ನಿಮ್ಮ ಮದುವೆಯ ದಿನದಂದು ನೀವು ವಿಶೇಷ ಮತ್ತು ವಿಭಿನ್ನವಾಗಿ ಕಾಣಲು ಬಯಸಿದರೆ, ಸಲಹೆಗಳು ತುಂಬಾ ಉಪಯುಕ್ತವೆಂದು ಸಾಬೀತಾಗಿವೆ.......!

ಮದುವೆ ನಿಶ್ಚಯವಾದ ಕೂಡಲೇ ಪ್ರತಿಯೊಬ್ಬರ ಮನದಲ್ಲೂ ಸಂತಸದ ಅಲೆಯೊಂದು ತುಂಬಿ ತುಳುಕುತ್ತದೆ. ಏಕೆಂದರೆ, ಸುಖದುಃಖಗಳಲ್ಲಿ ಜೊತೆಗಿರುವ ಗೆಳೆಯ, ಜೊತೆಗಾರ, ಜೀವನ ಸಂಗಾತಿ ಸಿಗುತ್ತಾನೆ. ಈ ಸಮಯದಲ್ಲಿ ಇಬ್ಬರೂ ತಮ್ಮ ಜೀವನದ ಬಗ್ಗೆ ಒಂದು ಯೋಜನೆಯನ್ನು ಮಾಡುತ್ತಾರೆ. ಇದರಲ್ಲಿ ಫಿಟ್ನೆಸ್‌ ಅಂದರೆ ವೆಡ್ಡಿಂಗ್‌ ವರ್ಕ್‌ ಔಟ್‌ ಪ್ಲಾನ್‌ ಕೂಡಾ ಒಂದು. ಇದು ವಧೂವರರಿಬ್ಬರಿಗೂ ಅವಶ್ಯಕವಾಗಿರುತ್ತದೆ. ಇದನ್ನು ಮೈಗೂಡಿಸಿಕೊಂಡರೆ, ಮದುವೆಯ ದಿನದಂದು ವಧೂವರರು ವಿಶೇಷವಾಗಿ ವಿಭಿನ್ನವಾಗಿ ಕಾಣಿಸಿಕೊಳ್ಳಬಹುದು.

ವಾಸ್ತವವಾಗಿ, ವಿವಾಹದ ವರ್ಕ್‌ ಔಟ್‌ ನ ಮುಖ್ಯ ಉದ್ದೇಶವೆಂದರೆ, ಆತ್ಮವಿಶ್ವಾಸ ಗಳಿಸುವುದು. ಆ ವಿಶೇಷ ದಿನದಂದು ನಿಮ್ಮನ್ನು ಸಂತೋಷ ಮತ್ತು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ಮುಖ್ಯ. ವರ್ಕ್‌ ಔಟ್‌ ಯೋಜನೆಯನ್ನು ಸರಿಯಾಗಿ ಮಾಡಿದರೆ, ಅದು ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅಲ್ಲದೆ, ಮಾನಸಿಕ ಸ್ಥಿರತೆಯನ್ನೂ ಒದಗಿಸುತ್ತದೆ. ನಗರದ ಖ್ಯಾತ ಫಿಟ್ನೆಸ್‌ ತಜ್ಞರು ಇದರ ಬಗ್ಗೆ ಹೀಗೆ ಹೇಳುತ್ತಾರೆ. ವರ್ಕ್‌ ಔಟ್‌ ಯೋಜನೆಯ ವಾಸ್ತವದ ಜೊತೆಗೆ ಅದನ್ನು ಸಾಧಿಸುವಂತಿರಬೇಕು. ಇದನ್ನು ಹೆಚ್ಚಾಗಿ ಹುಡುಗ ಹುಡುಗಿಯರಿಬ್ಬರೂ ಯೋಜಿಸುತ್ತಾರೆ. ಇದು ಹೆಚ್ಚಾಗಿ ಮೂರು ತಿಂಗಳವರೆಗೆ ಇರುತ್ತದೆ. ಇದರಲ್ಲಿ ಹುಡುಗರು ಹೆಚ್ಚಾಗಿ ತಮ್ಮ ಹೊಟ್ಟೆಯನ್ನು ಕಡಿಮೆ ಮಾಡಿಕೊಳ್ಳಲು ಬಯಸುತ್ತಾರೆ. ಆದರೆ ಹುಡುಗಿಯರು ಸ್ಲಿಮ್ ಆಗಿ ಕಾಣಲು ಬಯಸುತ್ತಾರೆ. ಇದು ಫಿಟ್ನೆಸ್‌ ಕಡೆಗೆ ಸರಿಯಾದ ಹೆಜ್ಜೆಯಾಗಿದೆ. ಅದನ್ನು ಮತ್ತಷ್ಟು ಮುಂದೆ ಅನುಸರಿಸಿಕೊಂಡು ಹೋಗುವುದು ಒಳ್ಳೆಯದು. ದೇಹ ಫಿಟ್‌ ಆಗಿದ್ದರೆ ನಿಮ್ಮ ಜೀವನ ಸಹ ಫಿಟ್‌ ಆಗಿರುತ್ತದೆ.

