ಪ್ರತಿಯೊಬ್ಬ ಕಾಲೇಜು ಕಿಶೋರಿ ತಾನು ಇನ್ನೂ ಹೆಚ್ಚು ಸ್ಲಿಮ್ ಟ್ರಿಮ್ ಬ್ಯೂಟಿಫುಲ್ ಆಗಿರಬೇಕೆಂದು ಬಯಸುತ್ತಾಳೆ. ಆದರೆ ಇಂದಿನ ಯುವಜನತೆ ಫಾಸ್ಟ್ ಫುಡ್‌ಗೆ ಎಷ್ಟು ಮರುಳಾಗಿದೆ ಎಂದರೆ, ರುಚಿಗಾಗಿ ಏನನ್ನು ತಿನ್ನಲಿಕ್ಕೂ ರೆಡಿ ಎಂದಾಗಿದೆ. ಆದರೆ ಊಟ ತಿಂಡಿಯ ಈ ಅಭ್ಯಾಸ ದೇಹದ ರಚನೆಯನ್ನು ಕೆಡಿಸುತ್ತದೆ. ನೀವು ಸತತ ಫಾಸ್ಟ್ ಫುಡ್‌ ಸೇವಿಸುತ್ತಿದ್ದರೆ, ಅದೂ ಯಾವುದೇ ದೈಹಿಕ ಶ್ರಮವಿಲ್ಲದ ಟೇಬಲ್ ವರ್ಕ್‌ ನಿಮ್ಮದಾಗಿದ್ದರೆ, ವ್ಯಾಯಾಮ ಜಾಗಿಂಗ್‌ ಮಾಡದಿದ್ದರೆ ಸ್ಥೂಲತೆ ಬೇಗ ಮೈಗೂಡುತ್ತದೆ.

ಆರೋಗ್ಯ ಕೆಡಿಸುವ ಜಿಹ್ವಾ ಚಾಪಲ್ಯ

ಆಹಾರ ದುರಭ್ಯಾಸ ಮತ್ತು ತಪ್ಪು ಜೀವನ ಶೈಲಿಯಿಂದಾಗಿ ದೇಹದಲ್ಲಿ ಹೆಚ್ಚುವರಿ ಕೊಬ್ಬು ಜಮೆಗೊಳ್ಳುತ್ತಿರುತ್ತದೆ. ಇದರಿಂದ ಸ್ಥೂಲತೆ ಹೆಚ್ಚುತ್ತದೆ ಹಾಗೂ ನಾವು ಬಿ.ಪಿ., ಶುಗರ್‌ನಂಥ ಅನಗತ್ಯ ರೋಗಗಳಿಗೆ ಈಡಾಗುತ್ತೇವೆ. ಇಂದಿನ ಆಧುನಿಕ ಹುಡುಗಿಯರು ಜಿಹ್ವಾ ಚಾಪಲ್ಯ ತಡೆಯಲಾರರು. ಇಂಥ ಆಸೆ ಉಳ್ಳವರು ಸ್ಲಿಮ್ ಟ್ರಿಮ್ ಆಗಬೇಕೆಂದು ಬಯಸಿದರೆ ಅದು ಕನಸಾಗಿಯೇ ಉಳಿಯುತ್ತದೆ.

ದೇಹದಲ್ಲಿ ಕೊಬ್ಬು ಸೇರಿದಷ್ಟೂ, ಇದರ ಹೆಚ್ಚಿನ ದುಷ್ಪರಿಣಾಮ ಸೊಂಟ, ಹೊಟ್ಟೆಯ ಮೇಲಾಗುತ್ತದೆ. ಇಲ್ಲಿ ಹೆಚ್ಚಿನ ಕೊಬ್ಬು ಸಂಗ್ರಹಣೆ ಆದಂತೆ, ಹೊರ ಪ್ರಪಂಚಕ್ಕೆ ನಮ್ಮ ಫಿಗರ್‌ ಕೆಡುತ್ತಿರುವುದು ಸ್ಪಷ್ಟ ತಿಳಿದುಹೋಗುತ್ತದೆ.

ಹೀಗಿರುವಾಗ ನಿನ್ನೆ ಮೊನ್ನೆವರೆಗೂ ಪಿಜ್ಜಾ ಬರ್ಗರ್‌ ತಿನ್ನುತ್ತಿದ್ದ ಹುಡುಗಿಯರು, ಸ್ಲಿಮ್ ಟ್ರಿಮ್ ಆಸೆಗಾಗಿ ದಿಢೀರ್‌ ಟ್ರಾಶ್‌ ಡಯೆಟ್‌ಗೆ ಮೊರೆ ಹೋಗುತ್ತಾರೆ. ಜೊತೆಗೆ ಸ್ಲಿಮ್ಮಿಂಗ್‌ ಟ್ಯಾಬ್ಲೆಟ್‌ ಇತ್ಯಾದಿ ಸೇವಿಸುತ್ತಾ ತಮ್ಮ ಆರೋಗ್ಯ ಮತ್ತಷ್ಟು ಕೆಡಿಸಿಕೊಳ್ಳುತ್ತಾರೆ. ಖಂಡಿತಾ ಇಂಥ ಶಾರ್ಟ್‌ ಕಟ್ ಬೇಡ.

