ಅಮಿತ್‌ ಮತ್ತು ಅರ್ಚನಾರಿಗೆ ಮೊದಲ ಮಗು ಬರುತ್ತಿರುವ ಖುಷಿ. ಒಂದೆಡೆ ತಾನು ತಾಯಿಯಾಗುವ ಆನಂದ ಅವಳಿಗಿದೆ, ಇನ್ನೊಂದೆಡೆ ಅವಳು ಅಮಿತ್‌ನಿಂದ ತನ್ನನ್ನು ತಾನು ದೂರ ಇಟ್ಟುಕೊಳ್ಳಲು ಯೋಚಿಸುತ್ತಿರುತ್ತಾಳೆ. ಅಂದಹಾಗೆ ಅವಳು ಅಮಿತ್ ಜೊತೆಗೆ ದೈಹಿಕ ಸಂಬಂಧ ನಡೆಸಲು ಹಿಂದೇಟು ಹಾಕುತ್ತಿದ್ದಾಳೆ.

ತಾನು ಅಮಿತ್‌ ಜೊತೆಗೆ ಸಮಾಗಮ ನಡೆಸಿದರೆ, ಎಲ್ಲಿ ತನ್ನ ಹೊಟ್ಟೆಯಲ್ಲಿರುವ ಭ್ರೂಣಕ್ಕೆ ತೊಂದರೆಯಾಗುತ್ತೋ, ಬೇರೆ ಸಮಸ್ಯೆಗಳಿಗೆ ತುತ್ತಾಗುತ್ತೇನೋ ಎಂಬ ಹೆದರಿಕೆ ಅರ್ಚನಾಳಿಗಿದೆ. ಅಮಿತ್‌ ಅವಳಿಗೆ ಅದೆಷ್ಟೋ ತಿಳಿಸಿ ಹೇಳಿದ. ಆದರೆ ಆಕೆ ಮಾತ್ರ ಅವನ ಮಾತಿಗೆ ಒಪ್ಪಿಗೆ ಕೊಡಲಿಲ್ಲ.

ಅಂದಹಾಗೆ ಗರ್ಭಾವಸ್ಥೆಯ ಸಂದರ್ಭದಲ್ಲಿ ಸೆಕ್ಸ್ ಕುರಿತಂತೆ ಹೆದರಿಕೆ, ಅಳುಕುವ ಅಥವಾ ಸಂಕೋಚ ಇವು ಸಾಮಾನ್ಯ ಸಂಗತಿಗಳು. ಆದರೆ ಅಮಿತ್‌ ತನ್ನ ದೈಹಿಕ ಆಕಾಂಕ್ಷೆಗಳು ಈಡೇರದ ಕಾರಣ ಸದಾ ಸಿಡಿಮಿಡಿಗೊಳ್ಳುತ್ತಿದ್ದ. ಅವರಿಬ್ಬರ ಸಂಬಂಧದಲ್ಲಿ ಒಂದು ತೆರನಾದ ಒತ್ತಡ ಮನೆ ಮಾಡಿದೆ. ಅದು ಯಾವುದೇ ರೀತಿಯಲ್ಲಿ ಅರ್ಚನಾಳಿಗೆ ಸಮಂಜಸವಾದುದಲ್ಲ.

ಗರ್ಭಾವಸ್ಥೆಯ 9 ತಿಂಗಳು ಯಾವುದೇ ಒಬ್ಬ ಮಹಿಳೆಗೆ ಎಲ್ಲಕ್ಕೂ ಅತ್ಯಮೂಲ್ಯ  ಕ್ಷಣಗಳಾಗಿವೆ. ಆದರೆ ಇದರರ್ಥ ನೀವು ವೈದ್ಯರ ಸಲಹೆಯಿಲ್ಲದೆ ನಿಮ್ಮ ಲೈಂಗಿಕ ಇಚ್ಛೆಗಳನ್ನು ಹತ್ತಿಕ್ಕಬೇಕು ಎಂದಲ್ಲ. ಅಂದಹಾಗೆ ನಮ್ಮಲ್ಲಿ ಗರ್ಭಾವಸ್ಥೆಯಲ್ಲಿ ಸೆಕ್ಸ್ ನ್ನು ವರ್ಜ್ಯ ಅಥವಾ ಅನುಚಿತ ಕೆಲಸ ಎಂದು ಭಾವಿಸಲಾಗುತ್ತದೆ. ಆ ಅವಧಿಯಲ್ಲಿ ಸೆಕ್ಸ್ ಬಗ್ಗೆ ಚರ್ಚಿಸಿದರೆ ಕೆಲವರು ಮುಖ ಸಿಂಡರಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಗರ್ಭದಲ್ಲಿ ಬೆಳೆಯುತ್ತಿರುವ ಶಿಶುವಿಗೆ ಯಾವುದಾದರೂ ಬಗೆಯ ಹಾನಿಯುಂಟಾಗುವ ಸಾಧ್ಯತೆಯ ಭೀತಿ ಹಾಗೂ ಯಾವಾಗ ಯಾವ ಭಂಗಿಯಲ್ಲಿ ಸಮಾಗಮ ನಡೆಸಬೇಕೆಂಬ ಬಗ್ಗೆ ಮಾಹಿತಿ ಇರದೇ ಇರುವುದು ಹಾಗೂ ವೈದ್ಯರೊಂದಿಗೆ ಈ ಬಗ್ಗೆ ಚರ್ಚಿಸಲು ಹಿಂದೇಟು ಹಾಕುವುದು.

