ನೀವು `ಆ್ಯಂಗ್ರಿಬರ್ಡ್' ಸಿನಿಮಾ ನೋಡಿದ್ದೀರಾ? ಇದರಲ್ಲಿ ಮುಖ್ಯ ಪಾತ್ರಕ್ಕೆ ಕೋಪ ಬರುತ್ತದೆ. ಹೀಗಾಗಿ ಪಕ್ಷಿಗಳ ಗೂಡಿನಿಂದ ಅವನು ಬಹುದೂರ ವಾಸಿಸುತ್ತಾನೆ. ಬಳಿಕ ಕೋಪ ನಿಯಂತ್ರಣ ಮಾಡಿಕೊಳ್ಳಲು ಕಲಿತನಂತರ ಅವನು ಅವರೆಲ್ಲರ ಹೀರೋ ಆಗುತ್ತಾನೆ. ಕೋಪ ಯಾವುದಕ್ಕೂ ಪರಿಹಾರ ಅಲ್ಲ ಎಂಬುದೇ ಈ ಚಿತ್ರದ ಸಂದೇಶ.
ಕೋಪ ಒಂದು ನೈಸರ್ಗಿಕ ಹಾಗೂ ಸಾಮಾನ್ಯ ಭಾವನೆ ಎಂಬುದು ಸತ್ಯ. ಇದು ಮನುಷ್ಯನ ಒಂದು ದೈಹಿಕ ಪ್ರತಿಕ್ರಿಯೆ. ಅದು ಮನುಷ್ಯನ ಖುಷಿ ಹಾಗೂ ದುಃಖದ ರೀತಿಯಲ್ಲಿ ಒಂದು ಭಾವನೆ ಅಷ್ಟೇ ಎಂದು ಹೇಳಿದರಲ್ಲಿ ತಪ್ಪೇನಿಲ್ಲ.
ಕೋಪ ಎಷ್ಟೊಂದು ಅಪಾಯಕಾರಿಯೆಂದರೆ, ಅದು ಸ್ವಯಂ ಹಾಗೂ ಅಕ್ಕಪಕ್ಕದವರ ನೆಮ್ಮದಿಗೆ ಭಂಗ ತರುತ್ತದೆ. ಜೀವನದಲ್ಲಿ ಖುಷಿ ಹಾಗೂ ತೊಂದರೆಗಳು ಬರುತ್ತಲೇ ಇರುತ್ತವೆ. ಹೀಗಾಗಿ ಕೋಪದ ಮೂಲಕ ಸಂಬಂಧದಲ್ಲಿ ಬಿರುಕನ್ನುಂಟು ಮಾಡಬೇಡಿ. ಯಾವ ಸಂದರ್ಭದಲ್ಲಿ ಕೋಪ ಜಾಸ್ತಿಯಾಗುತ್ತದೆ ಎಂಬುದನ್ನು ಕಂಡುಕೊಳ್ಳಿ, ಪರಿಸ್ಥಿತಿ ಹಾಗೂ ಕಾರಣಗಳನ್ನು ಅರಿಯಿರಿ.
ಅದರಿಂದ ಉದ್ಭವಿಸಿದ ತೊಂದರೆಗಳನ್ನು ಬಗೆಹರಿಸಲು ಪ್ರಯತ್ನಿಸಿ. ಕೋಪವನ್ನು ಹತ್ತಿಕ್ಕಿಬಿಡಿ, ಅದರ ಬದಲು ಅದರ ಕಾರಣಗಳನ್ನು ಗುರುತಿಸಿ ಅವನ್ನು ನಿವಾರಿಸಲು ಪ್ರಯತ್ನಿಸಿ. ನಿಮ್ಮ ಕೋಪದಿಂದ ಬೇರೆ ಯಾರಿಗಾದರೂ ಲಾಭವಾಗಬಹುದು. ಆದರೆ, ನಿಮಗಂತೂ ಸಾಕಷ್ಟು ನಷ್ಟದ ಜೊತೆಗೆ ಸಂಬಂಧಕ್ಕೂ ಧಕ್ಕೆ ಉಂಟಾಗುತ್ತದೆ. ತಪ್ಪು ಕಲ್ಪನೆಗಳನ್ನೂ ಉಂಟು ಮಾಡುತ್ತದೆ. ಕೂಲಾಗಿ ವಿಚಾರ ಮಾಡಿದರೆ ಮಾತ್ರ ಯಾವುದಾದರೂ ಪರಿಹಾರ ಕಂಡುಕೊಳ್ಳಲು ಸಾಧ್ಯ. ಪಶ್ಚಾತ್ತಾಪದ ಮೂಲಕ ಕೋಪ ಅಂತ್ಯಗೊಳ್ಳುತ್ತದೆ.
