ಸುವರ್ಣಾಳ ಮನೆಗೆ ಅವಳ ಗೆಳತಿಯರು ಬಂದಾಗ, ಅವಳು ಎಲ್ಲರಿಗೂ ನಮ್ರತೆಯಿಂದಲೇ, ``ಚಹಾ ತಗೊಳ್ತೀರಾ ಅಥವಾ ಕೋಲ್ಡ್?'' ಎಂದು ಕೇಳಿದಳು.
``ಚಹಾ ಕುಡಿಯುವ ಅಭ್ಯಾಸ ಎಷ್ಟು ಬಲವಾಗಿ ಅಂಟಿಕೊಂಡಿತ್ತೆಂದರೆ, ಚಹಾ ಕುಡಿಯದೇ ಇರಲು ಆಗುವುದಿಲ್ಲ. ಬೇಸಿಗೆಯ ಪ್ರಖರ ಉಷ್ಣತೆಯ ಸಂದರ್ಭದಲ್ಲಿ ಚಹಾ ಕುಡಿಯುವ ಮನಸ್ಸು ಆಗುವುದಿಲ್ಲ.''
ಅವರ ಈ ಉತ್ತರಕ್ಕೆ ಪರಿಹಾರ ಸುವರ್ಣಾಳ ಬಳಿ ಇತ್ತು. ಅವಳು ಎಲ್ಲರಿಗೂ ಸ್ವಾದಿಷ್ಟ ಫ್ರೂಟಿ ಫ್ಲೇವರ್ ನ ಕೂಲ್ ಕೂಲ್ ಐಸ್ಡ್ ಟೀ ತೆಗೆದುಕೊಂಡು ಬಂದಳು. ಆಗ ನೋಡಿ ಎಲ್ಲರಿಗೂ ವಿಶಿಷ್ಟ ಖುಷಿಯ ಅನುಭವಾಯಿತು.
ಐಸ್ಡ್ ಟೀ ಪರಂಪರೆ ಆರಂಭವಾದದ್ದು 1904ರಲ್ಲಿ ಮಿಸ್ಸೋರಿಯ (ಅಮೆರಿಕಾ) ಸೇಂಟ್ ಲೂಯಿಸ್ ವರ್ಲ್ಡ್ ಫೇರ್ ನಲ್ಲಿ. ಆಗ ಪ್ರಖರ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಚಹಾ ತೋಟವೊಂದರ ಮಾಲೀಕ ತನ್ನ ಚಹಾವನ್ನು ಹಿಮಚ್ಛಾದಿತ ಪೈನ್ ನಿಂದ ಹೊರತೆಗೆದು ತಂಪುಗೊಳಿಸಿದ್ದ.
ಐಸ್ಡ್ ಟೀಯ ಗ್ರೀನ್ ಆ್ಯಪಲ್ ಹಾಗೂ ಪೀಚ್ ಫ್ಲೇವರ್ ನ್ನು ಎಲ್ಲರೂ ಸವಿದಿದ್ದಾರೆ. ಆದರೆ ಈಗ ಮಾರುಕಟ್ಟೆಯಲ್ಲಿ ಅದೆಷ್ಟೋ ಬಗೆಯ ಫ್ಲೇವರ್ ಗಳು ಲಭ್ಯವಿವೆ. ಫ್ರೂಟಿ ಮ್ಯಾಂಗೊ, ಮಿಂಟ್, ಬೆಸಿಲ್, ಬೆರ್ರಿ, ಬ್ಲ್ಯಾಕ್, ವೈಟ್, ಆರೆಂಜ್, ಕೆಮೊಮೈಲ್ ಇತ್ಯಾದಿ.
ಚಹಾವೇ ಏಕೆ?
ಚಹಾ ಒಂದು ಆರೋಗ್ಯವರ್ಧಕ ಪೇಯ. ಅದರಲ್ಲಿ ಹೇರಳ ಪ್ರಮಾಣದಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಇರುತ್ತವೆ. ಇದು ನಮ್ಮ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ. ಜೊತೆಗೆ ದೇಹದ ಮೆಟಬಾಲಿಸಂ ಅಂದರೆ ಚಯಾಪಚಾಯ ಕ್ರಿಯೆಯನ್ನು ಇನ್ನಷ್ಟು ತೀವ್ರಗೊಳಿಸುತ್ತದೆ. ಚಹಾ ಕುಡಿಯುವುದರಿಂದ ನಮ್ಮೊಳಗೆ ಶಕ್ತಿಯ ಸಂಚಲನ ಉಂಟಾಗುತ್ತದೆ.
