ಇದೋ ಬಂದೇಬಿಟ್ಟಿತು ಬೇಸಿಗೆಯ ದಿನಗಳು! ಈ ಸೀಸನ್‌ ತನ್ನೊಂದಿಗೆ ಅನೇಕ ತೊಂದರೆಗಳನ್ನೂ ತರುತ್ತದೆ. ಈ ಸೀಸನ್‌ ನಲ್ಲಿ ಸ್ಕಿನ್‌ ಡ್ರೈ ಆಗುವುದೂ ಸಹ ಮಾಮೂಲಿ ಸಮಸ್ಯೆ ಆಗಿದೆ. ಎಷ್ಟೋ ಸಲ ಚರ್ಮದ ಮೇಲೆ ಕಪ್ಪು ಕಲೆ ಅಥವಾ ಇಷ್ಟಗಲ ಚರ್ಮದ ಭಾಗವೇ ಕಪ್ಪಾಗುವ ತೊಂದರೆಯನ್ನೂ ಎದುರಿಸಬೇಕಾಗುತ್ತದೆ.

ಚರ್ಮ ಬಿಸಿಲಿಗೆ ಒಡ್ಡುತ್ತಿದ್ದಂತೆ ಹೀಗೇಕೆ ಕಪ್ಪಾಗುತ್ತದೆ ಎಂದು ಚಿಂತಿಸುತ್ತೇವೆ. ವಿವಿಧ ತಜ್ಞರ ಸಲಹೆಯ ಮೇರೆಗೆ ಇದಕ್ಕೆ ಕಾರಣ, ನಿವಾರಣೆ ತಿಳಿಯೋಣವೇ?

ಚರ್ಮವನ್ನು ಹೀಗೆ ಸಂಭಾಳಿಸಿ

ಸಾಮಾನ್ಯವಾಗಿ ಹೊರಗೆ ಹೊರಡುವಾಗ ಧಾವಂತದಲ್ಲಿ ಹಾಗೇ ಹೊರಟು ಬಿಡುತ್ತೇವೆ. ಆದರೆ ಸನ್‌ ಸ್ಕ್ಕೀನ್‌ ಲೋಶನ್‌ ಹಚ್ಚಲು ಎಂದೂ ಮರೆಯಬಾರದು. ಫೆಬ್ರವರಿಯ ನಡುವಿನ ವಾರ ಬರುತ್ತಿದ್ದಂತೆಯೇ ನಿಧಾನವಾಗಿ ಸನ್‌ ಸ್ಕ್ಕೀನ್‌ ಬಳಸಲು ಆರಂಭಿಸಿ, ಮಾರ್ಚ್‌ ಹೊತ್ತಿಗೆ ಪ್ರತಿದಿನ ಹೊರಗೆ ಹೊರಡುವಾಗ ಅಗತ್ಯವಾಗಿ ಇದನ್ನು ಹಚ್ಚಲು ಮರೆಯದಿರಿ. ಅಕಸ್ಮಾತ್‌ ಮರೆತು ಓಡಾಡಿದರೆ, ಬಿಸಿಲಿನಲ್ಲಿ ಈ ತರಹದ ಕಪ್ಪು ಬಣ್ಣ ಹೆಚ್ಚುತ್ತದೆ. ಆದರೆ ಕನಿಷ್ಠ 30 SPF ಅಥವಾ 50 SPF ನ ಉತ್ತಮ ಬ್ರಾಂಡ್‌ ನ ಸನ್‌ ಸ್ಕ್ಕೀನ್‌ ಬಳಸಿರಿ.

ಧಾರಾಳ ನೀರು ಕುಡಿಯಿರಿ

ಬಿಸಿಲಿನ ಝಳ ಶುರುವಾಗಿರುವುದರಿಂದ ಧಾರಾಳವಾಗಿ ಹೆಚ್ಚೆಚ್ಚು ನೀರು ಕುಡಿಯಿರಿ. ಕೆಲವರಿಗೆ ಎದ್ದು ಹೋಗಿ ನೀರು ಕುಡಿಯುವುದರಲ್ಲಿ ಏನೋ ಆಲಸ್ಯ, ಹೀಗಾಗಿ ಹತ್ತಿರವೇ ದೊಡ್ಡ ಬಾಟಲಿ ನೀರು ಇರಿಸಿಕೊಂಡು ಆಗಾಗ ಕುಡಿಯುತ್ತಿರಿ. ಹೊರಗೆ ಹೊರಟಾಗಂತೂ ನೀರಿನ ಬಾಟಲ್ ಇಲ್ಲದೆ ಹೊರಡಲೇಬಾರದು. ದೇಹದಲ್ಲಿ ನೀರಿನ ಕೊರತೆ ಆದಾಗ ಡೀಹೈಡ್ರೇಟಿಂಗ್‌ ಸಮಸ್ಯೆ ಹೆಚ್ಚುತ್ತದೆ.  ಹೀಗಾಗಿ ನಾವು ಆಗಾಗ ಸೇವಿಸುವ ನೀರು ನಮ್ಮ ದೇಹವನ್ನು ಹೈಡ್ರೇಟ್‌ ಗೊಳಿಸಿ, ಬೇಸಿಗೆಯಲ್ಲೂ ನಿಮ್ಮನ್ನು ಸದಾ ನಳನಳಿಸುವಂತೆ ಮಾಡುತ್ತದೆ.

