ಪ್ರಾಚೀನ ಕಾಲದಿಂದಲೂ ಜೇನುತುಪ್ಪ ಅದರ ಅದ್ಭುತ ರುಚಿ ಮತ್ತು ಆರೋಗ್ಯದಾಯಕ ಗುಣಗಳಿಂದ ಜನಜನಿತವಾಗಿದೆ. ಸುಮಾರು 4000 ವರ್ಷಗಳ ಹಿಂದೆ ಸುಮೇರಿಯನ್‌ ಕ್ಲೇ ಟ್ಯಾಬ್ಲೆಟ್ಸ್ ನಲ್ಲಿ ಔಷಧಿ ರೂಪದಲ್ಲಿ ಜೇನುತುಪ್ಪ ಬಳಸಲಾಗುತ್ತಿತ್ತು. ಸುಮೇರಿಯನ್‌ ಚಿಕಿತ್ಸಾ ಪದ್ಧತಿಯಲ್ಲಿ ಶೇ.30ರಷ್ಟು ಚಿಕಿತ್ಸೆಗಳಲ್ಲಿ ಜೇನುತುಪ್ಪ ಇರುತ್ತಿತ್ತು. ಪ್ರಾಚೀನ ಈಜಿಪ್ಟ್ ನಲ್ಲಿ ಜೇನುತುಪ್ಪವನ್ನು ತ್ವಚೆ ಮತ್ತು ಕಣ್ಣಿನ ರೋಗಗಳಿಗೆ ಬಳಸಲಾಗುತ್ತಿತ್ತು. ಭಾರತದಲ್ಲೂ  ಸಿದ್ಧ ಹಾಗೂ ಆಯುರ್ವೇದದಂತಹ ಪುರಾತನ ಹಾಗೂ ಪಾರಂಪರಿಕ ಚಿಕಿತ್ಸೆಗಳಲ್ಲಿ ಜೇನುತುಪ್ಪ ಪ್ರಮುಖ ಪಾತ್ರ ವಹಿಸುತ್ತಿದೆ.

ರಕ್ತಕ್ಕೆ ವರದಾನ : ಕೆಂಪು ರಕ್ತಕಣಗಳ ಮೇಲೆ ಇದರ ಪರಿಣಾಮ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಅದು ಹಿಮೊಗ್ಲೋಬಿನ್  ಪ್ರಮಾಣ ಹೆಚ್ಚಿಸಲು ಸಹಾಯಕವಾಗಿದೆ. ಅಷ್ಟೇ ಅಲ್ಲ, ಕೀಮೊಥೆರಪಿ ಮಾಡಿಸಿಕೊಳ್ಳುವ ರೋಗಿಗಳಲ್ಲಿ ಇದು ಬಿಳಿ ರಕ್ತ ಕಣಗಳು ಹೆಚ್ಚಾಗದಂತೆ ತಡೆಯುತ್ತದೆ.

ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಆ್ಯಂಟಿಸೆಪ್ಟಿಕ್‌: ಇದು ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಜೊತೆಗೆ ಸೋಂಕು ಉಂಟಾಗದಂತೆ ರಕ್ಷಿಸುತ್ತದೆ. ಇದರ ನಿಯಮಿತ ಸೇವನೆಯಿಂದ ಉಸಿರಾಟಕ್ಕೆ ಸಂಬಂಧಿಸಿದ ರೋಗಗಳಾದ ಕಫ ಮತ್ತು  ಆಸ್ತಮಾವನ್ನು ನಿಯಂತ್ರಣದಲ್ಲಿಡಲು ನೆರವಾಗುತ್ತದೆ.

ತೂಕ ಕಡಿಮೆ ಮಾಡುತ್ತದೆ : ಉಗುರು ಬೆಚ್ಚಗಿನ ನೀರಿನಲ್ಲಿ ನಿಂಬೆ ರಸದೊಂದಿಗೆ ಜೇನುತುಪ್ಪವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ತೂಕ ಕಡಿಮೆ ಮಾಡಲು ಸಹಾಯವಾಗುತ್ತದೆ.

ಶಕ್ತಿವರ್ಧಕ : ಇದರಲ್ಲಿ ಶರ್ಕರ ಅಂಶಗಳು ಅಂದರೆ ಗ್ಲೂಕೋಸ್‌ಮತ್ತು ಫ್ರಕ್ಟೋಸ್‌ ಇರುವ ಕಾರಣದಿಂದ ಅದು ದೇಹಕ್ಕೆ ಶಕ್ತಿ ಮತ್ತು ಸ್ಛೂರ್ತಿ ನೀಡುತ್ತದೆ.

