ಅಮ್ಮಾ ಎಂಟರ್‌ ಪ್ರೈಸಸ್ ಮೂಲಕ ಕೋಟೆನಾಡು ಚಿತ್ರದುರ್ಗದ ಹೆಚ್.ಆನಂದಪ್ಪ ಅವರು ಅದ್ದೂರಿಯಾಗಿ ನಿರ್ಮಿಸಿರುವ   ಚಿತ್ರ "ಮೆಜೆಸ್ಟಿಕ್-2 "  ಈವಾರ ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ  ತೆರೆ ಕಾಣುತ್ತಿದೆ.  ಹಿರಿಯ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಅವರ ಪುತ್ರ ಭರತ್ ಕುಮಾರ್ ಈ ಚಿತ್ರದ ಮೂಲಕ  ನಾಯಕನಾಗಿ  ಪರಿಚಯವಾಗುತ್ತಿದ್ದಾರೆ.

1000892244

ಈ ಹಿಂದೆ ಚಾಲೆಂಜಿಗ್ ಸ್ಟಾರ್ ದರ್ಶನ್ ಕೂಡ ಇದೇ ಚಿತ್ರದಿಂದ ದೊಡ್ಡಮಟ್ಟದ ಹೆಸರು ಮಾಡಿದ್ದರು.

ಹಿರಿಯನಟಿ  ಶೃತಿ ಅವರು ನಾಯಕನ ತಾಯಿಯ ಪಾತ್ರವನ್ನು  ನಿಭಾಯಿಸಿದ್ದಾರೆ.  ನಟಿ ಸಂಹಿತಾ ವಿನ್ಯಾ ಈ ಚಿತ್ರದ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

1000892249

ಪ್ರಾದೇಶಿಕ ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದ್ದು,  ಈಗಿನ ಮೆಜೆಸ್ಟಿಕ್ ಏರಿಯಾ ಹೇಗಿದೆ,  ಅಲ್ಲಿ ನಡೆಯುವ ದಂಧೆಗಳು, ಅಕ್ರಮ ಚಟುವಟಿಕೆಗಳು  ಅಲ್ಲದೆ ಈಗಲೂ ಅಲ್ಲಿ ರೌಡಿಸಂ ಹೇಗೆ ನಡೆಯುತ್ತೆ ಎಂಬುದನ್ನು  ಅಲ್ಲಿಯೇ ಹುಟ್ಟಿ ಬೆಳೆದ ಹುಡುಗನೊಬ್ಬನ ಕಥೆಯ ಮೂಲಕ   ಮೆಜೆಸ್ಟಿಕ್-2 ಚಿತ್ರದಲ್ಲಿ  ಹೇಳಲಾಗಿದೆ.

1000892251

ಈ ಚಿತ್ರಕ್ಕೆ ಬೆಂಗಳೂರಿನ ಮೆಜೆಸ್ಟಿಕ್ ಏರಿಯಾ, ರಾಮೋಹಳ್ಳಿ, ಹೆಚ್.ಎಂ.ಟಿ., ಮಾಕಳಿ ಬಳಿಯ ಸಕ್ರೆ ಅಡ್ಡ, ಆರ್.ಟಿ.ನಗರದ ನಿಸರ್ಗ ಹೌಸ್ ಅಲ್ಲದೆ  ಚಿತ್ರದುರ್ಗದ ಮರುಘಾ ಮಠ ಸೇರಿದಂತೆ ಹಲವಾರು ಲೊಕೇಶನ್ ಗಳಲ್ಲಿ  ಚಿತ್ರೀಕರಣ ನಡೆಸಲಾಗಿದೆ.

ವಿಶೇಷವಾಗಿ ಕನಸಿನ ರಾಣಿ ಮಾಲಾಶ್ರೀ ಅಭಿನಯದ ಹೀರೋ ಇಂಟ್ರಡಕ್ಷನ್ ಸಾಂಗನ್ನು  ಆರ್.ಎಸ್. ಗೌಡ ಅವರ ಸ್ಟುಡಿಯೋದಲ್ಲಿ ಚಿತ್ರೀಕರಿಸಲಾಗಿದೆ.

1000892247

ಚಿತ್ರದಲ್ಲಿ 5 ಹಾಡುಗಳಿದ್ದು, ವಿನು ಮನಸು ಅವರು ಸಂಗೀತ ಸಂಯೋಜನೆ  ಮಾಡಿದ್ದಾರೆ. ಉಳಿದಂತೆ ಈ ಚಿತ್ರದ ಛಾಯಾಗ್ರಾಹಕರಾಗಿ ವೀನಸ್ ಮೂರ್ತಿ, ಅಸೋಸಿಯೇಟ್ ಡೈರೆಕ್ಟರ್ ಆಗಿ  ವಿಜಯಕುಮಾರ್, ಸಾಹಸ ನಿರ್ದೇಶಕರಾಗಿ ಚಿನ್ನಯ್ಯ ಕೆಲಸ ಮಾಡಿದ್ದಾರೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