ಅವರವರ ಇಷ್ಟ
ಭಾರತದ ಕಮ್ಯುನಿಕೇಶನ್ ನ ಜಯರಾಜ್ ಗೆ ಐಸ್ಡ್ ಟೀಯಲ್ಲಿ ಹರ್ಬಲ್ ಮಿಶ್ರಣ ಮಾಡುವುದು ಇಷ್ಟವಾಗುತ್ತದಾದರೆ, ಸ್ವರ್ಣ ಜ್ಯೂವೆಲರ್ಸ್ ನ ಅಮಿತ್ ಗೆ ಆರೆಂಜ್ ಹಾಗೂ ಗ್ರೀನ್ ಟೀ ಇಷ್ಟವಾಗುತ್ತದೆ. ಆರೆಂಜ್ ನಲ್ಲಿರುವ ವಿಟಮಿನ್ `ಸಿ'ಯ ಹೇರಳ ಪ್ರಮಾಣ ಹಾಗೂ ಮಿಂಟ್ ನ ತಂಪು ಹಾಗೂ ತಾಜಾತನ ಬಿಸಿಯನ್ನು ಹೊಡೆದೋಡಿಸುತ್ತದೆ.
ಸುಹಾಸ್ ಗೆ ಲೈಮ್ ಮತ್ತು ಲ್ಯಾವೆಂಡರ್, ಲೆಮನ್ ಗ್ರಾಸ್ ಮತ್ತು ಹನಿ ಬ್ಲ್ಯಾಕ್ ಬೆರಿ, ಬೆಸಿಲ್ ಮತ್ತು ಅಕ್ನಿಟೋಸಿಕ್ ರುಚಿ ಇಷ್ಟವಾಗುತ್ತದೆ. ನಿಮಗೆ ಇಷ್ಟವಾದರೆ ನೀವು ಅದರಲ್ಲಿ ಸೋಡಾ, ನಿಂಬೆ ರಸದ ಕೆಲವು ಹನಿ ಹಾಗೂ 1 ಚಮಚ ಜೇನುತುಪ್ಪ ಮಿಶ್ರಣಗೊಳಿಸಿ ರುಚಿಯನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ಯಬಹುದು.
ಬೆಸ್ಟ್ ಐಸ್ಡ್ ಟೀ ರೆಸಿಪಿ
ಎಲ್ಲಕ್ಕೂ ಮೊದಲು ಒಂದು ಪಾತ್ರೆಯಲ್ಲಿ 9-10 ಕಪ್ ನೀರು ಕುದಿಸಿಕೊಳ್ಳಿ. ಒಲೆಯಿಂದ ಇಳಿಸಿದ ಮೇಲೆ ಅದರಲ್ಲಿ 7-8 ಟೀ ಬ್ಯಾಗ್ಸ್ ಹಾಕಿ. ನಿಮಗೆ ಐಸ್ಡ್ ಟೀ ಲೈಟ್ ಇಷ್ಟವೋ ಅಥವಾ ಸ್ಟ್ರಾಂಗ್, ಇದರ ಲೆಕ್ಕಾಚಾರದಲ್ಲಿ ಟೀ ಬ್ಯಾಗ್ಸ್ ನ ಪ್ರಮಾಣ ನಿರ್ಧರಿಸಿ. ಟೀ ಬ್ಯಾಗ್ಸ್ 8-10 ನಿಮಿಷ ನೀರಿನಲ್ಲಿ ಹಾಗೆಯೇ ಇರಲಿ. ಅದು ತಣ್ಣಗಾದ ಬಳಿಕ ಐಸ್ ತುಂಬಿದ ಗ್ಲಾಸ್ ನಲ್ಲಿ ಹಾಕಿ ಕೊಡಿ.