ಹೂವಿನ ಅಂದಚೆಂದ, ಸುವಾಸನೆ, ಪರಿಮಳ ಪ್ರತಿಯೊಬ್ಬರನ್ನೂ ಸದಾ ತಾಜಾ ಆಗಿರುವಂತೆ ಮಾಡುತ್ತದೆ. ನಾವು ಅದನ್ನು ಸ್ಪರ್ಶಿಸಿದಾಗ, ಅದರ ಸುವಾಸನೆ ಗ್ರಹಿಸಿದಾಗ, ನಮಗೆ ಅತ್ಯುತ್ತಮ ಅನುಭವ ಆಗುತ್ತದೆ, ಅದರ ಸ್ಪರ್ಶ ಇನ್ನಷ್ಟು ಬೇಕು ಎನಿಸುತ್ತದೆ. ಹಾಗಾದರೆ ಒಂದಿಷ್ಟು ಯೋಚಿಸಿ ನೋಡಿ, ಈ ಹೂವಿನ ಇಂಥ ಕೋಮಲ, ಅಮೂಲ್ಯ ಗುಣಗಳನ್ನು ನಾವು ನಮ್ಮ ದೈನಂದಿನ ಸ್ಕಿನ್ ಕೇರ್ ರೊಟೀನ್ ನಲ್ಲಿ ಬೆರೆಸಿಕೊಂಡರೆ, ನಿಮ್ಮ ಚರ್ಮ ಹೂವಿನಂತೆ ನಳನಳಿಸ ತೊಡಗುತ್ತದೆ. ಈ ರೀತಿ ಅರಳಿ ನಗುವ ಮೊಗ ನಿಮ್ಮ ಬಾಹ್ಯ ಸೌಂದರ್ಯ ಹೆಚ್ಚಿಸುವುದಲ್ಲದೆ, ನಿಮ್ಮ ಆಂತರಿಕ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ.
ಹಾಗಾದರೆ, ಯಾವ ಪ್ರಾಡಕ್ಟ್ಸ್ ನಲ್ಲಿ ಹೂವಿನ ಈ ಉತ್ತಮ ಅಂಶಗಳು ಅಡಗಿವೆ ಎಂದು ತಿಳಿಯೋಣವೇ ? :
ಚರ್ಮಕ್ಕೆ ಸಿಗಲಿದೆ ಮ್ಯಾಜಿಕ್
ಚರ್ಮದ ಮೃದುತ್ವದ ವಿಷಯ ಬಂದಾಗ ಗುಲಾಬಿ ದಳಗಳ ಬಗ್ಗೆ ಹೇಳದಿದ್ದರೆ ಹೇಗೆ? ದಳಗಳೊಂದಿಗೆ ಇದರ ಆಯಿಲ್ ಸಹ ನಮ್ಮ ಚರ್ಮಕ್ಕೆ ಅಷ್ಟೇ ನಯ, ನಾಜೂಕು ಒದಗಿಸುತ್ತದೆ. ಏಕೆಂದರೆ ಇದರಲ್ಲಿ ವಿಟಮಿನ್ಸ್, ಮಿನರಲ್ಸ್, ಆ್ಯಂಟಿ ಆಕ್ಸಿಡೆಂಟ್ಸ್ ಧಾರಾಳ ಅಡಗಿರುತ್ತದೆ. ಗುಲಾಬಿಯ ಆ್ಯಂಟಿ ಆಕ್ಸಿಡೆಂಟ್ಸ್ ನಮ್ಮ ಚರ್ಮದಲ್ಲಿನ ಫ್ರೀ ರಾಡಿಕಲ್ಸ್ ವಿರುದ್ಧ ಹೋರಾಡಿ, ಚರ್ಮಕ್ಕೆ ಹೆಚ್ಚು ಏಜ್ ಆಗದಂತೆ ತಡೆಯುತ್ತದೆ. ಜೊತೆಗೆ ಚರ್ಮದ ಕಾಂತಿ ಸದಾ ಉಳಿಯುವಂತೆ ಮಾಡುತ್ತದೆ.
