ಬಿರು ಬೇಸಿಗೆಯಲ್ಲಿ ನಿಮ್ಮ ಇಂಟಿಮೇಟ್ಹೈಜೀನ್ಏಕೆ ಅಷ್ಟು ಪ್ರಮುಖವಾಗುತ್ತದೆ ಎಂಬುದನ್ನು ವಿವರವಾಗಿ ನಾವು ತಿಳಿಯೋಣವೇ......?

ಸೀಸನ್‌ ಬದಲಾಗುತ್ತಿದ್ದಂತೆ ನಮ್ಮ ದೇಹ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬೇಸಿಗೆಯಲ್ಲಿ ಮುಖ್ಯವಾಗಿ ಬೆರುವಿಕೆ, ರಾಶೆಸ್‌ ಇತ್ಯಾದಿ ನಮ್ಮ ಪರ್ಸನಲ್ ಹೈಜೀನ್‌ ಗೆ ಸಂಬಂಧಿಸಿರುತ್ತದೆ. ಹೀಗಾಗಿ ನಾವು ನಮ್ಮ ಇಂಟಿಮೇಟ್‌ ಹೈಜೀನ್‌ ಕಡೆ ಆದಷ್ಟೂ ಹೆಚ್ಚಿನ ಗಮನಹರಿಸ ಬೇಕಾದುದು ಬಹಳ ಮುಖ್ಯವಾಗುತ್ತದೆ. ಎಷ್ಟೋ ಮಂದಿ ಹೆಂಗಸರು, ತಮ್ಮ ಪರ್ಸನ್‌ ಹೈಜೀನ್‌ ನಿರ್ಲಕ್ಷಿಸುವುದರಿಂದಲೇ ಇಂಥ ಹಲವಾರು ರೋಗಗಳಿಗೆ ಈಡಾಗುತ್ತಾರೆ ಎಂಬುದು ನಿಜಕ್ಕೂ ಕಳವಳಕಾರಿ ವಿಷಯ.

ಕಿಚನ್‌ ನಿಂದ ಹಿಡಿದು ಆಫೀಸ್‌ ಮೀಟಿಂಗಿನವರೆಗೂ, ಹೆಂಗಸರು ದಿನವಿಡೀ ಹಲವಾರು ವಿಧದ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಹೀಗಾಗುವುದರಿಂದ ಅವರಿಗೆ ತಮ್ಮ ಪರ್ಸನಲ್ ಹೈಜೀನ್‌ ಕಡೆ ಗಮನ ಹರಿಸಲಾಗದು.

ಇಂಟಿಮೇಟ್‌ ಹೈಜೀನ್‌ ಕಡೆ ಗಮನ ಹರಿಸದೆ ಇರುವುದರಿಂದ, ಹೆಂಗಸರಿಗೆ UTI (ಮೂತ್ರದ ಸೋಂಕು, ಉರಿಮೂತ್ರ ಇತ್ಯಾದಿಗಳಿಗೆ ಕಾರಣವಾಗುವ ಯೂರಿನರಿ ಟ್ರಾಕ್‌ ಇನ್‌ ಫೆಕ್ಷನ್‌) ತರಹದ ಹಲವು ಸೋಂಕು ರೋಗಗಳನ್ನು ಎದುರಿಸಬೇಕಾಗುತ್ತದೆ. ಬೇಸಿಗೆಯಲ್ಲಂತೂ ಸತತ ಬೆವರುವಿಕೆ ಕಾರಣ, ಈ ಸಮಸ್ಯೆ ಇನ್ನಷ್ಟು ಜಟಿಲಗೊಳ್ಳುತ್ತದೆ.

ಇಂಟಿಮೇಟ್ಹೈಜೀನ್ಏಕೆ ಅಗತ್ಯ?