ಕೋಪವನ್ನು ಹೀಗೆ ಶಾಂತಗೊಳಿಸಿ
ನಿಮಗೆ ಕೋಪ ಬಂದಾಗೆಲ್ಲ ಈ ಸುಲಭ ಟಿಪ್ಸ್ ಅನುಸರಿಸಿ. ಆಗ ಕೋಪ ಹೇಗೆ ಕಣ್ಮರೆಯಾಗುತ್ತದೆ ನೋಡಿ :
- ಕೋಪ ಬಂದಾಗ ನೀರು ಕುಡಿಯಿರಿ.
- ಯಾವ ಸಂಗತಿಯ ಬಗ್ಗೆ ನಿಮಗೆ ಕೋಪ ಬರುತ್ತೊ, ಅದಕ್ಕೆ ನಾನು 48 ಗಂಟೆಗಳ ಬಳಿಕ ಪ್ರತಿಕ್ರಿಯೆ ಕೊಡುತ್ತೇನೆ ಎಂದು ನಿರ್ಧರಿಸಿ. ಆಗ ನೋಡಿ ಚಮತ್ಕಾರವೇ ಘಟಿಸುತ್ತದೆ.
- ನಿಮಗೆ ಕೋಪ ಬರುತ್ತಿದೆ ಎಂದೆನಿಸಿದಾಗ ಯಾವುದಾದರೂ ಹಾಡು ಹಾಡಲು ಶುರು ಮಾಡಿ ಅಥವಾ ಯಾವುದಾದರೂ ವಾದ್ಯ ನುಡಿಸಿ.
- ಕೋಪ ಬರುವುದು ಖಾತ್ರಿಯಾದಾಗ ನಿಮ್ಮ ಸ್ಮಾರ್ಟ್‌ಫೋನ್‌ನ ಉಪಯೋಗ ಮಾಡಿಕೊಳ್ಳಿ. ನೋಟಿಫಿಕೇಶನ್ ನೋಡಲು ಶುರು ಮಾಡಿ ಅಥವಾ ಯಾವುದಾದರೂ ಡಿಸ್ಕೌಂಟ್ಸ್ ಆಫರ್‌ಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿ. ಈ ನಡುವಿನ ಅವಧಿಯಲ್ಲಿ ಕೋಪ ಮಂಗಮಾಯ ಆಗಿರುತ್ತೆ.
- ಈ ಪ್ರಯೋಗ ಕೂಡ ಮಾಡಿ ನೋಡಿ. ಅದು ಬಹಳ ಸುಲಭ. ಮನಸ್ಸಿನಲ್ಲೇ 100ರಿಂದ ಹಿಮ್ಮುಖವಾಗಿ 0 ತನಕ ಎಣಿಸುತ್ತ ಹೋಗಿ.
- ಕೋಪದ ಸಮಯದಲ್ಲಿ ಉತ್ಪತ್ತಿಯಾದ ಎನರ್ಜಿಯನ್ನು ಉಪಯೋಗಿಸಿಕೊಳ್ಳಿ. ಆಗ ಎಲ್ಲಿಯಾದರೂ ದೂರ ಹೋಗಿ ಬನ್ನಿ. ಕೋಪ ಬರುವಾಗಿನ ಮನಸ್ಥಿತಿಯ ಬಗ್ಗೆ ಗಮನಿಸಿ, ಆಗ ನಿಮಗೇ ಖುಷಿಯಾಗುತ್ತದೆ.
- ಬಿಲ್ಲಿನಿಂದ ಹೊರಬಿದ್ದ ಬಾಣ ಹಾಗೂ ಬಾಯಿಂದ ಹೊರಟ ಶಬ್ದ ಮತ್ತೆಂದೂ ವಾಪಸ್ ಬರದು. ಕೋಪ ಬಂದಾಗ ಮಾತಾಡದಿರಿ. ಏನಾದರೂ ಬರೆಯಲು ಶುರು ಮಾಡಿ. ಆ ಬಳಿಕ ನಿಮಗೆ ವಾಹ್! ನಾನೆಂಥ ರೈಟರ್ ಎಂದೆನಿಸುತ್ತದೆ.