ಪಚನಕ್ರಿಯೆ ಹೆಚ್ಚಿಸುವ ಜೇನುತುಪ್ಪ : ಇದು ಹೊಟ್ಟೆ ಉಬ್ಬರ, ಮಲಬದ್ಧತೆ ಮತ್ತು ಗ್ಯಾಸ್‌ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಪ್ರೊಬಯೋಟಿಕ್‌ ಅಂದರೆ ಒಳ್ಳೆಯ ಬ್ಯಾಕ್ಟೀರಿಯಾಗಳಾದ ಬಿಫಿಡೊ ಮತ್ತು ಲ್ಯಾಕ್ಟೋಬಿಸಿಲ್‌ಕಂಡುಬರುತ್ತದೆ. ಅದು ಪಚನಕ್ರಿಯೆಯನ್ನು ಸರಿಪಡಿಸಿ ರೋಗನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಅಲರ್ಜಿಯಿಂದ ರಕ್ಷಿಸುತ್ತದೆ.

ಹಾಲು ಮತ್ತು ಜೇನಿನ ಶಕ್ತಿ : ಈ ಎರಡನ್ನೂ ಏಕಕಾಲಕ್ಕೆ ಬಳಸುವುದರಿಂದ ಚರ್ಮವನ್ನು ನೈರ್ಮಲ್ಯಗೊಳಿಸಿ ಅದನ್ನು  ಹೊಳೆಯುವಂತೆ ಮಾಡುತ್ತದೆ. ಆ್ಯಂಟಿಆಕ್ಸಿಡೆಂಟ್‌ ಗುಣಗಳ ಕಾರಣದಿಂದ ಇದನ್ನು ಆ್ಯಂಟಿಏಜಿಂಗ್‌ ಔಷಧಿಯ ರೂಪದಲ್ಲಿ ಬಳಸಲಾಗುತ್ತದೆ. ನಿದ್ರಾಹೀನತೆಯ ಸಮಸ್ಯೆಯಲ್ಲೂ ಇದು ಪ್ರಭಾವಶಾಲಿಯಾಗಿದೆ.

ಪೋಷಕಾಂಶಗಳ ಖಜಾನೆ : ಇದರಲ್ಲಿ ಆರೋಗ್ಯಕರ ಜೀವನಕ್ಕೆ ಬೇಕಾದ ಕಿಣ್ವಗಳು, ವಿಟಮಿನ್‌, ಮಿನರಲ್ಸ್ ಮತ್ತು ನೀರು ಇರುವುದರಿಂದ ಇದು ಎಂತಹ  ಒಂದು ಏಕೈಕ ಆಹಾರ ಪದಾರ್ಥವೆಂದರೆ, ಅದರಲ್ಲಿ ಪೈನೊಕೆಬ್ರಿನ್‌ ಎಂಬ ಪೋಷಕಾಂಶವಿದ್ದು, ಅದು ಮೆದುಳಿನ ಕಾರ್ಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಅಲರ್ಜಿಯಿಂದ ರಕ್ಷಣೆ : ತನ್ನ ಇನ್‌ಫ್ಲೆಮೆಟರಿ ಗುಣದ ಕಾರಣದಿಂದ ಅದು ಎಲ್ಲ ಬಗೆಯ ಅಲರ್ಜಿಯಿಂದ ರಕ್ಷಿಸುತ್ತದೆ. ಇದನ್ನು ನೆನಪಿನ ಶಕ್ತಿ ಹೆಚ್ಚಿಸಲು ಹಾಗೂ ತಲೆಹೊಟ್ಟಿನಿಂದ ಮುಕ್ತಿ ಕಂಡುಕೊಳ್ಳಲು ಬಳಸಲಾಗುತ್ತದೆ.

ಜೇನ್ನೋಣಗಳ ಕುತೂಹಲಕರ ಸಂಗತಿಗಳು

ಜೇನ್ನೊಣಗಳು ಒಂದು ದಿನದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಹೂವುಗಳ ಮೇಲೆ ಹಾರಾಡಿ ಬರುತ್ತವೆ. 1 ಪೌಂಡ್‌ನಷ್ಟು ಜೇನುತುಪ್ಪ ತಯಾರಿಸಲು ಜೇನ್ನೊಣಗಳು ಸುಮಾರು 20 ಲಕ್ಷ ಹೂಗಳ ಮಕರಂದ ಹೀರಬೇಕಾಗುತ್ತದೆ. ಈ ಅವಧಿಯಲ್ಲಿ ಅವು 55,000 ಮೈಲು ಗಳಷ್ಟು ದೂರ ಪ್ರಯಾಣ ಮಾಡಿರುತ್ತವೆ.  ಜೇನ್ನೊಣಗಳು ಎಂದೂ ನಿದ್ರಿಸುವುದಿಲ್ಲ. ಡ್ಯಾನ್ಸ್ ಮತ್ತು ಸಂಕೇತಗಳ ಮೂಲಕ ಅವು ಪರಸ್ಪರ ಮಾತುಕತೆ ನಡೆಸುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