ಮಾಯಿಶ್ಚರೈಸರ್ಬಳಸಲು ಮರೆಯದಿರಿ

ಬೇಸಿಗೆ ಆರಂಭವಾದಾಗಿನಿಂದಲೇ ರೆಗ್ಯುಲರ್‌ ಆಗಿ ಮಾಯಿಶ್ಚರೈಸರ್‌ ಬಳಸಲು ಆರಂಭಿಸಿ, ಇದನ್ನು ತಪ್ಪಿಸಬೇಡಿ. ಬೇಸಿಗೆಯಲ್ಲೂ ಸಹ ಚರ್ಮ ಆರ್ದ್ರತೆಯ ಕೊರತೆಯಿಂದಾಗಿ ಒಡೆಯುವುದು ಮಾಮೂಲಿ ಆಗುತ್ತದೆ. ಜೊತೆಗೆ ಗುಣಮಟ್ಟದ ಹರ್ಬಲ್ ಮಾಯಿಶ್ಚರೈಸಿಂಗ್‌ (ಆದಷ್ಟೂ ಕೆಮಿಕಲ್ಸ್ ಬೇಸ್ಡ್ ಬೇಡ) ಲೋಶನ್‌ ವಿತ್‌ ಆ್ಯಲೋವೇರಾ ಇರುವುದನ್ನೇ ಬಳಸಬೇಕು, ಇದಕ್ಕೂ ಕಾಲಿನ ಒಡೆತ, ಕೈಗಳ ಒರಟುತನ. ಚರ್ಮದ ಕಪ್ಪಾಗುವಿಕೆ ತಪ್ಪದಿದ್ದರೆ ಆಗ ಹರ್ಬಲ್ಸ್ ಕೋಕೋ ಬಟರ್‌ ವಿತ್ ಮಾಯಿಶ್ಚರೈಸರ್‌ ಬಳಸಿಕೊಳ್ಳಿ. ಇದು ಚರ್ಮವನ್ನು ಸದಾ ಹೈಡ್ರೇಟೆಡ್‌ ಆಗಿರಿಸಿ, ಅದನ್ನು ಮೃದು, ಕಾಂತಿಯುತ ಹಾಗೂ ಕೋಮಲಗೊಳಿಸುತ್ತದೆ.

ಸ್ಕಿನ್ಕೇರ್ರೊಟೀನ್

ಇದನ್ನೆಂದೂ ನಿರ್ಲಕ್ಷಿಸದಿರಿ. ಮೊದಲಿಗೆ ನೀಟಾಗಿ ನೀರಿನಿಂದ ಮುಖ ತೊಳೆದು, ಧೂಳು ಇತ್ಯಾದಿ ಇಲ್ಲದಂತೆ ಮಾಡಿ. ನಂತರ ಕ್ಲೆನ್ಸಿಂಗ್‌ ಮಿಲ್ಕ್ ಬಳಸಿ ಪ್ರತಿ ದಿನ ಚರ್ಮವನ್ನು ಶುದ್ಧಗೊಳಿಸಿ. ಮತ್ತೊಂದು ಮುಖ್ಯವಾದುದು ಎಂದರೆ, ವಾರದಲ್ಲಿ ಒಮ್ಮೆ ಫೇಸ್ ಪ್ಯಾಕ್‌ ಅಥವಾ ಯಾವುದೇ ಹೈಡ್ರೇಟಿಂಗ್‌ ಲೋಶನ್‌ ಅಗತ್ಯವಾಗಿ ಬಳಸಿಕೊಳ್ಳಿ. ನಿಮ್ಮ ಚರ್ಮ ಹೆಚ್ಚು ಡ್ರೈ ಎನಿಸಿದರೆ, ಹೈಡ್ರೇಟಿಂಗ್‌ ಕ್ರೀಂ ಯಾ ಕೋಲ್ಡ್ ಕ್ರೀಂ ಅಗತ್ಯ ಬಳಸಿರಿ,

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