ಆದರೆ ಇಂತಹ ಸ್ಥಿತಿ ವಿದೇಶದಲ್ಲಿ ಖಂಡಿತ ಇಲ್ಲ. ಅಲ್ಲಿನ ಜನರು ಮುಕ್ತವಾಗಿ ತಮ್ಮ ಲೈಂಗಿಕ ಜೀವನವನ್ನು ಪರಿಪೂರ್ಣವಾಗಿ ಆನಂದಿಸುತ್ತಾರೆ. ಜೊತೆಗೆ ಗರ್ಭಿಣಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ.

ಚಾಪೆಲ್ ‌ಹಿಲ್‌ನ ಯೂನಿವರ್ಸಿಟಿ ಆಫ್‌ ನಾರ್ಥ್‌ ಕೆರೊಲಿನಾದಲ್ಲಿ ನಡೆದ ಅಧ್ಯಯನದಲ್ಲಿ ಕಂಡುಬಂದ ಸಂಗತಿಯೆಂದರೆ, ಈ ಅವಧಿಯಲ್ಲಿ ಸಮಾಗಮ ನಡೆಸುವುದು ಲಾಭಕರವಂತೆ. ಏಕೆಂದರೆ ಗರ್ಭಾವಸ್ಥೆ ಪೂರ್ಣಾವಧಿಗೆ ತಲುಪಲು ಸೆಕ್ಸ್ ಪ್ರೋತ್ಸಾಹಿಸುತ್ತದೆ ಎಂಬುದು ಅಧ್ಯಯನಕಾರರ ಹೇಳಿಕೆಯಾಗಿದೆ.

ಗರ್ಭಾವಸ್ಥೆಯ ಸಂದರ್ಭದಲ್ಲಿ ಮಹಿಳೆಯರ ಮನಸ್ಸಿನಲ್ಲಿ ಸೆಕ್ಸ್ ಬಗೆಗೆ ಹಲವು ತೆರನಾದ ಭಯಭೀತಿ ಹುಟ್ಟುಹಾಕುವುದು ಸಹಜವೇ ಆಗಿದೆ. ಆದರೆ ಈ ಧೋರಣೆ ಪರಿಪೂರ್ಣವಾಗಿ ಸತ್ಯ ಅಥವಾ ಸುಳ್ಳು ಅಲ್ಲ. ವಾಸ್ತವ ಸಂಗತಿಯೆಂದರೆ, ಹಲವು ಕಾರಣಗಳಿಂದ ಗರ್ಭಾವಸ್ಥೆಯಲ್ಲಿ ಸಮಾಗಮ ಆನಂದದಾಯಕವಾಗಬಹುದು. ಮೊದಲಿಗಿಂತ ಕಡಿಮೆ ಪ್ರಮಾಣದಲ್ಲಿಯೇ ನೀವು ಖುಷಿ ಅನುಭವಿಸಿದರೂ ಅದು ತೃಪ್ತಿಗೆ ಕಾರಣವಾಗುತ್ತದೆ.

ಭಾವನಾತ್ಮಕ ಸಂಬಂಧ

ಸ್ತ್ರೀ ರೋಗ ತಜ್ಞೆ ಡಾ. ಪ್ರೀತಿ ಅವರು ಹೇಳುವುದೇನೆಂದರೆ, ಗರ್ಭಾವಸ್ಥೆಯಲ್ಲಿ ಹಾರ್ಮೋನ್‌ ದೈಹಿಕ ಮತ್ತು ಭಾವನಾತ್ಮಕ ಬದಲಾವಣೆ ಉಂಟಾಗುತ್ತದೆ. ಅವು ಗರ್ಭದಲ್ಲಿ ಬೆಳೆಯುತ್ತಿರುವ ಶಿಶುವಿನಿಂದ ಭಾವನಾತ್ಮಕ ಹೊಂದಾಣಿಕೆ ಅನುಭೂತಿ ಮಾಡಿಕೊಳ್ಳುತ್ತೇವೆ ಹಾಗೂ ಸಂಗಾತಿಯಿಂದ ದೈಹಿಕ ಸಂಪರ್ಕದ ಬದಲು ಭಾವನಾತ್ಮಕ ಸಪೋರ್ಟ್‌ ಬಯಸುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