ಮುಟ್ಟಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚಿಸಲು ಹಿಂಜರಿಯುವಂತೆಯೇ, ಇಂದಿನ ಅತ್ಯಾಧುನಿಕ ಕಾಲದಲ್ಲೂ ಹೆಂಗಸರು ಈ ಪರ್ಸನಲ್ ಹೈಜೀನ್‌ ಕುರಿತಾಗಿ ಮುಕ್ತವಾಗಿ ಚರ್ಚಿಸಲು ಬಯಸುವುದಿಲ್ಲ. ಅದರ ಕಡೆ ಹೆಚ್ಚಿನ ಗಮನ ಹರಿಸದೆ ಇರುವುದರಿಂದ, UTI ಹಾಗೂ ಡ್ರೈನೆಸ್‌ ಸಮಸ್ಯೆಗಳು ಕಾಡುತ್ತವೆ. ಬ್ಯಾಕ್ಟೀರಿಯಲ್ ಇನ್‌ ಫೆಕ್ಷನ್‌ ಸಹ ಹೆಚ್ಚಾಗಬಹುದು, ಇದರಿಂದಾಗಿ ರಾಶೆಸ್‌, ನವೆ, ತುರಿಕೆ, ಕಡಿತ ಇತ್ಯಾದಿ ಹೆಚ್ಚುತ್ತದೆ. ಸಕಾಲಕ್ಕೆ ಸೂಕ್ತ ಚಿಕಿತ್ಸೆ ಪಡೆಯದಿದ್ದಲ್ಲಿ ನಿಮೋನಿಯಾ, ಬ್ಲಡ್‌ ಡಿಸೀಸ್‌ ಹೆಚ್ಚುತ್ತವೆ.

ಕೆಮ್ಮು, ಜ್ವರದಂತೆ ಪರ್ಸನಲ್ ಹೈಜೀನ್‌ ಬಾಹ್ಯವಾಗಿ ಕಾಡದೇ ಇರುವುದರಿಂದ, ಹೆಂಗಸರು ಆ ಘಳಿಗೆ ಬಿಟ್ಟು ಆ ಕುರಿತು ಮತ್ತೆ ಚಿಂತಿಸುವುದೇ ಇಲ್ಲ. ಇದರಿಂದಾಗಿ ಅವರು ದೈಹಿಕ, ಮಾನಸಿಕ ಒತ್ತಡಗಳಿಗೆ ಅಪಾರವಾಗಿ ಗುರಿಯಾಗುತ್ತಾರೆ. ಮುಂದೆ ಅದು ಡಿಪ್ರೆಶನ್‌ ಗೆ ತಿರುಗುವ ಅವಕಾಶಗಳಿವೆ.

ಬೇಸಿಗೆಯಲ್ಲಿ ಹೆಚ್ಚಿನ ಎಚ್ಚರಿಕೆ ಅತ್ಯಗತ್ಯ

ಈ ಸಮಸ್ಯೆಗಳು ಮುಖ್ಯವಾಗಿ ಬೇಸಿಗೆಯಲ್ಲಿ ಹೆಚ್ಚುತ್ತವೆ. ಹೀಗಾಗಿ ಕೆಲವು ವಿಷಯಗಳನ್ನು ಅತಿ ಸೂಕ್ಷ್ಮವಾಗಿ ಗಮನಿಸಿಕೊಂಡಾಗ ಮಾತ್ರ ನಾವು ಈ ಸಮಸ್ಯೆಗಳಿಂದ ಪಾರಾಗಬಹುದು :

ಕೆಲಸ, ಪಯಾಣದ ಸಲುವಾಗಿ ಓಡಾಟ ಅಂದ್ರೆ ಬೆವರುವಿಕೆ ಹೆಚ್ಚುತ್ತದೆ. ಬೇಸಿಗೆಯಲ್ಲಿ ಪ್ರಯಾಣ ಅಂದ್ರೆ ಆ ಬವಣೆ ಅನುಭವಿಸಿದವರಿಗೇ ಗೊತ್ತು. ಬೆವರು ಒಣಗಿದ ನಂತರ ನಮ್ಮ ದೇಹದ ಮೇಲೆ ಜರ್ಮ್ಸ್ ಉಳಿದುಬಿಡುತ್ತವೆ. ಇದನ್ನು ತಕ್ಷಣ ಶುಚಿಗೊಳಿಸಬೇಕು. ನಿಮ್ಮ ಇಂಟಿಮೇಟ್‌ಏರಿಯಾಗಳಲ್ಲಿ ಅದನ್ನು ಒಣಬಟ್ಟೆಯಿಂದ ಒರೆಸಿಕೊಳ್ಳಿ. ಈ ಸೀಸನ್‌ ನಲ್ಲಿ ಚರ್ಮ ಸದಾ ಶುಚಿಯಾಗಿ, ಶುಭ್ರವಾಗಿ ಉಳಿಯಬೇಕು. ಹೀಗಾಗಿ ಪ್ರತಿದಿನ 2 ಸಲ ಸ್ನಾನ ಮಾಡಿ, ತಣ್ಣೀರಾದರೆ ಆರೋಗ್ಯಕ್ಕೆ ಉತ್ತಮ. ಹೀಗೆ ಮಾಡುವುದರಿಂದ ನಿಮ್ಮ ದೇಹ ಎಷ್ಟೊ ಸ್ವಸ್ಥ, ಶುಭ್ರವಾಗಿರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