ಇದು ಎಲ್ಲಾ ಬಗೆಯ (ಡ್ರೈ, ನಾರ್ಮಲ್, ಆಯ್ಲಿ) ಚರ್ಮಕ್ಕೂ ಅನ್ವಯಿಸುತ್ತದೆ. ಮುಖ್ಯವಾಗಿ ಡ್ರೈ ಸ್ಕಿನ್ ಗೆ ಹೀಲಿಂಗ್ ಹೈಡ್ರೇಟರ್ ನ ಕೆಲಸ ಮಾಡುತ್ತದೆ. ಏಕೆಂದರೆ ಇದರಲ್ಲಿನ ಮಾಯಿಶ್ಚರೈಸಿಂಗ್ ಅಂಶಗಳು, ಚರ್ಮದ ಮಾಯಿಶ್ಚರ್ ನ್ನು ಲಾಕ್ ಮಾಡಿ ಅದನ್ನು ಸದಾ ಹೈಡ್ರೇಟೆಡ್ ಆಗಿಡಲು ನೆರವಾಗುತ್ತದೆ. ಇದರಿಂದ ಬೇಸಿಗೆಯಲ್ಲಿ ಹೊರಗೆ ಹೋದಾಗ ಚರ್ಮಕ್ಕೆ ಉರಿ ಉರಿ ಎನಿಸುವುದಿಲ್ಲ. ಇದರಲ್ಲಿನ ಆ್ಯಸ್ಟ್ರಿಂಜೆಂಟ್ ಅಂಶಗಳಿದ್ದು ಅದು ಚರ್ಮದಲ್ಲಿನ ಆ್ಯಕ್ನೆ, ಮೊಡವೆ, ರೆಡ್ ನೆಸ್, ಉರಿಗಳಿಂದ ಸಹಜವಾಗಿ ರಕ್ಷಿಸುತ್ತದೆ. ಜೊತೆಗೆ ಗುಲಾಬಿ ಜಲ ಚರ್ಮದ ನ್ಯಾಚುರಲ್ ಲೆವೆಲ್ ನ್ನು ಬ್ಯಾಲೆನ್ಸ್ಡ್ ಆಗಿರಿಸುತ್ತಾ, ಚರ್ಮದ ಮೇಲಾಗಬಹುದಾದ ಹೆಚ್ಚುವರಿ ತೈಲಾಂಶವನ್ನು ಹೀರಿಕೊಳ್ಳುತ್ತದೆ. ಹೀಗಾಗಿಯೇ ಗುಲಾಬಿ ನಮ್ಮ ಚರ್ಮಕ್ಕೆ ಮ್ಯಾಜಿಕ್ ಮಾಡುತ್ತದೆ ಅನ್ನೋದು!
ಇದಕ್ಕಾಗಿ ನೀವು ಮಾರುಕಟ್ಟೆಯಲ್ಲಿ ಲಭ್ಯವಿರುವ ರೋಸ್ ಸೀರಂ, ರೋಸ್ ಟೋನರ್, ರೋಸ್ ಜೆಲ್, ರೋಸ್ ಪ್ಯಾಕ್, ರೋಸ್ ವಾಟರ್‌ಗಳನ್ನು ಬಳಸಿಕೊಳ್ಳಿ. ಸ್ಕಿನ್ ಕೇರ್ ಪ್ರಾಡಕ್ಟ್ಸ್ ಖರೀದಿಸುವಾಗ ಅದರಲ್ಲಿ ರೋಸ್ ಅಂಶ ಹೆಚ್ಚಾಗಿದೆ ತಾನೇ ಎಂದು ಖಚಿತಪಡಿಸಿಕೊಳ್ಳಿ.
ಸನ್ ಫ್ಲವರ್ ನಿಂದ ನ್ಯಾಚುರಲ್ ಗ್ಲೋ
ಇದರಲ್ಲಿ ಒಂದು ರಾಶಿ ಪೌಷ್ಟಿಕಾಂಶಗಳು ಅಡಗಿವೆ. ಹೀಗಾಗಿ ಇದನ್ನು ಬೇಸಿಗೆಯಲ್ಲಿ ಚರ್ಮಕ್ಕೆ ನೈಸರ್ಗಿಕವಾಗಿ ಕಾಂತಿ ಮತ್ತು ಕಲೆರಹಿತ ನುಣುಪುತನ ಒದಗಿಸಲು, ನ್ಯಾಚುರಲ್ ಸ್ಕಿನ್ ಕೇರ್ ಪ್ರಾಡಕ್ಟ್ ಆಗಿ ಬಳಸುತ್ತಾರೆ. ಇದು ಚರ್ಮ ಕಳೆದುಕೊಂಡ ಮಾಯಿಶ್ಚರ್ ನ್ನು ಪುನಃ ವಾಪಸ್ ಮರಳಿಸುತ್ತದೆ. ಆ ರೀತಿ ಚರ್ಮವನ್ನು ಹೈಡ್ರೇಟ್‌ಸ್ಮೂತ್ ಆಗಿರಿಸಲು ನೆರವಾಗುತ್ತದೆ. ಜೊತೆಗೆ ಇದರಲ್ಲಿ ಧಾರಾಳವಾಗಿ ವಿಟಮಿನ್, D, A, ಅಂಶಗಳು ಅಡಗಿದ್ದು, ಇದು ಚರ್ಮದಲ್ಲಿನ ಫ್ರೀ ರಾಡಿಕಲ್ಸ್ ವಿರುದ್ಧ ರಕ್ಷಣೆ ನೀಡುತ್ತದೆ, ಅದು ಏಜಿಂಗ್ ಕಾರಣ ಸಹಜ ಹೆಚ್ಚುತ್ತಿರುತ್ತದೆ.