ಇದರಲ್ಲಿ ವರ್ಕ್‌ ಔಟ್‌ ಜೊತೆಗೆ ಸರಿಯಾದ ಡಯೆಟ್‌ ಕೂಡಾ ಬಹುಮುಖ್ಯ ಪಾತ್ರ ವಹಿಸುತ್ತದೆ. ಇದರಲ್ಲಿ ಕೊಬ್ಬಿನಂಶ ಮತ್ತು ಜಂಕ್‌ ಫುಡ್‌ ಹೆಚ್ಚಾಗಿ ಸೇವಿಸಬಾರದು ಎನ್ನುತ್ತಾರೆ ತಜ್ಞರು. ಮದುವೆ ನಿಶ್ಚಯವಾದ ತಕ್ಷಣ ಇಂದಿನ ಹುಡುಗ ಹುಡುಗಿಯರು ಹೋಟೆಲ್, ಪಬ್‌ ಗಳಿಗೆ ಹೋಗಿ ಸಂಭ್ರಮಿಸುವುದು ಅಥವಾ ಕುಟುಂಬಸ್ಥರು ವಿಶೇಷ ಆಹ್ವಾನ ನೀಡಿ ಊಟಕ್ಕೆ ಕರೆಯುವುದು ಕಂಡುಬರುತ್ತದೆ. ಇದು ಅವರ ವ್ಯಾಯಾಮದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಅವರಿಗೆ ತೊಂದರೆಯಾಗುತ್ತದೆ.

IB134558-134558131155593-SM404119

ಮದುವೆಗಾಗಿ ವರ್ಕ್ಔಟ್

ಮದುವೆಯ ವರ್ಕ್‌ ಔಟ್‌ ಪ್ಲಾನ್‌ ಗೆ ಮುನ್ನ, ಹುಡುಗ ಹುಡುಗಿ ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಐದು ದಿನ ಬದ್ಧತೆಯಿಂದ ವರ್ಕ್‌ ಔಟ್‌ ಮಾಡುವುದು ಅಗತ್ಯ ಎಂದು ತಜ್ಞರು ಹೇಳುತ್ತಾರೆ. ಕೆಲವೊಮ್ಮೆ ಕೆಲಸದ ಕಮಿಟ್‌ ಮೆಂಟ್‌ ಗಳಿಂದ ಅದನ್ನು ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅವರಿಗೆ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು ಆಗುವುದಿಲ್ಲ. ಮದುವೆಯ ವರ್ಕ್ ಔಟ್‌ ಪ್ಲಾನ್‌ ವ್ಯಕ್ತಿಯ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಆ ವಿಶೇಷ ದಿನದಂದು ಅವರು ಸಂತೋಷ ಮತ್ತು ಆರೋಗ್ಯವಾಗಿ ಇರಬಹುದು. ಆದ್ದರಿಂದ ಟಾರ್ಗೆಟೆಡ್‌ ವೆಡ್ಡಿಂಗ್‌ ವರ್ಕ್‌ ಔಟ್‌ ಪ್ಲಾನ್‌ ಇರಬೇಕು. ಅದು ನಿಮ್ಮ ಸಂತೋಷವನ್ನು ಹೆಚ್ಚಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