋಶದ ನಿರ್ಮಾಣ, ದೇಹಕ್ಕೆ ಅತ್ಯಗತ್ಯ ವಿಟಮಿನ್ಸ್, ಹಾರ್ಮೋನ್ಸ್ ತಯಾರಿಯಲ್ಲೂ ನೆರವಾಗುತ್ತದೆ. ಆದರೆ ಅಗತ್ಯಕ್ಕಿಂತಲೂ ಇದು ಹೆಚ್ಚಾದರೆ, ಇದು ರಕ್ತನಾಳಗಳಲ್ಲಿ ಬ್ಲಾಕೇಜ್‌ ಗೆ ಕಾರಣವಾಗುತ್ತದೆ. ಇದರಿಂದ ಹೃದ್ರೋಗಗಳಿಗೆ ದಾರಿ ಆಗುತ್ತದೆ.

ನಮ್ಮ ದೇಹದಲ್ಲಿ ಗುಡ್‌ ಕೊಲೆಸ್ಟ್ರಾಲ್ ಹಾಗೂ ಬ್ಯಾಡ್‌ ಕೊಲೆಸ್ಟ್ರಾಲ್ ಎರಡೂ ಇರುತ್ತವೆ. ಇವೆರಡರ ಹೆಚ್ಚು ಅಥವಾ ಕಡಿಮೆ ಆಗುವಿಕೆ, ನಮ್ಮ ಆಹಾರವನ್ನು ಅವಲಂಬಿಸಿದೆ. ಏಕೆಂದರೆ ಇವು ನಮ್ಮ ಯಕೃತ್ತಿ (ಲಿವರ್‌) ನಲ್ಲಿ ತಯಾರಾಗುತ್ತವೆ.

ಅಗತ್ಯಕ್ಕಿಂತ ಹೆಚ್ಚಿನ ಟೆನ್ಶನ್‌, ಚಿಂತೆಗಳು ನಮ್ಮ ದೇಹದಲ್ಲಿನ ಹಾರ್ಮೋನ್‌ ಡಿಸ್‌ ಬ್ಯಾಲೆನ್ಸ್ ಆಗುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಎಷ್ಟೋ ಸಂಶೋಧನೆಗಳಿಂದ ಹೀಗೆಂದು ದೃಢಪಟ್ಟಿದೆ. ಇದರ ಹೆಚ್ಚುತ್ತಿರುವ ಸಂಕೇತಗಳ ಬಗ್ಗೆ ತಿಳಿಯೋಣ : ಪಾದಗಳಲ್ಲಿ ನೋವು, ಜೋಮು : ಸಾಮಾನ್ಯವಾಗಿ ನಾವು ಒಂದೇ ಕಡೆ ಬಹಳ ಹೊತ್ತು ಕುಳಿತುಬಿಟ್ಟರೆ, ಕಾಲಿಗೆ ಜೋಮು ಹಿಡಿಯುತ್ತದೆ, ಇದಂತೂ ಮಾಮೂಲಿ ವಿಷಯ. ಆದರೆ ಹೈಕೊಲೆಸ್ಟ್ರಾಲ್ ಇದ್ದಾಗ, ಯಾವಾಗ ಬೇಕಾದರೂ ಪದೇ ಪದೇ ಹೀಗಾಗಬಹುದು, ನೋವು ಹೆಚ್ಚಬಹುದು. ಪಾದಗಳು ಊದಿಕೊಂಡಿರುವ ಅನುಭವ ಆಗುತ್ತದೆ. ಇದಕ್ಕೆ ಕಾರಣ, ನಮ್ಮ ದೇಹದ ಪೆರಿಫರೆಲ್ ‌ರಕ್ತನಾಳಗಳಲ್ಲಿ ಅಗತ್ಯವಿರುವಷ್ಟು ಆಮ್ಲಜನಕ ಪೂರೈಕೆ ಆಗುತ್ತಿಲ್ಲ. ಹೀಗಾದಾಗ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಬೇಗ ಬೇಗ ಸುಸ್ತಾಗುವುದು, ಸ್ವಲ್ಪ ದೂರ ನಡೆಯುವಷ್ಟರಲ್ಲಿ ಏದುಸಿರು ಬರುವುದು, 10-15 ಮೆಟ್ಟಿಲೇರುವಷ್ಟರಲ್ಲಿ ಉಸಿರುಗಟ್ಟುವುದು.... ಇವೆಲ್ಲ ಹೈಕೊಲೆಸ್ಟ್ರಾಲ್ ಲಕ್ಷಣಗಳಾಗಿವೆ. ತಕ್ಷಣ ಚಿಕಿತ್ಸೆ ಮಾಡಿಸುವುದೊಂದೇ ದಾರಿ.

ಹೃದಯದ ಬಡಿತ /ವೇಗ ಅಸಾಮಾನ್ಯ ಆಗುವಿಕೆ? : ಮತ್ತೆ ಮತ್ತೆ ಬೆವರುವಿಕೆ, ಹೃದಯದ ಬಡಿತ, ವೇಗ ಹೆಚ್ಚುವುದು, ಬೇಗ ಬೇಗ ವ್ಯತ್ಯಾಸ ಕಾಣಿಸುವುದು, ಇದೆಲ್ಲ ಹೈ ಕೊಲೆಸ್ಟ್ರಾಲ್ ಸಂಕೇತಗಳು. ಬೇಗ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡು ಹೃದಯದ ಆರೋಗ್ಯ ಪರೀಕ್ಷಿಸಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