ಕ್ರಮೇಣ ಹೆಚ್ಚುತ್ತಿರುವ ಸ್ಥೂಲತೆಯನ್ನು ತಡೆಯುವುದು ಹೇಗೆ?

ಕ್ರಮ ಅನುಸರಿಸಿ : ದೊಡ್ಡದಾಗುತ್ತಿರುವ ಹೊಟ್ಟೆ, ಟೈರ್‌ ಸೊಂಟಗಳಿಂದಾಗಿ ಹೆಣ್ಣುಮಕ್ಕಳು ತಮ್ಮ ನೆಚ್ಚಿನ ಡ್ರೆಸ್‌ ಆರಿಸಿಕೊಳ್ಳಲು ಆಗುವುದೇ ಇಲ್ಲ. ಇದರ ಬದಲು ಅಂಥವರು ಫಾಸ್ಟ್ ಫುಡ್‌, ಜಂಕ್‌ ಫುಡ್‌ ಸೇವನೆ ಬಿಡುವುದೇ ಒಳ್ಳೆಯದು. ಸ್ಥೂಲತೆ ತಗ್ಗಿಸಲು ಮಾಡಬೇಕಾದ ಮೊದಲ ಪ್ರಯತ್ನವೆಂದರೆ ನಿಮ್ಮ ಡಯೆಟ್‌ ಚಾರ್ಟ್‌ ಬದಲಿಸಿಕೊಳ್ಳಬೇಕಾದುದು.

ನಿಂಬೆರಸ ಮತ್ತು ಜೇನು : ಬೆಳಗ್ಗೆ ತುಸು ಬಿಸಿ ನೀರಿಗೆ ಜೇನು ಮತ್ತು ನಿಂಬೆರಸ ಬೆರೆಸಿ ಕೊಂಡು ಕುಡಿಯಿರಿ. ಹೀಗೆ ಮಾಡುದರಿಂದ ಹೆಚ್ಚುವರಿ ಕೊಬ್ಬು ತಾನಾಗಿ ಕರಗುತ್ತದೆ.

ಮೊಟ್ಟೆಯ ಬಿಳಿ ಭಾಗ : ಸೊಂಟ ಹೊಟ್ಟೆ ಕೊಬ್ಬು ಕರಗಿಸಲು, ಬೆಳಗಿನ ತಿಂಡಿಗಾಗಿ ಮೊಟ್ಟೆಯ ಬಿಳಿ ಭಾಗದ ಸೇವನೆ ಒಳ್ಳೆಯದು. ಇದರಿಂದ ಪ್ರೋಟೀನ್‌ ಅಮೈನೋ ಆ್ಯಸಿಡ್ಸ್ ಎರಡೂ ಹೆಚ್ಚಿನ ಪ್ರಮಾಣದಲ್ಲಿ ಮೈಗೂಡುತ್ತದೆ. ಮೊಟ್ಟೆಯ ಬಿಳಿ ಭಾಗ ಹೆಚ್ಚು ಲಾಭಕಾರಿ. ಇದರಲ್ಲಿ ಫ್ಯಾಟ್‌ ಇಲ್ಲ.

ಬಾದಾಮಿ : ಇದರಲ್ಲಿ ವಿಟಮಿನ್‌ ಮಿನರಲ್ಸ್ ಧಾರಾಳವಾಗಿ ಅಡಗಿದೆ. ಪ್ರತಿದಿನ, ಹಿಂದಿನ ರಾತ್ರಿ ನೀರಲ್ಲಿ ನೆನೆಹಾಕಿದ ಬಾದಾಮಿಯನ್ನು ಅಗತ್ಯ ಸೇವಿಸಿ. ಇದರಿಂದ ದೇಹಕ್ಕೆ ಉಷ್ಣತೆ ಮತ್ತು ಶಕ್ತಿ ಎರಡೂ ದೊರಕುತ್ತದೆ, ದೇಹದ ಹೆಚ್ಚುವರಿ ಫ್ಯಾಟ್‌ಕೂಡ ಕರಗುತ್ತದೆ.

ಬ್ರೌನ್ರೈಸ್‌ : ಇದಂತೂ ಖಂಡಿತಾ ಫ್ಯಾಟ್‌ಫ್ರೀ. ಇದರಲ್ಲಿ ಕ್ಯೋಾರಿ ಬಹುತೇಕ ಇಲ್ಲ ಎನ್ನಬಹುದು. ಇದರ ಸೇನೆಯಿಂದ ದೇಹದಲ್ಲಿ ಕೊಬ್ಬು ಸೇರುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